ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷೆ ; ಯೋಗಿ ಸರ್ಕಾರದ ಹೊಸ ಆದೇಶ, ಇನ್ನಾದರೂ ಹುಷಾರ್ ಆಗ್ತವಾ ನಾಯಿಗಳು ?

16-09-25 10:11 pm       HK News Desk   ದೇಶ - ವಿದೇಶ

ದೇಶದಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಅದರ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಇದರ ನಡುವೆಯೇ ಉತ್ತರ ಪ್ರದೇಶದಲ್ಲಿರುವ ಯೋಗಿ ಆದಿತ್ಯನಾಥ್ ಸರ್ಕಾರ ಬೀದಿನಾಯಿಗಳ ಬಗ್ಗೆ ಹೊಸತೊಂದು ಆದೇಶ ಜಾರಿಗೊಳಿಸಿದೆ.

ಲಖನೌ, ಸೆ.16: ದೇಶದಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಅದರ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಇದರ ನಡುವೆಯೇ ಉತ್ತರ ಪ್ರದೇಶದಲ್ಲಿರುವ ಯೋಗಿ ಆದಿತ್ಯನಾಥ್ ಸರ್ಕಾರ ಬೀದಿನಾಯಿಗಳ ಬಗ್ಗೆ ಹೊಸತೊಂದು ಆದೇಶ ಜಾರಿಗೊಳಿಸಿದೆ. ಅದೇನೆಂದರೆ, ಮನುಷ್ಯರಿಗೆ ಎರಡು ಬಾರಿ ಕಚ್ಚುವ ನಾಯಿಗೆ ಆಜೀವ ಪರ್ಯಂತ ಶಿಕ್ಷೆಯನ್ನು ವಿಧಿಸುವಂತೆ ಅಲ್ಲಿನ ಸರ್ಕಾರ ಆದೇಶಿಸಿದೆ.

ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜಿತ್ ಅವರ ಕಚೇರಿಯಿಂದ ಹೊರಬಿದ್ದಿರುವ ಆದೇಶದಲ್ಲಿ ಹೀಗಿದೆ... ಪದೇ ಪದೇ ರೊಚ್ಚಿಗೇಳುವ ನಾಯಿಗಳು ಯಾವುದೇ ಮನುಷ್ಯನನ್ನು ಕಚ್ಚಿದರೆ, ಆ ನಾಯಿಯನ್ನು ಹತ್ತಿರದ ಶ್ವಾನಕೇಂದ್ರಕ್ಕೆ ಸ್ಥಳೀಯ ಸರ್ಕಾರ ಕರೆದೊಯ್ಯಬೇಕು. ಅಲ್ಲಿ ಆ ನಾಯಿಗೆ ಈ ಹಿಂದೆ ಸಂತಾನಹರಣ ಶಸ್ತ್ರಚಿಕಿತ್ಸೆ ಆಗಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಒಂದು ವೇಳೆ ಅಂಥ ಶಸ್ತ್ರಚಿಕಿತ್ಸೆ ಆಗಿಲಿದಿದ್ದರೆ ಆ ನಾಯಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ 10 ದಿನಗಳವರೆಗೆ ಶ್ವಾನಕೇಂದ್ರದಲ್ಲೇ ಅವಗಾಹನೆಗಾಗಿ ಬಿಡಬೇಕು.

ಒಂದು ವೇಳೆ, ಸಂತಾನಹರಣ ಶಸ್ತ್ರಚಿಕಿತ್ಸೆ ಆಗಿದ್ದರೂ 10 ದಿನಗಳ ಕಾಲ ಶ್ವಾನಕೇಂದ್ರದಲ್ಲೇ ಆ ನಾಯಿಗಳನ್ನು ಇರಿಸಬೇಕು. ಅಲ್ಲಿಂದ ಆ ಶ್ವಾನಗಳನ್ನು ಬಿಡುಗಡೆ ಮಾಡುವಾಗ ಅದಕ್ಕೆ ಮೈಕ್ರೋ ಚಿಪ್ ಅಳವಡಿಸಲಾಗುತ್ತದೆ. ಆ ಮೂಲಕ ಆ ನಾಯಿಯು ಮತ್ಯಾರನ್ನಾದರೂ ಕಚ್ಚುತ್ತದೆಯೇ ಎಂಬದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಒಂದು ವೇಳೆ ಅದು ಮತ್ತೊಮ್ಮೆ ಮನುಷ್ಯರಿಗೆ ಕಚ್ಚಿದರೆ, ಶ್ವಾನಕೇಂದ್ರದಲ್ಲೇ ಅದನ್ನು ಶಾಶ್ವತವಾಗಿ ಇರಿಸಬೇಕು ಅಂದರೆ, ಆಜೀವ ಪರ್ಯಂತ ಅದಕ್ಕೆ ಜೈಲು ಶಿಕ್ಷೆಯ ರೀತಿಯಲ್ಲಿ ಅದನ್ನು ಶ್ವಾನಕೇಂದ್ರದಲ್ಲೇ ಇರಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

Amid growing nationwide concern over the menace of stray dog attacks, the Yogi Adityanath-led Uttar Pradesh government has introduced a strict new policy: any stray dog that bites a human twice will face lifetime detention in a government-run dog shelter.