ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್ ಗಾಯಕ ಜುಬೀನ್ ಗರ್ಗ್ ಮೃತ್ಯು 

19-09-25 05:45 pm       HK News Desk   ದೇಶ - ವಿದೇಶ

ಸಿಂಗಾಪುರದಲ್ಲಿ ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ತೆರಳಿದ್ದ ಸೆಲೆಬ್ರಿಟಿ ಬಾಲಿವುಡ್ ಗಾಯಕ ಜುಬೀನ್ ಗರ್ಗ್ ಸ್ಕ್ಯೂಬಾ ಡೈವಿಂಗ್ ಅವಘಡದಲ್ಲಿ ಮೃತಪಟ್ಟಿದ್ದಾರೆ.

ನವದೆಹಲಿ, ಸೆ. 19 : ಸಿಂಗಾಪುರದಲ್ಲಿ ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ತೆರಳಿದ್ದ ಸೆಲೆಬ್ರಿಟಿ ಬಾಲಿವುಡ್ ಗಾಯಕ ಜುಬೀನ್ ಗರ್ಗ್ ಸ್ಕ್ಯೂಬಾ ಡೈವಿಂಗ್ ಅವಘಡದಲ್ಲಿ ಮೃತಪಟ್ಟಿದ್ದಾರೆ.

ಸ್ಕ್ಯೂಬಾ ಡೈವಿಂಗ್ ಬಳಿಕ ನೀರಿನಲ್ಲಿ ಮುಳುಗಿದ್ದ 52 ವರ್ಷದ ಮೂಲತ: ಅಸ್ಸಾಂನವರಾದ ಜುಬೀನ್ ಗರ್ಗ್ ಅವರನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಧ್ಯರಾತ್ರಿ 2.30ರ ಹೊತ್ತಿಗೆ ಮೃತಪಟ್ಟರು. 

ಸಿಂಗಾಪುರದಲ್ಲಿ ಸೆಪ್ಟೆಂಬರ್ 20, 21ರಂದು ಈಶಾನ್ಯ ಭಾರತ ಉತ್ಸವದಲ್ಲಿ ಅವರು ಕಾರ್ಯಕ್ರಮ ನೀಡಲಿಕ್ಕಿದ್ದರು.
ಅಸ್ಸಾಂ, ಬಂಗಾಳ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಅವರು ಮಾಡಿರುವ ಕೆಲಸಗಳಿಂದ ಜುಬೀನ್ ಪ್ರಸಿದ್ಧರಾಗಿದ್ದರು. ಇಮ್ರಾನ್ ಹಶ್ಮಿ -ಕಂಗನಾ ರಾವತ್ ನಟಿಸಿದ್ದ ಗ್ಯಾಂಗ್ ಸ್ಟರ್ ಚಿತ್ರದ ಯಾ ಆಲಿ... ಹಾಡಿನ ಮೂಲಕ ಜುಬೀನ್ ಬಹಳಷ್ಟು ಪ್ರಸಿದ್ಧಿ ಪಡೆದಿದ್ದರು.

Bollywood singer Zubeen Garg died in an unfortunate scuba diving accident in Singapore. He was 52. The Assamese singer was attending the North East India Festival.