ಕೋಲ್ಕತ್ತಾದಲ್ಲಿ ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ಐವರು ಮೃತ್ಯು

23-09-25 11:05 am       HK News Desk   ದೇಶ - ವಿದೇಶ

ಸೋಮವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಕೋಲ್ಕತ್ತಾದ ಹಲವು ಕಡೆ ನೀರು ನಿಂತು ಪ್ರವಾಹ ಪರಿಸ್ಥಿತಿ ತಲೆದೋರಿದ್ದು ಐದು ಜನ ಮೃತಪಟ್ಟಿದ್ದಾರೆ. ಕೋಲ್ಕತ್ತಾದ ಮಧ್ಯ ಹಾಗೂ ದಕ್ಷಿಣ ಭಾಗಗಳಾದ ಬೆನಿಯಾಪುಕುರ್, ಕಾಳಿಕಾಪುರ, ನೇತಾಜಿ ನಗರ, ಗರಿಯಾಹತ್ ಮತ್ತು ಇಕ್ಬಾಲ್‌ಪುರದಲ್ಲಿ ನಡೆದಿರುವ ಮಳೆ ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ ಸಾವುಗಳು ಸಂಭವಿಸಿವೆ.  

ಕೋಲ್ಕತ್ತಾ, ಸೆ.23 : ಸೋಮವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಕೋಲ್ಕತ್ತಾದ ಹಲವು ಕಡೆ ನೀರು ನಿಂತು ಪ್ರವಾಹ ಪರಿಸ್ಥಿತಿ ತಲೆದೋರಿದ್ದು ಐದು ಜನ ಮೃತಪಟ್ಟಿದ್ದಾರೆ. ಕೋಲ್ಕತ್ತಾದ ಮಧ್ಯ ಹಾಗೂ ದಕ್ಷಿಣ ಭಾಗಗಳಾದ ಬೆನಿಯಾಪುಕುರ್, ಕಾಳಿಕಾಪುರ, ನೇತಾಜಿ ನಗರ, ಗರಿಯಾಹತ್ ಮತ್ತು ಇಕ್ಬಾಲ್‌ಪುರದಲ್ಲಿ ನಡೆದಿರುವ ಮಳೆ ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ ಸಾವುಗಳು ಸಂಭವಿಸಿವೆ.  

ಭಾರಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದು ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ರೈಲು ಮತ್ತು ಮೆಟ್ರೋ ಸೇವೆಗಳಿಗೂ ತೊಂದರೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಮನೆಗಳಿಗೆ ನುಗ್ಗಿ ಅಪಾರ ಆಸ್ತಿಪಾಸ್ತಿಗೆ ಹಾನಿಯಾಗಿದೆ.  ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್‌ನ ಮಾಹಿತಿಯ ಪ್ರಕಾರ, ಗರಿಯಾ ಕಾಮದಹರಿಯಲ್ಲಿ ಕೆಲವೇ ಗಂಟೆಗಳಲ್ಲಿ 332 ಮಿ.ಮೀ. ಮಳೆಯಾಗಿದ., ಜೋಧ್‌ಪುರ ಪಾರ್ಕ್‌ನಲ್ಲಿ 285 ಮಿ.ಮೀ., ಕಾಳಿಘಾಟ್‌ನಲ್ಲಿ 280 ಮಿ.ಮೀ., ಟಾಪ್ಸಿಯಾದಲ್ಲಿ 275 ಮಿ.ಮೀ. ಮತ್ತು ಬ್ಯಾಲಿಗಂಗೆಯಲ್ಲಿ 264 ಮಿ.ಮೀ. ಮಳೆಯಾಗಿದೆ.

5 Dead In Kolkata As Heavy Rain Causes Flooding, Traffic Chaos

5 Dead In Kolkata As Heavy Rain Causes Flooding, Traffic Chaos

Heavy rain paralyses Kolkata; 5 dead in rain-related incidents - The Tribune

Kolkata Rain- Five die of electrocution as heavy rain floods city, metro  services hit; railway tracks inundated News24 -

Torrential rain disrupts Kolkata ahead of Durga Puja, 5 dead

ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶದ ಪರಿಣಾಮವಾಗಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಸರಾ ಮಹೋತ್ಸವ, ದುರ್ಗಾಪೂಜೆಯ ಸಂಭ್ರಮಕ್ಕೆ ಕೆಲವು ದಿನಗಳ ಮೊದಲು ಕೋಲ್ಕತ್ತಾದಲ್ಲಿ ಭಾರೀ ಮಳೆಯಾಗಿದೆ. ದುರ್ಗಾಪೂಜೆಯ ಸಂದರ್ಭ ಅಪಾರ ಜನರನ್ನು ಆಕರ್ಷಿಸುವ ಜಾಯ್ ನಗರದ ಪೂಜಾ ಪೆಂಡಾಲ್‌ಗಳು ಬಹುತೇಕ ಸಿದ್ಧವಾಗಿದ್ದು, ಮಳೆಯಿಂದ ಅದನ್ನು ರಕ್ಷಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.

Torrential rains that lashed Kolkata through Monday night have left several parts of the city waterlogged, triggering flood-like conditions and claiming five lives. The deaths were reported in separate rain-related incidents across central and south Kolkata localities including Beniapukur, Kalikapur, Netaji Nagar, Gariahat, and Ekbalpur.