ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ ನಿಲ್ಲಿಸಿದರೆ ಟ್ರಂಪ್ ನೊಬೆಲ್ ಪ್ರಶಸ್ತಿಗೆ ಅರ್ಹ ; ವಿಶ್ವಸಂಸ್ಥೆಯಲ್ಲಿ ಟ್ರಂಪ್ ಮಾತಿನ ಬೆನ್ನಲ್ಲೇ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಹೇಳಿಕೆ 

24-09-25 12:20 pm       HK News Desk   ದೇಶ - ವಿದೇಶ

ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯನ್ನರ ನಡುವಿನ ಗಾಝಾ ಸಂಘರ್ಷವನ್ನು ನಿಲ್ಲಿಸಿದರೆ ಮಾತ್ರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆಲ್ಲಬಹುದು ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.

ನವದೆಹಲಿ, ಸೆ.24 : ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯನ್ನರ ನಡುವಿನ ಗಾಝಾ ಸಂಘರ್ಷವನ್ನು ನಿಲ್ಲಿಸಿದರೆ ಮಾತ್ರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆಲ್ಲಬಹುದು ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವೇಳೆ ಟಿವಿ ಸಂದರ್ಶನದಲ್ಲಿ ಮಾತನಾಡಿರುವ ಅವರು, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ಇಸ್ರೇಲ್ ಮೇಲೆ ಒತ್ತಡ ಹೇರುವ ಶಕ್ತಿ ಟ್ರಂಪ್​ ಅವರಿಗೆ ಮಾತ್ರ ಇದೆ ಎಂದು ಹೇಳಿದ್ದಾರೆ. 

ವಿಶ್ವಸಂಸ್ಥೆಯಲ್ಲಿ ಟ್ರಂಪ್ ಅವರು ಮಾಡಿದ ಭಾಷಣವನ್ನು ಕೇಳಿದ್ದೇನೆ. ಶಾಂತಿ ಸ್ಥಾಪನೆ ಬಗ್ಗೆ ಪುನರುಚ್ಚರಿಸಿದ್ದಾರೆ. ‘ನನಗೆ ಶಾಂತಿ ಬೇಕು. ನಾನು 7 ಸಂಘರ್ಷಗಳನ್ನು ಪರಿಹರಿಸಿದ್ದೇನೆ ಎಂದು ಹೇಳಿದ್ದಾರೆ. ಟ್ರಂಪ್ ಅವರು ನೊಬೆಲ್ ಪ್ರಶಸ್ತಿಯನ್ನು ಬಯಸುತ್ತಿದ್ದಾರೆ. ಆದರೆ, ಗಾಝಾ ಸಂಘರ್ಷವನ್ನು ನಿಲ್ಲಿಸಿದರೆ ಮಾತ್ರ ನೊಬೆಲ್ ಶಾಂತಿ ಪ್ರಶಸ್ತಿ ಗೆಲ್ಲಬಲ್ಲರು ಎಂದು ಮ್ಯಾಕ್ರನ್ ತಿಳಿಸಿದ್ದಾರೆ. 

ಟ್ರಂಪ್ ಅವರು ಇಸ್ರೇಲ್ ಮೇಲೆ ಒತ್ತಡ ಹೇರಿದರೆ ಯುದ್ಧ ನಿಲ್ಲುತ್ತದೆ. ಯುದ್ಧ ನಿಲ್ಲಿಸುವ ಬಗ್ಗೆ ಏನಾದರೂ ಮಾಡುವ ವ್ಯಕ್ತಿ ಇದ್ದರೆ ಅದು ಅಮೆರಿಕಾದ ಅಧ್ಯಕ್ಷರಿಂದ ಮಾತ್ರ ಸಾಧ್ಯ. ಅವರು ನಮಗಿಂತ ಹೆಚ್ಚಿನದನ್ನು ಮಾಡಬಲ್ಲರು. ನಾವು ಗಾಜಾದಲ್ಲಿ ಯುದ್ಧ ನಡೆಸಲು ಶಸ್ತ್ರಾಸ್ತ್ರ ಪೂರೈಸುವುದಿಲ್ಲ. ಉಪಕರಣಗಳನ್ನು ಕೊಡುವುದಿಲ್ಲ ಎಂದು ಅಮೆರಿಕಾ ಹೇಳಿದ್ದೇ ಆದರೆ, ಯುದ್ಧ ನಿಲ್ಲಬಹುದು ಎಂದಿದ್ದಾರೆ.

ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಡೊನಾಲ್ಡ್​ ಟ್ರಂಪ್, ಶಾಂತಿ ಸ್ಥಾಪನೆ ಕುರಿತು ತಮ್ಮ ಹೋರಾಟಗಳನ್ನು ಸ್ಮರಿಸುತ್ತ ನೊಬೆಲ್ ಪ್ರಶಸ್ತಿಯ ಬಯಕೆ ವ್ಯಕ್ತಪಡಿಸಿದ್ದಾರೆ. ಗಾಜಾದಲ್ಲಿ ನಡೆಯುತ್ತಿರುವ ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕು. ಶಾಂತಿ ಮಾತುಕತೆ ನಡೆಸಬೇಕು ಎಂದೂ ಹೇಳಿದ್ದಾರೆ. ಇದೇ ವೇಳೆ ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರ ಮಾನ್ಯತೆಗೆ ಬೆಂಬಲ ನೀಡಿದ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಮಾತುಗಳನ್ನು ಟ್ರಂಪ್ ತಿರಸ್ಕರಿಸಿದ್ದು, ಇದು ಹಮಾಸ್ ಉಗ್ರರಿಗೆ ಪ್ರಯೋಜನ ಆಗುತ್ತದೆ ಎಂದು ಹೇಳಿದ್ದರು.

French President Emmanuel Macron has said that former U.S. President Donald Trump would deserve the Nobel Peace Prize only if he succeeds in ending the ongoing Gaza conflict between Israel and Palestine.