ಮೋದಿ ಕಾರ್ಯಕ್ರಮದಲ್ಲಿ ಸಣ್ಣ ಎಡವಟ್ಟು ; ಹುದ್ದೆ ಕಳಕೊಂಡ ರಾಜಸ್ಥಾನದ ಹಿರಿಯ ಮಹಿಳಾ ಐಎಎಸ್‌ ಅಧಿಕಾರಿ ! 

28-09-25 08:33 pm       HK News Desk   ದೇಶ - ವಿದೇಶ

ರಾಜಸ್ಥಾನದ ಬನ್ಸ್ವಾರಾದಲ್ಲಿ ಸೆಪ್ಟೆಂಬರ್ 25 ರಂದು ನಡೆದ ಪ್ರಧಾನಿ ಮೋದಿ ರ್ಯಾಲಿ ಸಂದರ್ಭದಲ್ಲಿ ಆಗಿರುವ ತಾಂತ್ರಿಕ ದೋಷದ ಕಾರಣಕ್ಕೆ ಹಿರಿಯ ಐಎಎಸ್ ಅಧಿಕಾರಿ ಅರ್ಚನಾ ಸಿಂಗ್ ತಮ್ಮ ಕೆಲಸವನ್ನೇ ಕಳೆದುಕೊಂಡಿದ್ದಾರೆ.

ನವದೆಹಲಿ, ಸೆ.28 : ರಾಜಸ್ಥಾನದ ಬನ್ಸ್ವಾರಾದಲ್ಲಿ ಸೆಪ್ಟೆಂಬರ್ 25 ರಂದು ನಡೆದ ಪ್ರಧಾನಿ ಮೋದಿ ರ್ಯಾಲಿ ಸಂದರ್ಭದಲ್ಲಿ ಆಗಿರುವ ತಾಂತ್ರಿಕ ದೋಷದ ಕಾರಣಕ್ಕೆ ಹಿರಿಯ ಐಎಎಸ್ ಅಧಿಕಾರಿ ಅರ್ಚನಾ ಸಿಂಗ್ ತಮ್ಮ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಅರ್ಚನಾ ಸಿಂಗ್ ರಾಜಸ್ಥಾನ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಇಲಾಖೆಯ ಕಾರ್ಯದರ್ಶಿಯಾಗಿದ್ದು ಸದ್ಯಕ್ಕೆ ಅವರನ್ನು ಹುದ್ದೆಯಿಂದ ತೆರವು ಮಾಡಲಾಗಿದೆ. 

ಪ್ರಧಾನಿ ಸಾರ್ವಜನಿಕ ರ್ಯಾಲಿ ಸಮಯದಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಇದರಿಂದಾಗಿ ಪ್ರಧಾನಿ ಭಾಷಣದ ಸಮಯದಲ್ಲಿ ಹತ್ತು ನಿಮಿಷಗಳ ಕಾಲ ವೀಡಿಯೊ ಪರದೆ ಖಾಲಿಯಾಗಿತ್ತು. ಆಡಿಯೊ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿದ್ದರೂ, ಪರದೆ ಬ್ಲ್ಯಾಕೌಟ್ ಆಗಿದ್ದರಿಂದ ಭಾಷಣದ ದೃಶ್ಯ ಪ್ರಸಾರಕ್ಕೆ ಅಡ್ಡಿಯಾಗಿಸಿತ್ತು. ಇದು ರೈತರೊಂದಿಗೆ ಆಯೋಜನೆಗೊಂಡಿದ್ದ ಸಂವಾದಕ್ಕೆ ಅಡ್ಡಿಪಡಿಸಿತ್ತು ಎಂದು ಹೇಳಲಾಗಿದೆ. 

ಪ್ರಧಾನಿ ಕಾರ್ಯಕ್ರಮದ ಸಮಯದಲ್ಲಿ ತಾಂತ್ರಿಕ ದೋಷ‌ ಉಂಟಾದ ನಂತರ, ರಾಜಸ್ಥಾನ ಸರ್ಕಾರ ಆಡಳಿತಾತ್ಮಕವಾಗಿ ಮೇಜರ್ ಸರ್ಜರಿ ಮಾಡಿದೆ. 2008ರ ಬ್ಯಾಚ್‌ನ ಹಿರಿಯ ಐಎಎಸ್ ಅಧಿಕಾರಿ ಅರ್ಚನಾ ಸಿಂಗ್ ಅವರನ್ನು ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ (ಐಟಿ ಮತ್ತು ಸಿ) ಇಲಾಖೆಯ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಲಾಗಿದೆ. 

ಅರ್ಚನಾ ಸಿಂಗ್ 2007ರಲ್ಲಿ ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗಿದ್ದರು. ರಾಜಸ್ಥಾನ ಕೇಡರ್‌ನ 2008ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು ಮೋದಿ ಕಾರ್ಯಕ್ರಮ ಬೆನ್ನಲ್ಲೇ ಅವರನ್ನು ಹುದ್ದೆಯಿಂದ ತೆರವುಗೊಳಿಸಿ ಮುಂದಿನ ಹುದ್ದೆ ನೀಡುವ ವರೆಗೂ ಖಾಲಿಯಿರಿಸಿದೆ. ಅಲ್ಲದೆ, ಸಕ್ರಿಯ ಜವಾಬ್ದಾರಿಗಳಿಂದ ತೆಗೆದುಹಾಕಿದೆ.

In a major administrative reshuffle, senior IAS officer Archana Singh has been removed from her post as Secretary of Rajasthan’s Information Technology and Communication Department. The action followed a technical glitch during Prime Minister Narendra Modi’s rally in Banswara on September 25, where the video screen went blank for nearly 10 minutes during his address. Though the audio system was functional, the blackout disrupted the visual broadcast of the event. Archana Singh, a 2008-batch IAS officer, has been relieved of her responsibilities until further posting.