ಕಾಲ್ತುಳಿತ ಘಟನೆ ಆಕಸ್ಮಿಕ ಅಲ್ಲ, ಪಿತೂರಿ ! ಕಲ್ಲು ತೂರಾಟ, ಪೊಲೀಸ್ ಲಾಠಿಚಾರ್ಜ್ ಕಾರಣ ; ಸಿಬಿಐ ತನಿಖೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ ಟಿವಿಕೆ ಪಕ್ಷ, ಡಿಎಂಕೆ ಸರ್ಕಾರದ ವೈಫಲ್ಯ ಬಗ್ಗೆ ಬಿಜೆಪಿ ಪ್ರಶ್ನೆ 

28-09-25 10:02 pm       HK News Desk   ದೇಶ - ವಿದೇಶ

ತಮಿಳುನಾಡಿನ ಕರೂರ್ ರ್ಯಾಲಿಯಲ್ಲಿ 10 ಮಕ್ಕಳು ಸೇರಿದಂತೆ 40 ಜನರು ಸಾವನ್ನಪ್ಪಿದ ಘಟನೆ ಹಿಂದೆ ಪಿತೂರಿ ಆರೋಪ ಕೇಳಿಬಂದಿದೆ. ‌ಕಾಲ್ತುಳಿತದ ಬಗ್ಗೆ ಸ್ವತಂತ್ರ ತನಿಖಾ ಆಯೋಗ ರಚಿಸಬೇಕು ಅಥವಾ ಸಿಬಿಐ ತನಿಖೆಗೆ ನೀಡವಂತೆ ಕೋರಿ ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಮದ್ರಾಸ್ ಹೈಕೋರ್ಟ್‌ ಮಧುರೈ ಪೀಠದ ಮೆಟ್ಟಿಲೇರಿದೆ.

ಚೆನ್ನೈ, ಸೆ.28 : ತಮಿಳುನಾಡಿನ ಕರೂರ್ ರ್ಯಾಲಿಯಲ್ಲಿ 10 ಮಕ್ಕಳು ಸೇರಿದಂತೆ 40 ಜನರು ಸಾವನ್ನಪ್ಪಿದ ಘಟನೆ ಹಿಂದೆ ಪಿತೂರಿ ಆರೋಪ ಕೇಳಿಬಂದಿದೆ. ‌ಕಾಲ್ತುಳಿತದ ಬಗ್ಗೆ ಸ್ವತಂತ್ರ ತನಿಖಾ ಆಯೋಗ ರಚಿಸಬೇಕು ಅಥವಾ ಸಿಬಿಐ ತನಿಖೆಗೆ ನೀಡವಂತೆ ಕೋರಿ ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಮದ್ರಾಸ್ ಹೈಕೋರ್ಟ್‌ ಮಧುರೈ ಪೀಠದ ಮೆಟ್ಟಿಲೇರಿದೆ. 

ಈ ದುರಂತ ಆಕಸ್ಮಿಕವಲ್ಲ, ಬದಲಾಗಿ "ಪಿತೂರಿ"ಯ ಭಾಗ ಎಂದು ಪಕ್ಷ ಆರೋಪಿಸಿದೆ. ಜನಸಮೂಹದ ಮೇಲೆ ಕಲ್ಲು ತೂರಾಟ ಮತ್ತು ಸ್ಥಳದಲ್ಲಿ ಪೊಲೀಸ್ ಲಾಠಿ ಚಾರ್ಜ್ ಮಾಡಿದ್ದು ಘಟನೆಗೆ ಕಾರಣ ಎಂದು ಹೇಳಿದೆ. ಟಿವಿಕೆ ಪಕ್ಷದ ವಕೀಲರ ನಿಯೋಗವು ಜಸ್ಟಿಸ್ ದಂಡಪಾಣಿ ಅವರ ಮನೆಗೆ ತೆರಳಿ ಈ ಬಗ್ಗೆ ದೂರು ಕೊಟ್ಟಿದೆ. ಸುಮೊಟೊ ಪ್ರಕರಣ ತೆಗೆದುಕೊಳ್ಳುವಂತೆಯೂ ಟಿವಿಕೆ ಪಕ್ಷ ಕೋರ್ಟಿನಲ್ಲಿ ಕೇಳಿಕೊಂಡಿದೆ. 

Vijay's Karur rally: 'Long waits, poor crowd management triggered stampede'

TVK Karur stampede: How tragedy broke out and who's responsible?  'Overcrowding, delay' — what we know so far | Today News

TVK Vijay Rally Stampede Live: TVK Rally Karur, Vijay: Updates: Updates: TVK  Chief's Top Aide Booked Over Deadly Stampede

Negligence, Crowd Mismanagement, Conspiracy Charge: Politics Over Karur  Rally Stampede, TVK Vijay in Spotlight | Asianet Newsable

ಡಿಎಂಕೆ ಸರ್ಕಾರದ ಸಿಎಂ ಸ್ಟಾಲಿನ್, ಡಿಸಿಎಂ ಉದಯನಿಧಿ ದುರಂತ ಸ್ಥಳಕ್ಕೆ ಭೇಟಿ ನೀಡಿದ್ದು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಇದೇ ವೇಳೆ, ದುರಂತ ಘಟನೆಯ ತನಿಖೆ ಪೂರ್ಣಗೊಳ್ಳುವ ವರೆಗೆ ಟಿವಿಕೆ ಪಕ್ಷದ ಸಾರ್ವಜನಿಕ ರ್ಯಾಲಿಯನ್ನು ನಿರ್ಬಂಧಿಸಬೇಕೆಂದು ಕೋರ್ಟಿಗೆ ಪಿಐಎಲ್ ಸಲ್ಲಿಕೆಯಾಗಿದೆ. ಚುನಾವಣೆಗೆ ಕೆಲವೇ ಸಮಯ ಇರುವಾಗ ಟಿವಿಕೆ ಪಕ್ಷದ ವಿಜಯ್ ನಡೆಸುತ್ತಿರುವ ರ್ಯಾಲಿಗೆ ಭಾರೀ ಜನ ಸೇರುತ್ತಿರುವುದು ಆಡಳಿತ ನಡೆಸುತ್ತಿರುವ ಕೆಲವು ಪಕ್ಷಗಳಿಗೆ ಚಿಂತೆ ಮೂಡಿಸಿತ್ತು. ಹೀಗಾಗಿ ರ್ಯಾಲಿ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿತ್ತೇ ಎನ್ನುವ ಶಂಕೆ ಮೂಡಿದೆ.  

ಕರೂರು ಜಿಲ್ಲಾ ಟಿವಿಕೆ ಪಕ್ಷದ ಕಚೇರಿ ಬಂದ್ ಆಗಿದ್ದು ರ್ಯಾಲಿ ಆಯೋಜಿಸಿದ್ದ ಜಿಲ್ಲಾ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ. ಹೀಗಾಗಿ ಪ್ರಮುಖ ನಾಯಕರು ತಲೆಮರೆಸಿಕೊಂಡಿದ್ದಾರೆ. ಇದೇ ವೇಳೆ, ಟಿವಿಕೆ ಪಕ್ಷದಿಂದ ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು ಮೃತರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದೆ. ರಾಜ್ಯ ಸರ್ಕಾರ ಹತ್ತು ಲಕ್ಷ ಪ್ರಕಟಿಸಿದ್ದರೆ ಅದಕ್ಕಿಂತ ಹೆಚ್ಚು ಮೊತ್ತದ ಘೋಷಣೆ ಮಾಡಿ ಗಮನ ಸೆಳೆದಿದೆ. ಕೇಂದ್ರ ಸರ್ಕಾರದಿಂದ ತಲಾ ಎರಡು ಲಕ್ಷ ಪರಿಹಾರ ಪ್ರಕಟಿಸಿದೆ. ಇದೇ ವೇಳೆ, ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಲು ಬಿಜೆಪಿ ಆಗ್ರಹ ಮಾಡಿದ್ದು ಡಿಎಂಕೆ ಸರ್ಕಾರದ ವೈಫಲ್ಯ ಬಗ್ಗೆ ಬೊಟ್ಟು ಮಾಡಿದೆ. 

ಕರೂರಿಗೆ ವಿಜಯ್ ಬೆಳಗ್ಗೆ 11 ಗಂಟೆಗೆ ಬರುತ್ತಾರೆಂದು ಜನ ಕಾದು ಕುಳಿತಿದ್ದರು. ಆದರೆ ಅವರು ಬರುವಾಗ ಸಂಜೆ 7.30 ಆಗಿತ್ತು. ಆಯೋಜಕರ ಪ್ರಕಾರ ಹತ್ತು ಸಾವಿರ ಜನ ಸೇರುತ್ತಾರೆಂಬ ನಿರೀಕ್ಷೆ ಇತ್ತಂತೆ. ಆದರೆ ಸ್ಥಳದಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಹೆಚ್ಚು ವಿಸ್ತಾರ ಇಲ್ಲದ ರಸ್ತೆಯಲ್ಲಿ ವಿಜಯ್ ಬರುತ್ತಿದ್ದಾಗಲೇ ಜನರು ಮುಗಿಬಿದ್ದುದರಿಂದ ದುರಂತ ಉಂಟಾಗಿದೆ ಎನ್ನಲಾಗುತ್ತಿದೆ.

The tragic stampede at actor-politician Vijay’s Tamizhaga Vetri Kalagam (TVK) rally in Karur, which claimed 40 lives including 10 children, has sparked allegations of conspiracy. TVK has moved the Madras High Court’s Madurai Bench seeking a CBI probe, alleging stone-pelting and police lathi-charge triggered the chaos. While CM M.K. Stalin and Deputy CM Udhayanidhi have promised a judicial inquiry, BJP has accused the DMK government of administrative failure.