ಬ್ರೇಕಿಂಗ್ ನ್ಯೂಸ್
01-10-25 04:10 pm HK News Desk ದೇಶ - ವಿದೇಶ
ನವದೆಹಲಿ, ಅ.1 : ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನ ವಿರುದ್ಧ ಆಪರೇಶನ್ ಸಿಂಧೂರ ನಡೆಸಿದ್ದು, ಆಬಳಿಕ ಪಾಕ್ ಮಂಡಿಯೂರಿದ್ದು ಮತ್ತು ಅಮೆರಿಕವು ತಾನೇ ಯುದ್ಧ ನಿಲ್ಲಿಸಿದ್ದು ಎಂದು ಕೊಚ್ಚಿಕೊಂಡಿದ್ದು, ಭಾರತ ಸರ್ಕಾರದ ಸೇನಾ ಕಾರ್ಯಾಚರಣೆ ಬಗ್ಗೆ ಕಾಂಗ್ರೆಸ್ ಟೀಕಿಸಿದ್ದು ಎಲ್ಲ ಕೇಳಿದ್ದೇವೆ. ಇದೀಗ 2008ರ ಮುಂಬೈ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಲು ಯುಪಿಎ ಸರ್ಕಾರ ಹಿಂದೇಟು ಹಾಕಲು ಅಮೆರಿಕದ ಒತ್ತಡ ಕಾರಣ ಎಂಬ ವಿಚಾರ ಹೊರಬಿದ್ದಿದೆ. ಮಾಜಿ ಕೇಂದ್ರ ಗೃಹ ಸಚಿವ ಚಿದಂಬರಂ ಹೇಳಿಕೆ ನೀಡಿದ್ದು ಕಾಂಗ್ರೆಸನ್ನು ನಡುಬೀದಿಯಲ್ಲಿ ನಿಲ್ಲುವಂತೆ ಮಾಡಿದೆ.
26/11 ಮುಂಬೈ ದಾಳಿಯ ನಂತರ ಭಾರತವು ಪಾಕಿಸ್ತಾನದ ವಿರುದ್ಧ ಮಿಲಿಟರಿ ಪ್ರತೀಕಾರದ ಬಗ್ಗೆ ಯೋಚಿಸಿತ್ತು. ಆದರೆ ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಒತ್ತಡದ ಮೇರೆಗೆ, ಮಿಲಿಟರಿ ಕಾರ್ಯಾಚರಣೆ ನಡೆಸುವ ಯೋಚನೆ ಕೈಬಿಡಲಾಗಿತ್ತು ಎಂದು ಆಗ ಗೃಹ ಸಚಿವರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ನಾವು ಪಾಕಿಸ್ತಾನ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಿದ್ದೆವು. ಆದರೆ ಜಾಗತಿಕ ಸಮುದಾಯ ಅದರಲ್ಲೂ ವಿಶೇಷವಾಗಿ ಅಮೆರಿಕವು ನಮ್ಮನ್ನು ಹಾಗೆ ಮಾಡದಂತೆ ತಡೆದಿತ್ತು ಎಂದು ಚಿದಂಬರಂ ಹೇಳಿದ್ದು ಈ ಮೂಲಕ ಯುಪಿಎ ಸರ್ಕಾರ ದೇಶದ ಸಾರ್ವಭೌಮತ್ವ ವಿಚಾರದಲ್ಲಿ ರಾಜಿಯಾಗಿತ್ತೇ ಎಂಬ ಶಂಕೆ ಮೂಡಿಸಿದೆ.
ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಜಾ ರೈಸ್ ಪಾಕಿಸ್ತಾನದ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸದಂತೆ ನಮ್ಮನ್ನು ಕೇಳಿಕೊಂಡಿದ್ದರು. ಅಲ್ಲದೆ, ಜಾಗತಿಕ ಒತ್ತಡವೂ ಹೆಚ್ಚಿದ್ದರಿಂದ, ಸಶಸ್ತ್ರ ಪ್ರತಿಕ್ರಿಯೆ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು ಎಂದು ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅಂದಿನ ಘಟನಾವಳಿಗಳನ್ನು ಮೆಲುಕು ಹಾಕಿದ್ದಾರೆ.
ಅಧಿಕಾರ ವಹಿಸಿಕೊಂಡ 2-3 ದಿನಗಳ ನಂತರ, ಕೊಂಡೋಲೀಜಾ ರೈಸ್ ಅವರು ನನ್ನನ್ನು ಮತ್ತು ಆಗಿನ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದರು. ದಯವಿಟ್ಟು ಪಾಕಿಸ್ತಾನದ ವಿರುದ್ಧ ಮಿಲಿಟರಿ ಪ್ರತಿಕ್ರಿಯೆ ಬೇಡ ಎಂದು ನಮ್ಮಲ್ಲಿ ಮನವಿ ಮಾಡಿದರು. ನಾನು ಮಿಲಿಟರಿ ಪ್ರತಿಕ್ರಿಯೆ ಪರವಾಗಿದ್ದರೂ, ಪ್ರಧಾನಿ ಡಾ. ಸಿಂಗ್ ಅವರು ವಿದೇಶಾಂಗ ಇಲಾಖೆಯೊಡನೆ ಚರ್ಚಿಸಿ ಸೇನಾ ಕಾರ್ಯಾಚರಣೆ ಬೇಡ ಎಂಬ ತೀರ್ಮಾನಕ್ಕೆ ಬಂದರು" ಎಂದು ಪಿ. ಚಿದಂಬರಂ ಹೇಳಿದ್ದು ಕಾಂಗ್ರೆಸ್ ಪಕ್ಷವನ್ನು ತೀವ್ರ ಮುಜುಗರಕ್ಕೆ ಈಡುಮಾಡಿದೆ.
ಮಾಜಿ ಗೃಹ ಸಚಿವ ಚಿದಂಬರಂ ನೀಡಿರುವ ಹೇಳಿಕೆಗೆ, ಆಡಳಿತಾರೂಡ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ. "ಮುಗ್ಧ ನಾಗರಿಕರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವಲ್ಲೂ ಅಂದಿನ ಯುಪಿಎ ಸರ್ಕಾರ ಅಮೆರಿಕದ ಮರ್ಜಿಗಾಗಿ ಕಾದಿದ್ದು ದುರಂತ" ಎಂದು ವಾಗ್ದಾಳಿ ನಡೆಸಿದೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, "17 ವರ್ಷಗಳ ನಂತರ ಮಾಜಿ ಗೃಹ ಸಚಿವ ಪಿ. ಚಿದಂಬರಂ ಸತ್ಯ ಒಪ್ಪಿಕೊಂಡಿದ್ದಾರೆ. ಅಷ್ಟಕ್ಕೂ ಈ ಸತ್ಯ ಕಾಂಗ್ರೆಸ್‌ವೊಂದನ್ನು ಹೊರತುಪಡಿಸಿ ಇಡೀ ದೇಶಕ್ಕೆ ತಿಳಿದಿತ್ತು. 26/11 ಅನ್ನು ವಿದೇಶಿ ಶಕ್ತಿಗಳ ಒತ್ತಡದಿಂದಾಗಿ ತಪ್ಪಾಗಿ ನಿರ್ವಹಿಸಲಾಗಿತ್ತು" ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
In a stunning revelation, former Union Home Minister P. Chidambaram admitted that after the 2008 Mumbai terror attacks, India had considered military retaliation against Pakistan but backed off under international—especially U.S.—pressure. Chidambaram said U.S. Secretary of State Condoleezza Rice personally urged then PM Manmohan Singh and him not to go ahead with the strike.
30-09-25 07:31 pm
Bangalore Correspondent
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
Mahesh Shetty: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆ...
30-09-25 03:58 pm
ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಪ್ರಬ...
30-09-25 01:08 pm
ಹೈದ್ರಾಬಾದ್ ನಲ್ಲಿ ಕಾಂತಾರ ಪ್ರಚಾರ ; ರಿಷಬ್ ಕನ್ನಡದ...
29-09-25 07:59 pm
01-10-25 05:32 pm
HK News Desk
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಸ್ಫೋಟ ; ಕಾರಿನಲ್...
30-09-25 04:03 pm
ಪರಿಶಿಷ್ಟರ ಮತಾಂತರ ಜಾಲ ; 'ಪವಾಡ ಚಿಕಿತ್ಸೆ' ಆಮಿಷ ಒ...
29-09-25 10:52 pm
01-10-25 04:45 pm
Mangalore Correspondent
ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ತಂಡದ ಮುಡಿಗೇರಿದ ಕು...
01-10-25 03:35 pm
ಮಂಗಳೂರು ಪೂರ್ತಿ ಝಗಮಗ ; ಕೋಟಿ ಕೋಟಿ ಮಿನಿಚರ್ ಅಳವಡಿ...
30-09-25 10:57 pm
Ullal Municipal Commissioner: ಉಳ್ಳಾಲ ನಗರಸಭೆಯಲ...
30-09-25 06:48 pm
ಧರ್ಮಸ್ಥಳ ಪ್ರಕರಣ, ಕೋರ್ಟಿಗೆ ಚಿನ್ನಯ್ಯ ಹೊಸ ಹೇಳಿಕೆ...
29-09-25 11:02 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm