ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂತಲ್ಲೇ ಕಲಿಸುವ ಕೆಲಸ ಆಗಬೇಕು, ತನ್ನ ಮಗಳ ಅನುಭವ ಹೇಳಿಕೊಂಡು ನಟ ಅಕ್ಷಯ್ ಕುಮಾರ್ ಕಳವಳ 

03-10-25 04:50 pm       HK News Desk   ದೇಶ - ವಿದೇಶ

ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಶಾಲಾ ಹಂತದಲ್ಲಿಯೇ ಪಠ್ಯ ರಚಿಸಬೇಕು ಎಂದು ಖ್ಯಾತ ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.‌  ಅಪರಿಚಿತರ ಜೊತೆಗೆ ಮಕ್ಕಳು ವಿಡಿಯೋ ಗೇಮ್ ಆಡುವುದರಿಂದಲೂ ಸೈಬರ್ ಅಪಾಯ ಬರಬಹುದು ಎಂದು ತನ್ನ ಮಗಳಿಗಾದ ಅನುಭವ ಹೇಳಿಕೊಂಡು ಅಕ್ಷಯ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.

ಮುಂಬೈ, ಅ.2 : ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಶಾಲಾ ಹಂತದಲ್ಲಿಯೇ ಪಠ್ಯ ರಚಿಸಬೇಕು ಎಂದು ಖ್ಯಾತ ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.‌  ಅಪರಿಚಿತರ ಜೊತೆಗೆ ಮಕ್ಕಳು ವಿಡಿಯೋ ಗೇಮ್ ಆಡುವುದರಿಂದಲೂ ಸೈಬರ್ ಅಪಾಯ ಬರಬಹುದು ಎಂದು ತನ್ನ ಮಗಳಿಗಾದ ಅನುಭವ ಹೇಳಿಕೊಂಡು ಅಕ್ಷಯ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.

"ಕೆಲವು ತಿಂಗಳ ಹಿಂದೆ ನನ್ನ ಮನೆಯಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು ನಾನು ಹೇಳಬಯಸುತ್ತೇನೆ. ನನ್ನ ಮಗಳು ವಿಡಿಯೋ ಗೇಮ್ ಆಡುತ್ತಿದ್ದಳು. ಯಾರೋ ಗೊತ್ತಿಲ್ಲದವರ ಜೊತೆಗೂ ಆಡಬಹುದಾದ ಕೆಲವು ವಿಡಿಯೋ ಗೇಮ್‌ಗಳಿವೆ. ನೀವು ಅಪರಿಚಿತರೊಂದಿಗೆ ಆಟವಾಡುತ್ತಿದ್ದೀರಿ ಎಂಬ ಭ್ರಮೆ ಬರದಂತೆ ತಲ್ಲೀನವಾಗುತ್ತೀರಿ. ನೀವು ಆಟವಾಡುತ್ತಿರುವಾಗಲೇ ಕೆಲವೊಮ್ಮೆ ಆ ಕಡೆಯಿಂದ ಸಂದೇಶ ಬರುತ್ತದೆ. 

ಸಂದೇಶದಲ್ಲಿ 'ನೀವು ಗಂಡೋ, ಹೆಣ್ಣೋ?' ಎಂದು ಕೇಳುತ್ತದೆ. ನನ್ನ ಮಗಳು ಆಟದ ಸಮಯದಲ್ಲಿ ತನ್ನನ್ನು ಹೆಣ್ಣು ಎಂದು ಪರಿಚಯಿಸಿದ್ದಳು. ತದನಂತರ ಆಕೆಯೊಂದಿಗೆ ಮಾತನಾಡುತ್ತಿದ್ದ ವ್ಯಕ್ತಿ, 'ನಿಮ್ಮ ನಗ್ನ ಚಿತ್ರಗಳನ್ನು ಕಳುಹಿಸಬಹುದೇ?' ಎಂದು ಕೇಳಿದ್ದ. ಮಗಳು ಬೆಚ್ಚಿ ಬಿದ್ದು ಗೇಮ್ ಬಂದ್ ಮಾಡಿ, ಅಮ್ಮನಿಗೆ ಹೇಳಿದಳು. ಕೆಲವು ಸೈಬರ್ ಅಪರಾಧಗಳು ಹೀಗೆಯೇ ಸಣ್ಣ ಮಟ್ಟದಲ್ಲಿ ಪ್ರಾರಂಭವಾಗುತ್ತವೆ. ಸೈಬರ್ ಅಪರಾಧಕ್ಕೆ ದೂಡುವ ಸಂಚು ಇದರಲ್ಲಿ ಇದೆ" ಎಂದು ಅಕ್ಷಯ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. 

"ನಮ್ಮ ಮಹಾರಾಷ್ಟ್ರ ರಾಜ್ಯದಲ್ಲಿ, ಏಳನೇ, ಎಂಟನೇ, ಒಂಬತ್ತನೇ ಮತ್ತು ಹತ್ತನೇ ತರಗತಿಗಳಲ್ಲಿ ಪ್ರತಿ ವಾರ, ಸೈಬರ್ ಅವಧಿ ಎಂದು ಪ್ರತ್ಯೇಕ ಪಠ್ಯ ರಚಿಸಿ, ಶಾಲೆಯಲ್ಲಿ ಕಲಿಸುವಂತಾಗಬೇಕು, ಮಕ್ಕಳಿಗೆ ಇವೆಲ್ಲ ಅಪರಾಧಗಳ ಬಗ್ಗೆ ವಿವರಿಸಬೇಕು ಎಂದು ಮಹಾ ಮುಖ್ಯಮಂತ್ರಿಗೆ ಅಕ್ಷಯ್ ಆಗ್ರಹ ಮಾಡಿದ್ದಾರೆ. ಈ ರೀತಿಯ ಅಪರಾಧಗಳು ಬೀದಿ ಅಪರಾಧಕ್ಕಿಂತ ದೊಡ್ಡದಾಗುತ್ತಿದೆ. ಇವನ್ನು ಈಗಲೇ ನಿಲ್ಲಿಸುವುದು ಬಹಳ ಮುಖ್ಯ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

Bollywood actor Akshay Kumar has called for mandatory cyber safety education in schools, warning that children face hidden dangers even while playing video games. Sharing a personal incident, he revealed how his daughter was asked for explicit photos by a stranger during online gameplay.