ಬ್ರೇಕಿಂಗ್ ನ್ಯೂಸ್
09-10-25 10:31 pm HK News Desk ದೇಶ - ವಿದೇಶ
ನವದೆಹಲಿ, ಅ.9 : 'ಆಪರೇಷನ್ ಸಿಂಧೂರ' ದಾಳಿಯಿಂದ ಭಾರೀ ನಷ್ಟ ಅನುಭವಿಸಿರುವ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷ್-ಇ-ಮೊಹಮ್ಮದ್, ಭಾರತದ ವಿರುದ್ಧ ಪ್ರತೀಕಾರ ತೀರಿಸಲು ಸಂಚು ನಡೆಸಿದೆ. ಇದಕ್ಕಾಗಿ ಭಾರತದಲ್ಲಿಯೇ ಮಹಿಳಾ ಮಾನವ ಬಾಂಬರ್ ತಯಾರಿಸಲು ಯೋಜನೆ ಹಾಕಿದೆ. ಅಲ್ಲದೆ, ಮೊದಲ ಬಾರಿಗೆ ಎನ್ನುವಂತೆ ಜಮಾತ್-ಉಲ್- ಮಾಮಿನಾತ್ ಎಂಬ ಮಹಿಳಾ ವಿಂಗ್ ರಚನೆಗೆ ಮುಂದಾಗಿದೆ.
ಜೆಇಎಂ ಮುಖ್ಯಸ್ಥ, ಜಾಗತಿಕ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ಹೆಸರಿನಲ್ಲಿ ಬರೆಯಲಾದ ಪತ್ರದಲ್ಲಿ ಈ ಘೋಷಣೆ ಮಾಡಲಾಗಿದೆ. ಜೆಇಎಂ ಉಗ್ರರ ಹೊಸ ಮಹಿಳಾ ಘಟಕಕ್ಕೆ ಅಕ್ಟೋಬರ್ 8ರಂದು ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಮರ್ಕಝ್ ಉಸ್ಮಾನ್-ಒ-ಅಲಿಯಲ್ಲಿ ನೇಮಕಾತಿ ಪ್ರಾರಂಭವಾಗಿದೆ. ಮಹಿಳಾ ಬ್ರಿಗೇಡ್ ಅನ್ನು ಮಸೂದ್ ಅಜರ್ ಅವರ ಸಹೋದರಿ ಸಾದಿಯಾ ಅಜರ್ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನದ ದಕ್ಷಿಣ ಪಂಜಾಬ್ ಪ್ರಾಂತ್ಯದಿಂದ ಸುಮಾರು 100 ಕಿಮೀ ದೂರದ ಬಹವಾಲ್‌ಪುರದ ಮರ್ಕಝ್ ಸುಭಾನಲ್ಲಾಹ್‌ನಲ್ಲಿ ಜೆಎಂನ ಪ್ರಧಾನ ಕಚೇರಿಯಿದ್ದು ಭಾರತೀಯ ಸೇನೆಯು ಮೇ 7 ರಂದು ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಕಚೇರಿಯನ್ನು ಧ್ವಂಸ ಮಾಡಲಾಗಿತ್ತು. ಈ ವೇಳೆ, ಸಾದಿಯಾ ಅಜರ್ ಪತಿ ಯೂಸುಫ್ ಅಜರ್ ಸೇರಿ ಹಲವರು ಹತ್ಯೆಯಾಗಿದ್ದರು.
ಹತ್ಯೆಗೀಡಾದ ಜೆಇಎಂ ಕಮಾಂಡರ್‌ಗಳ ಪತ್ನಿಯರನ್ನು ಮತ್ತು ಬಹವಾಲ್‌ಪುರ್, ಕರಾಚಿ, ಮುಜಾಫರಾಬಾದ್, ಕೋಟ್ಲಿ, ಹರಿಪುರ ಮತ್ತು ಮನ್ಸೆಹ್ರಾದಲ್ಲಿನ ತನ್ನ ಕೇಂದ್ರಗಳಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ದುರ್ಬಲ ಮಹಿಳೆಯರನ್ನು ತೀವ್ರವಾದಿ ಮಹಿಳಾ ಗುಂಪಿನಲ್ಲಿ ಸೇರಿಸಿಕೊಳ್ಳಲು ಪ್ರಾರಂಭಿಸಿದೆ. ಈ ಹಿಂದೆ ಉಗ್ರವಾದ ಗುಂಪಿನಲ್ಲಿ ಮಹಿಳೆಯರನ್ನು ಸೇರಿಸುವುದು ನಿಷೇಧ ಇದ್ದರೂ, ಮಸೂದ್ ಅಜರ್ ಮತ್ತು ಆತನ ಸಹೋದರ ತಲ್ಹಾ ಅಲ್-ಸೈಫ್ ಅವರು ಜೆಇಎಂ ಕಾರ್ಯಾಚರಣೆಗೆ ಮಹಿಳೆಯರನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ISIS ಉಗ್ರ ಸಂಘನೆಗಳಂತೆ ಮಹಿಳೆಯರನ್ನು ಯುದ್ಧ ಅಥವಾ ಆತ್ಮಾಹುತಿ ದಾಳಿಗಳಲ್ಲಿ ಬಳಸಿಕೊಳ್ಳಲು ಯೋಜಿಸಲಾಗಿದೆ. ಆಪರೇಷನ್ ಸಿಂಧೂರ್ ನಂತರ ಜೆಇಎಂ, ಮಿತ್ರ ಗುಂಪುಗಳಾದ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಮತ್ತು ಲಷ್ಕರ್-ಎ-ತೋಯ್ಬಾ ಜೊತೆಗೆ ತನ್ನ ಕಾರ್ಯಾಚರಣೆಯ ಭಾಗಗಳನ್ನು ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ (ಕೆಪಿಕೆ) ಪ್ರಾಂತ್ಯಕ್ಕೆ ಸ್ಥಳಾಂತರಿಸಿದೆ ಎಂದು ಹೇಳಲಾಗುತ್ತಿದೆ.
ಸೇನಾ ಕಾರ್ಯಾಚರಣೆಯಲ್ಲಿ ನಾಶಗೊಂಡಿದ್ದ ಭಯೋತ್ಪಾದಕರ ನೆಲೆಯನ್ನು ಪುನರ್ ನಿರ್ಮಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ದೇಶಾದ್ಯಂತ 313 ಹೊಸ ಮರ್ಕಜ್ (ತರಬೇತಿ ಮತ್ತು ಕಾರ್ಯಾಚರಣಾ ಕೇಂದ್ರಗಳು) ಸ್ಥಾಪಿಸಲು ಸುಮಾರು 3.91 ಶತಕೋಟಿ ರೂ. ಸಂಗ್ರಹಿಸುವ ಗುರಿಯೊಂದಿಗೆ EasyPaisa ಮೂಲಕ ಆನ್‌ಲೈನ್ ಪ್ರಚಾರ ಸೇರಿದಂತೆ ನಿಧಿ ಸಂಗ್ರಹಣೆಯ ಕಾರ್ಯಗಳು ನಡೆಯುತ್ತಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಆನ್‌ಲೈನ್ ನೆಟ್‌ವರ್ಕ್‌ಗಳ ಮೂಲಕ ಜಮಾತ್-ಉಲ್-ಮೊಮಿನಾತ್ ಎಂಬ ಮಹಿಳಾ ಗುಂಪಿಗೆ ಸದಸ್ಯರನ್ನು ಸೇರಿಸಲು ಪ್ರಯತ್ನ ನಡೆದಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಮಹಿಳೆಯರನ್ನು ಈ ಗುಂಪಿಗೆ ಸೇರಿಸುವಲ್ಲಿ ಐಸಿಸ್ ನೆಟ್ವರ್ಕ್ ಗುರಿಯಾಗಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
Following heavy losses in India’s ‘Operation Sindhoor’, Pakistan-based terror group Jaish-e-Mohammed (JeM) has reportedly launched a new women’s wing named Jamaat-ul-Mominaat to carry out revenge attacks against India. Intelligence reports reveal that the wing, led by JeM chief Masood Azhar’s wife Saadia Azhar, is recruiting women for suicide missions and extremist training across Pakistan.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am