ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ್ರಮ ಸೆರೆವಾಸ ಅಂತ್ಯ, 20 ಇಸ್ರೇಲ್ ಒತ್ತೆಯಾಳು- 1900 ಪ್ಯಾಲೆಸ್ತೀನಿಗಳ ಬಿಡುಗಡೆ, ಯುದ್ಧ ನಿಲ್ಲಿಸಿದ ಬಗ್ಗೆ ಇಸ್ರೇಲ್ ಸಂಸತ್ತಿನಲ್ಲಿ ಟ್ರಂಪ್ ಅಬ್ಬರ ! 

14-10-25 11:22 am       HK News Desk   ದೇಶ - ವಿದೇಶ

ಎರಡು ವರ್ಷಗಳ ಅಕ್ರಮ ಸೆರೆವಾಸ, ಬಾಂಬ್ ಸುರಿಮಳೆ ನಡುವೆಯೂ ಬದುಕಿಬಂದ ಕ್ಷಣ. ಹಮಾಸ್ ಬಂಡುಕೋರರ ಬಂಧನದಿಂದ ಬಿಡುಗಡೆ ಹೊಂದಿದ ಇಸ್ರೇಲಿ ಪ್ರಜೆಗಳು ಕೊನೆಗೂ ತಮ್ಮ ನಾಡನ್ನು ಸೇರಿಕೊಂಡಿದ್ದಾರೆ. 

ಟೆಲ್ ಅವೀವ್, ಅ.14 : ಎರಡು ವರ್ಷಗಳ ಅಕ್ರಮ ಸೆರೆವಾಸ, ಬಾಂಬ್ ಸುರಿಮಳೆ ನಡುವೆಯೂ ಬದುಕಿಬಂದ ಕ್ಷಣ. ಹಮಾಸ್ ಬಂಡುಕೋರರ ಬಂಧನದಿಂದ ಬಿಡುಗಡೆ ಹೊಂದಿದ ಇಸ್ರೇಲಿ ಪ್ರಜೆಗಳು ಕೊನೆಗೂ ತಮ್ಮ ನಾಡನ್ನು ಸೇರಿಕೊಂಡಿದ್ದಾರೆ. 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೂಪಿಸಿದ ಗಾಜಾ ಶಾಂತಿ ಯೋಜನೆಯಡಿ ಹಮಾಸ್‌ ಉಗ್ರರಿಂದ ಬಿಡುಗಡೆಯಾದ 20 ಇಸ್ರೇಲಿ ಒತ್ತೆಯಾಳುಗಳು ಸೋಮವಾರ ಸ್ವದೇಶಕ್ಕೆ ಮರಳಿದ್ದು, 738 ದಿನಗಳ ಬಳಿಕ ಕುಟುಂಬವನ್ನು ಸೇರಿಕೊಂಡಿದ್ದಾರೆ.

ಇದೇ ವೇಳೆ ಹಮಾಸ್ ಬಂಡುಕೋರರ ವಶದಲ್ಲಿದ್ದ ವೇಳೆ ನಾನಾ ಕಾರಣಗಳಿಂದ ಮೃತಪಟ್ಟ 28 ಜನರ ಕಳೇಬರಗಳನ್ನೂ ಇಸ್ರೇಲಿ ಸೇನೆಗೆ ಹಸ್ತಾಂತರಿಸಲಾಗಿದೆ. ಶಾಂತಿ ಸಂಧಾನ ಸೂತ್ರದಂತೆ ಇಸ್ರೇಲ್- ಹಮಾಸ್ ನಡುವಿನ ಸಂಘರ್ಷ ಕಡೆಗೂ ಅಂತ್ಯಗೊಂಡಿದ್ದು ಬಂಡುಕೋರರ ವಶದಲ್ಲಿದ್ದ 20 ಒತ್ತೆಯಾಳುಗಳನ್ನು ಸೋಮವಾರ ಎರಡು ಹಂತಗಳಲ್ಲಿ ಬಿಡುಗಡೆ ಮಾಡಲಾಯಿತು. ಶಾಂತಿ ಸಂಧಾನ ಪಡೆಯಾದ ರೆಡ್ ಕ್ರಾಸ್ ಸಂಸ್ಥೆಯ ಮೂಲಕ ಇಸ್ರೇಲಿ ರಕ್ಷಣಾ ಪಡೆಗಳ ವಶಕ್ಕೆ ನೀಡಲಾಯಿತು. 

ರೆಡ್ ಕ್ರಾಸ್ ಸಂಸ್ಥೆ ಕರೆತಂದ ತಮ್ಮ ದೇಶದ ಪ್ರಜೆಗಳನ್ನು ಗಾಜಾಪಟ್ಟಿ ಗಡಿಯಲ್ಲಿ ಇಸ್ರೇಲಿ ರಕ್ಷಣಾ ಪಡೆಗಳು ಬರಮಾಡಿಕೊಂಡವು. ಹಸ್ತಾಂತರ ಪ್ರಕ್ರಿಯೆ ನೇರ ಪ್ರಸಾರ ವೀಕ್ಷಿಸಿದ ಕುಟುಂಬಸ್ಥರು ಭಾವುಕರಾದರು. ತಮ್ಮವರನ್ನು ಜೀವಂತವಾಗಿ ಕಂಡ ಕುಟುಂಬ ಸದಸ್ಯರ ಕಣ್ಣು ತುಂಬಿ ಬಂದವು. 'ಜೈ ಇಸ್ರೇಲ್, ಜೈ ಅಮೆರಿಕ' ಎಂದು ಘೋಷಣೆ ಕೂಗಿ ಸಂತಸಪಟ್ಟರು. ಗಡಿಯಲ್ಲಿ ಇಸ್ರೇಲಿ ಪ್ರಜೆಗಳ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದ್ದಂತೆ ರಾಜಧಾನಿ ಟೆಲ್ ಅವಿವ್ ಸೇರಿದಂತೆ ಅನೇಕ ಕಡೆ ನಾಗರಿಕರು ಸಂಭ್ರಮಿಸಿದರು. ಬೀದಿಗಳಲ್ಲಿ ರಾಷ್ಟ್ರ ಧ್ವಜ ಹಾರಿಸಿದರು. 

ಹಮಾಸ್ ತನ್ನ ಪ್ರಜೆಗಳನ್ನು ಬಿಡುಗಡೆ ಮಾಡಿದ ಕೂಡಲೇ ಇಸ್ರೇಲ್ ತನ್ನ ವಶದಲ್ಲಿದ್ದ 250 ಯುದ್ಧ ಕೈದಿಗಳು ಹಾಗೂ ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧಿಯಾಗಿರುವ 1900 ಪ್ಯಾಲೆಸ್ತೀನಿಯರನ್ನು ಬಿಡುಗಡೆ ಮಾಡಿದೆ. ಇದಲ್ಲದೆ, ಶಾಂತಿ ಒಪ್ಪಂದ ಏರ್ಪಟ್ಟ ಹಿನ್ನೆಲೆಯಲ್ಲಿ ಇಸ್ರೇಲಿಗೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಸಂಸತ್ ಉದ್ದೇಶಿಸಿ ಮಾತನಾಡಿದ್ದು, ಗಾಜಾ ಯುದ್ಧ ಮುಗಿದಿದೆ, ಇಸ್ರೇಲ್ ಪಾಲಿಗೆ ನೆಮ್ಮದಿ ಮತ್ತು ಹೊಸ ಅಧ್ಯಾಯ ಆರಂಭ. ಇಸ್ರೇಲ್ ಬೀದಿಗಳಲ್ಲಿ ಸಂಭ್ರಮ ಕಳೆಗಟ್ಟಿದೆ ಎಂದರು. ಟ್ರಂಪ್ ಭಾಷಣದ ವೇಳೆಯೇ ಇಸ್ರೇಲಿನ ಇಬ್ಬರು ಎಡಪಂಥೀಯ ಸಂಸದರು, ಪ್ಯಾಲೆಸ್ತೀನ್ ಪರವಾಗಿ ಘೋಷಣೆ ಕೂಗಿದ್ದು ಪ್ರತ್ಯೇಕ ರಾಷ್ಟ್ರವಾಗಿ ಪರಿಗಣಿಸುವಂತೆ ಭಿತ್ತಿಪತ್ರ ಪ್ರದರ್ಶಿಸಿದರು. ತಕ್ಷಣ ಭದ್ರತಾ ಸಿಬಂದಿ ಅವರನ್ನು ಹೊರಗೆ ಎಳೆದೊಯ್ದರು.

After two years of captivity, 20 Israeli hostages have been released by Hamas under the Gaza Peace Plan brokered by U.S. President Donald Trump. The release marks the end of a prolonged Israel–Hamas conflict that claimed countless lives. Along with the freed hostages, the remains of 28 Israelis who died during captivity were handed over to the Israeli army through the Red Cross.