ಬ್ರೇಕಿಂಗ್ ನ್ಯೂಸ್
13-11-25 04:52 pm HK Staffer ದೇಶ - ವಿದೇಶ
ನವದೆಹಲಿ, ನ.13: ದೆಹಲಿ ಕಾರು ಸ್ಫೋಟ ಪ್ರಕರಣದಲ್ಲಿ ಟರ್ಕಿ ಮೂಲದ ಭಯೋತ್ಪಾದಕರ ನಂಟು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹರ್ಯಾಣದ ಫರೀದಾಬಾದ್‌ನಲ್ಲಿ ಬಂಧಿತನಾಗಿದ್ದ ‘ವೈಟ್ ಕಾಲರ್' ಉಗ್ರರ ಜಾಲದ ಡಾ. ಮುಜಾಮಿಲ್ ಶಕೀಲ್ ಹಾಗೂ ಸ್ಫೋಟಗೊಂಡ ಹುಂಡೈ ಐ20 ಕಾರನ್ನು ಚಲಾಯಿಸಿದ್ದ ಡಾ. ಉಮರ್ ಮೊಹಮ್ಮದ್ ನಬಿ ಇಬ್ಬರೂ 2022ರಲ್ಲಿ ಟರ್ಕಿಗೆ ಭೇಟಿ ನೀಡಿದ್ದು ಅಲ್ಲಿ ಜೈಷ್ ಮೊಹಮ್ಮದ್ ಉಗ್ರ ಸಂಘಟನೆಯ ಹ್ಯಾಂಡ್ಲರ್‌ಗಳನ್ನು ಭೇಟಿಯಾಗಿದ್ದರೆಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
2025ರ ಮೇ ತಿಂಗಳಲ್ಲಿ ಭಾರತವು ಆಪರೇಶನ್ ಸಿಂಧೂರ ಭಾಗವಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) ಭಯೋತ್ಪಾದಕರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಆಗ ಪಾಕಿಸ್ತಾನಕ್ಕೆ ಮತ್ತೊಂದು ಮುಸ್ಲಿಂ ರಾಷ್ಟ್ರ ಟರ್ಕಿ ಬಹಿರಂಗ ಬೆಂಬಲ ನೀಡಿತ್ತು. ಭಾರತ - ಪಾಕ್ ನಡುವಿನ ಗಡಿ ವಿವಾದದಲ್ಲಿ ಟರ್ಕಿ ಪಾಕಿಸ್ತಾನವನ್ನು ಬೆಂಬಲಿಸುತ್ತ ಬಂದಿದೆ. ಈಗ ದೆಹಲಿ ಸ್ಫೋಟ ಆಪರೇಶನ್ ಸಿಂಧೂರ ಕಾರ್ಯಾಚರಣೆಗೆ ಪ್ರತೀಕಾರ ಎನ್ನಲಾಗುತ್ತಿದ್ದು ಟರ್ಕಿಯೂ ಕುಮ್ಮಕ್ಕು ಕೊಟ್ಟಿರಬಹುದು ಎಂಬ ಸಂಶಯ ಉಂಟಾಗಿದೆ.



ಪುಲ್ವಾಮಾ ಜಿಲ್ಲೆಯ ಮೂಲದ ಮುಜಾಮಿಲ್ ಮತ್ತು ಉಮರ್ ಫರೀದಾಬಾದ್‌ನ ಅಲ್ ಫಲಾಹ್ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದರು. ಅವರಿಂದ ವಶಪಡಿಸಿಕೊಂಡ ಪಾಸ್‌ಪೋರ್ಟ್‌ಗಳಲ್ಲಿ ಟರ್ಕಿ ಇಮಿಗ್ರೇಷನ್ ವಿಭಾಗದ ಮೊಹರುಗಳು ಪತ್ತೆಯಾಗಿದ್ದು, ‘ಮೆಡಿಕಲ್ ಕಾನ್ಫರೆನ್ಸ್’ ನೆಪದಲ್ಲಿ ಅವರು ಟರ್ಕಿಗೆ ತೆರಳಿ ಉಗ್ರರ ಸಂಪರ್ಕ ಬೆಳೆಸಿದ್ದಿರಬಹುದು ಎಂಬು ಶಂಕೆ ಇದೆ.
ಅಪಾರ ಪ್ರಮಾಣದ ಸ್ಫೋಟಕ ಪತ್ತೆ ಬೆನ್ನಲ್ಲೇ ಭದ್ರತಾ ಪಡೆಗಳು ಜಮ್ಮು ಕಾಶ್ಮೀರದಲ್ಲಿ ಉಗ್ರರ ಸ್ಲೀಪರ್ ಸೆಲ್‌ಗಳ ವಿರುದ್ಧ ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ. ನಿಷೇಧಿತ ಜಮಾತ್-ಎ-ಇಸ್ಲಾಮಿ, ಜೈಶ್ ಮೊಹಮ್ಮದ್ ಸಂಘಟನೆಗೆ ಸೇರಿದ್ದೆನ್ನಲಾದ 300ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಶೋಧ ನಡೆಸಲಾಗಿದೆ. ಕುಲ್ಗಾಮ್, ಪುಲ್ವಾಮಾ, ಶೋಪಿಯಾನ್, ಬಾರಾಮುಲ್ಲಾ ಮತ್ತು ಗಂದೇರ್‌ಬಾಲ್ ಜಿಲ್ಲೆಗಳಲ್ಲಿ ಶೋಧ ಕಾರ್ಯ ನಡೆಸಿದ್ದು ಟೆಕ್ನಿಕಲ್ ಸಾಕ್ಷ್ಯಗಳನ್ನು ವಶಪಡಿಸಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ 500ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೊಳಪಡಿಸಿದ್ದು, ಹಲವಾರು ಮಂದಿಯನ್ನು ಬಂಧಿಸಲಾಗಿದೆ.
ಇದೇ ವೇಳೆ, ಡಾಕ್ಟರ್ ಗಳನ್ನು ಉಗ್ರವಾದಿ ಚಟುವಟಿಕೆಗಳಿಗೆ ಪ್ರೇರೇಪಿಸಿದ್ದಾನೆ ಎನ್ನಲಾದ ಮೌಲ್ವಿಯ ಹೆಸರನ್ನು ಗುರುತಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ನೌಗಾಮ್ ಮಸೀದಿಯ ಮೌಲ್ವಿಯಾಗಿರುವ ಇರ್ಫಾನ್ ಅಹ್ಮದ್ ವಾಘೆ, ಕಾಶ್ಮೀರಿಗಳಿಗೆ ಮತಾಂಧತೆ ಬಿತ್ತುವ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಇದೆ. ಶ್ರೀನಗರದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಅರೆಕಾಲಿಕ ಬೋಧಕನಾಗಿದ್ದ ಮೌಲ್ವಿ ಯುವ ವೈದ್ಯರ ಮನಸ್ಸಿನಲ್ಲಿ ಮತಾಂಧತೆಯ ವಿಷ ಬಿತ್ತುತ್ತಿದ್ದ ಎಂಬ ಶಂಕೆ ಅಧಿಕಾರಿಗಳಲ್ಲಿದೆ. ‘ಫರ್ಜಂದನ್-ಎ-ದಾರುಲ್ ಉಲೂಮ್ (ದಿಯೋಬಂದ್)’ ಹಾಗೂ ‘ಉಮರ್ ಬಿನ್ ಖಟ್ಟಾಬ್’ ಹೆಸರಿನ ಟೆಲಿಗ್ರಾಂ ಗುಂಪುಗಳ ಮೂಲಕ ಉಗ್ರವಾದಿ ಗುಂಪುಗಳು ಡಾ. ಮುಜಾಮಿಲ್ ಶಕೀಲ್, ಡಾ. ಶಹೀನ್ ಸಯೀದ್, ಡಾ.ಅದೀಲ್ ರಾಥರ್ ಸೇರಿದಂತೆ ಅನೇಕ ವೈಟ್ ಕಾಲರ್ ಜಾಬಲ್ಲಿದ್ದವರನ್ನು ಬ್ರೇನ್‌ವಾಷ್ ಮಾಡಿ ಉಗ್ರರನ್ನಾಗಿಸಿದ್ದರೆಂಬ ಮಾಹಿತಿ ಕಲೆಹಾಕಲಾಗಿದೆ.
ಈ ಬಗ್ಗೆ ತನಿಖೆ ನಡೆಸಿದ ಸಂದರ್ಭದಲ್ಲಿ ಹಲವಾರು ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ. ಡಿಜಿಟಲ್ ಫೋರೆನ್ಸಿಕ್ ವಿಶ್ಲೇಷಣೆಯಲ್ಲಿ ಶ್ರೀನಗರ ಮತ್ತು ಅನಂತನಾಗ್ ಮೂಲದ ಇಬ್ಬರು ಮಹಿಳಾ ವೈದ್ಯರ ನಡುವೆ ಹಣಕಾಸು, ಸಾರಿಗೆ ಹಾಗೂ ‘ಸೇಫ್ ಹೌಸ್’ ವ್ಯವಸ್ಥೆಯ ಕುರಿತು 400ಕ್ಕೂ ಹೆಚ್ಚು ಎನ್‌ಕ್ರಿಪ್ಟ್ ಸಂದೇಶಗಳು ವಿನಿಮಯವಾಗಿರುವುದನ್ನೂ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದಲ್ಲದೆ, ಬಾಂಬ್ ಸ್ಫೋಟಕ್ಕೆ ಬೇಕಾದ ಪರಿಕರಗಳನ್ನು ಖರೀದಿಸಲು 26 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ್ದಾರೆಂಬ ಮಾಹಿತಿಯನ್ನೂ ಅಧಿಕಾರಿಗಳು ಕಲೆ ಹಾಕಿದ್ದಾರೆ.
Investigations into the recent car blast in Delhi have revealed a possible link to Turkey-based terror handlers. Authorities suspect that the explosion could be connected to operatives associated with Pakistan-backed terror outfit Jaish-e-Mohammed (JeM) Two key suspects, Dr. Mujamil Shakeel and Dr. Umar Mohammad Nabi — both associated with the “white-collar terror network” — were arrested in Faridabad, Haryana. Investigators have discovered that the duo visited Turkey in 2022, where they allegedly met with JeM handlers.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm