Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ್ಲಿ ಲ್ಯಾಂಡ್ ಆದ ತರಬೇತಿ ವಿಮಾನ ; ಪೈಲಟ್ಗಳು ಅಪಾಯದಿಂದ ಪಾರು, ರಸ್ತೆ ಮಧ್ಯೆ ವಿಮಾನ ನೋಡಿ ಜನರಿಗೆ ಅಚ್ಚರಿ!  

13-11-25 05:13 pm       HK Staffer   ದೇಶ - ವಿದೇಶ

ತರಬೇತಿ ವಿವಾನವೊಂದು ಪುದುಕೊಟ್ಟೈ ಜಿಲ್ಲೆಯ ಕೀರನೂರ್ ಬಳಿಯ ತಿರುಚಿ-ಪುದುಕೊಟ್ಟೈ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. 

ಚೆನ್ನೈ, ನ.13: ತರಬೇತಿ ವಿವಾನವೊಂದು ಪುದುಕೊಟ್ಟೈ ಜಿಲ್ಲೆಯ ಕೀರನೂರ್ ಬಳಿಯ ತಿರುಚಿ-ಪುದುಕೊಟ್ಟೈ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. 

ತಿರುಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಎಂಜಿನ್ ವೈಫಲ್ಯದಿಂದಾಗಿ ತರಬೇತಿ ಪೈಲಟ್‌ಗಳು ವಿಮಾನವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಈ ವೇಳೆ ಪೈಲಟ್ ಮತ್ತು ತರಬೇತಿ ಪೈಲಟ್ ಇಬ್ಬರೂ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ತಾಂತ್ರಿಕ ವೈಫಲ್ಯ ತಿಳಿಯುತ್ತಲೇ ತಿರುಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಖಾಸಗಿ ಕಂಪನಿಯ ಒಡೆತನ ಹೊಂದಿರುವ ಮತ್ತು ಸೇಲಂನಿಂದ ಕಾರ್ಯ ನಿರ್ವಹಿಸುತ್ತಿದ್ದ ಸಿಂಗಲ್ ಎಂಜಿನ್ ವಿಮಾನವು ಕಾರೈಕುಡಿ ವಾಯುಪ್ರದೇಶಕ್ಕೆ ತೆರಳುತ್ತಿದ್ದಾಗ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ತಿರುಚ್ಚಿ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿಮಾನವನ್ನು ಪರಿಶೀಲಿಸಿದ್ದಾರೆ.‌ ಬಿಝಿ ರೋಡ್ ನಲ್ಲಿ ವಿಮಾನ ಲ್ಯಾಂಡ್ ಆಗುತ್ತಲೇ ಜನರು ಅಚ್ಚರಿಗೀಡಾಗಿದ್ದಾರೆ.‌ ಆದರೆ ಯಾವುದೇ ವಾಹನಕ್ಕೆ ಡಿಕ್ಕಿಯಾಗದೆ ಸೇಫ್ ಆಗಿ ಲ್ಯಾಂಡ್ ಆಗಿದೆ. ರಸ್ತೆಯಲ್ಲಿ ಲ್ಯಾಂಡ್ ಆದ ವಿಮಾನವನ್ನು ನೋಡಲು ಜನರು ಅಚ್ಚರಿಯಿಂದ ಸೇರಿದ್ದಾರೆ. 

ಸೆಸ್ನಾ ವಿಮಾನವು ಸೇಲಂನ ಎಕ್ವೀರ್ ಫ್ಲೈಯಿಂಗ್ ಕ್ಲಬ್ ಒಡೆತನದಲ್ಲಿದೆ. ಡಿಜಿಸಿಎ ಅಧಿಕಾರಿಗಳ ತನಿಖೆಯ ನಂತರವೇ ಎಂಜಿನ್ ವೈಫಲ್ಯಕ್ಕೆ ನಿಖರವಾದ ಕಾರಣ ತಿಳಿಯಲಿದೆ.

A training aircraft made an emergency landing on the Tiruchi–Pudukottai National Highway near Keeranur in Pudukottai district, surprising motorists and onlookers on Tuesday.