ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸೇರಿದ 25 ಕಡೆಗಳಲ್ಲಿ ಇಡಿ ದಾಳಿ, ಚೇರ್ಮನ್ ಜವಾದ್ ಅಹ್ಮದ್ ಸಿದ್ದಿಕಿ ಅರೆಸ್ಟ್, ವಿದೇಶಿ ದೇಣಿಗೆ- ಕೆಲವೇ ವರ್ಷಗಳಲ್ಲಿ 70 ಎಕರೆಗೆ ವಿಸ್ತರಣೆ ! 

19-11-25 11:10 am       HK News Desk   ದೇಶ - ವಿದೇಶ

ಕೆಂಪುಕೋಟೆ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇಡಿ ಅಧಿಕಾರಿಗಳು ಅಲ್ ಫಲಾಹ್ ಯುನಿವರ್ಸಿಟಿ ಮೇಲೆ ದಾಳಿ ನಡೆಸಿದ್ದು, ವಿವಿಯ ಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿ ಅವರನ್ನು ಬಂಧಿಸಿದ್ದಾರೆ. ಕಾರು ಸ್ಫೋಟ ಪ್ರಕರಣದಲ್ಲಿ ಅಲ್ ಫಲಾಹ್ ವಿವಿಯ ಮೂವರು ಪ್ರಾಧ್ಯಾಪಕರು ನಂಟು ಹೊಂದಿದ್ದ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆಸಿತ್ತು.

ನವದೆಹಲಿ, ನ.19 : ಕೆಂಪುಕೋಟೆ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇಡಿ ಅಧಿಕಾರಿಗಳು ಅಲ್ ಫಲಾಹ್ ಯುನಿವರ್ಸಿಟಿ ಮೇಲೆ ದಾಳಿ ನಡೆಸಿದ್ದು, ವಿವಿಯ ಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿ ಅವರನ್ನು ಬಂಧಿಸಿದ್ದಾರೆ. ಕಾರು ಸ್ಫೋಟ ಪ್ರಕರಣದಲ್ಲಿ ಅಲ್ ಫಲಾಹ್ ವಿವಿಯ ಮೂವರು ಪ್ರಾಧ್ಯಾಪಕರು ನಂಟು ಹೊಂದಿದ್ದ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆಸಿತ್ತು.

2002ರ ಮನಿ ಲಾಂಡರಿಂಗ್ ಆಕ್ಟ್ ಸೆಕ್ಟನ್ 19ರಡಿ ವಿವಿಯ ಚೇರ್ಮನ್ ಜವಾದ್ ಅಹ್ಮದ್ ಸಿದ್ದಿಕಿ ಅವರನ್ನು ಬಂಧಿಸಲಾಗಿದೆ. ಅಲ್ ಫಲಾಹ್ ಸಂಸ್ಥೆಯ ಚೇರ್ಮನ್ ಗೆ ಸೇರಿದ ಹಲವು ಕಚೇರಿ, ಸಂಸ್ಥೆಗಳಿಗೆ ಇಡಿ ದಾಳಿ ನಡೆಸಿತ್ತು. ಖಚಿತ ಸಾಕ್ಷ್ಯಗಳೊಂದಿಗೆ ಸುದೀರ್ಘ ವಿಚಾರಣೆ ನಡೆಸಿ ಸಿದ್ದಿಕಿಯನ್ನು ಬಂಧನ ಮಾಡಿದೆ.

ಕಾರು ಸ್ಫೋಟದ ಆತ್ಮಾಹುತಿ ದಾಳಿಕೋರ ಉಮರ್ ನಬಿ ಹರ್ಯಾಣದ ಫರೀದಾಬಾದ್ ನಲ್ಲಿರುವ ಅಲ್ ಫಲಾಹ್ ವಿವಿಯಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ. ಅಲ್ ಫಲಾಹ್ ವಿವಿಯನ್ನು ಯುಜಿಸಿ ಮತ್ತು ನ್ಯಾಕ್ ಮಾನ್ಯತೆಯಿದೆ ಎಂದು ಸುಳ್ಳು ಹೇಳಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದರು. ಅಲ್ ಫಲಾಹ್ ಸೇರಿದಂತೆ ದೆಹಲಿ, ಹರ್ಯಾಣದ 25 ಕಡೆ ಏಕಕಾಲದಲ್ಲಿ ಇಡಿ ದಾಳಿ ನಡೆಸಿದ್ದು ಜವಾದ್ ಸಿದ್ದಿಕಿ 9 ನಕಲಿ ಕಂಪನಿ ನಡೆಸುತ್ತಿರುವುದನ್ನು ಪತ್ತೆಮಾಡಿದೆ.

ಪೊಲೀಸರ ತನಿಖೆಯ ಸಂದರ್ಭದಲ್ಲಿ ಅಲ್ ಫಲಾಹ್ ವಿವಿಯಲ್ಲಿ ಸಿಬಂದಿಗೆ ಇಪಿಎಫ್ ಇಲ್ಲದಿರುವುದು, ಕೆವೈಸಿ ಹೊಂದಿಲ್ಲದೆ ಅಕೌಂಟ್ ನಡೆಸುತ್ತಿರುವುದು, ಅತಿ ಕಡಿಮೆ ಸಂಬಳ ಪಾವತಿ ಮಾಡುತ್ತಿರುವುದು, ಎಚ್ ಆರ್ ರೆಕಾರ್ಡ್ ಇಟ್ಟುಕೊಳ್ಳದಿರುವುದು, ನಿರ್ದೇಶಕರ ಹೆಸರಲ್ಲಿ ನಕಲಿ ಮಾಡಿರುವುದು ಪತ್ತೆಯಾಗಿದೆ.

1997ರಲ್ಲಿ ಇಂಜಿನಿಯರಿಂಗ್ ಕಾಲೇಜು ಆಗಿ ಆರಂಭಗೊಂಡಿದ್ದ ಅಲ್ ಫಲಾಹ್, 2014ರಲ್ಲಿ ಯುಜಿಸಿ ಮಾನ್ಯತೆ ಪಡೆದ ಯುನಿವರ್ಸಿಟಿ ಎಂದು ಘೋಷಣೆಯಾಗಿತ್ತು. ದೆಹಲಿಯ ಓಕ್ಲಾದ ಅಲ್ ಫಲಾಹ್ ಚಾರಿಟೇಬಲ್ ಟ್ರಸ್ಟ್ ಮೂಲಕ ಇದನ್ನು ನಿರ್ವಹಣೆ ಮಾಡಲಾಗುತ್ತಿತ್ತು. 2019ರಲ್ಲಿ ಮೆಡಿಕಲ್ ಕಾಲೇಜು ಆರಂಭಿಸಿದ್ದು ಈಗ 200 ಎಂಬಿಬಿಎಸ್ ಮತ್ತು 50 ಎಂಡಿ ಸೀಟುಗಳನ್ನು ನಡೆಸುತ್ತಿದ್ದರು. 30 ಎಕ್ರೆಯಲ್ಲಿದ್ದ ಕ್ಯಾಂಪಸನ್ನು ಕೆಲವೇ ವರ್ಷಗಳಲ್ಲಿ 70 ಎಕರೆ ವ್ಯಾಪ್ತಿಗೆ ವಿಸ್ತರಣೆ ಮಾಡಲಾಗಿತ್ತು. ಅಲ್ಲಿನ ಸಿಬಂದಿ ಹೇಳುವ ಪ್ರಕಾರ, ಗಲ್ಫ್ ರಾಷ್ಟ್ರಗಳಿಂದ ವಿವಿಗೆ ಭಾರೀ ದೇಣಿಗೆ ಬರುತ್ತಿತ್ತು. ವರ್ಷದಲ್ಲಿ ಒಮ್ಮೆ ಅರಬ್ ದೇಶಗಳಿಂದ ಪ್ರತಿನಿಧಿಗಳು ಬರುತ್ತಿದ್ದರಂತೆ. ಟ್ರಸ್ಟ್ ಇದ್ದರೂ ವಿದೇಶಿ ದೇಣಿಗೆಯಿಂದಲೇ ಕಾಲೇಜು ನಡೆಯುತ್ತಿತ್ತು. ಎಂಬಿಬಿಎಸ್ ಕೋರ್ಸಿಗೆ ವಾರ್ಷಿಕ 16 ಲಕ್ಷ ಶುಲ್ಕ ಪಡೆಯುತ್ತಿದ್ದರು. ಇದೆಲ್ಲವನ್ನೂ ಜವಾದ್ ಸಿದ್ದಿಕ್ ಅವರೇ ನಡೆಸುತ್ತಿದ್ದರಂತೆ.

The Enforcement Directorate (ED) has conducted raids at 25 locations connected to Al-Falah University in Delhi and Haryana in connection with the Red Fort car blast case. University Chairman Jawad Ahmed Siddiqui has been arrested under Section 19 of the Prevention of Money Laundering Act (2002). The suicide bomber involved in the explosion, Umar Nabi, was identified as an MBBS student at Al-Falah University, prompting deeper investigation.