ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅಸಭ್ಯ ವರ್ತನೆ ; ಸೆಕ್ಸ್ ಮಾಡುವ ಬರ್ತೀಯಾ? ಚಡ್ಡಿ ಬಿಚ್ಚಿ ಗುಪ್ತಾಂಗ ತೋರಿಸಿ ವಿಕೃತಿ, ಬೆಚ್ಚಿಬಿದ್ದ ಫಾರಿನ್ ಲೇಡಿ, ಸೋಶಿಯಲ್ ಮೀಡಿಯಾದಲ್ಲಿ ನೀಚನ ವಿರುದ್ದ ಬಿರುಗಾಳಿ ! 

19-11-25 06:47 pm       HK News Desk   ದೇಶ - ವಿದೇಶ

ನ್ಯೂಜಿಲೆಂಡ್ ಮಹಿಳೆಯ ಮುಂದೆ ವ್ಯಕ್ತಿಯೊಬ್ಬ ವಿಕೃತ ವರ್ತನೆ ತೋರಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ  ವೈರಲ್​​ ಆಗಿದೆ. ಇದೀಗ ವಿಡಿಯೋ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಲಂಬೊ, ನ 19 : ನ್ಯೂಜಿಲೆಂಡ್ ಮಹಿಳೆಯ ಮುಂದೆ ವ್ಯಕ್ತಿಯೊಬ್ಬ ವಿಕೃತ ವರ್ತನೆ ತೋರಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ  ವೈರಲ್​​ ಆಗಿದೆ. ಇದೀಗ ವಿಡಿಯೋ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದೇಶದಿಂದ ಬರುವ ಮಹಿಳೆಯರು ಒಂದು ದೇಶದ ಆಚರಣೆ, ಸಂಸ್ಕೃತಿ, ಇದರ ಜತೆಗೆ ಅಲ್ಲಿನ ಜನರ ನಡವಳಿಕೆಗಳನ್ನು ನೋಡಿ ಬಂದಿರುತ್ತಾರೆ. ಆದರೆ ಇಂಥಹ ವ್ಯಕ್ತಿಗಳಿಂದ ದೇಶದ ಸಂಸ್ಕೃತಿಗೆ ಅವಮಾನ ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಆಟೋದಲ್ಲಿದ್ದ ಒಂಟಿ ವಿದೇಶಿ ಮಹಿಳೆಯ ಮುಂದೆ ಪ್ಯಾಂಟ್​​​ ಜಾರಿಸಿ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ವಿಡಿಯೋವನ್ನು ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಳ್ಳಲಾಗಿದೆ. ಈ ಘಟನೆ ನಡೆದಿರುವುದು ಶ್ರೀಲಂಕಾದಲ್ಲಿ. ಇದೀಗ ಆತನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ನೆಟ್ಟಿಗರು ತಿರುಗಿ ಬಿದ್ದಿದ್ದಾರೆ. 

ಶ್ರೀಲಂಕಾಕ್ಕೆ ಏಕಾಂಗಿಯಾಗಿ ಪ್ರವಾಸಕ್ಕೆ ಬಂದಿದ್ದ ಮೋಲ್ಸ್ ಎಂಬ ನ್ಯೂಜಿಲೆಂಡ್ ಮಹಿಳೆ, ತಾನೇ ಸ್ವತ  ಆಟೋ ಓಡಿಸಿಕೊಂಡು ಶ್ರೀಲಂಕಾದ ಸ್ಥಳೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅರುಗಮ್ ಕೊಲ್ಲಿ ಮತ್ತು ಪಾಸಿಕುಡ ಕರಾವಳಿ ರಸ್ತೆಯಲ್ಲಿ ಸ್ವಲ್ಪ ಹೊತ್ತು ನಿಂತಿದ್ದರು. ಇದನ್ನು ನೋಡಿ ವ್ಯಕ್ತಿಯೊಬ್ಬ ಸೂಟ್ಕರ್​​ನಲ್ಲಿ ಬಂದು, ಮಹಿಳೆಯ ಬಳಿ ಮಾತನಾಡಿದ್ದಾನೆ. ಮೋಲ್ಸ್ ಕೂಡ ಆ ವ್ಯಕ್ತಿಯ ಜತೆಗೆ ಮಾತನಾಡಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಆ ವ್ಯಕ್ತಿ ಕೆಟ್ಟದಾಗಿ ಮಾತನಾಡಲು ಶುರು ಮಾಡಿದ್ದಾನೆ. “ನೀನು ಎಲ್ಲಿಗೆ ಹೋಗುತ್ತೀಯಾ, ಸೆಕ್ಸ್ ಮಾಡುವ ಬರ್ತೀಯಾ” ಎಂದೆಲ್ಲ ಕೇಳಿದ್ದಾನೆ. ನಂತರ ಪ್ಯಾಂಟ್​​​ ಜಾರಿಸಿ, ತನ್ನ ಗುಪ್ತಾಂಗವನ್ನು ಮೋಲ್ಸ್​​​ಗೆ ತೋರಿಸಿದ್ದಾನೆ. ಇದರಿಂದ ಗಾಬರಿ ಬಿದ್ದ ಮೋಲ್ಸ್, ತಕ್ಷಣ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ಇಡೀ ಘಟನೆ ಆಟೋದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. 

ಮೋಲ್ಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದು, ” ಇಂಥಹ ಕೆಟ್ಟ ಅನುಭವ ಎಂದಿಗೂ ನನಗೆ ಆಗಿಲ್ಲ. ಈ ದೃಶ್ಯವನ್ನು ನೋಡಿದ್ರೆ ನಿಮಗೂ ಭಯ ಆಗುತ್ತದೆ. ಒಂಟಿಯಾಗಿ ಪ್ರಯಾಣಿಸುವುದು ರೋಮಾಂಚನಕಾರಿ ವಿಚಾರ, ಆದರೆ ಅದು ಎಲ್ಲ ಸಮಯದಲ್ಲೂ ಒಳ್ಳೆಯದ್ದಲ್ಲ ಎಂಬುದು ನನಗೆ ಅರ್ಥವಾಗಿದೆ. ಕೆಲವೊಂದು ಬಾರಿ ಇಂತಹ ಅನುಭವಗಳು ಕೂಡ ಆಗಬಹುದು. ಆದರೆ ಇಡೀ ಶ್ರೀಲಂಕಾದ ಜನ ಹೀಗೆ ಎಂದು ಹೇಳುವುದಿಲ್ಲ. ಇಲ್ಲಿನ ಸ್ಥಳೀಯ ಜನರು ಒಳ್ಳೆಯವರು” ಎಂದು ಪೋಸ್ಟ್ ಮಾಡಿದ್ದಾರೆ.

A disturbing video from Sri Lanka has gone viral on social media, showing a man behaving indecently with a solo-travelling New Zealand woman. The incident, recorded on the camera attached to her auto-rickshaw, has triggered massive outrage online.