ದುಬೈ ಏರ್ ಶೋನಲ್ಲಿ ಭಾರತೀಯ ತೇಜಸ್ ಯುದ್ಧ ವಿಮಾನ ಪತನ ; ಪೈಲಟ್ ಸಾವು, ಒಂದು ವರ್ಷದಲ್ಲಿ ಎರಡನೇ ಅಪಘಾತ 

21-11-25 06:10 pm       HK News Desk   ದೇಶ - ವಿದೇಶ

ದುಬೈನಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದಲ್ಲಿ ಭಾರತೀಯ ತೇಜಸ್ ಯುದ್ಧ ವಿಮಾನ ನೋಡ ನೋಡುತ್ತಲೇ ಪತನಗೊಂಡಿದೆ. ಆಕಾಶದಲ್ಲೇ ಪಲ್ಟಿ ಹೊಡೆಯುತ್ತಲೇ ಅದ್ಭುತ ಪ್ರದರ್ಶನ ನೀಡಿದ್ದು ನಂತರ ನಿಯಂತ್ರಣ ಕಳೆದುಕೊಂಡು ನೆಲಕ್ಕುರುಳಿ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಪೈಲಟ್ ದುರಂತ ಸಾವಿಗೀಡಾಗಿದ್ದಾರೆಂದು ಭಾರತದ ವಾಯುಪಡೆ ದೃಢಪಡಿಸಿದೆ. 

ದುಬೈ, ನ.21 : ದುಬೈನಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದಲ್ಲಿ ಭಾರತೀಯ ತೇಜಸ್ ಯುದ್ಧ ವಿಮಾನ ನೋಡ ನೋಡುತ್ತಲೇ ಪತನಗೊಂಡಿದೆ. ಆಕಾಶದಲ್ಲೇ ಪಲ್ಟಿ ಹೊಡೆಯುತ್ತಲೇ ಅದ್ಭುತ ಪ್ರದರ್ಶನ ನೀಡಿದ್ದು ನಂತರ ನಿಯಂತ್ರಣ ಕಳೆದುಕೊಂಡು ನೆಲಕ್ಕುರುಳಿ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಪೈಲಟ್ ದುರಂತ ಸಾವಿಗೀಡಾಗಿದ್ದಾರೆಂದು ಭಾರತದ ವಾಯುಪಡೆ ದೃಢಪಡಿಸಿದೆ. 

ವಾಯುನೆಲೆಯ ಪರಿಧಿಯ ಹೊರಗಡೆ ಖಾಲಿ ಜಾಗದಲ್ಲಿ ಪತನವಾಗಿದ್ದು ಭಾರೀ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ. ಪೈಲಟ್ ಬಗ್ಗೆ ಹೆಚ್ಚಿನ ಮಾಹಿತಿಗಳು ತಿಳಿದುಬಂದಿಲ್ಲ. ಘಟನೆ ಬಗ್ಗೆ ಭಾರತೀಯ ವಾಯುಪಡೆ ಅಧಿಕೃತ ಹೇಳಿಕೆ ನೀಡಿದೆ. ದುಬೈನ ಅಲ್ ಮಕ್ತೌಮ್ ಏರ್ಪೋರ್ಟ್ ಆವರಣದಲ್ಲಿ ನಡೆಯುವ ಏರ್ ಶೋ ಜಗತ್ತಿನ ಅತಿ ದೊಡ್ಡ ಏರ್ ಶೋಗಳಲ್ಲಿ ಒಂದಾಗಿದೆ.‌ ಹಲವಾರು ರಾಷ್ಟ್ರದ ಯುದ್ಧ ವಿಮಾನಗಳು ಪಾಲ್ಗೊಂಡು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡುತ್ಯವೆ. ಸ್ಥಳೀಯ ಕಾಲಮಾನ ಶುಕ್ರವಾರ ಮಧ್ಯಾಹ್ನ 2:10ಕ್ಕೆ ತೇಜಸ್ ಯುದ್ಧವಿಮಾನ ಅಪಘಾತಕ್ಕೀಡಾಗಿದೆ. 

ಬೆಂಗಳೂರಿನ ಎಚ್ಎಎಲ್ ನಲ್ಲಿ ನಿರ್ಮಿಸಲಾಗಿರುವ ಲಘು ಯುದ್ದ ವಿಮಾನ ಇದಾಗಿದೆ. ಭೂಮಿಯ ಗುರುತ್ವ ಬಲಕ್ಕೆ ವಿರುದ್ಧವಾಗಿ ವಿಮಾನವನ್ನು ಮೇಲೆ ಕೆಳಗೆ ತಿರುಗಿಸುತ್ತಾ ಪಲ್ಟಿ ಹೊಡೆಸುವ ಸಾಮರ್ಥ್ಯ ಹೊಂದಿದ್ದು ಇಂತಹದೇ ಪ್ರಯತ್ನದಲ್ಲಿ ಪೈಲಟ್ ನಿಯಂತ್ರಣ ತಪ್ಪಿ ವಿಮಾನ ಅಪಘಾತಕ್ಕೀಡಾಗಿದೆ. 2024ರಲ್ಲಿ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಗಿತ್ತು. ಅದರಲ್ಲಿ ಪೈಲಟ್ ದುರಂತಕ್ಕು ಮುನ್ನ ಹೊರಕ್ಕೆ ಹಾರಿ ಬದುಕುಳಿದಿದ್ದರು. 2001ರಲ್ಲಿ ಭಾರತದ ವಾಯುಪಡೆ ಸೇರಿದ ಬಳಿಕ ತೇಜಸ್ ಫೈಟರ್ ಜೆಟ್ ಮೊದಲ ಬಾರಿಗೆ ದುರಂತಕ್ಕೀಡಾಗಿತ್ತು. ಭಾರತೀಯ ವಾಯುಪಡೆ ಎಚ್ಎಎಲ್ ಗೆ 2027ರ ಒಳಗಡೆ ಮತ್ತೆ 97 ತೇಜಸ್ ಲಘು ಯುದ್ಧ ವಿಮಾನಗಳನ್ನು ಮಾಡಿಕೊಡುವಂತೆ ಗುತ್ತಿಗೆ ವಹಿಸಿದೆ.

At the Dubai Air Show, an Indian-made Tejas fighter jet crashed during an aerial display, resulting in the tragic death of the pilot. The aircraft, built by HAL Bengaluru, was performing advanced aerobatic maneuvers when it suddenly lost control, flipped mid-air, and crashed onto an open ground outside the airbase perimeter, bursting into flames.