ಬ್ರೇಕಿಂಗ್ ನ್ಯೂಸ್
23-12-25 03:28 pm HK News Desk ದೇಶ - ವಿದೇಶ
ಢಾಕಾ, ಡಿ.23 : ಬಾಂಗ್ಲಾದೇಶದಲ್ಲಿ ಯುವ ನಾಯಕ ಶರೀಫ್ ಒಸ್ಮಾನ್ ಹಾದಿಯನ್ನು ಮುಸುಕುಧಾರಿಗಳು ಗುಂಡಿಕ್ಕಿ ಹತ್ಯೆಗೈದ ಬಳಿಕ ಆತನ ಅನುಯಾಯಿಗಳು ಇಡೀ ದೇಶದಲ್ಲಿ ಹಿಂಸಾಚಾರಕ್ಕಿಳಿದಿದ್ದಾರೆ. ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಅಲ್ಪಸಂಖ್ಯಾತ ಹಿಂದುಗಳನ್ನು ಗುರಿಯಾಗಿಸಿ ನಿರಂತರ ದಾಳಿ ನಡೆಸಿದ್ದು, ಮೊನ್ನೆ ಹಾಡಹಗಲೇ ಹಿಂದು ಯುವಕನೊಬ್ಬನನ್ನು ಬೀದಿಯಲ್ಲೇ ಹೊಡೆದು ಮರಕ್ಕೆ ನೇಣು ಹಾಕಿ, ಆಬಳಿಕ ನಡುರಸ್ತೆಯಲ್ಲಿ ಬೆಂಕಿ ಹಚ್ಚಿ ಕ್ರೂರವಾಗಿ ವರ್ತಿಸಿದ್ದಾರೆ. ಘಟನೆಯನ್ನು ವಿಶ್ವ ಸಮುದಾಯ ತೀವ್ರ ಖಂಡಿಸಿದ್ದರೂ, ಬಾಂಗ್ಲಾದಲ್ಲಿ ಹಿಂಸೆ ನಿಂತಿಲ್ಲ. ಭಾರತೀಯ ರಾಯಭಾರ ಕಚೇರಿಗೂ ಕಲ್ಲು ಎಸೆದು ಹಾನಿ ಮಾಡಲಾಗಿದ್ದು, ಇಡೀ ಬಾಂಗ್ಲಾ ಹಿಂಸೆ, ದಂಗೆಯಲ್ಲಿ ನಲುಗಿ ಹೋಗಿದೆ.
ಡಿ.12ರಂದು ಷರೀಫ್ ಒಸ್ಮಾನ್ ಹಾದಿ ಸೆಂಟ್ರಲ್ ಢಾಕಾದ ಬಿಜಯ್ ನಗರ್ ಎಂಬಲ್ಲಿ ಚುನಾವಣಾ ಪ್ರಚಾರದಲ್ಲಿದ್ದಾಗ ಮುಸುಕುಧಾರಿಗಳು ಹಣೆಗೆ ಗುಂಡಿಟ್ಟಿದ್ದರು. ಆಬಳಿಕ ಸಿಂಗಾಪುರದಲ್ಲಿ ಚಿಕಿತ್ಸೆಯಲ್ಲಿದ್ದ ಒಸ್ಮಾನ್ ಹಾದಿ ವಾರದ ಬಳಿಕ ಮೃತಪಟ್ಟಿದ್ದರು. ಬಳಿಕ ಒಸ್ಮಾನ್ ಹಾದಿಯ ಶವವನ್ನು ಬಾಂಗ್ಲಾಕ್ಕೆ ತರುತ್ತಲೇ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರಿದ್ದು, ಅಗಲಿದ ನಾಯಕನಿಗೆ ಅಶ್ರುತರ್ಪಣ ನೀಡಿದ್ದಾರೆ. ಇದರ ಬೆನ್ನಲೇ ಹಾದಿ ಬೆಂಬಲಿಗರು ರಾಜಧಾನಿ ಢಾಕಾ ಸೇರಿದಂತೆ ಎಲ್ಲ ಕಡೆಯೂ ಹಿಂಸಾಚಾರ ನಡೆಸಿದ್ದಾರೆ. ಹಿಂದಿನ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ನಾಯಕರ ಮನೆಗಳಿಗೆ ಮತ್ತು ಹಿಂದುಗಳ ಮನೆಗಳನ್ನು ಗುರಿಯಾಗಿಸಿ ಕಲ್ಲು ತೂರಿ ಬೆಂಕಿ ಹಚ್ಚಿದ್ದಾರೆ.





ಕಳೆದ ವರ್ಷ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸೆಗೆ ತಿರುಗಿ ಪ್ರಧಾನಿ ಶೇಖ್ ಹಸೀನಾ ಅವರನ್ನು ದೇಶದಿಂದಲೇ ಓಡುವಂತೆ ಮಾಡಲಾಗಿತ್ತು. ಆಬಳಿಕ ಮಹಮ್ಮದ್ ಯೂನುಸ್ ಅವರನ್ನು ಹಂಗಾಮಿ ನಾಯಕರಾಗಿ ನೇಮಿಸಲಾಗಿತ್ತು. ಅಂದು ದೇಶವ್ಯಾಪಿ ಪ್ರತಿಭಟನೆಯಲ್ಲಿ ಯುವಜನರ ಐಕಾನ್ ಆಗಿದ್ದ ಷರೀಫ್ ಒಸ್ಮಾನಿ ಹಾದಿ ಮುಂದಿನ ಫೆಬ್ರವರಿ 12ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಯಾಗಿ ಬಿಂಬಿತವಾಗಿದ್ದ. ಅಧ್ಯಕ್ಷೀಯ ಚುನಾವಣೆಗೆ ಯುವಜನರು ಅತಿ ಹೆಚ್ಚು ಸಂಖ್ಯೆಯಲ್ಲಿ ಹಾದಿಯನ್ನು ಬೆಂಬಲಿಸುತ್ತಿದ್ದರು. ಹೀಗಿರುವಾಗಲೇ ಹಾದಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಢಾಕಾದ ಚತ್ತೋಗ್ರಾಮ್ ನಲ್ಲಿರುವ ಭಾರತೀಯ ಹೈಕಮಿಶನ್, ಡೈಲಿ ಸ್ಟಾರ್, ಪ್ರೋಥಮ್ ಆಲೋ ಸೇರಿದಂತೆ ಹಲವಾರು ಪತ್ರಿಕೆಗಳ ಕಚೇರಿಯನ್ನು ಕಲ್ಲೆಸೆದು ಹಾನಿ ಮಾಡಲಾಗಿದೆ. ಅಲ್ಲದೆ, ಢಾಕಾದಲ್ಲಿರುವ ಬಂಗಬಂಧು ಸ್ಮಾರಕ ಮ್ಯೂಸಿಯಂ ಕಚೇರಿಯನ್ನು ಕಲ್ಲೆಸೆದು ಬೆಂಕಿ ಹಚ್ಚಿ ಪುಡಿ ಮಾಡಲಾಗಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಅವಾಮಿ ಲೀಗ್ ಪಕ್ಷ ಕಚೇರಿಯನ್ನೂ ಧ್ವಂಸ ಮಾಡಿದ್ದಾರೆ.
1961ರಲ್ಲಿ ಧನಮಂಡಿ ಪ್ರದೇಶದಲ್ಲಿ ಸ್ಥಾಪನೆಯಾಗಿದ್ದ ಮುಂಚೂಣಿ ಸಾಂಸ್ಕೃತಿಕ ಸಂಘಟನೆ ಛಾಯಾನಾಥ್ ಇದರ ಏಳು ಅಂತಸ್ತಿನ ಕಚೇರಿ ಕಟ್ಟಡವನ್ನು ಪ್ರತಿ ಕೊಠಡಿಯನ್ನೂ ಬಿಡದೆ ಸುಟ್ಟು ಹಾಕಲಾಗಿದೆ. ಅಲ್ಲಿನ ಪ್ರತಿ ಮಹಡಿಯಲ್ಲೂ ನೂರಾರು ಸಂಗೀತ ಪರಿಕರಗಳು, ಬಾಂಗ್ಲಾದ ಶ್ರೀಮಂತ ಸಂಸ್ಕೃತಿ, ಕಲೆ, ಸಾಹಿತ್ಯಯನ್ನು ಬಿಂಬಿಸುವ ಪುಸ್ತಕಗಳನ್ನೂ ಸುಟ್ಟು ಹಾಕಲಾಗಿದೆ. ಮೈಮನ್ ಸಿಂಗ್ ಎಂಬಲ್ಲಿ ಗಾರ್ಮೆಂಟ್ ಕೆಲಸ ಮಾಡುತ್ತಿದ್ದ 25 ವರ್ಷದ ದೀಪುಚಂದ್ರ ದಾಸ್ ಎಂಬ ಯುವಕನನ್ನು ಮರಕ್ಕೆ ನೇಣು ಹಾಕಿಸಿ ಕೊಲೆಗೈದು ಉದ್ರಿಕ್ತರು ಬಳಿಕ ಶವವನ್ನು ನಡುರಸ್ತೆಯಲ್ಲಿ ಎಳೆದೊಯ್ದು ಬೆಂಕಿ ಹಚ್ಚಿ ಕ್ರೌರ್ಯ ಮೆರೆದಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ವಿಶ್ವಾದ್ಯಂತ ಖಂಡನೆ ವ್ಯಕ್ತವಾಗಿದೆ.
ಅಮೆರಿಕ, ಯುಕೆಗಳು ತಮ್ಮ ಪ್ರಜೆಗಳನ್ನು ಬಾಂಗ್ಲಾಕ್ಕೆ ತೆರಳದಂತೆ ಸೂಚನೆ ನೀಡಿದೆ. ಭಾರತದಲ್ಲಿಯೂ ಬಾಂಗ್ಲಾ ವಿರುದ್ಧ ಕ್ರಮ ಜರುಗಿಸಲು ಒತ್ತಾಯ ಕೇಳಿಬಂದಿದೆ. ನವದೆಹಲಿ ಸೇರಿದಂತೆ ಚಿತ್ತಗಾಂಗ್, ಸಿಲಿಗುರಿಗಳಲ್ಲಿ ಬಾಂಗ್ಲಾಕ್ಕೆ ಜನ ತೆರಳದಂತೆ ವೀಸಾ ಸೇವೆಗಳನ್ನು ರದ್ದುಪಡಿಸಲಾಗಿದೆ.
Bangladesh has been engulfed in widespread violence after masked assailants shot and killed youth leader Sharif Osman Hadi during an election campaign. Following his death, his supporters launched large-scale violent attacks across the country, targeting minority Hindus, Awami League leaders, media offices, and even the Indian High Commission.
22-12-25 11:09 pm
HK News Desk
ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯ ಹುಟ್ಟುಹಬ್ಬದಲ್ಲಿ...
22-12-25 10:30 pm
ಅಧಿಕಾರ ಹಂಚಿಕೆ ಹೈಕಮಾಂಡ್ ತೀರ್ಮಾನವೇ ಅಂತಿಮ, ನಮ್ಮದ...
22-12-25 06:29 pm
ಸ್ಥಳೀಯ ಮಟ್ಟದಲ್ಲೇ ಗೊಂದಲ ಬಗೆಹರಿಸಿಕೊಳ್ಳಿ, ಎಲ್ಲದಕ...
21-12-25 05:33 pm
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
23-12-25 03:28 pm
HK News Desk
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
23-12-25 04:54 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕಕ್ಕೆ ಪೊಲೀಸರ ಅಡ್ಡಿ ; ಕಾಂಗ್...
22-12-25 06:36 pm
ಕೋಳಿ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ?...
22-12-25 12:26 pm
ಕೇಪು ಜಾತ್ರೆ ಕೋಳಿ ಅಂಕಕ್ಕೆ ಎರಡನೇ ದಿನವೂ ಪೊಲೀಸ್ ದ...
21-12-25 11:04 pm
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm