ಬ್ರೇಕಿಂಗ್ ನ್ಯೂಸ್
02-01-26 06:43 pm HK News Desk ದೇಶ - ವಿದೇಶ
ಮುಂಬೈ, ಜ 02 : ಬಾಂಗ್ಲಾದೇಶ ದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಭಾರತ ದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ. ಬಾಂಗ್ಲಾದೇಶದ ವಿರುದ್ಧ ಭಾರತದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಬಾಂಗ್ಲಾದೇಶಿ ಆಟಗಾರರನ್ನು ಐಪಿಎಲ್ ನಲ್ಲಿ ಆಡಲು ಬಿಡಬಾರದು ಎಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ. ಬಾಲಿವುಡ್ ನಟ ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಈ ವರ್ಷ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು 9.20 ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದೆ. ಮುಸ್ತಾಫಿಜುರ್ ಅವರನ್ನು ತಂಡದಿಂದ ತೆಗೆದುಹಾಕಬೇಕೆಂದು ಠಾಕ್ರೆ ಬಣದ ಶಿವಸೇನೆ ಖಡಕ್ ಎಚ್ಚರಿಕೆ ಕೊಟ್ಟಿದೆ.
ಶಿವಸೇನಾ (ಠಾಕ್ರೆ) ಪಕ್ಷದ ವಕ್ತಾರ ಆನಂದ್ ದುಬೆ ಅವರು ಮುಸ್ತಾಫಿಜುರ್ ರೆಹಮಾನ್ ಐಪಿಎಲ್ನಲ್ಲಿ ಆಡುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂ ಸಹೋದರರ ಮೇಲೆ ಕಿರುಕುಳ ನೀಡಲಾಗುತ್ತಿದ್ದು, ಈ ವಿಷಯವು ಈಗ ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಒಂದೇ ರೀತಿಯ ಡಿಎನ್ಎ ಹೊಂದಿವೆ. ಆದ್ದರಿಂದ, ಅವರು ತಮ್ಮ ಆಟಗಾರರನ್ನು ಭಾರತೀಯ ನೆಲದಲ್ಲಿ ಮತ್ತು ಐಪಿಎಲ್ನಲ್ಲಿ ಆಡುವುದನ್ನು ಬಹಿಷ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿದೇಶಿ ಆಟಗಾರರು ಐಪಿಎಲ್ನಲ್ಲಿ ಆಡುತ್ತಾರೆ. ಆದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಆಟಗಾರರಿಗೆ ಸ್ಥಾನ ನೀಡಬೇಡಿ. ಏಕೆಂದರೆ ಅವರು ನಮ್ಮನ್ನು ದ್ವೇಷಿಸುತ್ತಾರೆ. ನಮ್ಮ ಹಿಂದೂ ಸಹೋದರರನ್ನು ಅಲ್ಲಿ ಕೊಲ್ಲಲಾಗುತ್ತಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಂದೇ ಡಿಎನ್ಎ ಹೊಂದಿವೆ. ಎರಡೂ ದೇಶಗಳು ಮಂಡಿಯೂರಿ ಭಾರತಕ್ಕೆ ಕ್ಷಮೆಯಾಚಿಸುವವರೆಗೆ, ನಾವು ಅವರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರಬಾರದು. ಅದು ಕ್ರೀಡೆ, ಸಂಸ್ಕೃತಿ, ರಾಜಕೀಯ ಅಥವಾ ವ್ಯಾಪಾರ ಕ್ಷೇತ್ರದಲ್ಲಿರಲಿ. ನಾವು ಅವರಿಂದ ದೂರವಿರಬೇಕು ಎಂದು ಆನಂದ್ ದುಬೆ ಹೇಳಿದ್ದಾರೆ.
ಶಾರುಖ್ ಖಾನ್ ಬಾಂಗ್ಲಾದೇಶಿ ಆಟಗಾರನನ್ನು ತಕ್ಷಣ ತಮ್ಮ ತಂಡದಿಂದ ತೆಗೆದುಹಾಕಬೇಕು. ಹಾಗೆ ಮಾಡಿದರೆ ಅದು ದೇಶಭಕ್ತಿಯ ಸಂಕೇತವಾಗುತ್ತದೆ. ಆದರೆ ಇಷ್ಟೆಲ್ಲಾ ಗದ್ದಲದ ಹೊರತಾಗಿಯೂ, ಶಾರುಖ್ ಖಾನ್ ಬಗ್ಗೆ ಅನುಮಾನಗಳು ವ್ಯಕ್ತವಾಗಬಹುದು. ಅವರು ಈ ದೇಶದಲ್ಲಿ ವಾಸಿಸುವ ಮೂಲಕ ಹಣ ಸಂಪಾದಿಸುತ್ತಾರೆ. ಆದರೆ ಈ ದೇಶದ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ, ಎಂಬುದು ಕಂಡುಬರುತ್ತದೆ. ಅನೇಕರು ಈ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಈ ದಿನವನ್ನು ನೋಡಲು ಅವರು ಖಂಡಿತವಾಗಿಯೂ ತ್ಯಾಗ ಮಾಡಲಿಲ್ಲ ಎಂದು ಆನಂದ್ ದುಬೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾರುಖ್ ಖಾನ್ ಒಬ್ಬ ಮಹಾನ್ ನಟ. ಅವರನ್ನು ನಾವೆಲ್ಲರೂ ಪ್ರೀತಿಸುತ್ತೇವೆ. ಆದರೆ ಈಗ ಅದು ಹಣ, ವ್ಯವಹಾರ ಮತ್ತು ಮನರಂಜನೆಯ ವಿಷಯವಲ್ಲ, ಬದಲಾಗಿ ದೇಶದ ವಿಷಯ. ದೇಶಕ್ಕಿಂತ ದೊಡ್ಡ ಧರ್ಮವಿಲ್ಲ. ಶಿವಸೇನೆ ಅಥವಾ ಬಿಜೆಪಿ ನಾಯಕರು ಹಾಗೆ ಹೇಳುವ ಮೊದಲು, ಶಾರುಖ್ ಖಾನ್ ಆ ಬಾಂಗ್ಲಾದೇಶಿ ಆಟಗಾರನನ್ನು ಹೊರಹಾಕಬೇಕು. ಇದರಿಂದ ಅವರು ದೇಶದ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದಾರೆ ಎಂಬ ಸಂದೇಶ ಜನರಿಗೆ ತಲುಪುತ್ತದೆ" ಎಂದು ಶಾರುಖ್ ಖಾನ್ಗೆ ಆನಂದ್ ದುಬೆ ಎಚ್ಚರಿಸಿದ್ದಾರೆ.
ಇನ್ನು ಕೇಸರಿ ನಾಯಕಿ ಶಾರುಖ್ ನಾಲಿಗೆ ಕತ್ತರಿಸಿದವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ. ಅಖಿಲ ಭಾರತ ಹಿಂದೂ ಮಹಾಸಭಾದ ಆಗ್ರಾ ಜಿಲ್ಲಾ ಘಟಕದ ಅಧ್ಯಕ್ಷೆ ಮೀರಾ ಠಾಕೂರ್ ಮಥುರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಘೋಷಣೆ ಮಾಡಿದ್ದಾರೆ. ಬಾಂಗ್ಲಾದೇಶ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ನನ್ನ ಐಪಿಎಲ್ ಫ್ರಾಂಚೈಸಿಗೆ ಸೇರಿಸಿಕೊಂಡಿರುವುದನ್ನು ವಿರೋಧಿಸಿ ರಾಥೋಡ್, ಶಾರುಖ್ ಖಾನ್ ಅವರ ಪೋಸ್ಟರ್ಗಳಿಗೆ ಕಪ್ಪು ಬಣ್ಣ ಬಳಿದು, ಚಪ್ಪಲಿಯಿಂದ ಹೊಡೆದರು. ನಮ್ಮ ಹಿಂದೂ ಸಹೋದರರನ್ನು ಬಾಂಗ್ಲಾದೇಶದಲ್ಲಿ ಜೀವಂತವಾಗಿ ಸುಡಲಾಗುತ್ತಿದೆ. ಆದರೆ ಇಲ್ಲಿ ಇವರು ಅಲ್ಲಿಂದ ಆಟಗಾರರನ್ನು ಖರೀದಿಸುತ್ತಿದ್ದಾರೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ಇನ್ನು ಸಂತ ದಿನೇಶ್ ಫಲಹರಿ ಮಹಾರಾಜ್ ಎಂಬವರು ಪ್ರಧಾನಿ ಮೋದಿಗೆ ಪತ್ರ ಬರೆದು ಖಾನ್ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಮತ್ತು ಅವರನ್ನ ಬಾಂಗ್ಲಾದೇಶಕ್ಕೆ ಕಳುಹಿಸಬೇಕೆಂದು ಒತ್ತಾಯಿಸಿದ್ದಾರೆ. ಶಾರುಖ್ ಖಾನ್ ದೇಶ ಬಿಟ್ಟು ಹೋಗಬೇಕು, ಏಕೆಂದರೆ ಅವರಿಗೆ ಇಲ್ಲಿ ವಾಸಿಸುವ 'ಹಕ್ಕು' ಇಲ್ಲ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ದೇಶದ್ರೋಹಿಗಳ ಕೊರತೆಯಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಅವರು ರಾಷ್ಟ್ರದ ಮಾನಹಾನಿ ಮತ್ತು ಅವಮಾನವನ್ನು ಮುಂದುವರಿಸುತ್ತಾರೆ ಎಂದು ಒತ್ತಾಯಿಸಿದ್ದಾರೆ.
A political storm has erupted after Kolkata Knight Riders signed Bangladesh pacer Mustafizur Rahman for ₹9.20 crore. Amid ongoing outrage in India over attacks on Hindus in Bangladesh, Shiv Sena (Thackeray faction) spokesperson Anand Dubey demanded the player’s removal from the IPL squad, accusing Bangladesh of anti-Hindu violence and calling the issue a matter of national security.
02-01-26 06:09 pm
HK News Desk
Ballari Banner Fight, FIR, Death: ಬ್ಯಾನರ್ ವಿಚ...
02-01-26 04:13 pm
ಕೋಗಿಲು ಬಡಾವಣೆ ನಿರಾಶ್ರಿತರಿಗೆ ಮನೆ ಹಂಚಿಕೆ ; ವ್ಯಾ...
02-01-26 01:58 pm
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ; ಕುರ್ಚಿ ಫೈಟ್ ನಡು...
01-01-26 06:21 pm
ಜನವರಿ 15ರ ನಂತರ ಸಂಪುಟ ವಿಸ್ತರಣೆ ಆಗಲಿದೆ, ನನಗೂ ಮಂ...
01-01-26 05:18 pm
02-01-26 06:43 pm
HK News Desk
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
02-01-26 02:02 pm
Mangalore Correspondent
Dr Vinaya Hegde Death, NItte Mangalore: ನಿಟ್ಟ...
01-01-26 09:43 am
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
ಕೋಟೆಕಾರು ಪ.ಪಂ ಸಭೆ ; ಸರ್ಕಾರಿ ಜಮೀನು ಅತಿಕ್ರಮಣ ಪರ...
31-12-25 03:35 pm
02-01-26 12:58 pm
Mangalore Correspondent
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm
ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿ...
01-01-26 08:25 pm
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm