ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತಿ ಕೇಳಿದ ಮೇಲ್ಜಾತಿ ವ್ಯಕ್ತಿ ; ಸುಪ್ರೀಂ ಕೋರ್ಟ್ ತರಾಟೆ 

28-01-26 11:14 pm       HK News Desk   ದೇಶ - ವಿದೇಶ

ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಬಳಿಕ ಅಲ್ಪಸಂಖ್ಯಾತರ ಕೋಟಾದಡಿ ಮೀಸಲಾತಿ ಕೇಳಿದ್ದ ಮೇಲ್ಜಾತಿ ಹಿಂದೂ ವ್ಯಕ್ತಿಯನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಅಷ್ಟೇ ಅಲ್ಲದೆ, ಇದೊಂದು ಹೊಸ ರೀತಿಯ ವಂಚನೆ ಎಂದು ಆಕ್ಷೇಪಿಸಿದೆ

ನವದೆಹಲಿ, ಜ.28 :  ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಬಳಿಕ ಅಲ್ಪಸಂಖ್ಯಾತರ ಕೋಟಾದಡಿ ಮೀಸಲಾತಿ ಕೇಳಿದ್ದ ಮೇಲ್ಜಾತಿ ಹಿಂದೂ ವ್ಯಕ್ತಿಯನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಅಷ್ಟೇ ಅಲ್ಲದೆ, ಇದೊಂದು ಹೊಸ ರೀತಿಯ ವಂಚನೆ ಎಂದು ಆಕ್ಷೇಪಿಸಿದೆ

ಅಲ್ಪಸಂಖ್ಯಾತ ಅಭ್ಯರ್ಥಿ ಕೋಟಾದಡಿ ಪ್ರವೇಶ ಕೋರಿ ನಿಖಿಲ್ ಕುಮಾರ್ ಪುನಿಯಾ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ ನೀವು ಹೇಗೆ ಅಲ್ಪಸಂಖ್ಯಾತರು? ನೀವು ಯಾವ ಪುನಿಯಾ ಎಂದು ಸಿಜೆಐ ಕಾಂತ್ ಪ್ರಶ್ನಿಸಿದರು. ಇದಕ್ಕೆ ಅರ್ಜಿದಾರರ ಪರ ವಕೀಲ ಜಾಟ್ ಪುನಿಯಾ ಎಂದು ಉತ್ತರಿಸಿದರು. ಈ ಉತ್ತರ ಬಂದ ಬೆನ್ನಲ್ಲೇ, ನೀವು ಹೇಗೆ ಅಲ್ಪಸಂಖ್ಯಾತರು ಎಂದು ಪೀಠ ಮರು ಪ್ರಶ್ನೆ ಹಾಕಿತು. ಈ ಪ್ರಶ್ನೆಗೆ ವಕೀಲರು, ಈಗ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದೇನೆ. ಅದು ನನ್ನ ಹಕ್ಕು ಎಂದು ಉತ್ತರಿಸಿದರು.

ವಕೀಲರ ಉತ್ತರಕ್ಕೆ ಗರಂ ಆದ ಸಿಜೆಐ, ಇದು ಹೊಸ ರೀತಿಯ ವಂಚನೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಹೇಳಿಕೊಳ್ಳುವ ಮೂಲಕ ಅಲ್ಪಸಂಖ್ಯಾತ ಪ್ರಮಾಣಪತ್ರವನ್ನು ಪಡೆಯಬಹುದೇ? ಅಲ್ಪಸಂಖ್ಯಾತ ಪ್ರಮಾಣಪತ್ರ ನೀಡಲು ಏನೇನು ಮಾರ್ಗಸೂಚಿಗಳಿವೆ ಎಂದು ತಿಳಿಸುವಂತೆ ಹರಿಯಾಣದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿತು.

The Supreme Court strongly criticised an upper-caste Hindu man who sought reservation under the minority quota after converting to Buddhism, calling it a “new form of fraud.” The court questioned the basis of granting minority certificates and sought guidelines from the Haryana government.