ಬೆಹ್ರೈನ್ ; ಗಣೇಶನ ಮೂರ್ತಿಗಳನ್ನು ಪುಡಿಗಟ್ಟಿದ ಮಹಿಳೆಯರು - ವಿಡಿಯೋ ವೈರಲ್ !! 

16-08-20 10:47 pm       Headline Karnataka News Network   ದೇಶ - ವಿದೇಶ

ಬುರ್ಖಾಧಾರಿ ಮಹಿಳೆಯರು ಬೆಹ್ರೈನ್ ಸೂಪರ್ ಮಾರ್ಕೆಟ್ ಒಂದರಲ್ಲಿ ಇಡಲಾಗಿದ್ದ ಗಣೇಶನ ವಿಗ್ರಹಗಳನ್ನು ನೆಲಕ್ಕೆ ಎಸೆದು ಪುಡಿಗೈದ ವಿಡಿಯೋ ವೈರಲ್ ಆಗಿದೆ. ಘಟನೆ ಬಗ್ಗೆ ಬೆಹ್ರೈನ್ ನಲ್ಲಿ ಭಾರತ ಮೂಲದ ಹಿಂದುಗಳು ಬಹಳಷ್ಟಿದ್ದು ವಿಡಿಯೋ ಬಗ್ಗೆ ಆಕ್ರೋಶ ಹೊರಹಾಕಿದ್ದು ಜಾಲತಾಣದಲ್ಲಿ ವೈರಲ್ ಆಗುವಂತೆ ಮಾಡಿದ್ದಾರೆ.

ಮನಾಮಾ (ಬೆಹ್ರೈನ್), ಆಗಸ್ಟ್ 16: ಇಬ್ವರು ಬುರ್ಖಾಧಾರಿ ಮಹಿಳೆಯರು ಇಲ್ಲಿನ ಸೂಪರ್ ಮಾರ್ಕೆಟ್ ಒಂದರಲ್ಲಿ ಇಡಲಾಗಿದ್ದ ಗಣೇಶನ ವಿಗ್ರಹಗಳನ್ನು ನೆಲಕ್ಕೆ ಎಸೆದು ಪುಡಿಗೈದ ವಿಡಿಯೋ ವೈರಲ್ ಆಗಿದ್ದು ಘಟನೆ ಬಗ್ಗೆ ಬೆಹ್ರೈನ್ ಸರಕಾರ ತನಿಖೆಗೆ ಆದೇಶ ಮಾಡಿದೆ. 

ಗಣೇಶೋತ್ಸವ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಹ್ರೈನ್ ರಾಜಧಾನಿ ಮನಾಮಾದ ಹೊರವಲಯದ ಜಫೈರ್ ನಲ್ಲಿ ಸೂಪರ್ ಮಾರ್ಕೆಟ್ ಗಳಲ್ಲಿ ವಿವಿಧ ರೀತಿಯ ಗಣೇಶ ವಿಗ್ರಹಗಳನ್ನು ಇಡಲಾಗಿತ್ತು. ಆದರೆ, ಮಾರ್ಕೆಟ್ ಗೆ ಬಂದಿದ್ದ ಇಬ್ಬರು ಮಹಿಳೆಯರು ಹಿಂದು ದೇವರ ವಿಗ್ರಹಗಳನ್ನು ಮಾರ್ಕೆಟ್ ನಲ್ಲಿ ಇಟ್ಟಿರುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ. "ಇದು ಮೊಹಮ್ಮದ್ ಇಸ್ಸಾನ ದೇಶ, ಇತರ ಧರ್ಮದ ದೇವರ ವಿಗ್ರಹಗಳನ್ನು ಇಲ್ಲಿ ಇಡುವುದಕ್ಕೆ ಮೊಹಮ್ಮದ್ ಪರ್ಮಿಶನ್ ನೀಡ್ತಾರೆಯೇ" ಎಂದು ಮಹಿಳೆಯರು ಅಲ್ಲಿನ ವ್ಯಾಪಾರಿಯನ್ನು ಪ್ರಶ್ನೆ ಮಾಡಿದ್ದಾರೆ. ಆನಂತರ ಅಲ್ಲಿ ಇಟ್ಟಿದ್ದ ಬೇರೆ ಬೇರೆ ರೀತಿಯ ಗಣೇಶನ ಮೂರ್ತಿಗಳನ್ನು ತೆಗೆದು ನೆಲಕ್ಕೆ ಬಿಸಾಕಿದ್ದಾರೆ. ಇಬ್ಬರು ಮಹಿಳೆಯರು ಅರೇಬಿಕ್ ಭಾಷೆಯಲ್ಲಿ ಹಿಂದು ದೇವರನ್ನು ನಿಂದಿಸುತ್ತಾ ಗಣಪತಿ ವಿಗ್ರಹಗಳನ್ನು ಪುಡಿಗಟ್ಟುವುದನ್ನು ಇನ್ನೊಬ್ಬ ಮಹಿಳೆ ವಿಡಿಯೋ ಮಾಡಿದ್ದು ಅದನ್ನು ಹೊರಗೆ ಬಿಡಲಾಗಿತ್ತು.

ಬೆಹ್ರೈನ್ ನಲ್ಲಿ ಭಾರತ ಮೂಲದ ಹಿಂದುಗಳು ಬಹಳಷ್ಟಿದ್ದು ವಿಡಿಯೋ ಬಗ್ಗೆ ಆಕ್ರೋಶ ಹೊರಹಾಕಿದ್ದು ಜಾಲತಾಣದಲ್ಲಿ ವೈರಲ್ ಆಗುವಂತೆ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆಹ್ರೈನ್ ಸರಕಾರ ಎಚ್ಚತ್ತುಕೊಂಡಿದ್ದು ಆರೋಪಿತ ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. 

ಬೆಹ್ರೈನ್ ಸರಕಾರದ ಸಚಿವಾಲಯ ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು ಒಂದು ಸಮುದಾಯದ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಮಾಡಿರುವ ಬಗ್ಗೆ ಪೊಲೀಸರು ಮಹಿಳೆಯರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳಿದೆ. 

ಬೆಹ್ರೈನ್ ನಲ್ಲಿ ಭಾರತ ಮೂಲದವರು ನಾಲ್ಕು ಲಕ್ಷದಷ್ಟಿದ್ದಾರೆ. ಅಲ್ಲಿನ ಒಟ್ಟು ಜನಸಂಖ್ಯೆ ಇರುವುದು 13 ಲಕ್ಷ. ಈ ಪೈಕಿ ಭಾರತ ಮೂಲದ ಹಿಂದುಗಳು 9.8 ಶೇಕಡಾ ಇದ್ದು ತಕ್ಕಮಟ್ಟಿಗೆ ಪ್ರಾಬಲ್ಯ ಹೊಂದಿದ್ದಾರೆ. ಹೀಗಾಗಿ ಬೆಹ್ರೈನ್ ಇಸ್ಲಾಂ ದೇಶ ಆಗಿದ್ದರೂ ಭಾರತೀಯ ಹಬ್ಬಗಳ ಆಚರಣೆಗೆ ಅವಕಾಶ ನೀಡಲಾಗುತ್ತಿದೆ.