ಉಕ್ರೇನ್ ನ್ಯಾಟೋ ಪಡೆಗಳನ್ನು ಸೇರುವ ಒಂದೇ ಕಾರಣದಿಂದಾಗಿ ಪುಟಿನ್ ಯುದ್ಧ ಘೋಷಣೆ ಮಾಡಿದರೆ..? ಹಾಗಾದರೇ ಏನಿದು ನ್ಯಾಟೋ.. ರಷ್ಯಾ ಮತ್ತು ನ್ಯಾಟೋ ನಡುವಿನ ಧ್ವೇಷ ಎಂತಹದ್ದು..??

24-02-22 07:57 pm       HK Desk news   ದೇಶ - ವಿದೇಶ

ವಿಶ್ವಸಮುದಾಯದ ಎಚ್ಚರಿಕೆಯನ್ನು ತಿರಸ್ಕರಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಿಸಿದ್ದು, ಉಕ್ರೇನ್ ನ್ಯಾಟೋ ಪಡೆಗಳನ್ನು ಸೇರುವ ಒಂದೇ ಕಾರಣದಿಂದಾಗಿ ಪುಟಿನ್ ಯುದ್ಧ ಘೋಷಣೆ ಮಾಡಿದರೆ..? ಹಾಗಾದರೇ ಏನಿದು ನ್ಯಾಟೋ.. ರಷ್ಯಾ ಮತ್ತು ನ್ಯಾಟೋ ನಡುವಿನ ಧ್ವೇಷ ಎಂತಹದ್ದು..??

ಮಾಸ್ಕೊ , ಫೆ 24 : ವಿಶ್ವಸಮುದಾಯದ ಎಚ್ಚರಿಕೆಯನ್ನು ತಿರಸ್ಕರಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಿಸಿದ್ದು, ಉಕ್ರೇನ್ ನ್ಯಾಟೋ ಪಡೆಗಳನ್ನು ಸೇರುವ ಒಂದೇ ಕಾರಣದಿಂದಾಗಿ ಪುಟಿನ್ ಯುದ್ಧ ಘೋಷಣೆ ಮಾಡಿದರೆ..? ಹಾಗಾದರೇ ಏನಿದು ನ್ಯಾಟೋ.. ರಷ್ಯಾ ಮತ್ತು ನ್ಯಾಟೋ ನಡುವಿನ ಧ್ವೇಷ ಎಂತಹದ್ದು..??

ನ್ಯಾಟೋ (NATO) ಸಂಕ್ಷಿಪ್ತ ರೂಪ ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ)... ಪ್ರಸ್ತುತ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಮೂಲ ಕಾರಣವೇ ಈ ನ್ಯಾಟೋ.. ಉಕ್ರೇನ್ ನ್ಯಾಟೋದ ಭಾಗವಾಗಲು ಬಯಸುತ್ತದೆ, ಆದರೆ ರಷ್ಯಾ ಇದಕ್ಕೆ ವಿರುದ್ಧವಾಗಿದೆ. ಉಕ್ರೇನ್ ನ್ಯಾಟೋಗೆ ಸೇರಿದರೆ, ಉಕ್ರೇನ್ ನ್ಯಾಟೋದ ಗಡಿಯಲ್ಲಿರುತ್ತವೆ ಎಂಬುದೇ ರಷ್ಯಾಕ್ಕೆ ಇರುವ ಆತಂಕ. 

What is NATO and What is its purpose? How many Countries are in NATO?

ನ್ಯಾಟೋ ಅಸ್ತಿತ್ವಕ್ಕೆ ಬಂದದ್ದು 1949ರಲ್ಲಿ. ಎರಡನೇ ಮಹಾಯುದ್ಧವು 1939 ಮತ್ತು 194೫ ರ ನಡುವೆ ಸಂಭವಿಸಿತು. ಅದರ ನಂತರ, ಸೋವಿಯತ್ ಒಕ್ಕೂಟವು ಪೂರ್ವ ಯುರೋಪ್ ನಿಂದ ಪಡೆಗಳನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿ 1948ರಲ್ಲಿ ಬರ್ಲಿನ್ ಅನ್ನು ಸುತ್ತುವರಿಯಿತು. ಇದು 1949ರಲ್ಲಿ ನ್ಯಾಟೋ ಮೂಲಕ ಸೋವಿಯತ್ ವಿಸ್ತರಣೆಯನ್ನು ಎದುರಿಸಲು ಅಮೆರಿಕವನ್ನು ಪ್ರೇರೇಪಿಸಿತು. ನ್ಯಾಟೋ ರಚನೆಯಾದ ಆರಂಭದಲ್ಲಿ 12 ಸದಸ್ಯ ರಾಷ್ಟ್ರಗಳನ್ನು ಹೊಂದಿತ್ತು. ಇದು ಅಮೆರಿಕ, ಬ್ರಿಟನ್, ಫ್ರಾನ್ಸ್, ಕೆನಡಾ, ಇಟಲಿ, ನೆದರ್ಲ್ಯಾಂಡ್ಸ್, ಐಸ್ಲ್ಯಾಂಡ್, ಬೆಲ್ಜಿಯಂ, ಲಕ್ಸೆಂಬರ್ಗ್, ನಾರ್ವೆ, ಪೋರ್ಚುಗಲ್ ಮತ್ತು ಡೆನ್ಮಾರ್ಕ್ ಅನ್ನು ಒಳಗೊಂಡಿತ್ತು. ಇಂದು, ನ್ಯಾಟೋ ಅಡಿಯಲ್ಲಿ 30 ಸದಸ್ಯ ರಾಷ್ಟ್ರಗಳಿವೆ.

ನ್ಯಾಟೋ ಸಾಮಾನ್ಯ ಭದ್ರತಾ ನೀತಿಯ ಮೇಲೆ ಕಾರ್ಯನಿರ್ವಹಿಸುವ ಮಿಲಿಟರಿ ಮೈತ್ರಿಯಾಗಿದೆ. ನ್ಯಾಟೋ ಸದಸ್ಯ ರಾಷ್ಟ್ರವನ್ನು ಆಕ್ರಮಿಸಿದರೆ, ಇದನ್ನು ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳ ಆಕ್ರಮಣ ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳು ಆಕ್ರಮಣದ ವಿರುದ್ಧ ಒಗ್ಗೂಡಿ ಕಾರ್ಯ ನಿರ್ವಹಿಸುತ್ತವೆ.

NATO: Why Russia has a problem with its eastward expansion | Europe | News  and current affairs from around the continent | DW | 23.02.2022

ರಷ್ಯಾ ನ್ಯಾಟೋವನ್ನು ಏಕೆ ದ್ವೇಷಿಸುತ್ತದೆ?

ಎರಡನೆಯ ಮಹಾಯುದ್ಧವು ಜಗತ್ತನ್ನು ಎರಡು ಗುಂಪುಗಳಾಗಿಸಿತ್ತು. ಅಮೆರಿಕ ಮತ್ತು ಸೋವಿಯತ್ ಒಕ್ಕೂಟ ಎರಡು ಮಹಾಶಕ್ತಿಗಳಾಗಿದ್ದವು. ಡಿಸೆಂಬರ್ 25, 1991 ರಂದು, ಸೋವಿಯತ್ ಒಕ್ಕೂಟವು 15 ಹೊಸ ದೇಶಗಳಾಗಿ ಕುಸಿಯಿತು: ಅರ್ಮೇನಿಯಾ, ಅಜೆರ್ಬೈಜಾನ್, ಬೆಲಾರಸ್, ಎಸ್ಟೋನಿಯಾ, ಜಾರ್ಜಿಯಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ಲಾಟ್ವಿಯಾ, ಲಿಥುವೇನಿಯಾ, ಮೊಲ್ಡೊವಾ, ರಷ್ಯಾ, ತಜಿಕಿಸ್ತಾನ್, ತುರ್ಕಮೆನಿಸ್ತಾನ್, ಉಕ್ರೇನ್ ಮತ್ತು ಉಜ್ಬೇಕಿಸ್ತಾನ್.

Ukraine Russia War: President Putin, In Name Of Humanity, UN Chief's Appeal  Over Ukraine

ಇದರ ನಂತರ, ಅಮೆರಿಕ ಏಕೈಕ ಸೂಪರ್ ಪವರ್ ಆಗಿ ಉಳಿಯಿತು. ಅಮೆರಿಕ ನೇತೃತ್ವದಲ್ಲಿ, ನ್ಯಾಟೋ ತನ್ನ ವಿಸ್ತರಣೆಯನ್ನು ಮುಂದುವರೆಸಿತು. ಸೋವಿಯತ್ ಒಕ್ಕೂಟದಿಂದ ಹೊರಬಂದ ದೇಶಗಳು ನ್ಯಾಟೋಗೆ ಸೇರಲು ಪ್ರಾರಂಭಿಸಿದವು. ಎಸ್ಟೋನಿಯಾ, ಲಾಟ್ವಿಯಾ ಮತ್ತು ಲಿಥುವೇನಿಯಾ 2004 ರಲ್ಲಿ ನ್ಯಾಟೋಗೆ ಸೇರಿಕೊಂಡವು. ಜಾರ್ಜಿಯಾ ಮತ್ತು ಉಕ್ರೇನ್‌ಗೆ 2008ರಲ್ಲಿ ನ್ಯಾಟೋ ಸದಸ್ಯತ್ವವನ್ನು ನೀಡಲಾಯಿತು. ಆದರೆ ಇದಕ್ಕೆ ರಷ್ಯಾ ತೀವ್ರ ವಿರೋಧವಿತ್ತು. ಆದಾಗ್ಯ ಉಕ್ರೇನ್ ನ್ಯಾಟೋ ಸದಸ್ಯತ್ವ ಪಡೆಯಿತಾದರೂ ರಷ್ಯಾದ ರಾಜತಾಂತ್ರಿಕ ಒತ್ತಡ ಮತ್ತು ತಾಂತ್ರಿಕ ಕಾರಣದಿಂದಾಗಿ ಮಿಲಿಟರಿ ಮೈತ್ರಿಗೆ ಸೇರಲು ಸಾಧ್ಯವಾಗಲಿಲ್ಲ.

Russia-Ukraine crisis: Scepticism persists over Putin's claim of troop  withdrawal - World News

ಉಕ್ರೇನ್ ನ್ಯಾಟೋಗೆ ಸೇರಿದರೆ,  ನ್ಯಾಟೋ ಪಡೆಗಳು ಉಕ್ರೇನ್ ಕಾವಲಿಗಾಗಿ ತನ್ನದೇ ಗಡಿಯಲ್ಲಿ ನಿಲ್ಲುತ್ತದೆ. ಇದು ರಷ್ಯಾದ ಅಸ್ಥಿತ್ವಕ್ಕೆ ಕುತ್ತು ತರಬಹುದು ಎಂಬ ಆತಂಕ ರಷ್ಯಾಕ್ಕಿದೆ. ಅಲ್ಲದೆ ನ್ಯಾಟೋ ಮಿತ್ರಕೂಟದಲ್ಲಿರುವುದು ಬಹುತೇಕ ತನ್ನ ಎದುರಾಳಿ ರಾಷ್ಟ್ರಗಳ ಸೇನಾಪಡೆಗಳೇ.. ಹೀಗಾಗಿ ರಷ್ಯಾ ತನ್ನ ಭದ್ರತಾ ಹಿತಾಸಕ್ತಿಯಿಂದಾಗಿ ನ್ಯಾಟೋವನ್ನು ಧ್ವೇಷಿಸುತ್ತಿದೆ.

NATO - Topic: NATO-Russia relations: the facts

ರಷ್ಯಾ ವರ್ಸಸ್ ನ್ಯಾಟೋ;

ಮಿಲಿಟರಿ ಶಕ್ತಿಯಾಗಲಿ ಅಥವಾ ರಕ್ಷಣಾ ವೆಚ್ಚವಾಗಲಿ, ರಷ್ಯಾ ಮತ್ತು ನ್ಯಾಟೋ ನಡುವೆ ಯಾವುದೇ ಹೋಲಿಕೆ ಇಲ್ಲ. ನ್ಯಾಟೋ ಪ್ರಕಾರ, 2021 ರಲ್ಲಿ ಎಲ್ಲಾ 30 ಸದಸ್ಯ ರಾಷ್ಟ್ರಗಳ ಒಟ್ಟು ರಕ್ಷಣಾ ವೆಚ್ಚ 1,174 ಬಿಲಿಯನ್ ಡಾಲರ್ ಆಗಿತ್ತು. 2020 ರಲ್ಲಿ, ನ್ಯಾಟೋ ದೇಶಗಳು  1,106 ಶತಕೋಟಿ ಡಾಲರ್ ಖರ್ಚು ಮಾಡಿದೆ. ಮತ್ತೊಂದೆಡೆ, ರಷ್ಯಾ 2020 ರಲ್ಲಿ 61.7 ಶತಕೋಟಿ ಡಾಲರ್ ರಕ್ಷಣೆಗಾಗಿ ಖರ್ಚು ಮಾಡಿದೆ

ಸುಮಾರು 40,000 ನ್ಯಾಟೋ ಸೈನಿಕರು ರಷ್ಯಾದ ಪಡೆಗಳೊಂದಿಗೆ ಹೋರಾಡಲು ಸಿದ್ಧರಾಗಿದ್ದಾರೆ. ನ್ಯಾಟೋ ನೇರವಾಗಿ ಯುದ್ಧದಲ್ಲಿ ತೊಡಗಿದರೆ, ಅದು ತನ್ನ ಇತ್ಯರ್ಥಕ್ಕೆ 33 ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಹೊಂದಿರುತ್ತದೆ. ಮತ್ತೊಂದೆಡೆ, ರಷ್ಯಾವು 8 ಲಕ್ಷ ಸಕ್ರಿಯ ಸೈನಿಕರು ಸೇರಿದಂತೆ ಸುಮಾರು 12 ಲಕ್ಷ ಸೈನಿಕರನ್ನು ಹೊಂದಿದೆ.

United Nations Secretary General Antonio Guterres on Wednesday appealed to Russian president Vladimir Putin after he announced a military operation in eastern Ukraine, news agency Reuters reported. The global peace body's chief urged Putin to stop the war what he cited ‘in the name of humanity’.