ಬ್ರೇಕಿಂಗ್ ನ್ಯೂಸ್
04-08-20 10:11 am Political News Correspondant ನ್ಯೂಸ್ View
ಬೆಂಗಳೂರು, ಆಗಸ್ಟ್ 4: ಕೋವಿಡ್ 19 ನಿಯಮಗಳು ಕೇವಲ ಜನಸಾಮಾನ್ಯರಿಗೆ ಮಾತ್ರನಾ ಎಂಬ ಪ್ರಶ್ನೆ ಎದುರಾಗಿದೆ. ಯಾಕಂದ್ರೆ, ಪ್ರತಿಪಕ್ಷ ಕಾಂಗ್ರೆಸ್ ಅಧಿನಾಯಕ ಡಿ.ಕೆ.ಶಿವಕುಮಾರ್ ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದರೂ ತನ್ನ ಪ್ರವಾಸ ಸ್ಥಗಿತಗೊಳಿಸಿಲ್ಲ. ಬದಲಿಗೆ ರಾಜ್ಯದೆಲ್ಲೆಡೆ ಸುತ್ತಾಟದಲ್ಲಿ ತೊಡಗಿದ್ದು ಕೊರೊನಾ ಸೂಪರ್ ಸ್ಪ್ರೆಡರ್ ಆಗುತ್ತಿದ್ದಾರೆಯೇ ಅನ್ನುವ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ.
ನಾಲ್ಕು ದಿನಗಳ ಹಿಂದೆ, ಜುಲೈ 31ರಂದು ಡಿಕೆಶಿ ಮಂಗಳೂರಿಗೆ ಆಗಮಿಸಿದ್ದಾಗ ಕೊರೊನಾ ಸೋಂಕು ಆಗಿದ್ದ ಮಾಜಿ ಎಂಎಲ್ಸಿ ಐವನ್ ಡಿಸೋಜ ಜೊತೆಗಿದ್ದರು. ದಿನವಿಡೀ ಡಿಕೆಶಿ ಜೊತೆ ಅಂಟಿಕೊಂಡೇ ಓಡಾಡಿದ್ದರು. ಅದೇ ದಿನ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ ಐವನ್ ಡಿಸೋಜ ಕೊರೊನಾ ಪಾಸಿಟಿವ್ ಆಗಿದ್ದರು. ಅಂದು ಐವನ್ ಡಿಸೋಜ ಜೊತೆಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಪತ್ರಕರ್ತರು ಸೇರಿ ಎಲ್ಲರೂ ಸೆಲ್ಫ್ ಕ್ವಾರಂಟೈನ್ ಆಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೆ, ಮರುದಿನ ಬೆಂಗಳೂರಿಗೆ ತೆರಳಿದ್ದ ಡಿಕೆ ಶಿವಕುಮಾರ್ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಭೇಟಿ ಮಾಡಿದ್ದರು
ಇದಕ್ಕೂ ಎರಡು ದಿನಗಳ ಹಿಂದೆ ಡಿಕೆಶಿ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದ್ದರು. ಬೆಂಗಳೂರು ಭಾಗದ ಬಹುತೇಕ ಕಾಂಗ್ರೆಸ್ ಶಾಸಕರು, ನಾಯಕರು ಡಿಕೆಶಿ ಮತ್ತು ಸಿದ್ದರಾಮಯ್ಯ ಸಂಪರ್ಕದಲ್ಲಿಯೇ ಇದ್ದರು. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯರಿಗೂ ಕೊರೊನಾ ಸೋಂಕು ತಗಲಿದೆ. ತಮ್ಮ ಸಂಪರ್ಕಕ್ಕೆ ಬಂದವರು ಸೆಲ್ಫ್ ಕ್ವಾರಂಟೈನ್ ಆಗುವಂತೆ ಸಿದ್ದರಾಮಯ್ಯ ಮನವಿಯನ್ನೂ ಮಾಡಿಕೊಂಡಿದ್ದಾರೆ. ಸಿದ್ದು ಮನವಿಯಂತೆ ಒಂದಷ್ಟು ನಾಯಕರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದರೆ, ಮೈಸೂರಿನಲ್ಲಿ 50ರಷ್ಟು ಪತ್ರಕರ್ತರನ್ನು ಕ್ವಾರಂಟೈನ್ ಮಾಡಲಾಗಿದೆ. ಸಿದ್ದರಾಮಯ್ಯ ಕಳೆದೊಂದು ವಾರದಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ತಿರುಗಾಡಿದ್ದರಿಂದ ಈ ಭಾಗದ ಪತ್ರಕರ್ತರು ಮತ್ತು ಕಾರ್ಯಕರ್ತರಿಗೂ ಕೊರೊನಾ ಸೋಂಕು ಅಂಟುವ ಸಾಧ್ಯತೆಯಿದೆ.
ಇವೆಲ್ಲ ಬೆಳವಣಿಗೆ ಆಗಿದ್ದರೂ ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಾತ್ರ ತನಗೇನೂ ಸಂಬಂಧವೇ ಇಲ್ಲದಂತೆ ಗುಲ್ಬರ್ಗದಲ್ಲಿ ಪ್ರವಾಸ ಹೊರಟಿದ್ದಾರೆ. ಅಲ್ಲಿಯೂ ಸಾಮಾಜಿಕ ಅಂತರ, ಸ್ಯಾನಿಟೈಸ್, ಮಾಸ್ಕ್ ಧರಿಸುವ ನಿಯಮ ಅನುಸರಿಸದೆ ಕಾರ್ಯಕರ್ತರ ಜೊತೆ ಗುಂಪಿನಲ್ಲಿ ಗೋವಿಂದ ಎನ್ನುತ್ತಿದ್ದಾರೆ. ಹಾಗಾದ್ರೆ ಸರಕಾರದ ನಿಯಮಗಳು ಡಿಕೆಶಿ ಸೇರಿ ಬೇಲಿ ಹಾಯುವ ರಾಜಕಾರಣಿಗಳಿಗೆ ಅನ್ವಯ ಆಗೋದಿಲ್ಲವೇ ? ನಿನ್ನೆಯಷ್ಟೇ ಡಿಸಿಎಂ ಲಕ್ಷ್ಮಣ ಸವದಿಯೂ ಬೆಳಗಾವಿಯಲ್ಲಿ ಇಂಥದ್ದೇ ಬೇಜವಾಬ್ದಾರಿ ನಡೆ ತೋರಿದ್ದರು.
ಇತ್ತ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ಸೇರಿದ್ದರೆ, ಮುನ್ನಾ ದಿನ ಸಿಎಂ ಭೇಟಿ ಮಾಡಿದ್ದ ಡಿಸಿಎಂ ಮರುದಿನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಧಿಕಾರಿಗಳು, ಕಾರ್ಯಕರ್ತರು ಸೇರಿ ನೂರಾರು ಮಂದಿಯನ್ನೂ ಭೇಟಿ ಮಾಡಿದ್ದರು. ಇಂಥ ಅಸಡ್ಡೆ , ಅಪಸವ್ಯಗಳ ಮೂಲಕ ನಮ್ಮ ರಾಜಕಾರಣಿಗಳು ಕೊರೊನಾ ಸೋಂಕನ್ನು ಜನಸಾಮಾನ್ಯರಿಗೆ ಅಂಟಿಸುವ ರಾಯಭಾರಿಗಳಾಗುತ್ತಿದ್ದಾರೆಯೇ ಅಥವಾ ಕೊರೊನಾ ನಿಯಮಗಳು ಜನರಿಗೆ ಮಾತ್ರ, ತಮಗಲ್ಲ ಅನ್ನುವ ಅಸಡ್ಡೆ ತೋರುತ್ತಿದ್ದಾರೆಯೇ ? ಇಂಥ ಪ್ರಶ್ನೆಗಳಿಗೆಲ್ಲ ಪ್ರತಿಪಕ್ಷ ನಾಯಕ ಡಿಕೆಶಿ, ಆಡಳಿತ ಪಕ್ಷದ ಉಸ್ತುವಾರಿ ಹೊತ್ತಿರುವ ಡಿಸಿಎಂ ಉತ್ತರ ಕೊಡಬೇಕು. ಇಲ್ಲದಿದ್ದರೆ, ಕೊರೊನಾ ಸೋಂಕಿನಿಂದ ಅಷ್ಟೇನೂ ಅಪಾಯ ಇಲ್ಲವೆಂದು ಸರಕಾರ ಕಾನೂನುಗಳನ್ನು ಸರಳಗೊಳಿಸಬೇಕು. ಈವರೆಗೆ ಲಾಕ್ಡೌನ್ ಮಾಡಿ ಜನರನ್ನು ಕಷ್ಟಕ್ಕೆ ನೂಕಿದ್ದು ತಪ್ಪಾಯ್ತು ಎಂದು ಸರಕಾರ ಕ್ಷಮೆ ಕೋರಬೇಕು. ಇಲ್ಲಾಂದ್ರೆ ಡಿಕೆಶಿ ಮತ್ತು ಲಕ್ಷ್ಮಣ ಸವದಿ ಇಬ್ಬರ ಮೇಲೂ ಕ್ವಾರಂಟೈನ್ ನೀತಿ ಉಲ್ಲಂಘನೆಯ ವಿಚಾರದಲ್ಲಿ ಪ್ರಕರಣ ದಾಖಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
29-03-25 09:19 pm
HK News Desk
Mysuru three drowned, Lake, Ugadi: ಮೈಸೂರು ; ಹ...
29-03-25 03:13 pm
Naxal Karanataka, Anti Naxal Force: ನಕ್ಸಲ್ ನಿ...
28-03-25 10:47 pm
Minister Rajanna, honeytrap, Son, Murder atte...
28-03-25 12:19 pm
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
29-03-25 04:40 pm
HK News Desk
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
30-03-25 11:02 pm
Mangaluru HK Staff
Mangalore, Ullal Netravati Bridge Repair, Tra...
30-03-25 03:07 pm
Kumapla, Mangalore, Crime: ಲಕೋಟೆಯಲ್ಲಿ ಸಂಸ್ಕರಿ...
30-03-25 02:39 pm
Mangalore CM Medal, Anupam Agrawal, Police Ma...
29-03-25 11:04 pm
MLC Ivan D'Souza, Mangalore: 7ನೇ ವೇತನ ಆಯೋಗ ;...
29-03-25 10:07 pm
30-03-25 08:59 am
Mangaluru Correspondent
ಆಂಧ್ರದಲ್ಲಿ ಪ್ಯಾಸ್ಟರ್ ಪ್ರವೀಣ್ ಕುಮಾರ್ ಸಂಶಯಾಸ್ಪದ...
29-03-25 10:33 pm
Bajrang Dal, Arrest, Cow Transport, Mangalore...
29-03-25 04:02 pm
Mangalore Nandigudde Prostitution case: ನಂದಿಗ...
28-03-25 09:25 pm
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm