ಬ್ರೇಕಿಂಗ್ ನ್ಯೂಸ್
18-12-20 09:38 pm Special Correspondant, Mangaluru ನ್ಯೂಸ್ View
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಮೌಲ್ಯವನ್ನು ಹೊಂದಿರುವ ಬಿಟ್ ಕಾಯಿನ್ ಅನ್ನುವ ಕರೆನ್ಸಿ ಸಾಮಾನ್ಯ ಜನರ ಪಾಲಿಗೆ ಹೊಚ್ಚ ಹೊಸ ಶಬ್ದ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿರುವ ಬಾಲಕನ ಅಪಹರಣ ಪ್ರಕರಣ ಈಗ ಬಿಟ್ ಕಾಯಿನ್ ಅನ್ನೋ ಕರೆನ್ಸಿ ಬಗ್ಗೆ ಸಾಮಾನ್ಯ ಜನರಲ್ಲೂ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಅಪಹರಣಕಾರರು 100 ಬಿಟ್ ಕಾಯಿನ್ ಬೇಡಿಕೆ ಇಟ್ಟಿರುವ ವಿಚಾರ ದೇಶದ ಗಮನ ಸೆಳೆದಿದೆ. ಆದರೆ, ಏನಿದು ಬಿಟ್ ಕಾಯಿನ್ ಅಂದ್ರೆ ಜನಸಾಮಾನ್ಯರಲ್ಲಿ ಉತ್ತರ ಇರಲಿಕ್ಕಿಲ್ಲ.
ಬಿಟ್ ಕಾಯಿನ್ ಅನ್ನೋದು ಡಾಲರ್, ಯೆನ್, ರೂಪಾಯಿ ಇದ್ದ ಹಾಗೇ ಒಂದು ರೀತಿಯ ಪರ್ಯಾಯ ಕರೆನ್ಸಿ. ಆದರೆ, ಈ ಕರೆನ್ಸಿಯನ್ನು ಯಾವ ದೇಶವೂ ಅಧಿಕೃತವಾಗಿ ಅಳವಡಿಸಿಕೊಂಡಿಲ್ಲ. ಹಾಗಿದ್ದರೂ, ಈ ಕರೆನ್ಸಿ ಡಿಜಿಟಲ್ ರೂಪದಲ್ಲಿ ಚಲನೆಯಲ್ಲಿದ್ದು, ಜಗತ್ತಿನ ಮುಂಚೂಣಿ ದೇಶಗಳಲ್ಲಿ ವರ್ಚುವಲ್ ಕರೆನ್ಸಿಯಾಗಿ ನಿಗೂಢವಾಗೇ ಅಸ್ತಿತ್ವ ಕಂಡುಕೊಂಡಿದೆ. ಐದಾರು ವರ್ಷಗಳ ಹಿಂದೆ ಈ ಬಿಟ್ ಕಾಯಿನ್ ಬಗ್ಗೆ ನಮ್ಮ ದೇಶದಲ್ಲಿ ಮಾಹಿತಿ ಕೇಳಿಬಂದಿತ್ತು. ಈ ಕರೆನ್ಸಿಯ ವಾಲೆಟ್ ಗೆ ಹಣವನ್ನು ಹೂಡಿಕೆ ಮಾಡಿದರೆ, ಡಬಲ್, ತ್ರಿಬಲ್ ಆಗುತ್ತೆ ಅನ್ನುವ ಮಾತು ಬಂದಿತ್ತು. ಭವಿಷ್ಯದ ಕರೆನ್ಸಿ ಅನ್ನುವ ನೆಲೆಯಲ್ಲಿ ಕೆಲವರನ್ನು ನಂಬಿಸುವ ಕೆಲಸವೂ ಸದ್ದಿಲ್ಲದೆ ನಡೆದಿತ್ತು. ಆದರೆ, ಈ ಕರೆನ್ಸಿ ತಳಮಟ್ಟದ ಜನರಿಗೆ ರೀಚ್ ಇಲ್ಲದಿದ್ದರೂ, ನಿಗೂಢವಾಗಿ ಕಾರ್ಯಾಚರಿಸುತ್ತಾ ಕೆಲವರನ್ನು ಹೂಡಿಕೆ ಮಾಡುವಂತೆ ಆಕರ್ಷಿಸಿತ್ತು. ಆ ಸಂದರ್ಭದಲ್ಲಿ ಕೆಲವು ಸಾವಿರ ರೂ.ಗಳ ಮೌಲ್ಯ ಹೊಂದಿದ್ದ ಈ ಕರೆನ್ಸಿ ನೋಡನೋಡುತ್ತಲೇ ಭಾರೀ ಮೌಲ್ಯ ಕಂಡುಕೊಂಡಿದ್ದು ನಿಜಕ್ಕೂ ಸೋಜಿಗ.
ಆಬಳಿಕ ಆಫ್ರಿಕನ್ ದೇಶಗಳ ಮೂಲದ ಡ್ರಗ್ ಮಾಫಿಯಾಗಳು ಈ ಕರೆನ್ಸಿಯನ್ನು ಹೆಚ್ಚಾಗಿ ಬಳಕೆಗೆ ತಂದರು. ಡಾರ್ಕ್ ವೆಬ್ ರೀತಿಯ ವೆಬ್ ಸೈಟ್ ಗಳಿಂದ ಡ್ರಗ್ ಖರೀದಿಸುವ ಮಂದಿ ಬಿಟ್ ಕಾಯಿನ್ ರೂಪದಲ್ಲಿ ಹಣ ಹಾಕುವಂತೆ ಸೂಚನೆಗಳು ಬರುತ್ತಿದ್ದವು. ಬಿಟ್ ಕಾಯಿನ್ ಬಗ್ಗೆ ಅರಿವು ಇಲ್ಲದಿದ್ದರೂ, ಡ್ರಗ್ ನೆಪದಲ್ಲಿ ಬಿಟ್ ಕಾಯಿನ್ ಖರೀದಿಸಿ, ವೆಬ್ ತಾಣಗಳಿಗೆ ಕರೆನ್ಸಿ ತುಂಬುತ್ತಿದ್ದರು. ಮೂರು ವರ್ಷಗಳ ಹಿಂದೆ ಈ ಕರೆನ್ಸಿಯ ಮೌಲ್ಯ ಒಂದೇ ಸಮನೆ ಏರಿಕೆಯಾಗಿದ್ದು, ಒಂದು ಬಿಟ್ ಕಾಯಿನ್ ಬೆಲೆ ಲಕ್ಷಗಳ ಹತ್ತಿರ ಹೋಗಿತ್ತು. 2018ರಲ್ಲಿ ಇದರ ಮೌಲ್ಯ ಭಾರತದಲ್ಲಿ 4.38 ಲಕ್ಷ ಇತ್ತೆಂದು ಕೆಲವು ವರದಿಗಳು ಹೇಳುತ್ತವೆ. ಯಾವಾಗ ಬಿಟ್ ಕಾಯಿನ್ ಕರೆನ್ಸಿ ಈ ಪರಿಯ ಮೌಲ್ಯ ಕಂಡುಕೊಂಡಿತ್ತೋ ಆವತ್ತೇ ಇದನ್ನು ಮಾಫಿಯಾ ಗ್ಯಾಂಗ್ ತಮ್ಮ ಚಟುವಟಿಕೆಗೆ ಬಳಸಿಕೊಳ್ಳಲು ಆರಂಭಿಸಿತ್ತು.
ಒಂದು ಬಿಟ್ ಕಾಯಿನ್ ದರ 16 ಲಕ್ಷ ರೂ. !!
ಈಗಿನ ಸನ್ನಿವೇಶದಲ್ಲಿ ಬಿಟ್ ಕಾಯಿನ್ ಮೌಲ್ಯದ ಬಗ್ಗೆ ಗೂಗಲ್ ಸರ್ಚ್ ಮಾಡಿದರೆ, ಒಂದು ಕಾಯಿನ್ ದರ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 16 ಲಕ್ಷ ರೂ. ಎಂದು ತೋರಿಸುತ್ತದೆ. ಈ ಲೆಕ್ಕವನ್ನು ನೋಡಿದರೆ, ನೂರು ಬಿಟ್ ಕಾಯಿನ್ ಅಂದರೆ ಎಷ್ಟೆಂದು ಲೆಕ್ಕ ಹಾಕಬಹುದು. ವಿಶೇಷ ಅಂದ್ರೆ, ಜಗತ್ತಿನ ಬೇರೆಲ್ಲಾ ಕರೆನ್ಸಿ ಬಗ್ಗೆ ಲೆಕ್ಕಾಚಾರ, ವಹಿವಾಟು ಬಗ್ಗೆ ದಾಖಲೆಗಳು ಲಭ್ಯವಾದರೆ, ಬಿಟ್ ಕಾಯಿನ್ ವಹಿವಾಟಿನ ಬಗ್ಗೆ ಯಾವುದೇ ಕಾರಣಕ್ಕೂ ಹೊರ ಜಗತ್ತಿಗೆ ತಿಳಿಯುವುದಿಲ್ಲ. ಆ ನಿಗೂಢ ಜಗತ್ತಿನ ಒಳಹೊಕ್ಕವರಿಗೆ ಮಾತ್ರ ಯಾರಲ್ಲಿ ಎಷ್ಟು ಹಣ ಇದೆ, ಯಾರು ಎಷ್ಟು ಹೂಡಿಕೆ ಮಾಡಿದ್ದಾರೆ ಎನ್ನುವುದು ತಿಳಿಯುವುದು.
ಹೀಗಾಗಿ ಕಳೆದ ಎರಡು ವರ್ಷಗಳಲ್ಲಿ ಜಗತ್ತಿನಾದ್ಯಂತ ಹೈಲೆವೆಲ್ ಕಿಡ್ನಾಪರ್ಸ್, ಬಿಟ್ ಕಾಯಿನ್ ರೂಪದಲ್ಲಿ ಹಣ ನೀಡುವಂತೆ ಬೇಡಿಕೆ ಮುಂದಿಡುತ್ತಿದ್ದಾರೆ. ದಕ್ಷಿಣ ಅಮೆರಿಕ, ಕೆನಡಾ, ಥಾಯ್ಲೆಂಡ್, ಮಲೇಶ್ಯಾ, ಸೌತ್ ಆಫ್ರಿಕಾ, ಆಫ್ರಿಕದ ಕೆಲವು ರಾಷ್ಟ್ರಗಳು, ಚೀನಾ, ಸಿಂಗಾಪುರ, ಜಪಾನ್ ಹೀಗೆ ಬಹುತೇಕ ರಾಷ್ಟ್ರಗಳಲ್ಲಿ ಈ ಕರೆನ್ಸಿಯ ಜಾಲ ನಿಗೂಢವಾಗಿಯೇ ಚಲನೆಯಲ್ಲಿದ್ದು, ಭಾರತದಲ್ಲಿ ಇತ್ತೀಚಿನ ಐದಾರು ವರ್ಷಗಳಲ್ಲಿ ಚಾಲ್ತಿಗೆ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಎಂಎಫ್ ಮತ್ತು ವರ್ಲ್ಡ್ ಬ್ಯಾಂಕ್, ಈ ಕರೆನ್ಸಿಗೆ ಡಿಜಿಟಲ್ ರೂಪದಲ್ಲಿ ಮಾನ್ಯತೆ ನೀಡಿದ್ದು, ಅಪರಾಧಗಳ ಸಂದರ್ಭದಲ್ಲಿ ಪತ್ತೆ ಹಚ್ಚುವುದಕ್ಕಾಗಿ ಈ ಮಾನ್ಯತೆ ನೀಡಿದ್ದಾಗಿ ಹೇಳಿಕೊಂಡಿದೆ. ಆದರೆ, ಜಗತ್ತಿನ ಕೆಲವು ದೇಶಗಳು ಈ ಕರೆನ್ಸಿ ಹೂಡಿಕೆ ಬಗ್ಗೆ ನಿಯಮಗಳನ್ನು ಜಾರಿಗೆ ತಂದಿದ್ದರೆ, ಹೆಚ್ಚಿನ ರಾಷ್ಟ್ರಗಳು ಈ ಕರೆನ್ಸಿಯನ್ನು ನಿಷೇಧದ ಪಟ್ಟಿಗೆ ಸೇರಿಸಿವೆ.
ಕಿಡ್ನಾಪರ್ಸ್ ಡಿಮ್ಯಾಂಡ್ ಅದೊಂದೇ !
ಬಿಟ್ ಕಾಯಿನ್ ಕರೆನ್ಸಿಯ ಮೌಲ್ಯ ಸಿಕ್ಕಾಪಟ್ಟೆ ಏರಿದ ನಂತರ ವಿದೇಶದಲ್ಲಿ ಹೈಲೆವೆಲ್ ಕಿಡ್ನಾಪ್ ಸಂದರ್ಭ ಬಿಟ್ ಕಾಯಿನ್ ಬೇಡಿಕೆ ಒಂದೇ ಕೇಳಿಬರುತ್ತಿದೆ. ಎರಡು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಬಾಲಕನ ಅಪಹರಣ ನಡೆದಿತ್ತು. ಕ್ರಿಮಿನಲ್ ಗ್ಯಾಂಗ್ ಒಂದು ಅಪಹರಣದ ಬಳಿಕ 1.20 ಲಕ್ಷ ಡಾಲರ್ ಹಣವನ್ನು ಬಿಟ್ ಕಾಯಿನ್ ರೂಪದಲ್ಲಿ ನೀಡುವಂತೆ ಡಿಮ್ಯಾಂಡ್ ಮಾಡಿತ್ತು. ಪುಮಲಂಗಾ ಎನ್ನುವ ಪ್ರಾಂತ್ಯದ ವಿಟ್ ಬ್ಯಾಂಕ್ ಎನ್ನುವ ನಗರದಲ್ಲಿ ಸಂಜೆ ಹೊತ್ತಿಗೆ ಆಟವಾಡುತ್ತಿದ್ದ ಬಾಲಕನನ್ನು ಗ್ಯಾಂಗ್ ಅಪಹರಿಸಿತ್ತು. ಆಬಳಿಕ ಬಾಲಕನ ಹೆತ್ತವರಿಗೆ, ಅಪಹರಣಕಾರರು ತಮಗೆ 15 ಬಿಟ್ ಕಾಯಿನ್ ಗಳನ್ನು ಡಿಪಾಸಿಟ್ ಮಾಡುವಂತೆ ಬೇಡಿಕೆ ಇಟ್ಟಿದ್ದರು.
ಯುಕ್ರೇನಲ್ಲಿ ಬ್ರಿಟನ್ ಪ್ರಜೆಯ ಅಪಹರಣ
ಆದರೆ, ಬಾಲಕನ ಕುಟುಂಬಕ್ಕೆ ಬಿಟ್ ಕಾಯಿನ್ ಅಂದ್ರೆ ಏನೆಂದೇ ಗೊತ್ತಿರಲಿಲ್ಲ. ನಾವು ಅಂಥ ವಹಿವಾಟು ಹೊಂದಿಲ್ಲ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದರು. 2018ರ ಮೇ ತಿಂಗಳಲ್ಲಿ ಈ ಘಟನೆ ನಡೆದಿತ್ತು. ಅಲ್ಲಿನ ಪೊಲೀಸರ ಪ್ರಕಾರ, ಬಿಟ್ ಕಾಯಿನ್ ಬೇಡಿಕೆ ಇಟ್ಟು ಅಪಹರಣ ನಡೆದಿದ್ದು ಅದೇ ಮೊದಲಂತೆ. ಆನಂತರ ದಕ್ಷಿಣ ಆಫ್ರಿಕಾದಲ್ಲಿ ಬಿಟ್ ಕಾಯಿನ್ ಬೇಡಿಕೆ ಇಟ್ಟು ಅಪಹರಣ ಪ್ರಕರಣಗಳು ಹೆಚ್ಚಿದ್ದವು. ಈ ನಡುವೆ, ಯುಕ್ರೇನ್ ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ಎಕ್ಸ್ ಚೇಂಜ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟನ್ ಮೂಲದ ಪ್ರಜೆಯನ್ನು ಅಪಹರಿಸಲಾಗಿತ್ತು. ಆ ಸಂದರ್ಭದಲ್ಲಿ ಒಂದು ಲಕ್ಷ ಡಾಲರ್ ಹಣವನ್ನು ಬಿಟ್ ಕಾಯಿನ್ ರೂಪದಲ್ಲಿ ನೀಡುವಂತೆ ಡಿಮ್ಯಾಂಡ್ ಇಟ್ಟಿದ್ದರು. ಕೊನೆಗೆ, ಅಪಹೃತನ ಬಿಡುಗಡೆಗಾಗಿ ಒಂದು ಲಕ್ಷ ಡಾಲರ್ ಹಣವನ್ನು ಕಿಡ್ನಾಪರ್ಸ್ ಗಳಿಗೆ ನೀಡಲಾಗಿತ್ತು ಎಂದು ರಾಯಿಟರ್ಸ್ ಆನ್ ಲೈನ್ ಪತ್ರಿಕೆ ವರದಿ ಮಾಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಟ್ ಕಾಯಿನ್ ಬೇಡಿಕೆ ಹೆಚ್ಚಿದಂತೆ ವರ್ಷದಿಂದ ವರ್ಷಕ್ಕೆ ಬಿಟ್ ಕಾಯಿನ್ ಮೌಲ್ಯ ಹೆಚ್ಚುವುದರಿಂದ ಕೂಡಿಟ್ಟ ಹಣದ ಮೌಲ್ಯವೂ ಹೆಚ್ಚುತ್ತದೆ. ಆದರೆ, ಭಾರತದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಟ್ ಕಾಯಿನ್ ಚಲಾವಣೆಗೆ ನಿಷೇಧ ಹಾಕಿದೆ. ಅದರಲ್ಲಿ ಹಣ ಹೂಡಿಕೆ ಮಾಡುವುದು, ಚಲಾವಣೆ ಮಾಡುವುದಕ್ಕೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಆರ್ ಬಿಐ ಮಾನ್ಯತೆ ನೀಡದ ಕಾರಣ ಸೆಂಟ್ರಲ್ ಬ್ಯಾಂಕ್ ಸೇರಿ ಪ್ರಮುಖ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಬಿಟ್ ಕಾಯಿನ್ ಬಗ್ಗೆ ಎಚ್ಚರ ಇರುವಂತೆ ಸೂಚನೆ ನೀಡಿವೆ. ಹಾಗಿದ್ದರೂ, ಭಾರತದಲ್ಲಿ ನಿಧಾನವಾಗೇ ಬಿಟ್ ಕಾಯಿನ್ ಜನಪ್ರಿಯ ಆಗುತ್ತಿದೆ.
ಉದ್ಯಮಿಯನ್ನು ಅಪಹರಿಸಿದ್ದ ಪೊಲೀಸರು !
ಎರಡು ವರ್ಷಗಳ ಹಿಂದೆ ಗುಜರಾತಿನಲ್ಲಿ ಉದ್ಯಮಿ ಒಬ್ಬರನ್ನು ಅಪಹರಿಸಲಾಗಿತ್ತು. ಅಪಹರಿಸಿದ ತಂಡ, ನಿಗೂಢ ಜಾಗಕ್ಕೆ ಕೊಂಡೊಯ್ದು 200 ಬಿಟ್ ಕಾಯಿನ್ ಗಳನ್ನು ಡಿಜಿಟಲ್ ವ್ಯಾಲೆಟ್ ಖಾತೆಗೆ ವರ್ಗಾಯಿಸಲು ಡಿಮ್ಯಾಂಡ್ ಇಟ್ಟಿತ್ತು. 2018ರಲ್ಲಿ ಒಂದು ಬಿಟ್ ಕಾಯಿನ್ ದರ ಭಾರತದಲ್ಲಿ 4.32 ಲಕ್ಷ ಇತ್ತು. 200 ಬಿಟ್ ಕಾಯಿನ್ ಅಂದರೆ ಸುಮಾರು 9 ಕೋಟಿ ರೂ. ಮೊತ್ತವನ್ನು ಕೊನೆಗೆ ಗತಿ ಕಾಣದೆ ಉದ್ಯಮಿ ವರ್ಗಾವಣೆ ಮಾಡಿದ್ದರು. ಹಣ ವರ್ಗಾವಣೆಯ ಬಳಿಕ ಬಿಡುಗಡೆಯಾಗಿ ಬಂದಿದ್ದ ಉದ್ಯಮಿ, ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣದ ಬೆನ್ನತ್ತಿದಾಗ, 9 ಮಂದಿ ಪೊಲೀಸ್ ಅಧಿಕಾರಿಗಳೇ ಸಿಕ್ಕಿಬಿದ್ದಿದ್ದರು. ಕೊನೆಗೆ ವಿಚಾರಣೆ ನಡೆಸಿದಾಗ, ಉದ್ಯಮಿಯನ್ನು ಅಪಹರಿಸಿದ ಪ್ರಕರಣದಲ್ಲಿ ಪೊಲೀಸರೇ ರೂವಾರಿಗಳಾಗಿದ್ದರು ಅನ್ನುವ ವಿಚಾರ ಬೆಳಕಿಗೆ ಬಂದಿತ್ತು.
ಬಿಟ್ ಕಾಯಿನ್ ಬಗ್ಗೆ ಖಚಿತ ವ್ಯಾಖ್ಯಾನ, ಕಾಯ್ದೆ ಇರದ ಕಾರಣ ಇಂಥ ಪ್ರಕರಣಗಳನ್ನು ಪತ್ತೆ ಹಚ್ಚುವುದು ಕೂಡ ಅಷ್ಟೇ ಕಠಿಣ, ಡಿಜಿಟಲ್ ವಾಲೆಟ್ ನಲ್ಲಿ ಹಣ ವರ್ಗಾವಣೆ ಮಾಡಿದರೂ, ಅವನ್ನು ನಮ್ಮ ಏಜೆನ್ಸಿಗಳು ಪತ್ತೆ ಮಾಡಲು ಸಾಧ್ಯವಾಗದು. ಹೀಗಾಗಿ ಅದಕ್ಕೆ ಟ್ಯಾಕ್ಸು, ಜಿಎಸ್ಟಿ, ಬಿಡಿಕಾಸು ಯಾವುದೂ ಲಗಾವು ಆಗೋದು ಇಲ್ಲ. ಹೀಗಾಗಿ, ನಮ್ಮ ಪೊಲೀಸರು ಅಷ್ಟೂ ಕಷ್ಟಪಟ್ಟರೆ ಅಪಹರಣಕಾರರನ್ನು ಹಿಡೀಬಹುದು ವಿನಾ ಹಣದ ಮೂಲವನ್ನು ಹಿಡಿಯೋಕಾಗಲ್ಲ.
What is Bitcoin, why kidnappers are demanding for bitcoin as ransom in kidnapping an eight-year-old boy from Ujre, Mangalore on the evening of Thursday, December 17 by three to four people, who arrived in white Indica car.
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 02:44 pm
Mangalore Correspondent
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
Naxal Vikram Gowda, Murdeshwar, Mangalore: ಪೊ...
24-11-24 03:21 pm
Mangalore, Someshwara Suicide; ಸೋಮೇಶ್ವರ ರುದ್ರ...
24-11-24 01:18 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm