ಸಿದ್ದರಾಮಯ್ಯ ಉತ್ತರಾಧಿಕಾರಿ ; ಯತೀಂದ್ರ ಹಚ್ಚಿದ ಕಿಡಿಗೆ ಕಾಂಗ್ರೆಸ್ ಒಳಗಡೆ ಬಿರುಗಾಳಿ, ಜಾರಕಿಹೊಳಿ ಒಪ್ಪದ ಪರಮೇಶ್ವರ್, ಮಹದೇವಪ್ಪ, ಡಿಕೆಶಿ ಮಹಾಮೌನ ! ನವೆಂಬರ್ ಕದನಕ್ಕೆ ಮುನ್ನುಡಿ

24-10-25 09:58 pm       Giridhar Shetty, ಗಿರಿಧರ್ ಶೆಟ್ಟಿ   ನ್ಯೂಸ್ View

ಬೆಳಗಾವಿ ಸಾಹುಕಾರ್ ಸತೀಶ್ ಜಾರಕಿಹೊಳಿ ಸಿಎಂ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎನ್ನುವ ರೀತಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಕಾಂಗ್ರೆಸ್ ಒಳಗಡೆ ಬಿರುಗಾಳಿ ಎಬ್ಬಿಸಿದೆ. ದಲಿತ ಸಮುದಾಯದ ಡಾ.ಜಿ.ಪರಮೇಶ್ವರ್, ಮಹದೇವಪ್ಪ ಅವರು ಸತೀಶ್ ಜಾರಕಿಹೊಳಿ ಮುಂದಿನ ಉತ್ತರಾಧಿಕಾರಿ ಎಂಬ ಮಾತನ್ನು ಒಪ್ಪಿದಂತಿಲ್ಲ.

ಬೆಂಗಳೂರು, ಅ.24 : ಬೆಳಗಾವಿ ಸಾಹುಕಾರ್ ಸತೀಶ್ ಜಾರಕಿಹೊಳಿ ಸಿಎಂ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎನ್ನುವ ರೀತಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಕಾಂಗ್ರೆಸ್ ಒಳಗಡೆ ಬಿರುಗಾಳಿ ಎಬ್ಬಿಸಿದೆ. ದಲಿತ ಸಮುದಾಯದ ಡಾ.ಜಿ.ಪರಮೇಶ್ವರ್, ಮಹದೇವಪ್ಪ ಅವರು ಸತೀಶ್ ಜಾರಕಿಹೊಳಿ ಮುಂದಿನ ಉತ್ತರಾಧಿಕಾರಿ ಎಂಬ ಮಾತನ್ನು ಒಪ್ಪಿದಂತಿಲ್ಲ. ಸತೀಶ್ ಮುಂದಿನ ನಾಯಕ ಎನ್ನುವ ರೀತಿ ಅರ್ಥ ಮಾಡ್ಕೊಳ್ಳಬಾರದು ಎಂದು ಈ ಇಬ್ಬರೂ ನಾಯಕರು ಮಾತನಾಡಿದ್ದು ಬೇರಯದ್ದೇ ಅರ್ಥ ಹೊರಳಿಸಿದೆ.

ಬೆಳಗಾವಿ ಜಿಲ್ಲೆಯ ರಾಯಭಾಗಕ್ಕೆ ತೆರಳಿದ್ದ ಯತೀಂದ್ರ ಸಿದ್ದರಾಮಯ್ಯ ದಿಢೀರ್ ಎನ್ನುವಂತೆ ಸತೀಶ್ ಜಾರಕಿಹೊಳಿ ಪರವಾಗಿ ಹೇಳಿಕೆ ನೀಡಿರುವುದನ್ನು ಹಲವು ನಾಯಕರು ಅರಗಿಸಿಕೊಳ್ಳುತ್ತಿಲ್ಲ. ಸತೀಶ್ ವಾಲ್ಮೀಕಿ ಸಮುದಾಯದ ಹಿರಿಯ ನಾಯಕನೇ ಆಗಿದ್ದರೂ, ಉತ್ತರ ಕರ್ನಾಟಕಕ್ಕೆ ಸೀಮಿತರಾದವರು ಎನ್ನುವ ಭಾವನೆ ದಕ್ಷಿಣ ಭಾಗದ ಪಕ್ಷದ ನಾಯಕರಲ್ಲಿದೆ. ಹಾಗೆ ನೋಡಿದರೆ ಡಾ.ಜಿ.ಪರಮೇಶ್ವರ್ ಆರು ಬಾರಿ ಸಚಿವರಾಗಿ, ಎರಡು ಬಾರಿ ಗೃಹ ಸಚಿವರಾಗಿ, ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಸಿಎಂ ಹುದ್ದೆಯ ಸ್ಥಾನಕ್ಕೆ ಪರಮೇಶ್ವರ್ ಅವರಿಗಿಂತ ಅರ್ಹತೆ ಇರುವವರು ಮತ್ತೊಬ್ಬರಿಲ್ಲ.

ED raids: Karnataka Home Minister Parameshwara meets CM Siddaramaiah

ಆದರೆ ಸಿದ್ದರಾಮಯ್ಯ ಅವರ ಅಹಿಂದ ಬಳಗದಲ್ಲಿ ಪರಮೇಶ್ವರ್ ಕಾಣಿಸಿಕೊಂಡವರಲ್ಲ. ಮೂಲ ಕಾಂಗ್ರೆಸಿಗರೇ ಆದರೂ ತನ್ನದೇ ಆದ ಸೌಮ್ಯ, ಮೃದು ಸ್ವಭಾವದ ವ್ಯಕ್ತಿತ್ವ ರೂಪಿಸಿಕೊಂಡವರು. ಸಿಎಂ ಹುದ್ದೆ ಸಿಗುತ್ತೆ ಎನ್ನುವುದಾದರೆ ಬೇಡ ಎನ್ನುವಷ್ಟು ಧಾರಾಳಿಯಂತೂ ಅಲ್ಲವೇ ಅಲ್ಲ. ಈ ಕಡೆ ಸಿದ್ದರಾಮಯ್ಯ ಅವರ ನೆರಳಿನಂತೆ ಇರುವ ಮಹದೇವಪ್ಪ ಮೈಸೂರು ಭಾಗದ ಪ್ರಭಾವಿ ದಲಿತ ನಾಯಕರು. ಜೆಡಿಎಸ್ ಕಡೆಯಿಂದ ಸಿದ್ದರಾಮಯ್ಯ ಕಾಂಗ್ರೆಸಿನತ್ತ ಹೊರಳಿದಾಗ ಜೊತೆಗೆ ಬಂದಿದ್ದವರು ಮಹದೇವಪ್ಪ. ಅಹಿಂದ ವರ್ಗದಲ್ಲಿ ಗುರುತಿಸಲ್ಪಟ್ಟ ನಾಯಕರು. ಆದರೆ ಎಷ್ಟೇ ಸಿದ್ದರಾಮಯ್ಯ ಅವರ ಪಡಿಯಚ್ಚು ಎನಿಸಿಕೊಂಡರೂ ಅವರಿಗೆ ಮೈಸೂರು ಬಿಟ್ಟರೆ ಬೇರೆ ಕಡೆ ಪ್ರಭಾವ ಇಲ್ಲ. ಇದೇ ಕಾರಣಕ್ಕೋ ಏನೋ ಮೈಸೂರಿನವರೇ ಆದ ಯತೀಂದ್ರ ಸಿದ್ದರಾಮಯ್ಯ ಅಹಿಂದವನ್ನು ಸಿದ್ದರಾಮಯ್ಯ ಅವರ ಪಟ್ಟ ಶಿಷ್ಯನಂತಿರುವ ಸತೀಶ್ ಜಾರಕಿಹೊಳಿಯವರೇ ಲೀಡ್ ಮಾಡಬೇಕು ಎಂದಿದ್ದಾರೆ.

Yathindra's comments about his CM father spark speculation

India can't be prosperous if people don't understand its Constitution:  Karnataka Minister Mahadevappa

ಯತೀಂದ್ರ ಮಾತಿನ ಬಗ್ಗೆ ಕೇಳಿದ ಪ್ರಶ್ನೆಗೆ, ಯಾರು ಏನೇ ಹೇಳಲಿ ಹೈಕಮಾಂಡ್ ಏನಾದ್ರೂ ಈ ಮಾತು ಹೇಳಿದ್ಯಾ ಎಂದು ಮಹದೇವಪ್ಪ ಮರು ಪ್ರಶ್ನೆ ಹಾಕಿದ್ದಾರೆ. ಆಮೂಲಕ ತನ್ನದೇ ಓರಗೆಯ ಸತೀಶ್ ಜಾರಕಿಹೊಳಿ ಸಿಎಂ ಆಗುವುದಕ್ಕೆ ತಮ್ಮ ಒಪ್ಪಿಗೆ ಇಲ್ಲ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ. ಪರಮೇಶ್ವರ್ ಎಂದಿನ ಧಾಟಿಯಲ್ಲೇ ಉತ್ತರಾಧಿಕಾರಿ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಇದೇನಿದ್ದರೂ ಸಿದ್ದರಾಮಯ್ಯ ಉತ್ತರಾಧಿಕಾರಿ ಯಾರು ಎನ್ನುವ ವಿಚಾರ ಮಾತ್ರ ಕಾಂಗ್ರೆಸಿನ ಒಳಗಡೆ ತೀವ್ರ ಚರ್ಚೆಗೀಡಾಗಿದೆ.

ಇದೇ ವೇಳೆ, ನವೆಂಬರ್ 15ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿ ತೆರಳಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ನವೆಂಬರ್ ಮಧ್ಯದಲ್ಲಿ ಸರಕಾರಕ್ಕೆ ಎರಡೂವರೆ ವರ್ಷ ಪೂರ್ತಿಯಾಗುವುದರಿಂದ ಸಿಎಂ ಸ್ಥಾನ ಬಿಟ್ಟು ಕೊಡಲು ಸಿದ್ದರಾಮಯ್ಯ ತಯಾರಾಗಿದ್ದಾರೆಯೇ ಎನ್ನುವ ಕುತೂಹಲ ಎದ್ದಿದೆ. ಇದರ ನಡುವೆಯೇ ಪುತ್ರ ಯತೀಂದ್ರ ಹಾಕಿರುವ ಉತ್ತರಾಧಿಕಾರಿ ಬಾಂಬ್ ನವೆಂಬರ್ ಕ್ರಾಂತಿಯ ಕಿಡಿ ಹಚ್ಚಿದೆ. ಇದೇ ವೇಳೆ, ಸಿದ್ದರಾಮಯ್ಯ ಅವರ ಬಲಗೈ ಅಂತಿರುವ ಕೆ.ರಾಜಣ್ಣ ಮಾತ್ರ, ಸತೀಶ್ ಜಾರಕಿಹೊಳಿ ಸಿಎಂ ಯಾಕಾಗಬಾರದು ಎನ್ನುವ ಮೂಲಕ ಯತೀಂದ್ರ ಮಾತಿಗೆ ಸಹಮತ ತೋರಿದ್ದಾರೆ. ಇತ್ತ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಮಾತ್ರ ಮೌನವಾಗಿಯೇ ಇದ್ದಾರೆ.

Want no support: Shivakumar's big directive to legislators amid CM seat  'tussle' | Latest News India

Statement by Congress President, Shri Mallikarjun Kharge on Constitution  Day on November 26, 2022

Priyank Kharge reiterates 'RSS ban' warning, says 'will show power of…' |  Mint

ಇವೆಲ್ಲದರ ಮಧ್ಯೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ ಮಾತ್ರ ಎಲ್ಲವೂ ನಿರ್ಧಾರ ಆಗೋದು ಮೇಲೆ ಮಾತ್ರ ಎಂದು ಹೈಕಮಾಂಡಿನತ್ತ ಕೈತೋರಿದ್ದಾರೆ. ಹೀಗಾಗಿ ನವೆಂಬರ್ ನಲ್ಲಿ ಕಾಂಗ್ರೆಸ್ ಸರ್ಕಾರದೊಳಗಡೆ ಕ್ಲೈಮ್ಯಾಕ್ಸ್ ಆಗೋದು ಪಕ್ಕಾ ಎನ್ನುವ ಸುಳಿವು ನೀಡಿದ್ದಾರೆ.

A political storm has erupted within the Karnataka Congress after Chief Minister Siddaramaiah’s son, Dr. Yathindra Siddaramaiah, publicly stated that Satish Jarkiholi would be a suitable successor to his father. The remark has sparked discontent among senior Dalit leaders Dr. G. Parameshwara and Minister V. Mahadevappa, both of whom have expressed their disagreement.