ಬ್ರೇಕಿಂಗ್ ನ್ಯೂಸ್
26-03-21 08:53 pm Headline Karnataka News Network ನ್ಯೂಸ್ View
ಬೆಂಗಳೂರು, ಮಾ.26: ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಕೊನೆಕ್ಷಣದಲ್ಲಿ ದಿವಂಗತ ಸುರೇಶ್ ಅಂಗಡಿಯವರ ಪತ್ನಿಗೆ ಬಿಜೆಪಿ ಟಿಕೆಟ್ ನೀಡಿರುವುದು ಬಿಜೆಪಿ ವಲಯದಲ್ಲೇ ಚರ್ಚೆಗೆ ಕಾರಣವಾಗಿದೆ. ಕಳೆದ ಬಾರಿ ಮಾಜಿ ಸಚಿವ ಅನಂತ ಕುಮಾರ್ ನಿಧನರಾದ ಬಳಿಕ ಅವರ ಪತ್ನಿ ತೇಜಸ್ವಿನಿಗೆ ಟಿಕೆಟ್ ನೀಡಬೇಕೆಂದು ಆಗ್ರಹ ಕೇಳಿಬಂದಾಗ ಅಡ್ಡ ಬಂದಿದ್ದ ಡಿಎನ್ಎ ಈಗ ಅಡ್ಡ ಬಂದಿಲ್ಲವೇ ಎಂದು ಜಾಲತಾಣದಲ್ಲಿ ಟೀಕೆ ಕೇಳಿಬಂದಿದೆ.
ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಾಜಿ ಸಚಿವ ಅನಂತ ಕುಮಾರ್ ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅನಂತ ಕುಮಾರ್ ಪತ್ನಿ ಸಾಮಾಜಿಕ ಕಾರ್ಯಕರ್ತೆಯಾಗಿರುವ ತೇಜಸ್ವಿನಿಯವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹ ಕೇಳಿಬಂದಿತ್ತು. ಆ ಸಂದರ್ಭದಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಿ.ಎಲ್. ಸಂತೋಷ್, ಬಿಜೆಪಿಯಲ್ಲಿ ಡಿಎನ್ಎ ನೋಡಿ ಟಿಕೆಟ್ ಕೊಡುವ ಪರಿಪಾಠ ಇಲ್ಲ ಎಂದು ಹೇಳಿಕೆ ನೀಡಿದ್ದು ಸುದ್ದಿಗೆ ಗ್ರಾಸವಾಗಿತ್ತು. ಬಳಿಕ ಅದೇ ಕ್ಷೇತ್ರದಲ್ಲಿ ಯುವಮೋರ್ಚಾದಲ್ಲಿ ಗುರುತಿಸಿಕೊಂಡಿದ್ದ ಯುವ ನಾಯಕ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಲಾಗಿತ್ತು. ಬೆಂಗಳೂರಿನ ಶಾಸಕ ರವಿ ಸುಬ್ರಹ್ಮಣ್ಯ ಅವರ ಹತ್ತಿರದ ಸಂಬಂಧಿಕನಾಗಿರುವ ತೇಜಸ್ವಿ ಸೂರ್ಯ, ಬಿ.ಎಲ್ ಸಂತೋಷ್ ಮೂಲಕ ಟಿಕೆಟ್ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದರು.
ಈ ಬಾರಿ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಅಲ್ಲಿ ಸಂಸದರಾಗಿದ್ದ ಮಾಜಿ ಸಚಿವ ಸುರೇಶ್ ಅಂಗಡಿ ನಿಧನರಾದ ಕಾರಣ ಉಪ ಚುನಾವಣೆ ನಡೆಯುತ್ತಿದೆ. ಐದು ಬಾರಿ ಗೆದ್ದಿರುವ ಸುರೇಶ್ ಅಂಗಡಿಯಿಂದಾಗಿ ಬೆಳಗಾವಿ ಲೋಕಸಭೆ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಅಂತಲೇ ಹೆಸರಾಗಿರುವ ಪ್ರದೇಶ. ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಹೇಗೂ ಗೆಲ್ಲುತ್ತದೆ ಎಂಬ ಭರವಸೆಯಿಂದ ಈ ಬಾರಿ 30ಕ್ಕೂ ಹೆಚ್ಚು ಮಂದಿ ಟಿಕೆಟ್ ಬಯಸಿದ್ದರು. ಕಳೆದ ಬಾರಿ ಡಿಎನ್ಎ ಆಧರಿಸಿ, ಟಿಕೆಟ್ ನೀಡಲ್ಲ ಎಂದು ಹೇಳಿಕೆ ನೀಡಿದ್ದರಿಂದ ಸಹಜವಾಗೇ ಸುರೇಶ್ ಅಂಗಡಿ ಕುಟುಂಬಕ್ಕೆ ಹೊರತಾದವರಿಗೆ ಟಿಕೆಟ್ ಸಿಗಲಿದೆ ಎನ್ನುವ ಆಶಾಭಾವನೆ ನಾಯಕರು ಮತ್ತು ಕಾರ್ಯಕರ್ತರಲ್ಲಿ ಇತ್ತು.
ಕೇಂದ್ರ ನಾಯಕರಿಗೆ ಪತ್ರ ಬರೆದಿದ್ದ ಮುತಾಲಿಕ್
ಈ ನಡುವೆ, ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಕೂಡ ಬಿಜೆಪಿಯಿಂದ ಟಿಕೆಟ್ ಬಯಸಿ, ಕೇಂದ್ರ ನಾಯಕರಿಗೆ ಪತ್ರ ಬರೆದಿದ್ದರು. ಬಹಿರಂಗವಾಗೇ ತನಗೆ ಈ ಬಾರಿ ಟಿಕೆಟ್ ಕೊಡಿ. 40 ವರ್ಷಗಳ ಕಾಲ ಹಿಂದುತ್ವ, ಸಂಘಟನೆಗಾಗಿ ದುಡಿದಿದ್ದೇನೆ, ಹಿಂದೆಯೂ ಮೋದಿ ಪರವಾಗಿ ಮತ ಕೇಳಿದ್ದೆ. ಮೋದಿಯ ಪ್ರಬಲ ಸಮರ್ಥಕ ಎಂದು ಹೇಳಿಕೆ ನೀಡಿದ್ದರು. ಖಟ್ಟರ್ ಹಿಂದುತ್ವವಾದಿಯಾಗಿರುವ ಮುತಾಲಿಕ್, ಬೆಳಗಾವಿ ಮೂಲದವರೇ ಆಗಿದ್ದು ರಾಜ್ಯದಾದ್ಯಂತ ತನ್ನದೇ ಆದ ಪ್ರಖರ ವರ್ಚಸ್ಸು ಬೆಳೆಸಿಕೊಂಡವರು. ಇದರ ಜೊತೆಗೆ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರ ಬಗ್ಗೆ ಟೀಕೆ ಮಾಡುತ್ತಲೇ ತಾನೊಬ್ಬ ನೈಜ ಖಟ್ಟರ್ ವಾದಿ ಎಂದು ತೋರಿಸಿಕೊಂಡೇ ಬಂದಿದ್ದಾರೆ. ಇದೇ ಕಾರಣಕ್ಕೆ ಆರೆಸ್ಸೆಸ್ ಅವರನ್ನು ತಮ್ಮ ಪರಿವಾರದ ಸಂಘಟನೆಯಿಂದ ದೂರ ಇರಿಸಿತ್ತು. ಅದೇ ಸಿಟ್ಟಿನಲ್ಲಿ ಮುತಾಲಿಕ್ ಶ್ರೀರಾಮ ಸೇನೆಯನ್ನು ಕಟ್ಟಿದ್ದು ಹಳೇ ವಿಚಾರ.
ಶ್ರೀರಾಮ ಸೇನೆ ಹೆಚ್ಚು ಬಲವಾಗಿರುವ ಬೆಳಗಾವಿಯಲ್ಲಿ ಮುತಾಲಿಕ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಬೇಕೆಂಬ ಆಗ್ರಹವೂ ಅದರ ಕಾರ್ಯಕರ್ತರಿಂದ ವ್ಯಕ್ತವಾಗಿತ್ತು. ಇಡೀ ಜೀವನವನ್ನೇ ಹಿಂದುತ್ವ, ಸಮಾಜಕ್ಕಾಗಿ ಮುಡಿಪಾಗಿಟ್ಟಿರುವ ಮುತಾಲಿಕ್ ಅವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹವನ್ನೂ ಮಾಡಿದ್ದರು. ಆದರೆ, ರಾಜ್ಯ ಬಿಜೆಪಿ ನಾಯಕರು ಮಾತ್ರ ಮುತಾಲಿಕ್ ಮಾತನ್ನು ಕಡೆಗಣಿಸಿದ್ದರು. ಆರೆಸ್ಸೆಸ್ ನಿಂದ ದೂರವಾದ ಯಾರಿಗೂ ಬಿಜೆಪಿ ಮನ್ನಣೆ ನೀಡಿದ ಉದಾಹರಣೆಯೂ ಇಲ್ಲ. ಹೀಗಿದ್ದರೂ, ಒಂದೆಡೆ ಸುರೇಶ್ ಅಂಗಡಿಯವರ ಕುಟುಂಬಸ್ಥರಿಗೆ ಪತ್ನಿ ಅಥವಾ ಪುತ್ರಿಗೆ ಟಿಕೆಟ್ ನೀಡಬೇಕೆಂಬ ಆಗ್ರಹ ಇತ್ತಾದರೂ, ಕೊನೆಕ್ಷಣದ ವರೆಗೂ ಬಿಜೆಪಿ ಹೈಕಮಾಂಡ್ ಈ ಬಗ್ಗೆ ಸುಳಿವು ನೀಡದೆ ಉಳಿದಿದ್ದು ಕುತೂಹಲ ಸೃಷ್ಟಿಸಿತ್ತು. ಇದೇ ಕಾರಣಕ್ಕೆ ಬಿಜೆಪಿಯ ಅಭ್ಯರ್ಥಿ ಅಂಗಡಿ ಕುಟುಂಬದ ಹೊರತಾದವರು ಆಗಲಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು. ಹಲವರು ದೆಹಲಿ ಮಟ್ಟದಲ್ಲಿ ಲಾಬಿಯನ್ನೂ ನಡೆಸಿದ್ದರು.
ಆದರೆ, ಅತ್ತ ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಪ್ರಭಾವಿ ಮುಖಂಡ ಸತೀಶ್ ಜಾರಕಿಹೊಳಿ ಹೆಸರನ್ನು ಪ್ರಕಟಿಸುತ್ತಿದ್ದಂತೆ, ಮತ್ತೆ ಅನುಕಂಪದ ಅಲೆಗೆ ಬಿಜೆಪಿ ಜೋತು ಬಿದ್ದಿದೆ. ಅಭ್ಯರ್ಥಿ ಬದಲಾಯಿಸುವ ಗೋಜಿಗೆ ಹೋಗದೆ, ಮತ್ತೆ ಡಿಎನ್ಎ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಬೆಳಗಾವಿಯಲ್ಲಿ ಅತಿ ಪ್ರಬಲರಾಗಿರುವ ಲಿಂಗಾಯತ ಸಮುದಾಯದ ಓಲೈಕೆಗೆ ಮುಂದಾಗಿದೆ. 20 ಲಕ್ಷಕ್ಕೂ ಹೆಚ್ಚು ಮತದಾರರಿರುವ ಬೆಳಗಾವಿಯಲ್ಲಿ ಏಳರಿಂದ ಎಂಟು ಲಕ್ಷ ಲಿಂಗಾಯತ ಮತದಾರರಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸೀಡಿ ರಾಡಿಯಿಂದಾಗಿ ಆಡಳಿತ ವಿರೋಧಿ ಅಲೆ ಇದ್ದರೂ, ಲಿಂಗಾಯತರು ಕೈಬಿಡಲ್ಲ ಎಂಬ ನೆಲೆಯಲ್ಲಿ ಸುರೇಶ್ ಅಂಗಡಿಯ ಪತ್ನಿ ಮಂಗಳಾ ಅವರನ್ನೇ ಕಣಕ್ಕಿಳಿಸಿ ಬಿಜೆಪಿ ಕೈತೊಳೆದುಕೊಂಡು ಬಿಟ್ಟಿದೆ.
ಆದರೆ, ಇದರಿಂದ ಟಿಕೆಟ್ ಬಯಸಿದ್ದ ಡಜನ್ ಗಟ್ಟಲೆ ಬಿಜೆಪಿ ನಾಯಕರು ಮತ್ತು ಶ್ರೀರಾಮ ಸೇನೆ ಕಾರ್ಯಕರ್ತರಿಗೆ ತುಂಬ ನಿರಾಸೆಯಾಗಿದೆ. ಆಯಾ ನಾಯಕರ ಹಿಂಬಾಲಕರು ಮತ್ತು ಮುತಾಲಿಕ್ ಅಭಿಮಾನಿಗಳಾಗಿರುವ ಹಿಂದು ಸಂಘಟನೆಗಳ ಕಾರ್ಯಕರ್ತರು ಈಗ ಬಿಜೆಪಿ ಡಿಎನ್ಎ ಆಧರಿಸಿ ಟಿಕೆಟ್ ನೀಡಿರುವುದಕ್ಕೆ ಭಾರೀ ಟೀಕೆ ಮಾಡಿದ್ದಾರೆ.
In a surprise pick, Mangala Suresh, wife of late former Minister of State for Railways Suresh Angadi, was given a party ticket at the Belgaum Lok Sabha segment.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm