ಬ್ರೇಕಿಂಗ್ ನ್ಯೂಸ್
17-09-20 02:01 pm Headline Karnataka News Network ನ್ಯೂಸ್ View
ಬೆಂಗಳೂರು, ಸೆಪ್ಟಂಬರ್ 17: ಈ ರಮೇಶ್ ಜಾರಕಿಹೊಳಿ ಗೊತ್ತಲ್ಲ.. ಕುಮಾರಸ್ವಾಮಿ ಸರಕಾರವನ್ನು ತನ್ನ ಕಿರು ಬೆರಳಿನಲ್ಲೇ ಬುಗುರಿಯಂತೆ ತಿರುಗಿಸಿ ಮೂಲೆಗೆ ತಳ್ಳಿದ ಬೆಳಗಾವಿ ಬ್ರದರ್..! ಕುಮಾರಣ್ಣ ಸರಕಾರವನ್ನು ಹಿಂಬಾಗಿಲಿಂದ ಹುಳಿ ಹಿಂಡಿಯೇ ಪತನಗೊಳಿಸಿದ್ದಕ್ಕಾಗಿ ಜಾರಕಿ 'ಹುಳಿ' ಅಂತ್ಲೇ ಮಾಧ್ಯಮದಲ್ಲಿ ಹೆಸರಾದವರು. ಎಷ್ಟಾದ್ರೂ ಈ ಬೆಳಗಾವಿ ರಾಜಕಾರಣಿ ಹಾಗೇ ಕುಂತ್ಕೊಳ್ಳೋ ಮನುಷ್ಯ ಅಲ್ಲ.. ಯಾರಿಗಾದ್ರೂ ಹುಳಿ ಹಿಂಡೋದೇ ಜಾಯಮಾನ ಅನ್ನೋದು ಅವ್ರ ರಾಜಕೀಯ ನಡೆಗಳಿಂದಲೇ ತೋರಿಸಿಕೊಟ್ಟಿದ್ದಾರೆ. ಈಗ ಈ ಜಾರಕಿಹೊಳಿಯನ್ನು ಹಿಡಿದು ಬಿಜೆಪಿ ಹೈಕಮಾಂಡ್ ಮಹಾರಾಷ್ಟ್ರದಲ್ಲಿ ಹಕೀಮತ್ ಮಾಡೋಕೆ ಕಳಿಸ್ತಿದ್ಯಾ ಅನ್ನೋ ಅನುಮಾನ ಕೇಳಿಬಂದಿದೆ. ಇದ್ಕೆ ಕಾರಣ ಆಗಿರೋದು ಜಾರಕಿಹೊಳಿ ದೆಹಲಿಯಲ್ಲಿ ಬಿಜೆಪಿಯ ಮಾಜಿ ಸಿಎಂ ಫಡ್ನವೀಸ್ ಭೇಟಿ ಮಾಡಿದ್ದು.
ಮಹಾರಾಷ್ಟ್ರದಲ್ಲಿ ಬಿಜೆಪಿಯ ಮೈತ್ರಿಯನ್ನು ಕಡಿದುಕೊಂಡು ಕಾಂಗ್ರೆಸ್, ಎನ್ ಸಿಪಿ ಜೊತೆಯಾಗಿ ಅಧಿಕಾರ ನಡೆಸ್ತಿರೋ ಶಿವಸೇನೆ ಸರಕಾರಕ್ಕೆ ಜಾರಕಿಹೊಳಿ ಹುಳಿ ಹಿಂಡಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಬೆಳಗಾವಿಯಲ್ಲಿ ಪ್ರಭಾವಿಯಾಗಿರುವ ಜಾರಕಿಹೊಳಿ ಬ್ರದರ್ಸ್ ಮಹಾರಾಷ್ಟ್ರ ಭಾಗದಲ್ಲೂ ಪ್ರಭಾವ ಹೊಂದಿದ್ದಾರೆ. ಮೇಲಾಗಿ ಗಡಿಭಾಗದ ಶಾಸಕರು ಪಕ್ಷಭೇದ ಇಲ್ಲದೆ ಬೆಳಗಾವಿಯ ಪ್ರಭಾವಿಗಳ ಜೊತೆ ಹತ್ತಿರದ ನಂಟು ಹೊಂದಿದ್ದಾರೆ. ಇಂಥ ವ್ಯಕ್ತಿ ಈಗ ಮಹಾರಾಷ್ಟ್ರದಲ್ಲಿ ಕಳೆದ ಬಾರಿ ಸಿಎಂ ಆಗಿದ್ದ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೂಚನೆ ಮೇರೆಗೆ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಈ ಭೇಟಿ ಮಾಡಿದ್ದಾರೆ ಎನ್ನಲಾಗ್ತಿದೆ. ಒಂದು ಗಂಟೆಗೂ ಹೆಚ್ಚು ಕಾಲ ಇವರಿಬ್ಬರು ಮಾತುಕತೆ ನಡೆಸಿದ್ದು ಈಗ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಕುಮಾರಸ್ವಾಮಿ ಸರಕಾರ ಪತನಗೊಳಿಸಿದ ಸಂದರ್ಭ ರಮೇಶ್ ಜಾರಕಿಹೊಳಿ ಮತ್ತು ಎಚ್.ವಿಶ್ವನಾಥ್ ಗ್ಯಾಂಗ್ ಮುಂಬೈನ ಹೊಟೇಲಲ್ಲಿ ಉಳಿದುಕೊಂಡಿತ್ತು. ಹೇಗಾದ್ರೂ ಸರಕಾರ ಉಳಿಸಿಕೊಳ್ಳಬೇಕೆಂದು ಡಿಕೆಶಿ ಅಂಡ್ ಗ್ಯಾಂಗ್ ಜಾರಕಿಹೊಳಿ ಭೇಟಿಗಾಗಿ ಮುಂಬೈಗೆ ತೆರಳಿದ್ದರು. ಆದರೆ ಆಗ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ, ಡಿಕೆ ಶಿವಕುಮಾರ್ ಗೆ ಜಾರಕಿಹೊಳಿ ಉಳಿದುಕೊಂಡಿದ್ದ ಹೊಟೇಲಿಗೆ ತೆರಳಲು ಅವಕಾಶ ನೀಡಿರಲಿಲ್ಲ. ಕೊನೆಗೆ ಡಿಕೆಶಿ ಅಂಡ್ ಟೀಮ್ ಮುಂಬೈನಲ್ಲಿ ಹೈಡ್ರಾಮಾ ಮಾಡಿ, ಏನೂ ಮಾಡಲಾಗದೆ ಹಿಂತಿರುಗಿತ್ತು. ಇತ್ತ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರಲು ರಮೇಶ್ ಜಾರಕಿಹೊಳಿ ಕಾರಣ ಆಗಿದ್ದೂ ಅವರ ಛಾರ್ಮ್ ಹೆಚ್ಚುವಂತೆ ಮಾಡಿತ್ತು. ಆವತ್ತು ಸಿಎಂ ಫಡ್ನವಿಸ್ ಕಾರಣದಿಂದ ಮುಂಬೈನಲ್ಲಿ ಅತೃಪ್ತರನ್ನು ಕಟ್ಟಿಕೊಂಡು 15 ದಿನಗಳ ಕಾಲ ಉಳಿದುಕೊಂಡಿದ್ದ ಜಾರಕಿಹೊಳಿ ಈಗ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಲಿದ್ದಾರೆಯೇ ಅನ್ನುವ ಮಾತು ಕೇಳಿಬಂದಿದೆ. ಜಾರಕಿಹೊಳಿ ಮತ್ತು ಫಡ್ನವಿಸ್ ನಡುವಿನ ಭೇಟಿ ಕುತೂಹಲಕ್ಕೆ ಕಾರಣವಾಗಿದ್ದಲ್ಲದೆ, ಅತ್ತ ಶಿವಸೇನೆ - ಕಾಂಗ್ರೆಸ್ ಸರಕಾರದಲ್ಲಿ ನಡುಕ ಸೃಷ್ಟಿಸಿದೆ.
ನಟ ಸುಶಾಂತ್ ಸಾವಿನ ಪ್ರಕರಣದಲ್ಲಿ ಹೆಸರು ಕೆಡಿಸಿಕೊಂಡಿರುವ ಶಿವಸೇನೆ ಸರಕಾರದ ಬಗ್ಗೆ ಅಲ್ಲಿನ ಶಾಸಕರು ಅತೃಪ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇದೇ ಸಮಯವನ್ನು ಬಿಜೆಪಿ ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದು ಚತುರ ರಾಜಕೀಯ ನಡೆ ಎನ್ನುವ ಮಾತು ಕೇಳಿಬರುತ್ತಿದೆ.
Join our WhatsApp group for latest news updates
29-03-25 09:19 pm
HK News Desk
Mysuru three drowned, Lake, Ugadi: ಮೈಸೂರು ; ಹ...
29-03-25 03:13 pm
Naxal Karanataka, Anti Naxal Force: ನಕ್ಸಲ್ ನಿ...
28-03-25 10:47 pm
Minister Rajanna, honeytrap, Son, Murder atte...
28-03-25 12:19 pm
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
29-03-25 04:40 pm
HK News Desk
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
30-03-25 11:02 pm
Mangaluru HK Staff
Mangalore, Ullal Netravati Bridge Repair, Tra...
30-03-25 03:07 pm
Kumapla, Mangalore, Crime: ಲಕೋಟೆಯಲ್ಲಿ ಸಂಸ್ಕರಿ...
30-03-25 02:39 pm
Mangalore CM Medal, Anupam Agrawal, Police Ma...
29-03-25 11:04 pm
MLC Ivan D'Souza, Mangalore: 7ನೇ ವೇತನ ಆಯೋಗ ;...
29-03-25 10:07 pm
30-03-25 08:59 am
Mangaluru Correspondent
ಆಂಧ್ರದಲ್ಲಿ ಪ್ಯಾಸ್ಟರ್ ಪ್ರವೀಣ್ ಕುಮಾರ್ ಸಂಶಯಾಸ್ಪದ...
29-03-25 10:33 pm
Bajrang Dal, Arrest, Cow Transport, Mangalore...
29-03-25 04:02 pm
Mangalore Nandigudde Prostitution case: ನಂದಿಗ...
28-03-25 09:25 pm
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm