ಬ್ರೇಕಿಂಗ್ ನ್ಯೂಸ್
02-08-20 11:35 am Headline Karnataka News Network ನ್ಯೂಸ್ View
ಮಂಗಳೂರು, ಆಗಸ್ಟ್ 2: ಒಂದು ಸಣ್ಣ ನಿರ್ಲಕ್ಷ್ಯ ಯಾವೆಲ್ಲಾ ಅನಾಹುತ ಮಾಡುತ್ತೆ ಅನ್ನುವುದಕ್ಕೆ ಕೋವಿಡ್ ಸೋಂಕು ನಮಗೆ ಜ್ವಲಂತ ನಿದರ್ಶನ ಆಗಬೇಕು. ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರೂ ಅದರ ನಡುವೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ನೂರಾರು ಮಂದಿಗೆ ಈಗ ಆಪತ್ತು ತಂದಿದೆ. ಜನಸಾಮಾನ್ಯರಿಂದ ಹಿಡಿದು ಪತ್ರಕರ್ತರು, ಶಾಸಕರು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರೆಲ್ಲ ಈಗ ಕೊರೊನಾ ಸೋಂಕಿನ ಭಯದಲ್ಲಿ ಸಿಲುಕಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ಐವನ್ ಡಿಸೋಜ ಮಾಡಿದ ಸಣ್ಣ ಎಡವಟ್ಟು.
ಹೌದು... ಜುಲೈ 31ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಬರುವುದು ಮೊದಲೇ ನಿಗದಿಯಾಗಿತ್ತು. ಡಿಕೆಶಿ ಭಾಗವಹಿಸುವ ಪ್ರವಾಸ ಕಾರ್ಯಕ್ರಮಗಳೂ ಮೊದಲೇ ನಿಗದಿಯಾಗಿದ್ದವು. ಕೆಪಿಸಿಸಿ ಸಾರಥಿಯಾಗಿ ಪದಗ್ರಹಣ ಆದಬಳಿಕ ಡಿಕೆಶಿ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸುತ್ತಿದ್ದರಿಂದ ಸಹಜವಾಗೇ ಕಾರ್ಯಕರ್ತರು, ಸ್ಥಳೀಯ ನಾಯಕರು ಉತ್ತೇಜಿತರಾಗಿದ್ದರು. ಆದರೆ, ಎರಡು ದಿನಗಳ ಮೊದಲೇ ಜ್ವರ ಪೀಡಿತರಾಗಿದ್ದ ಐವನ್ ಡಿಸೋಜ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಅಲ್ಲಿ ನೆಗೆಟಿವ್ ವರದಿ ಬಂದಿದ್ದರಿಂದ ಐವನ್ ಡಿಸೋಜ ಮರುದಿನ ಡಿಕೆಶಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದಿನವಿಡೀ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಐವನ್ ಡಿಸೋಜ ಸಂಜೆ ಹೊತ್ತಿಗೆ ಜ್ವರ, ಕೆಮ್ಮಿನ ಲಕ್ಷಣ ಕಾಣಿಸಿಕೊಂಡಿದ್ದರಿಂದ ಮತ್ತೆ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. ಅಲ್ಲಿನ ರಿಪೋರ್ಟ್ ಐವನ್ ಕೊರೊನಾ ಪಾಸಿಟಿವ್ ಆಗಿರುವುದನ್ನು ತೋರಿಸಿತ್ತು. ಆದರೆ ಅಷ್ಚರಲ್ಲಾಗಲೇ ಆಗುವುದೆಲ್ಲಾ ಆಗಿಹೋಗಿತ್ತು. ಕೊರೊನಾ ಒಬ್ಬರಿಂದ ಒಬ್ಬರಿಗೆ ಸುಲಭದಲ್ಲಿ ಹರಡುವುದೇ ಆಗಿದ್ದಲ್ಲಿ ಐವನ್ ಜೊತೆಗೆ ನಿಕಟವಾಗಿ ಕಾಣಿಸಿಕೊಂಡವರಿಗೆಲ್ಲಾ ಸೋಂಕು ಅಂಟಿಸಿಕೊಳ್ಳುವ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಡಿಕೆ ಶಿವಕುಮಾರ್ ಮಂಗಳೂರಿನ ಬಿಷಪ್ ಹೌಸ್ ಗೆ ಭೇಟಿ ನೀಡಿದ್ದ ವೇಳೆ ಐವನ್ ಡಿಸೋಜ, ಬಿಷಪ್ ಫಾದರ್ ಪೀಟರ್ ಸಲ್ಡಾನಾ ಜೊತೆ ಜೊತೆಯಲ್ಲೇ ಕಾಣಿಸಿಕೊಂಡಿದ್ದರು. ಈ ನಡುವೆ, ಕಂಕನಾಡಿಯಲ್ಲಿ ಆಟೋ ರಿಕ್ಷಾ ಚಾಲಕರು ಮತ್ತು ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸುವ ಕಾರ್ಯಕ್ರಮ ಏರ್ಪಾಡು ಮಾಡಿದ್ದಲ್ಲದೆ, ಅಲ್ಲಿಗೂ ಡಿಕೆಶಿ ಮತ್ತು ಯು.ಟಿ ಖಾದರ್ ಅವರನ್ನು ಒಯ್ದಿದ್ದರು. ಅಲ್ಲಿ ಸ್ವತಃ ಐವನ್ ಡಿಸೋಜ, ಯು.ಟಿ.ಖಾದರ್ ಮತ್ತು ಡಿಕೆಶಿಗೆ ಸನ್ಮಾನಿಸುವ ಕಾರ್ಯಕ್ರಮವನ್ನೂ ಮಾಡಿದ್ದರು. ಆನಂತ್ರ ಕದ್ರಿಯ ಕಾಂಗ್ರೆಸ್ ಭವನದಲ್ಲಿ ಡಿಕೆಶಿ ಜೊತೆಗೆ ಕಾರ್ಯಕರ್ತರ ಸಭೆಯನ್ನೂ ನಡೆಸಿದ್ದಾರೆ. ಮಾಜಿ ಸಚಿವರಾದ ರಮಾನಾಥ ರೈ, ಯುಟ.ಟಿ.ಖಾದರ್, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಮೊಯ್ದೀನ್ ಬಾವ, ಜೆ.ಆರ್ ಲೋಬೊ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸೇರಿದಂತೆ ಕಾಂಗ್ರೆಸ್ ಸ್ಥಳೀಯ ಕಾರ್ಪೊರೇಟರುಗಳು, ಜಿಲ್ಲಾ ಮಟ್ಟದ ಪುಢಾರಿಗಳೆಲ್ಲ ಸೇರಿದ್ದರು. ಐವನ್ ಡಿಸೋಜ ಎಲ್ಲರ ಜೊತೆಗೂ ಬೆರೆತುಕೊಂಡಿದ್ದೂ ಆಗಿತ್ತು. ಇದೇ ವೇಳೆ ಕಾಂಗ್ರೆಸ್ ಭವನದ ಹವಾನಿಯಂತ್ರಿತ ಕೊಠಡಿಯಲ್ಲಿ ಡಿಕೆಶಿ ಸುದ್ದಿಗೋಷ್ಠಿ ನಡೆಸಿದ್ದರು. ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿ ಮಾಜಿ ಸಚಿವರು, ಶಾಸಕರ ಜೊತೆ ಐವನ್ ಕೂಡ ಇದ್ದರು. ಲಾಕ್ ಡೌನ್ ಸಮಯದಲ್ಲಿ ಸುದ್ದಿಗೋಷ್ಠಿಯಿಂದ ದೂರವೇ ಉಳಿದಿದ್ದ ಹೆಚ್ಚಿನ ಪತ್ರಕರ್ತರೆಲ್ಲ ಡಿಕೆಶಿ ಪ್ರೆಸ್ ಮೀಟಿಗೆ ಹಾಜರಾಗಿದ್ದರು.
ಎಸಿ ಕೊಠಡಿಯಲ್ಲಿ ಕೊರೊನಾ ಪಾಸಿಟಿವ್ ಇದ್ದ ವ್ಯಕ್ತಿ ಐದು ನಿಮಿಷ ಕಾಣಿಸಿಕೊಂಡರೂ ಅಲ್ಲಿರುವ ಮಂದಿಗೆಲ್ಲಾ ಸೋಂಕು ಹರಡುವ ಸಾಧ್ಯತೆ ಇರುತ್ತೆ ಅನ್ನುತ್ತಾರೆ ವೈದ್ಯರು. ಹೀಗಾಗಿ ಅಲ್ಲಿದ್ದ ಕಾಂಗ್ರೆಸ್ ನಾಯಕರು ಮತ್ತು 50ಕ್ಕೂ ಹೆಚ್ಚು ಪತ್ರಕರ್ತರಿಗೆ ಸೋಂಕು ಹರಡುವ ಸಾಧ್ಯತೆ ಅಧಿಕ ಎಂದೇ ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಐವನ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಕಾಂಗ್ರೆಸಿಗರು ಮತ್ತು ಪತ್ರಕರ್ತರೆಲ್ಲ ಸೆಲ್ಫ್ ಕ್ವಾರಂಟೈನ್ ಆಗುವಂತೆ ಆರೋಗ್ಯ ಇಲಾಖೆ ಹೇಳಿದೆ. ಇದಕ್ಕೆಲ್ಲ ಕಾರಣ ಆಗಿರುವುದು ಐವನ್ ಡಿಸೋಜ ಮಾಡಿದ ಸಣ್ಣ ಎಡವಟ್ಟು. ಸಿದ್ದರಾಮಯ್ಯರ ಕಟ್ಟಾ ಬೆಂಬಲಿಗರಾಗಿರುವ ಐವನ್, ಡಿಕೆಶಿ ಜಿಲ್ಲೆಗೆ ಬರುವಾಗ ಗೈರು ಆಗುವುದು ಬೇಡ ಎನ್ನುವ ಅಲ್ಪತನದ ಯೋಚನೆ ಡಿಕೆಶಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸಿಗರು ಮತ್ತು ಪತ್ರಕರ್ತರನ್ನೆಲ್ಲ ಕ್ವಾರಂಟೈನ್ ಶಿಕ್ಷೆಗೆ ನೂಕುವಂತೆ ಮಾಡಿದೆ.
ಐವನ್ ಡಿಸೋಜ ಎಡವಟ್ಟು ಇಷ್ಟಕ್ಕೇ ಮುಗಿಯಲಿಲ್ಲ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೂ ಡಿಕೆಶಿ ಜೊತೆ ಭೇಟಿ ನೀಡಿದ್ದಾರೆ. ಅಲ್ಲಿಯೂ ಐವನ್ ಸಂಪರ್ಕಕ್ಕೆ ಬಂದವರಿಗೆ ಆಪತ್ತು ಎದುರಾಗಿದೆ. ಅಷ್ಟೇ ಅಲ್ಲದೆ, ಮರುದಿನ ಮಂಗಳೂರಿನಲ್ಲಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಮನೆಗೆ ಡಿಕೆಶಿ ತೆರಳಿದ್ದರು. ಮುನ್ನಾದಿನ ಸಂಜೆ ಪರೀಕ್ಷೆಗೆ ಒಳಗಾಗಿದ್ದ ಐವನ್ ಡಿಸೋಜ ಮರುದಿನ ಡಿಕೆಶಿ ಜೊತೆಗೆ ವಿಜಯಕುಮಾರ್ ಶೆಟ್ಟಿ ಮನೆಗೂ ತೆರಳಿದ್ದರು. ಅವರ ಪಕ್ಕದಲ್ಲೇ ಕುಳಿತು ಮಾಧ್ಯಮದ ಫೋಟೋಗೆ ಪೋಸು ನೀಡಿದ್ದರು. ಮೊದಲೇ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ವಿಜಯಕುಮಾರ್ ಶೆಟ್ಟಿಗೂ ಸೋಂಕು ತಗಲಿದರೆ ಅದಕ್ಕೆ ಐವನ್ ಮಾಡಿದ ನಿರ್ಲಕ್ಷ್ಯವೇ ಕಾರಣ ಎನ್ನದೆ ವಿಧಿಯಿಲ್ಲ.
29-03-25 09:19 pm
HK News Desk
Mysuru three drowned, Lake, Ugadi: ಮೈಸೂರು ; ಹ...
29-03-25 03:13 pm
Naxal Karanataka, Anti Naxal Force: ನಕ್ಸಲ್ ನಿ...
28-03-25 10:47 pm
Minister Rajanna, honeytrap, Son, Murder atte...
28-03-25 12:19 pm
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
29-03-25 04:40 pm
HK News Desk
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
30-03-25 11:02 pm
Mangaluru HK Staff
Mangalore, Ullal Netravati Bridge Repair, Tra...
30-03-25 03:07 pm
Kumapla, Mangalore, Crime: ಲಕೋಟೆಯಲ್ಲಿ ಸಂಸ್ಕರಿ...
30-03-25 02:39 pm
Mangalore CM Medal, Anupam Agrawal, Police Ma...
29-03-25 11:04 pm
MLC Ivan D'Souza, Mangalore: 7ನೇ ವೇತನ ಆಯೋಗ ;...
29-03-25 10:07 pm
30-03-25 08:59 am
Mangaluru Correspondent
ಆಂಧ್ರದಲ್ಲಿ ಪ್ಯಾಸ್ಟರ್ ಪ್ರವೀಣ್ ಕುಮಾರ್ ಸಂಶಯಾಸ್ಪದ...
29-03-25 10:33 pm
Bajrang Dal, Arrest, Cow Transport, Mangalore...
29-03-25 04:02 pm
Mangalore Nandigudde Prostitution case: ನಂದಿಗ...
28-03-25 09:25 pm
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm