ಬ್ರೇಕಿಂಗ್ ನ್ಯೂಸ್
07-12-22 02:31 pm Source: Vijayakarnataka ಸಿನಿಮಾ
ಮಾಸ್, ಹೊಡಿ ಬಡಿ ಸಿನಿಮಾಗಳು ಹೆಚ್ಚಾಗಿ ಬರುತ್ತಿರುವ ಈ ಹೊತ್ತಿನಲ್ಲಿ ಕಾಲೇಜು ಕಥೆಯೊಂದು ಸೆಟ್ಟೇರಲು ಸಜ್ಜಾಗಿದೆ. ಅದರ ಹೆಸರು ‘ಜಸ್ಟ್ ಪಾಸ್’. ಇದರಲ್ಲಿ 'ಇರುವುದೆಲ್ಲವ ಬಿಟ್ಟು' ಸಿನಿಮಾ ಖ್ಯಾತಿಯ ಶ್ರೀ ಮಹದೇವ್ ನಟಿಸುತ್ತಿದ್ದು, ರಘು ಕೆ ಎಂ ಎಂಬವರು ನಿರ್ದೇಶನ ಮಾಡುತ್ತಿದ್ದಾರೆ.
100 ಅಂಕಗಳಿಗೆ 35 ಅಂಕ ಪಡೆದರೆ ಅವರನ್ನು ಜಸ್ಟ್ ಪಾಸಾದವರು ಎಂದು ಕರೆಯುತ್ತಾರೆ. ಅಂತಹದೇ ಒಂದು ಕಥೆಯನ್ನು ನಿರ್ದೇಶಕ ರಘು ಸಿನಿಮಾ ಮಾಡಿದ್ದಾರೆ. ನಟ ಶ್ರೀ ಈ ಕಥೆಗೆ ಸೂಕ್ತವಾಗಿ ಹೊಂದಿಕೆಯಾಗುತ್ತಾರೆ ಎಂಬ ಕಾರಣಕ್ಕೆ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ರಘು ಕೆ ಎಂ ಈ ಮೊದಲು ‘ತರ್ಲೆ ವಿಲೇಜ್’, ‘ಪರಸಂಗ’, ‘ದೊಡ್ಡಟ್ಟಿ ಬೋರೇಗೌಡ’ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ‘ದೊಡ್ಡಟ್ಟಿ ಬೋರೇಗೌಡ’ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಪಡೆದಿತ್ತು.
‘ಜಸ್ಟ್ ಪಾಸ್ ಒಂದು ಯೂತ್‌ಫುಲ್ ಸಬ್ಜೆಕ್ಟ್. ಕಾಲೇಜು ಹಿನ್ನೆಲೆಯಲ್ಲಿ ಮೂಡಿ ಬರಲಿರುವ ಈ ಸಿನಿಮಾದಲ್ಲಿಇಂದಿನ ಯುವಕರ ಬದುಕಿನಲ್ಲಿ ಸಾಮಾನ್ಯವಾಗಿ ನಡೆಯುವಂತಹ ಘಟನೆಗಳಿವೆ. ಅದರ ಜತೆಗೆ ಒಂದಷ್ಟು ವಿಶೇಷ ಮನರಂಜನೆಗಳಿರುತ್ತವೆ. ನಾಯಕ ಶ್ರೀಗೆ ನಾಯಕಿಯ ಆಯ್ಕೆ ಇನ್ನೊಂದು ವಾರದಲ್ಲಿ ಆಗಲಿದೆ. ಡಿಸೆಂಬರ್ 14ರಂದು ಮುಹೂರ್ತ ನಡೆಯಲಿದೆ. ಜಸ್ಟ್ ಪಾಸ್ ಸಿನಿಮಾದಲ್ಲಿ ಹೊಸ ರೀತಿಯ, ವಿಭಿನ್ನ ನಿರೂಪಣೆಯಿದೆ' ಎಂದು ನಿರ್ದೇಶಕ ರಘು ಹೇಳಿದ್ದಾರೆ. ರಂಗಾಯಣ ರಘು, ಪ್ರಕಾಶ್ ತುಮ್ಮಿನಾಡ್, ದೀಪಕ್ ರೈ, ಸಾಧು ಕೋಕಿಲ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ.
'ಶ್ರೀರಸ್ತು ಶುಭಮಸ್ತು', 'ನೀಲಿ', 'ಚಿಟ್ಟೆಹೆಜ್ಜೆ', 'ಇಷ್ಟದೇವತೆ' ಮುಂತಾದ ಧಾರಾವಾಹಿ ಮೂಲಕ ಗಮನ ಸೆಳೆದಿದ್ದ ನಟ ಶ್ರೀ ಮಹದೇವ್, 'ಹೊಂದಿಸಿ ಬರೆಯಿರಿ', 'ಬೆಂಗಳೂರು ಬಾಯ್ಸ್' ಮುಂತಾದ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 'ಗಜಾನನ & ಗ್ಯಾಂಗ್' ಸಿನಿಮಾ ಈ ವರ್ಷ ತೆರೆಕಂಡಿದೆ. ಇನ್ನು, ಅವರ 'ಹೊಂದಿಸಿ ಬರೆಯಿರಿ' ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ರಾಮೇನಹಳ್ಳಿ ಜಗನ್ನಾಥ್ ಆ್ಯಕ್ಷನ್-ಕಟ್ ಹೇಳಿರುವ ಈ ಸಿನಿಮಾವು ಅತೀ ಶೀಘ್ರದಲ್ಲೇ ತೆರೆಗೆ ಬರಲಿದೆ.
ಈ ಹಿಂದೆ 'ಬ್ರಹ್ಮ ವಿಷ್ಣು ಮಹೇಶ್ವರ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಯುವ ನಿರ್ದೇಶಕ ಸ್ವರೂಪ್ ಈಗ 'ಲೆಟ್ಸ್ ಬ್ರೇಕಪ್' ಸಿನಿಮಾ ಮಾಡುತ್ತಿದ್ದು, ಆ ಸಿನಿಮಾದಲ್ಲೂ ಶ್ರೀ ಮಹದೇವ್ ನಟಿಸುತ್ತಿದ್ದಾರೆ. ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ಕೂಡ ಮುಗಿದಿದೆ. 'ಲವ್ ಮಾಕ್ಟೇಲ್' ಸಿನಿಮಾ ಖ್ಯಾತಿಯ ನಟಿ ರಚನಾ ಇಂದರ್ 'ಲೆಟ್ಸ್ ಬ್ರೇಕಪ್'ನಲ್ಲಿ ಶ್ರೀ ಮಹದೇವ್ ಎದುರು ನಾಯಕಿಯಾಗಿದ್ದಾರೆ.
Actor Shri Mahadev Starrer New Movie Titled Just Pass.
28-02-25 09:33 pm
HK News Desk
B Y Vijayendra, D K Shivakumar: ರಾಜ್ಯದಲ್ಲಿ ಕ್...
28-02-25 06:17 pm
ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಸಿಐಎಸ್ಎಫ್ ಭದ್ರತಾ ಸಿಬ...
28-02-25 05:52 pm
Mangalore Shiradi Ghat: ಶಿರಾಡಿ ಘಾಟ್ ಹೆದ್ದಾರಿಯ...
28-02-25 11:51 am
Honnavara Fire: ಹೊನ್ನಾವರದಲ್ಲಿ ಗುಜರಿ ಗೋಡೌನ್ಗೆ...
27-02-25 05:50 pm
28-02-25 08:11 pm
HK News Desk
ಪಾಕಿಸ್ತಾನ ಮದ್ರಸಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ;...
28-02-25 07:46 pm
Sudan Plane Crash: ಸುಡಾನಲ್ಲಿ ಹೆಚ್ಚುತ್ತಿರುವ ಅಂ...
26-02-25 05:38 pm
Corruption, Amit Shah, MK Stalin: ಕ್ಷೇತ್ರ ಪುನ...
26-02-25 05:11 pm
CBI raid, Gain Bitcoin: 6,600 ಕೋಟಿ ರೂ. ಕ್ರಿಸ್...
26-02-25 12:47 pm
28-02-25 10:15 pm
Mangalore Correspondent
Sharan Pumpwell, student missing, Farangipete...
28-02-25 06:13 pm
Mangalore Heat Wave: ಕರಾವಳಿಗೆ ಇನ್ನೂ ನಾಲ್ಕೈದು...
27-02-25 11:07 pm
Kotekar Robbey case, Bhaskar Belchada, Saheb...
27-02-25 10:48 pm
Talat Gang Mangalore, Ankola Robbery case: ಅಂ...
27-02-25 10:31 pm
28-02-25 02:37 pm
HK News Desk
Bidar Murder, Crime: ಬೀದರ್ ; ಕುಡಿದು ಬಂದು ಕಿರು...
26-02-25 10:48 pm
Sirsi Crime, stabbing: ಶಿವರಾತ್ರಿ ಹಬ್ಬಕ್ಕೆ ಮನೆ...
26-02-25 01:27 pm
Urwa Police, Mangalore Crime, online Fraud: ಕ...
25-02-25 08:10 pm
Mangalore, Kotekar bank robbery, Bhaskar Belc...
25-02-25 05:18 pm