ಬ್ರೇಕಿಂಗ್ ನ್ಯೂಸ್
13-12-22 02:35 pm Source: Vijayakarnataka ಸಿನಿಮಾ
ನಟ ಸಲ್ಮಾನ್ ಖಾನ್ ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಆಗಾಗ ಅವರ ಲವ್ ಲೈಫ್ ಬಗ್ಗೆ ಒಂದಲ್ಲಾ ಒಂದು ಗಾಸಿಪ್‌ಗಳು ಬರುತ್ತಿರುತ್ತವೆ. ಸದ್ಯ ಅವರು ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸಲ್ಲುಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಇದೀಗ ಸಲ್ಲು ಮತ್ತು ಪೂಜಾ ಪ್ರೀತಿ ಮಾಡುತ್ತಿದ್ದಾರೆ ಎಂಬ ಗಾಸಿಪ್ ಕೇಳಿಬಂದಿದೆ.
ಈ ಗಾಸಿಪ್ ನಿಜವೇ?
ಸಲ್ಮಾನ್ ಖಾನ್‌ಗೆ ಈಗ 56 ವರ್ಷ ವಯಸ್ಸು. ಪೂಜಾ ಹೆಗ್ಡೆಗೆ ಈಗ 32 ವರ್ಷ ವಯಸ್ಸು. ಸಲ್ಮಾನ್ ಖಾನ್ ಹೀರೋ ಆಗಿ ಬಣ್ಣ ಹಚ್ಚಿದ್ದಾಗ, ಆಗಿನ್ನೂ ಪೂಜಾ ಹೆಗ್ಡೆ ಹುಟ್ಟಿರಲಿಲ್ಲ. ಇಷ್ಟೊಂದು ವಯಸ್ಸಿನ ಅಂತರವಿರುವ ಇವರ ಮಧ್ಯೆ ಪ್ರೀತಿ ಹುಟ್ಟಿದ್ದಾದರೂ ಹೇಗೆ ಅನ್ನೋದು ನೆಟ್ಟಿಗರ ಪ್ರಶ್ನೆ ಆಗಿತ್ತು. ಆದರೆ ಇಂಥದ್ದೊಂದು ಗಾಸಿಪ್ ಬಲವಾಗಿ ಹಬ್ಬಿದ್ದಂತೂ ಸುಳ್ಳಲ್ಲ. ಅದರಲ್ಲೂ ಈ ಸುದ್ದಿ ಸಲ್ಮಾನ್ ಖಾನ್ ಅವರ ಆಪ್ತ ವಲಯದ ಸ್ನೇಹಿತರಿಗೆ ಮಾತ್ರ ಸಖತ್ ಸಿಟ್ಟು ತರಿಸಿದೆಯಂತೆ!

'ನಾಚಿಕೆ ಆಗಬೇಕು..' ಎಂದ ಸಲ್ಲು ಫ್ರೆಂಡ್ಸ್
'ಇಂಥ ಸುಳ್ಳು ವದಂತಿಗಳನ್ನು ಹಬ್ಬಿಸುವವರಿಗೆ ನಾಚಿಕೆ ಆಗಬೇಕು. ನಟಿ ಪೂಜಾ ಹೆಗ್ಡೆ ಅವರಿಗೆ ಸಲ್ಮಾನ್ ಖಾನ್ ಅವರ ಮಗಳ ವಯಸ್ಸು. ಇಬ್ಬರು ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದಮಾತ್ರಕ್ಕೆ, ಅದನ್ನೇ ಈ ರೀತಿ ಪ್ರಚಾರಕ್ಕೆ ಬಳಸಿಕೊಳ್ಳಬಹುದು ಎಂದು ಕೆಲವು ಮೂರ್ಖರು ತಿಳಿದುಕೊಂಡಿದ್ದಾರೆ. ಆದರೆ ಇದು ಮುಜುಗರ ಉಂಟು ಮಾಡುತ್ತದೆ' ಎಂದು ಸಲ್ಮಾನ್ ಖಾನ್ ಸ್ನೇಹಿತರು ಗರಂ ಆಗಿದ್ದಾರೆ ಎಂದು ತಿಳಿದುಬಂದಿದೆ.
ಇಂಥದ್ದೊಂದು ಹುಟ್ಟಿಕೊಳ್ಳಲು ಕಾರಣವಾಗಿದ್ದು ವಿದೇಶಿ ಸೆನ್ಸಾರ್ ಮಂಡಳಿ ಸದಸ್ಯ, ಸಿನಿಮಾ ವಿಮರ್ಶಕ ಎಂದು ಹೇಳಿಕೊಳ್ಳುವ ಉಮೈರ್ ಸಂಧು ಎಂಬಾತ! ಉಮೈರ್ ಸಂಧು ಕಳೆದ ವಾರ ಒಂದು ಟ್ವೀಟ್ ಮಾಡಿದ್ದು, ಅದರಲ್ಲಿ 'ನಟ ಸಲ್ಮಾನ್ ಖಾನ್ ಅವರು ಪೂಜಾ ಹೆಗ್ಡೆಯ ಪ್ರೀತಿಯಲ್ಲಿ ಬಿದ್ದಿದ್ದಾರೆ. ಸಲ್ಮಾನ್ ಪ್ರೊಡಕ್ಷನ್ ಹೌಸ್ನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಲು ಪೂಜಾ ಸಹಿ ಮಾಡಿದ್ದಾರೆ. ಇತ್ತೀಚೆಗೆ ಇಬ್ಬರೂ ಈ ಜೋಡಿ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ. ಸಲ್ಮಾನ್ ಆಪ್ತ ಮೂಲಗಳು ಇದನ್ನು ಖಚಿತಪಡಿಸಿವೆ' ಎಂದು ಅವರು ಬರೆದುಕೊಂಡಿದ್ದರು. ಅಲ್ಲಿಂದ ಈ ವದಂತಿಗೆ ಜೀವ ಸಿಕ್ಕಿತ್ತು.
ಸದ್ಯ ಅಂಥ ಯಾವ ಬೆಳವಣಿಗೆಯೂ ನಡೆದಿಲ್ಲ ಎಂಬುದು ಸಲ್ಮಾನ್ ಖಾನ್ ಅವರ ಸ್ನೇಹಿತರ ಮಾತುಗಳಿಂದ ಗೊತ್ತಾಗಿದೆ. ಸದ್ಯ ಪೂಜಾ ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸಲ್ಮಾನ್ ಖಾನ್ ಮತ್ತು ಪೂಜಾ ನಟನೆಯ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾವು 2023ರ ಏಪ್ರಿಲ್ ಮೂರನೇ ವಾರದಲ್ಲಿ ತೆರೆಗೆ ಬರಲಿದೆ.
Salman Khan Pooja Hegde Dating Gossip Actors Friend Reveals The Truth.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm