ಗಣೇಶ್​ಗೆ ಜೋಡಿಯಾದ ಮಲಯಾಳಿ ಚೆಲುವೆ ದಾಂಪತ್ಯದಲ್ಲಿ ಬಿರುಕು

21-01-23 12:29 pm       Source: news18   ಸಿನಿಮಾ

ಶೈಲೂ ಸಿನಿಮಾದಲ್ಲಿ ಗಣೇಶ್​​ಗೆ ಜೋಡಿಯಾದ ಭಾಮಾ ಅವರ ದಾಂಪತ್ಯ ಜೀವನ ಚೆನ್ನಾಗಿಲ್ವಾ? ಇದೇನಿದು ಹೊಸ ಟ್ವಿಸ್ಟ್? ವಿಚ್ಛೇದನೆಗೆ ರೆಡಿಯಾದ್ರಾ ಮಲಯಾಳಿ ನಟಿ?

ಮಲಯಾಳಿ ಚೆಲುವೆ ಭಾಮಾ ಅವರು ವಿಚ್ಛೇದಿತರಾಗುತ್ತಿದ್ದಾರಾ? ಇಂಥದ್ದೊಂದು ಸುದ್ದಿ ಈಗ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿದೆ. ಮಲಯಾಳಂ ಜೊತೆ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿ ಸುದ್ದಿ ಮಾಡಿದ್ದ ನಟಿ ಭಾಮಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಗಣೇಶ್ ಜೊತೆ ನಟಿಸಿ ಶೈಲೂ ಪಾತ್ರದ ಮೂಲಕ ಹೈಲೈಟ್ ಆಗಿದ್ದ ಇವರು ಮದುವೆ ನಂತರ ಸಿನಿಮಾದಿಂದ ದೂರ ಉಳಿದಿರುವುದು ಎಲ್ಲರಿಗೂ ಗೊತ್ತು. ಪತಿ ಹಾಗೂ ಮಗುವಿನೊಂದಿಗೆ ಬ್ಯುಸಿಯಾಗಿದ್ದರು.

ಆದರೆ ಈಗ ನಟಿ ಪತಿಯಿಂದ ಬೇರೆಯಾಗುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು ಇದು ಎಲ್ಲೆಡೆ ವೈರಲ್ ಆಗಿದೆ. ಇದು ನಿಜವೇ? ಈ ನಟಿ ಪತಿಯಿಂದ ಬೇರ್ಪಡುತ್ತಿದ್ದಾರಾ? 2018ರಿಂದ ಶೈಲೂ ಎಂದೇ ಖ್ಯಾತಿ ಪಡೆದ ಭಾಮಾ ಸಿನಿರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ಅವರ ವೈವಾಹಿಕ ಜೀವನದಲ್ಲಿ ಕೆಲವು ಏರುಪೇರುಗಳಾಗುತ್ತಿದೆ ಎನ್ನಲಾಗಿದೆ.

bhama divorce, no bhama arun, only bhama! The actress removed all the  pictures with her husband;

2020ರಲ್ಲಿ ಉದ್ಯಮಿ ಅರುಣ್ ಅವರನ್ನು ಭಾಮಾ ಮದುವೆಯಾಗಿದ್ದರು. ಈ ದಂಪತಿಗೆ ಎರಡು ವರ್ಷದ ಮಗಳಿದ್ದಾಳೆ. ಸಿನಿಮಾದಿಂದ ದೂರ ಉಳಿದಿದ್ದ ನಟಿ ಫ್ಯಾಮಿಲಿ ಲೈಫ್​​ನಲ್ಲಿ ಬ್ಯುಸಿ ಇದ್ದರು.

Actress Bhama is preparing for divorce: the actor gave hints - time.news -  Time News

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಪತಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇದ್ದರು. ಆದರೆ ಈಗ ಪತಿಯ ಜೊತೆಗಿನ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ದಾರೆ.

Actress Bhamaa: ನಟಿ ಭಾಮಾ ಮೂರೇ ವರ್ಷದ ದಾಂಪತ್ಯದಲ್ಲಿ ಬಿರುಕು?; ಪತಿ ಜತೆಗಿನ ಎಲ್ಲ  ಫೋಟೋಸ್‌ ಡಿಲಿಟ್‌! ಕಾರಣ ಏನಿರಬಹುದು... -within 3 years of marriage actress  bhamaa and arun heading for divorce

ಮಗಳ ಫಸ್ಟ್​ ಬರ್ತ್​ಡೇ ಗ್ರ್ಯಾಂಡ್ ಆಗಿತ್ತು. ಎರಡನೇ ವರ್ಷದ ಬರ್ತ್​ಡೇ ಫೋಟೋ ಆಗಲಿ ವಿಡಿಯೋ ಆಗಲಿ ಶೇರ್ ಮಾಡಿಲ್ಲ. ಇದರಿಂದ ಭಾಮಾ ಅವರು ಪತಿಯಿಂದ ಬೇರೆ ಆಗಿದ್ದಾರಾ ಎಂಬ ಚರ್ಚೆ ನಡೆಯುತ್ತಿದೆ. ನಟಿ ಕನ್ನಡದಲ್ಲಿ ಶೈಲೂ, ಆಟೋರಾಜ, ರಾಗಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೂ ಈ ನಟಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.

Actress Bhamaa and her Husband heading for Divorce Rumors Around.