ಧಾನಿ ಮುಂದೆ ಕಾಂತಾರ ನೃತ್ಯ! ತುಳು ಸಂಸ್ಕೃತಿಯ ʼವಾ ಪೊರ್ಲು ಯಾʼ

22-05-23 03:12 pm       Source: news18   ಸಿನಿಮಾ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು (PM Narendra Modi Australia Visit) ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ದ್ವಿಪಕ್ಷೀಯ ಸಂಬಂಧ ವಿಚಾರವಾಗಿ ಅವರು ಕಾಂಗರೂ ನಾಡಿಗೆ ತೆರಳಿದ್ದಾರೆ. ಈ ಹಿಂದೆ ರಿಷಬ್‌ ಶೆಟ್ಟಿ ಅವರ ಭೇಟಿ ವೇಳೆ ಪ್ರಧಾನಿ ಮೋದಿ ʼಕಾಂತಾರʼ ಸಿನೆಮಾ (Kantara Film) ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು.

ಕಾಂಗರೂ ನಾಡಿನಲ್ಲಿ ʼಕಾಂತಾರʼ ವೈಭವ

ಮೇ 23ರ ಬುಧವಾರ ಸಿಡ್ನಿಯಲ್ಲಿ ನರೇಂದ್ರ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮದಲ್ಲಿ ʼನಾಟ್ಯೋಕ್ತಿʼ ತಂಡವು ಗ್ರೂಪ್‌ ಡ್ಯಾನ್ಸ್‌ ಮೂಲಕ ಮನರಂಜಿಸಲಿದೆ.

ವಿಶೇಷವಾಗಿ ʼನಾಟ್ಯೋಕ್ತಿʼ ತಂಡವು ಕಾಂತಾರ ಸಿನೆಮಾದ ವರಾಹರೂಪಂ ಹಾಡು ಹಾಗೂ ತುಳು ಜಾನಪದ ʼವಾ ಪೊರ್ಲು ಯಾʼ ಹಾಡಿಗೆ ನೃತ್ಯವನ್ನು ಪ್ರದರ್ಶಿಸಲಿದೆ. ಇದಕ್ಕಾಗಿ ಈ ತಂಡವು ಆಸ್ಟ್ರೇಲಿಯಾದಲ್ಲಿ ತರಬೇತಿ ನಡೆಸುತ್ತಿದೆ.

ತಂಡದಲ್ಲಿ ಮಂಗಳೂರು ಯುವತಿ
ಪ್ರಧಾನಿ ಮುಂದೆ ಪ್ರದರ್ಶನ ನೀಡಲಿರುವ ʼನಾಟ್ಯೋಕ್ತಿʼ ತಂಡದಲ್ಲಿ ಏಕೈಕ ಮಂಗಳೂರಿನ ಯುವತಿ ಇರುವುದು ವಿಶೇಷ. ಮಂಗಳೂರು ನಗರದ ಬಿಜೈ ಕಾಪಿಕಾಡ್‌ ನಿವಾಸಿ ಅನೀಶಾ ಪೂಜಾರಿ ಈ ತಂಡದಲ್ಲಿದ್ದಾರೆ.

ಪದ್ಮನಾಭ ಪೂಜಾರಿ ಹಾಗೂ ರೂಪಾ ಪದ್ಮನಾಭ ಅವರ ಮಗಳು ಆಗಿರುವ ಇವರು, ಕಳೆದ 6 ವರ್ಷಗಳಿಂದ ಸಿಡ್ನಿಯ ಪ್ರತಿಷ್ಟಿತ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೀಶಾ ಪೂಜಾರಿ ಎಸ್‌ಡಿಎಂ ಕಾಲೇಜಿನ ಬಿಬಿಎ ಹಾಗೂ ಎಂಬಿಎ ವಿದ್ಯಾರ್ಥಿನಿಯಾಗಿದ್ದರು.

mangalore pm narendra modi australia visit kantara movie song dance from mangaluru girl.