ಬ್ರೇಕಿಂಗ್ ನ್ಯೂಸ್
16-04-26 09:37 pm HK News Staffer ಸಿನಿಮಾ
ಬೆಂಗಳೂರು, ಏಪ್ರಿಲ್ 16: ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಸಂಕನಗೌಡ ಎಂಟು ವರ್ಷಗಳ ಬಳಿಕ ದಿಢೀರ್ವಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ತಮ್ಮ ನಾಪತ್ತೆಯ ಹಿಂದೆ ನಡೆದ ಆಘಾತಕಾರಿ ಘಟನೆಗಳನ್ನು ಬಹಿರಂಗಪಡಿಸಿದ್ದಾರೆ. ಭಾವುಕರಾಗಿ ಮಾತನಾಡಿದ ಅವರು, “ಹೆದರಿದ್ದೇನೆ, ನನಗೆ ಸ್ವಲ್ಪ ಕಂಫರ್ಟ್ ಝೋನ್ ಕೊಡಿ” ಎಂದು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ, ಜೀವನದ ಏರುಪೇರುಗಳನ್ನು ವಿವರಿಸುತ್ತಾ, “ಈಗ ಬಂದಿದ್ದಕ್ಕೆ ಖುಷಿ ಇದೆ, ಆದರೆ ಮಿಸ್ ಮಾಡಿಕೊಂಡ ಸಮಯಕ್ಕೆ ಬೇಜಾರಿದೆ. ನನ್ನಿಂದ ಅನೇಕರು ನೋವು ಅನುಭವಿಸಿದ್ದರೆ ಕ್ಷಮೆ ಕೇಳುತ್ತೇನೆ. ಪರಿಸ್ಥಿತಿ ನನ್ನನ್ನು ಅಂಥ ನಿರ್ಧಾರಕ್ಕೆ ತಳ್ಳಿತು” ಎಂದು ಹೇಳಿದರು.
ಗದಗ ಮೂಲದ ಮಲ್ಲಿಕಾರ್ಜುನ, ದರ್ಶನ್ ಅವರ ಮ್ಯಾನೇಜರ್ ಆಗಿ ಮಾತ್ರವಲ್ಲದೆ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ ಮೊದಲ ಸಿನಿಮಾದಲ್ಲೇ ನಷ್ಟ ಅನುಭವಿಸಿದ ಅವರು, ಬಳಿಕ ವ್ಯವಹಾರಗಳಲ್ಲಿ ನಿರಂತರ ಹಿನ್ನಡೆಯನ್ನು ಕಂಡು, ಸಾಲದ ಬಲೆಗೂ ಸಿಲುಕಿದರು. “ಸುಮಾರು 8 ಕೋಟಿ ರೂಪಾಯಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದೆ. ಜೀವನವೇ ಮುಗಿಯುವ ಹಂತಕ್ಕೆ ಬಂದಿತ್ತು” ಎಂದು ಅವರು ನೋವಿನಿಂದ ಹೇಳಿದ್ದಾರೆ.
2018ರ ಜುಲೈ 1ರಂದು ಬೆಂಗಳೂರನ್ನು ತೊರೆದ ಅವರು, ಆರ್ಥಿಕ ಸಂಕಷ್ಟ ಹಾಗೂ ಕುಟುಂಬದ ಒತ್ತಡದಿಂದ ಆತ್ಮಹತ್ಯೆ ಯೋಚನೆಗೂ ಒಳಗಾಗಿದ್ದರು. “ಮೂರು ದಿನ ಕುಟುಂಬದೊಂದಿಗೆ ಕುಳಿತು ಸಾಯೋ ನಿರ್ಧಾರವನ್ನೇ ತೆಗೆದುಕೊಂಡಿದ್ದೇವೆ. ಆದರೆ ಕೊನೆಯ ಕ್ಷಣದಲ್ಲಿ ಬದುಕೋ ನಿರ್ಧಾರಕ್ಕೆ ಬಂದೆ” ಎಂದು ಹೇಳಿದ್ದಾರೆ.
ನಂತರ ಎಲ್ಲರಿಗೂ ಮೆಸೇಜ್ ಮಾಡಿ, ಮೊಬೈಲ್ ಆಫ್ ಮಾಡಿ, ಸಿಮ್ ಕಾರ್ಡ್ ತ್ಯಜಿಸಿ ದೇಶದ ವಿವಿಧ ಭಾಗಗಳಲ್ಲಿ ಅಲೆದಾಡಿದ ಅವರು, ಕೆಲವು ಕಾಲ ನೆಪಾಳದಲ್ಲೂ ವಾಸವಿದ್ದರು. “ನಾನು ಜೀವಂತವಾಗಿದ್ದೇನೆ ಎಂಬ ಸೂಚನೆ ಕೆಲವೊಮ್ಮೆ ಕೊಟ್ಟಿದ್ದೆ. ಆದರೆ ಗಿಲ್ಟ್ ಕಾಡುತ್ತಿತ್ತು” ಎಂದು ತಿಳಿಸಿದ್ದಾರೆ.
ಒಂದೂವರೆ ವರ್ಷಗಳ ಹಿಂದೆ ಮರಳಿ ಬಂದ ಅವರು, ಹೊಸ ಜೀವನ ಆರಂಭಿಸಲು ಯತ್ನಿಸಿದ್ದಾಗಲೇ ಆರೋಗ್ಯ ಸಮಸ್ಯೆ ಎದುರಾಯಿತು. “ಮೂರು ದಿನಗಳಲ್ಲಿ ಸ್ಟ್ರೋಕ್ ಆಯ್ತು. ಆದರೂ ಎಲ್ಲರ ಮನೆಗೆ ಹೋಗಿ ಕ್ಷಮೆ ಕೇಳಿದೆ. ನಾನು ಸೋತಿದ್ದೇನೆ, ಸತ್ತಿಲ್ಲ ಎಂದು ಹೇಳಿದ್ದೇನೆ” ಎಂದು ಹೇಳಿದ್ದಾರೆ.
ದರ್ಶನ್ ಮತ್ತು ಅವರ ಕುಟುಂಬದ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ, “ಅವರು ನನ್ನನ್ನು ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದಾರೆ. ನನ್ನ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲು ಅವರ ಆಶೀರ್ವಾದ ಬೇಕು” ಎಂದು ಹೇಳಿದ್ದಾರೆ.
ಈ ಘಟನೆ ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ವೈಯಕ್ತಿಕ ಸಂಕಷ್ಟಗಳು ವ್ಯಕ್ತಿಯನ್ನು ಎಷ್ಟು ಮಟ್ಟಿಗೆ ತಳ್ಳಬಹುದು ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.
1 ಕೋಟಿ ಕೊಟ್ಟ ದರ್ಶನ್ ;
''ದರ್ಶನ್ ಸರ್ ಅವರ 'ಐರಾವತ' ಶೂಟಿಂಗ್ ನಡೆಯುತ್ತಿತ್ತು. 2015ರ ಸಮಯದಲ್ಲಿ ನನಗೆ ಆಗಲೇ 5-6 ಕೋಟಿ ಸಾಲ ಇತ್ತು. ನನಗೆ ಆ ಟೈಮ್ನಲ್ಲಿ ಕುತ್ತಿಗೆಗೆ ಬಂದಿದ್ದು 1 ಕೋಟಿ ರೂಪಾಯಿ. ಹೀಗಾಗಿ, '1 ಕೋಟಿ ಸಾಲ ಇದೆ, ಕೊಡಿ' ಅಂತ ಕೇಳಿದೆ. ತಕ್ಷಣವೇ ನನಗೆ 1 ಕೋಟಿ ರೂಪಾಯಿ ಕೊಟ್ಟು ದರ್ಶನ್ ಸರ್ ಹೆಲ್ಪ್ ಮಾಡಿದರು. ನಾನು ಅವತ್ತು 5 ಕೋಟಿ ಅಂತ ಕೇಳಲಿಲ್ಲ. ನಾನು ಮತ್ತೆ ಎಡವಿದೆ. ಸ್ವಯಂಕೃತ ಅಪರಾಧಗಳನ್ನ ಮಾಡಿಕೊಂಡೆ. ಲಾಸ್ ಆದೆ. ಪದೇ ಪದೇ ದರ್ಶನ್ ಸರ್ ಹತ್ತಿರ ಹೋಗಿ.. ಹೇಗೆ ಮುಖ ಎತ್ತಿ ಕೇಳಲಿ? ಕೇಳುವ ಪರಿಸ್ಥಿತಿಯಲ್ಲಿ ನಾನು ಇರಲಿಲ್ಲ. ಕೇಳಿದ್ರೆ ಹೆಲ್ಪ್ ಮಾಡ್ತಿದ್ರೇನೋ ಗೊತ್ತಿಲ್ಲ. ಆದರೆ, ನಾನು ಹೋಗ್ಲಿಲ್ಲ'' ಎಂದು ಅಂದಿನ ಪರಿಸ್ಥಿತಿ ವಿವರಿಸಿದ್ದಾರೆ ಮಲ್ಲಿಕಾರ್ಜುನ್.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
30-09-26 10:49 am
HK News Staffer
ಡ್ರಗ್ಸ್ ಕಳ್ಳಸಾಗಣೆ ಆರೋಪ, ಸೌದಿಯಲ್ಲಿ ಕೇರಳದ ಯುವಕನ...
29-09-26 08:11 pm
ಸೌಜನ್ಯಾ ಮರು ತನಿಖೆಯೂ, ತಮಿಳುನಾಡಿನಲ್ಲಿ ಗ್ರಾನೈಟ್...
26-09-26 07:01 pm
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
30-09-26 05:33 pm
Mangaluru Staffer
Mangalore Kumpala Accident: ಕುಂಪಲ ; ರಸ್ತೆ ದಾಟ...
30-09-26 03:37 pm
Mrpl Fire, Mangalore: ಎಂಆರ್ ಪಿಎಲ್ ಘಟಕದಲ್ಲಿ ಭೀ...
30-09-26 02:20 pm
Mrpl Fire, Mangalore: ಎಂಆರ್ ಪಿಎಲ್ ತೈಲ ಸ್ಥಾವರದ...
30-09-26 12:59 pm
ಮಂಗಳೂರಿನಲ್ಲಿ ಒಳಚರಂಡಿ ಕಾಮಗಾರಿ ; 20 ವರ್ಷಗಳ ಹಿಂದ...
29-09-26 01:25 pm
30-09-26 10:33 am
HK News Staffer
Udupi Body found, Accused: ಕೊಲೆ ಯತ್ನ ಪ್ರಕರಣದ...
30-09-26 10:04 am
ಮಾಂಸದ ಅಂಗಡಿಯಲ್ಲೇ ಡ್ರಗ್ಸ್ ದಂಧೆ ; ಇಬ್ಬರು ಯುವಕರು...
30-09-26 10:03 am
ಸ್ವರ್ಣಾ ನದಿಯಲ್ಲಿ ದುರಂತ ; ಹಿರ್ಗಾನ ಬಳಿ ಈಜಲು ತೆರ...
29-09-26 09:26 pm
Mangalore Accident: ನ್ಯಾಯಾಧೀಶರ ಕಾರಿಗೆ ಗೂಡ್ಸ್...
29-09-26 08:14 pm