ಬ್ರೇಕಿಂಗ್ ನ್ಯೂಸ್
01-09-20 03:43 pm Dhruthi Anchan - Correspondent ಸಿನಿಮಾ
ಬೆಂಗಳೂರು, ಸೆಪ್ಟೆಂಬರ್ 01: ಕಿಚ್ಚ ಸುದೀಪ್ ಅವರ ಈ ಬಾರಿಯ ಹುಟ್ಟುಹಬ್ಬ ಹಲವು ರೀತಿಯಲ್ಲಿ ವಿಶೇಷತೆಯನ್ನು ಹೊಂದಿದೆ. ಈ ವರ್ಷದ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್ ಅವರ ಬಯೋಗ್ರಫಿ ಬಿಡುಗಡೆಯಾಗಲಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಿಚ್ಚ ಅವರ ಬೈಯೋಗ್ರಫಿಯನ್ನು ನಾಳೆ ಬೆಳಗ್ಗೆ 11:30 ಕ್ಕೆ ಬಿಡುಗಡೆ ಮಾಡಲಿದ್ದಾರೆ.
ಸುದೀಪ್ ಅವರ ಬದುಕಿನ ಸಮಗ್ರ ಚಿತ್ರಣ ಇರುವ ಈ ಪುಸ್ತಕವನ್ನು ಪತ್ರಕರ್ತ, ರಾಜ್ಯ ಪ್ರಶಸ್ತಿ ವಿಜೇತ ಲೇಖಕ ಡಾ. ಶರಣು ಹುಲ್ಲೂರು ಬರೆದಿದ್ದಾರೆ. 'ಕಿಚ್ಚ' ಸುದೀಪ್ ಬಣ್ಣದ ಲೋಕಕ್ಕೆ ಬಂದು 25 ವರ್ಷ ತುಂಬಿದ ಈ ಸಂದರ್ಭದಲ್ಲಿ ಅವರ ಬಯೋಗ್ರಫಿ ಬಿಡುಗಡೆ ಆಗುತ್ತಿರುವುದು ವಿಶೇಷ. ಈವರೆಗೂ ಎಲ್ಲಿಯೂ ಕಾಣದೇ ಇರುವಂತಹ ಸುದೀಪ್ ಅವರ ಅನೇಕ ಫೋಟೋಗಳು, ಮಾಹಿತಿಗಳು ಈ ಪುಸ್ತಕದಲ್ಲಿ ಇದೆಯೆಂದು ಹೇಳಿದ್ದಾರೆ .

ಸುದೀಪ್ ಕುರಿತು ಅವರ ಕುಟುಂಬದವರು ಮಾತನಾಡಿದ್ದಾರೆ. ಸುದೀಪ್ ಅವರ ಬಾಲ್ಯದಿಂದ ಈವರೆಗಿನ ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದ್ದು, ಸಿನಿಮಾರಂಗದ ಅನೇಕ ಘಟನೆಗಳಿಗೆ ಈ ಪುಸ್ತಕ ಸಾಕ್ಷಿಯಾಗಲಿದೆ. 'ನನ್ನ ಪಾಲಿಗೆ ಇದೊಂದು ಸಂಭ್ರಮದ ಕ್ಷಣ. ಕನ್ನಡದ ನಟನೊಬ್ಬ ಹಾಲಿವುಡ್‌ವರೆಗೂ ತಲುಪಿದ್ದು ವಿಶೇಷ ಸಂಗತಿ. 'ಕಿಚ್ಚ' ಸುದೀಪ್ ಅವರ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ಪುಸ್ತಕ ಇದಾಗಿದ್ದು, ಅಪರೂಪದ ಅನೇಕ ಫೋಟೋಗಳನ್ನು ಬಳಸಲಾಗಿದೆ. ಈವರೆಗೂ ಆ ಫೋಟೋಗಳನ್ನು ಯಾರೂ ನೋಡಿರಲು ಸಾಧ್ಯವಿಲ್ಲ. ಅಲ್ಲದೇ, ಸುದೀಪ್ ಅವರ ತಂದೆ, ತಾಯಿ, ಅಕ್ಕಂದಿರು, ಪತ್ನಿ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸುದೀಪ್ ಅವರ ಪುತ್ರಿ, ಅಪ್ಪನಿಗಾಗಿ ಪತ್ರ ಬರೆದಿದ್ದಾರೆ. ಕಿಚ್ಚನ ಬದುಕಿನ ಅನೇಕ ಆಸಕ್ತಿಕರ ಸಂಗತಿಗಳನ್ನು ಒಳಗೊಂಡಿರುವ ಪುಸ್ತಕ ಇದಾಗಿದೆ. ಸುದೀಪ್ ಅವರ ಕುರಿತಾಗಿ ಬರುತ್ತಿರುವ ಮೊದಲ ಪುಸ್ತಕ ಇದಾಗಿದೆ ಎನ್ನುವುದು ನನಗೆ ಹೆಮ್ಮೆ' ಎನ್ನುತ್ತಾರೆ ಲೇಖಕ ಶರಣು ಹುಲ್ಲೂರು.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm