ಬ್ರೇಕಿಂಗ್ ನ್ಯೂಸ್
24-06-22 08:12 pm Source: Vijayakarnataka ಡಾಕ್ಟರ್ಸ್ ನೋಟ್
ಸಾಮಾನ್ಯವಾಗಿ ಯಾವುದೇ ವೈದ್ಯರನ್ನು ಕೇಳಿದರೂ, ಹಿರಿಯರನ್ನು ಕೇಳಿದರೂ ಆರೋಗ್ಯಕ್ಕೆ ಹಣ್ಣುಗಳು ಹೆಚ್ಚು ಉಪಯುಕ್ತ ಎನ್ನುತ್ತಾರೆ. ಹಣ್ಣುಗಳಲ್ಲಿ ಸಾಕಷ್ಟು ಬಗೆಯ ಹಣ್ಣುಗಳಿವೆ. ದೇಹಕ್ಕೆ ವಿವಿಧ ರೀತಿಯ ವಿಟಮಿನ್, ಮಿನರಲ್ಸ್‌ಗಳು ಅಗತ್ಯವಾಗಿರುವ ಕಾರಣ ಎಲ್ಲ ರೀತಿಯ ಹಣ್ಣುಗಳು ಕೂಡ ಆರೋಗ್ಯಕ್ಕೆ ಅಗತ್ಯವಾಗಿರುತ್ತವೆ.
ಹಣ್ಣುಗಳಲ್ಲಿ ವಿಟಮಿನ್ ಸಿ, ಅನೇಕ ಮಿನರಲ್ಸ್‌ಗಳು ಅಡಕವಾಗಿರುತ್ತವೆ. ಅಂತಹ ಹಣ್ಣುಗಳಲ್ಲಿ ಮೋಸಂಬಿ ಹಣ್ಣು ಕೂಡ ಒಂದು. ರುಚಿಯಲ್ಲಿ ಹುಳಿ ಮತ್ತು ಸಿಹಿ ಮಿಶ್ರಿತವಾಗಿರುವ ಹಣ್ಣು ದೇಹಕ್ಕೆ ಸಾಕಷ್ಟು ರೀತಿಯ ಪ್ರಯೋಜನಗಳನ್ನು ನೀಡುತ್ತವೆ.
ಈ ಹಣ್ಣುಗಳಲ್ಲಿ ದೇಹಕ್ಕೆ ಬೇಕಾದ ಎನರ್ಜಿ, ವಿಟಮಿನ್ ಎ, ವಿಟಮಿನ್ ಸಿ, ಫ್ಯಾಟ್, ಪ್ರೋಟೀನ್ ಸೇರಿದಂತೆ ಅನೇಕ ವಿಟಮಿನ್‌ಗಳು ಸಮೃದ್ಧವಾಗಿದೆ. ಹಾಗಾದರೆ ಈ ಮೋಸಂಬಿ ಹಣ್ಣಿನಿಂದ ದೇಹಕ್ಕೆ ಯಾವೆಲ್ಲಾ ಉಪಯೋಗವಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ರೋಗ ನಿರೋಧ ಶಕ್ತಿ ಹೆಚ್ಚಳ
ಮೋಸಂಬಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಅಂಶ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಶೀತ ಮತ್ತು ಜ್ವರದಿಂದ ದೂರವಿರಲು ಸಹಾಯ ಮಾಡುತ್ತದೆ. ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಹೀಗಾಗಿ ನಿಮಗೆ ಶೀತ, ಕೆಮ್ಮುನಂತಹ ಅನಾರೋಗ್ಯವನ್ನು ತಡೆಯಲು ಮೋಸಂಬಿ ಸಹಾಯವಾಗಲಿದೆ.
ಜೀರ್ಣಕ್ರಿಯೆಗೆ ಸಹಕಾರಿ
ತಾಜಾ ಮೋಸಂಬಿ ತಿನ್ನುವುದರಿಂದ ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಪರಿಹಾರ ಮಾಡಬಹುದು.
ಮೋಸಂಬಿಯಲ್ಲಿನ ರುಚಿಯು ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳನ್ನು ಸ್ರವಿಸಲು ಲಾಲಾರಸ ಗ್ರಂಥಿಗಳನ್ನು ಉತ್ತೇಜಿಸುತ್ತದೆ. ಅಲ್ಲದೆ ಈ ಹಣ್ಣಿನಲ್ಲಿರುವ ಪೊಟ್ಯಾಷಿಯಂ ಅಂಶ ಅತಿಸಾರವನ್ನು ಕೂಡ ನಿಯಂತ್ರಿಸಲು ಸಹಾಯ ಮಾಡುತ್ತದೆ.
ನಿರ್ಜಲೀಕರಣವನ್ನು ತಡೆಯುತ್ತದೆ
ಮೋಸಂಬಿ ಹಣ್ಣಿನಲ್ಲಿರುವ ಹೇರಳವಾದ ನೀರಿನ ಅಂಶ ದೇಹ ನಿರ್ಜಲೀಕರಣವಾಗದಂತೆ ತಡೆಯುತ್ತದೆ. ಕೆಲವೊಮ್ಮೆ ಹೊರಗಡೆ ಹೋದಾಗ ಬಾಯಾರಿಕೆಯಾದ ಸಂದರ್ಭದಲ್ಲಿ ಸೋಡಾವನ್ನು ಸೇವನೆ ಮಾಡುತ್ತೇವೆ. ಅದರ ಬದಲು ಮೋಸಂಬಿ ರಸವನ್ನು ಕುಡಿಯಿರಿ, ಏಕೆಂದರೆ ಇದು ಬಾಯಾರಿಕೆಯನ್ನು ನೀಗಿಸುತ್ತದೆ. ಇದರಲ್ಲಿನ ಪ್ರಮುಖ ಖನಿಜಗಳು ದೇಹಕ್ಕೆ ಸುಸ್ತಾಗದಂತೆ ತಡೆದು, ಶಕ್ತಿಯನ್ನು ನೀಡುತ್ತದೆ.
ಇದೇ ಕಾರಣಕ್ಕೆ ಕ್ರೀಡಾಪಟುಗಳು ಹೆಚ್ಚಾಗಿ ಎನರ್ಜಿ ಡ್ರಿಂಕ್ಸ್ ಎಂದು ಮೋಸಂಬಿ ಜ್ಯೂಸ್‌ನ್ನು ಸೇವನೆ ಮಾಡುತ್ತಾರೆ.
ತೂಕ ಇಳಿಕೆಗೆ ಸಹಕಾರಿ
ಮೋಸಂಬಿ ಹಣ್ಣುಕಿತ್ತಳೆ ಹಣ್ಣಿನಂತೆ ಹೇರಳವಾದ ವಿಟಮಿನ್ ಸಿ ಅಂಶವನ್ನು ಹೊಂದಿದೆ. ಇದೆ ಕಾರಣಕ್ಕೆ ದೇಹದ ತೂಕ ಇಳಿಕೆಗೆ ಸಹಕಾರಿಯಾಗಿದೆ. ದೇಹದಲ್ಲಿನ ಕೊಬ್ಬನ್ನು ಕರಗಿಸಿ, ಆರೋಗ್ಯವಾಗಿರುವಂತೆ ಈ ಮೋಸಂಬಿ ಹಣ್ಣು ಮಾಡುತ್ತದೆ.
ನೀವು ಮೋಸಂಬಿ ಹಣ್ಣಿನ ರಸಕ್ಕೆ ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಿ ಸೇವಿಸಬಹುದಾಗಿದೆ. ಇದರಿಂದ ಆರೋಗ್ಯವೂ ಸುಧಾರಿಸುತ್ತದೆ. ತೂಕ ಇಳಿಕೆಯ ಪ್ರಯತ್ನದಲ್ಲಿರುವವರಿಗೆ ಮೋಸಂಬಿ ರಸ ಹೆಚ್ಚು ಉಪಯುಕ್ತವಾಗಲಿದೆ.
ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು
ಮೋಸಂಬಿ ಹೆಚ್ಚಿನ ವಿಟಮಿನ್ ಸಿ ಅಂಶವನ್ನು ಹೊಂದಿದೆ, ಇದು ಉರಿಯೂತ ಮತ್ತು ಊತವನ್ನು ನಿವಾರಿಸುತ್ತದೆ, ಆದ್ದರಿಂದ ಇದು ಅಸ್ಥಿಸಂಧಿವಾತ ಮತ್ತು ಸಂಧಿವಾತದ ರೋಗಲಕ್ಷಣಗಳ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಕ್ಯಾಲ್ಸಿಯಂ ಅಂಶ ದೇಹ ಹೀರಿಒಳ್ಳುವಂತೆ ಮಾಡುತ್ತದೆ. ಜೀವಕೋಶಗಳಲ್ಲಿ ಮೂಳೆ ರಚನೆಯನ್ನು ಉತ್ತೇಜಿಸುತ್ತದೆ ಮತ್ತು ಒಟ್ಟಾರೆ ಮೂಳೆ ಆರೋಗ್ಯವನ್ನು ಕಾಪಾಡುವಲ್ಲಿ ಮೋಸಂಬಿ ಒಳ್ಳೆಯದು.
ಹೊಟ್ಟೆಯ ಹುಣ್ಣುಗಳನ್ನು ನಿವಾರಿಸುತ್ತದೆ
ಮೋಸಂಬಿ ರಸದ ಮುಖ್ಯ ಪ್ರಯೋಜನವೆಂದರೆ ಅದು ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಆಮ್ಲೀಯ ವಸ್ತುವಾಗಿದ್ದು , ದೇಹದ ಕ್ಷಾರೀಯತೆಗೆ ಪ್ರತಿಕ್ರಿಯಿಸುತ್ತದೆ. ಹೊಟ್ಟೆಯ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಮತ್ತು ಹೊಟ್ಟೆಯ ಆಮ್ಲವನ್ನು ಕಡಿಮೆ ಮಾಡಲು ತಾಜಾ ಮೋಸಂಬಿ ಹಣ್ಣಿನ ರಸ ಸಹಾಯ ಮಾಡುತ್ತದೆ.
Best Benefits Of Mosambi Or Sweet Lime.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am