ಶುಗರ್-ಹೈ ಬಿಪಿ, ಕಿಡ್ನಿ ಸ್ಟೋನ್‌ ಸಮಸ್ಯೆ ಇದ್ದವರು, ಪಪ್ಪಾಯಿ ಹಣ್ಣು ತಿನ್ನಬಾರದಂತೆ!

25-06-22 08:40 pm       Source: Vijayakarnataka   ಡಾಕ್ಟರ್ಸ್ ನೋಟ್

ಪರಂಗಿ ಅಥವಾ ಪಪ್ಪಾಯಿ ಹಣ್ಣು ತನ್ನಲ್ಲಿ ನೈಸರ್ಗಿಕವಾದ ಸಿಹಿ ಅಂಶವನ್ನು ಒಳಗೊಂಡ ಹಣ್ಣಾಗಿರುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವುದರಲ್ಲಿಎರಡು ಮಾತಿಲ್ಲ.

ಚಳಿಗಾಲವಿರಲಿ, ಬೇಸಿಗೆ ಇರಲಿ ಇಲ್ಲಾಂದ್ರೆ ಮಳೆಗಾಲವೇ ಇರಲಿ ಆದರೆ ಎಲ್ಲಾ ಕಾಲದಲ್ಲೂ ಎಲ್ಲಾ ಕಡೆ ಸುಲಭವಾಗಿ ಸಿಗುವ ಹಣ್ಣುಗಳೆಂದರೆ ಒಂದು ಬಾಳೆಹಣ್ಣು ಇನ್ನೊಂದು ಪರಂಗಿ ಹಣ್ಣು ಅಥವಾ ಪಪ್ಪಾಯಿ ಹಣ್ಣು ಎಂದು ಹೇಳಬಹುದು. ಅದರಲ್ಲೂ ಮಾರ್ಕೆಟ್ ನಲ್ಲಿ ಹಣ್ಣು-ಹಣ್ಣಾದ ಪರಂಗಿ ಹಣ್ಣುಗಳನ್ನು ಕಂಡಾಗ ಬಾಯಲ್ಲಿ ನೀರೂರುತ್ತದೆ!

ಏಕೆಂದರೆ ಅದರ ರುಚಿ ಅಷ್ಟರ ಮಟ್ಟಿಗೆ ನಮಗೆ ಹಿಡಿಸಿರುತ್ತದೆ. ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ಕೂಡ, ಈ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತಾರೆ. ತನ್ನಲ್ಲಿ ಅಪಾರ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಹೊಂದಿರುವ ಈ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು, ಎಂದು ವೈದ್ಯರು ಕೂಡ ಹೇಳುತ್ತಾರೆ. ಉದಾಹರಣೆಗೆ ನೋಡುವುದಾದರೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ದೂರ ಮಾಡುವುದು, ಕ್ಯಾನ್ಸರ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುವುದು, ರಕ್ತದೊತ್ತಡ ಹೆಚ್ಚಾಗದಂತೆ ನೋಡಿ ಕೊಳ್ಳುವುದು, ಕಣ್ಣುಗಳ ದೃಷ್ಟಿ ಸಮಸ್ಯೆ ನಿವಾರಣೆ ಮಾಡುವುದು ಮುಂತಾದವುಗಳು.

ಇನ್ನೂ ಮುಖ್ಯವಾದ ಸಂಗತಿ ಏನೆಂದರೆ ಕೇವಲ ಈ ಹಣ್ಣು ಮಾತ್ರವಲ್ಲ, ಇದರ ಕಾಯಿ, ಪರಂಗಿ ಮರದ ಎಲೆಗಳು ಕೂಡ ಅಷ್ಟೇ ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿದೆ. ಮುಖ್ಯವಾಗಿ ಡೆಂಗ್ಯೂ ಜ್ವರದ ವಿರುದ್ಧ ಹೋರಾಡಿ ದೇಹದಲ್ಲಿ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚು ಮಾಡುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ, ನಮ್ಮ ದೇಹದ ಹಲವಾರು ಆರೋಗ್ಯ ಸಮಸ್ಯೆಗಳಿಗೆ, ಈ ಪರಂಗಿ ಹಣ್ಣು ಸೇವನೆ ಮಾಡುವುದರಿಂದ, ಪರಿಹಾರ ಕಾಣಬಹುದಾಗಿದೆ. ಆದರೆ ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಈ ಹಣ್ಣನ್ನು, ಕೆಲವು ಜನರ ಮಾತ್ರ ಸೇವಿಸುವ ಹಾಗಿಲ್ಲ! ಹಾಗಾದರೆ ಯಾರವರು? ಯಾಕೆ ಈ ಹಣ್ಣಿನಿಂದ ಅವರು ದೂರ ಉಳಿಯಬೇಕು? ನೋಡೋಣ ಬನ್ನಿ...

ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು

world kidney day 2021: ಈ ಲಕ್ಷಣಗಳು ಕಾಣಿಸಿಕೊಂಡರೆ 'ಕಿಡ್ನಿ ಸ್ಟೋನ್‌' ಆಗಿದೆ  ಎಂದರ್ಥ! - Vijaya Karnataka

  • ಮೂತ್ರಪಿಂಡದಲ್ಲಿ ಕಲ್ಲುಗಳು ಅಥವಾ ಕಿಡ್ನಿ ಸ್ಟೋನ್ ಸಮಸ್ಯೆ ಅನುಭವಿಸಿದವರಿಗೆ ಗೊತ್ತು ಆ ನೋವಿನ ಮಹಿಮೆ! ಈ ಸಮಸ್ಯೆ ಕಂಡು ಬಂದರೆ, ವಿಪರೀತ ನೋವಿನ ಹೊರತಾಗಿ, ಮೂತ್ರ ವಿಸ ರ್ಜನೆ ಸಂದರ್ಭದಲ್ಲಿ ನೋವು, ಮೂತ್ರದಲ್ಲಿ ರಕ್ತ ಕಂಡು ಬರುವುದು, ಇಂತಹ ಸಮಸ್ಯೆಗಳು ಕಾಡಲು ಶುರು ವಾಗುತ್ತದೆ. ಹೀಗಾಗಿ ಈ ಸಮಸ್ಯೆ ಇರುವವರು ಆದಷ್ಟು ತಮ್ಮ ಆಹಾರ ಪದ್ಧತಿಯಲ್ಲಿ ಜಾಗರೂಕತೆ ವಹಿಸಿಕೊಳ್ಳುವುದು ಅತ್ಯಗತ್ಯ. ಅದರಲ್ಲೂ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು, ಪರಂಗಿ ಹಣ್ಣಿನಿಂದ ದೂರವಿರಲೇಬೇಕು!
  • ಇದಕ್ಕೆ ಮುಖ್ಯಕಾರ ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ, ಕಿಡ್ನಿಗಳಲ್ಲಿ ಕಲ್ಲುಗಳ ಸಮಸ್ಯೆ ಉಲ್ಬಣಗೊಳ್ಳುವ ಅಪಾಯ ಹೆಚ್ಚಿರುತ್ತದೆಯಂತೆ! ಈ ಬಗ್ಗೆ ತಜ್ಞರು ಹೇಳುವ ಪ್ರಕಾರ, ಪಪ್ಪಾಯ ಹಣ್ಣಿನಲ್ಲಿ ಕಂಡು ಬರುವ, ವಿಟ ಮಿನ್ ಸಿ ಅಂಶ, ಕಿಡ್ನಿಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಎನ್ನುವ ಸಂಯುಕ್ತ ಅಂಶವನ್ನು ಹೆಚ್ಚು ಮಾಡುವ ಅಪಾಯ ಹೆಚ್ಚಿರುತ್ತದೆಯಂತೆ! ಇದರಿಂದಾಗಿ ಕಿಡ್ನಿಗಳಲ್ಲಿ ಕಲ್ಲುಗಳು ದಪ್ಪವಾಗಿ ಹೋಗು ತ್ತದೆ, ಅಷ್ಟೇ ಅಲ್ಲದೆ, ಮೂತ್ರ ವಿಸರ್ಜನೆಯ ಸಂರ್ದಭದಲ್ಲಿ ನೋವು ಉಂಟಾಗುವ ಅಪಾಯ ಹೆಚ್ಚಿ ರುತ್ತದೆ.

ಗರ್ಭಿಣಿಯರು ಈ ಹಣ್ಣಿನಿಂದ ದೂರವಿರಬೇಕು

muskmelon benefits: ನೀರಿನಾಂಶ ಹೆಚ್ಚಿರುವ ಈ ಕರ್ಬೂಜ ಹಣ್ಣು, ಗರ್ಭಿಣಿಯರ ಆರೋಗ್ಯಕ್ಕೆ  ತಂಪು - Vijaya Karnataka

  • ಪರಂಗಿ ಹಣ್ಣಿನಲ್ಲಿ 'ಪಪ್ಪಾಯಿನ್ ' ಎಂಬ ಅಂಶ ಕಂಡು ಬರುವುದರಿಂದ, ಇದು ಗರ್ಭಿಣಿಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುವ ಸಾಧ್ಯತೆ ಹೆಚ್ಚಿರುತ್ತದೆ. ಈ ಬಗ್ಗೆ ಪ್ರಸೂತಿ ತಜ್ಞರು ಕೂಡ ಎಚ್ಚರಿಸುತ್ತಾರೆ. ಗರ್ಭಿಣಿಯರು ಈ ಹಣ್ಣಿನಿಂದ ದೂರವಿದ್ದರೆ ಒಳ್ಳೆಯದು.
  • ಇನ್ನು ಮುಖ್ಯವಾಗಿ, ಗರ್ಭಾವಸ್ಥೆಯಲ್ಲಿ ಈ ಹಣ್ಣನ್ನು ಸೇವನೆ ಮಾಡಿದರೆ, ಹೊಟ್ಟೆಯಲ್ಲಿ ಬೆಳವಣಿಗೆ ಕಾಣುತ್ತಿರುವ ಭ್ರೂಣದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುವ ಅಪಾಯ ಹೆಚ್ಚಿರುತ್ತದೆಯಂತೆ. ಅಷ್ಟೇ ಅಲ್ಲದೆ ಮಗು ಹುಟ್ಟಿದ ಮೇಲೂ ಕೂಡ ಜನನದ ನ್ಯೂನ್ಯತೆಗಳು ಮಗುವಿನಲ್ಲಿ ಕಂಡು ಬರುತ್ತವೆ ಎಂದು ಹೇಳುತ್ತಾರೆ. ಅದರಲ್ಲೂ ಅರ್ಧಂಬರ್ಧ ಹಣ್ಣಾದ ಪರಂಗಿ ಹಣ್ಣನ್ನು ಸೇವನೆ ಮಾಡುವುದರಿಂದ ಗರ್ಭಿಣಿಯರಲ್ಲಿ ಈ ಮೇಲಿನ ಸಮಸ್ಯೆಗಳು ಕಾಡುವ ಅಪಾಯ ಹೆಚ್ಚಿರುತ್ತದೆ.

ಗರ್ಭಪಾತಕ್ಕೆ ಕಾರಣವಾಗಬಹುದು!

Want healthy and glowing skin? Then try papaya face pack for every skin  type | Editorji

  • ಈಗಾಗಲೇ ಹೇಳಿದಂತೆ ಗರ್ಭಿಣಿಯರು ಪರಂಗಿ ಹಣ್ಣನ್ನು ತಿನ್ನದೇ ಇದ್ದರೆ ಒಳ್ಳೆಯದು. ಮುಖ್ಯವಾಗಿ ಈ ಹಣ್ಣಿನ ಬೀಜಗಳಲ್ಲಿ ಗರ್ಭಾಶಯದ ಕುಗ್ಗಿಸುವಿಕೆಗೆ ಕಾರಣ ಆಗುವ ಅಂಶಗಳು ಕಂಡು ಬರುತ್ತದೆಯಂತೆ!
  • ಹೀಗಾಗಿ ಅವಧಿಗೆ ಮುನ್ನ ಹೆರಿಗೆ ಆಗುವ ಸಾಧ್ಯತೆ ಇರುತ್ತದೆ, ಇಲ್ಲಾಂದ್ರೆ  ಗರ್ಭಪಾತ ಆಗುವ ಸಂಭವ ಹೆಚ್ಚಿರುತ್ತದೆ. ಹೀಗಾಗಿ ಇವೆಲ್ಲಾ ಸಮಸ್ಯೆಗಳನ್ನು ಅನಾವಶ್ಯಕವಾಗಿ ಮೈಮೇಲೆ ಎಳೆದು ಕೊಳ್ಳುವ ಬದಲು ಗರ್ಭಾವಸ್ಥೆಯಲ್ಲಿ ಈ ಹಣ್ಣನ್ನು ತಿನ್ನದೇ ಇರುವುದು ಒಳ್ಳೆಯದು!

ಅಲರ್ಜಿ ಸಮಸ್ಯೆಗೆ ಕಾರಣವಾಗಬಹುದು!

 

ಪರಂಗಿ ಹಣ್ಣಿನ ಸಿಪ್ಪೆ ತೆಗೆಯುವಾದ, ಅದರಿಂದ ಬರುವ ಸುಣೆ ಅಥವಾ ಒಂದು ರೀತಿ ಹಾಲಿನ ರೀತಿಯ ದ್ರಾವಣವು, ಕೆಲವರಿಗೆ ಅಲರ್ಜಿಯ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಸೂಕ್ಷ್ಮ ಆರೋಗ್ಯ ಸಮಸ್ಯೆ ಇರುವವರು, ಈ ಹಣ್ಣನ್ನು ಸೇವಿಸುವ ಮುಂಚೆ ವೈದ್ಯರನ್ನು ಕೇಳಿ ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು. ಇನ್ನು ಕೆಲವರಿಗೆ, ಈ ಹಣ್ಣು ಸೇವನೆ ಮಾಡುವುದರಿಂದಾಗಿ, ಚರ್ಮಕ್ಕೆ ಸಂಬಂಧಿಸಿದ ಕೆಲವೊಂದು ಸಮಸ್ಯೆಗಳು ಬರುವ ಅಪಾಯ ಹೆಚ್ಚಿರುತ್ತದೆ.

ಸಕ್ಕರೆ ಕಾಯಿಲೆ ಇದ್ದವರು...

Schizophrenia may cause type 2 diabetes, new study finds

ಒಂದು ವೇಳೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ನಿಯಂತ್ರಣಕ್ಕೆ ಸಿಗದೇ ಹೋಗಿದ್ದರೆ ಅಂತಹವರು ಈ ಹಣ್ಣಿನಿಂದ ದೂರವಿದ್ದರೆ ಒಳ್ಳೆಯದು. ಇನ್ನು ಕೆಲವೊಮ್ಮೆ ಹೆಚ್ಚಿನ ಪ್ರಮಾಣದ ಪರಂಗಿ ಹಣ್ಣು ಸೇವನೆ ಮಾಡುವ ಜನರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಅತ್ಯಂತ ವೇಗವಾಗಿ ತಗ್ಗಿ, ಆರೋಗ್ಯದಲ್ಲಿ ಏರು ಪೇರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಮಧುಮೇಹ ಸಮಸ್ಯೆ ಇರುವವರು ಜನರು ಈ ಹಣ್ಣಿನ ಸೇವನೆ ಯಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು.

ಹೈಬಿಪಿ, ಹೃದಯದ ಸಮಸ್ಯೆಯ ಇದ್ದವರು...

People who should not eat papaya | The Times of India

ಒಂದು ವೇಳೆ ನೀವು ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೆ, ಅಥವಾ ಹೀಗಾ ಗಲೇ ನಿಮಗೆ ಹೈಬಿಪಿ ಸಮಸ್ಯೆ ಇದ್ದರೆ, ಈ ಹಣ್ಣಿನಿಂದ ದೂರವಿದ್ದರೆ ಒಳ್ಳೆಯದು. ಯಾಕೆಂದರೆ ಇದರಿಂ ದಾಗಿ ಹೃದಯ ಬಡಿತದಲ್ಲಿ ಮತ್ತಷ್ಟು ಏರುಪೇರು ಆಗುವ ಸಾಧ್ಯತೆ ಹೆಚ್ಚಿರುತ್ತದೆಯಂತೆ

People Who Suffering Kidney Stone, Uncontrolled Diabetes Patient Must Avoid Papaya .