ಶುಂಠಿ ಟೀ ಒಳ್ಳೆಯದು ಎಂದು ಹೆಚ್ಚು ಸೇವಿಸುವ ಮೊದಲು, ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ

29-06-22 07:31 pm       Source: Vijayakarnataka   ಡಾಕ್ಟರ್ಸ್ ನೋಟ್

ಶುಂಠಿ ಆರೋಗ್ಯಕ್ಕೆ ಒಳ್ಳೆಯದು. ಆದರೆ ಅತಿಯಾದ ಸೇವನೆಯಿಂದ ಅನೇಕ ರೀತಿಯ ಅಡ್ಡಪರಿಣಾಮಗಳು ಕಾಡಬಹುದು ಆ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಅತಿಯಾದರೆ ಅಮೃತವೂ ವಿಷ. ಅದೇ ರೀತಿ ನಾವು ಸೇವಿಸುವ ಆಹಾರಗಳನ್ನು ಒಂದು ಮಿತಿಯಲ್ಲಿ ಸೇವನೆ ಮಾಡಿದರೆ ಅವುಗಳಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ. ಅದರ ಬದಲು ಇಷ್ಟ ಎಂದೋ ಅಥವಾ ರುಚಿ ಚೆನ್ನಾಗಿದೆ ಎನ್ನುವ ಕಾರಣಕ್ಕೋ ಒಂದೇ ಆಹಾರಕ್ಕೆ ಒಗ್ಗಿಕೊಂಡರೆ ಅದರಿಂದ ಅಪಾಯಗಳೇ ಹೆಚ್ಚು.

ಸಾಮಾನ್ಯವಾಗಿ ಭಾರತದಲ್ಲಿ ಅತಿ ಹೆಚ್ಚು ಜನ ಕುಡಿಯುವ ಪಾನೀಯಗಳಲ್ಲಿ ಚಹಾ ಕೂಡ ಒಂದು ಅದರಲ್ಲಿ ಹಲವು ವಿಧಗಳಿವೆ. ಶುಂಠಿ ಟೀ, ಏಲಕ್ಕಿ ಟೀ, ಲೆಮನ್‌ ಟೀ ಇತ್ಯಾದಿ. ಇವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದೆ ಆದರೆ ಒಂದು ಮಿತಿಯಲ್ಲಿ ಸೇವನೆ ಮಾಡಿದರೆ ಮಾತ್ರ ಎನ್ನುವುದು ನೆನಪಿರಲಿ.

ಹೌದು. ಮುಖ್ಯವಾಗಿ ಇಲ್ಲಿ ಹೇಳುತ್ತಿರುವುದು ಶುಂಠಿ ಟೀಯ ಬಗ್ಗೆ. ಶುಂಠಿ ಟೀ ಆರೋಗ್ಯಕ್ಕೆ ಬಹಳ ಒಳ್ಳೆಯದು. ದೇಹವನ್ನು ಒಳಗಿನಿಂದ ಬೆಚ್ಚಗಿಡಲು ಶುಂಠಿ ಸಹಾಯಕವಾಗಿದೆ. ಅಲ್ಲದೆ ಅಸ್ತಮಾ ರೋಗಿಗಳಿಗೆ ಬೆಸ್ಟ್‌ ಮನೆಮದ್ದು ಎಂತಲೇ ಹೇಳುತ್ತಾರೆ. ಆದರೆ ಇದನ್ನು ಹೆಚ್ಚು ಸೇವನೆ ಮಾಡಿದರೆ ಕೆಲವು ಅನಾರೋಗ್ಯ ಕಾಡುತ್ತದೆ. ಹಾಗಾದರೆ ಅವು ಯಾವೆಲ್ಲ ಎನ್ನುವ ಬಗ್ಗೆಇಲ್ಲಿ ತಿಳಿಸಲಾಗಿದೆ ಓದಿ.

​ದೇಹದಲ್ಲಿ ಉಷ್ಣತೆ ಹೆಚ್ಚುವುದು

ginger side effects, ಶುಂಠಿ ಟೀ ಒಳ್ಳೆಯದು ಎಂದು ಹೆಚ್ಚು ಸೇವಿಸುವ ಮೊದಲು,  ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ - side effects of over consumption of  ginger tea - Vijaya Karnataka

ಕೆಲವರದ್ದು ಉಷ್ಣ ಪ್ರಕೃತಿಯ ಶರೀರವಾಗಿರುತ್ತದೆ. ಈ ರೀತಿ ಇದ್ದವರು ಶುಂಠಿ ಟೀಯನ್ನು ಪದೇ ಪದೇ ಕುಡಿದರೆ ದೇಹದಲ್ಲಿ ಉಷ್ಣತೆ ಹೆಚ್ಚಾಗಲಿದೆ. ಇದರಿಂದ ಚರ್ಮ ಡ್ರೈ ಆಗುವುದು, ಕಣ್ಣಿನಲ್ಲಿ ತುರಿಕೆ, ಉಗುರಿನ ಬಳಿ ಚರ್ಮ ಏಳುವುದು, ತಲೆನೋವು ಕಾಣಿಸಿಕೊಳ್ಳುತ್ತದೆ.

ಅಲ್ಲದೆ ಎದೆಯುರಿ, ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್‌ ಸಮಸ್ಯೆ ಕೂಡ ಬರಬಹುದು. ಆದ್ದರಿಂದ ಶುಂಠಿ ಟೀಯ ಅತಿಯಾದ ಸೇವನೆ ಒಳ್ಳೆಯದಲ್ಲ.

​ಗರ್ಭಿಣಿಯರಿಗೂ ಅಪಾಯ ತರಬಹುದು

Pregnancy period: ಗರ್ಭಿಣಿಯರು ಈ ವಿಚಾರಗಳಲ್ಲಿ ಇನ್ನು ಮುಂದೆ ಹೆದರಬೇಕಾಗಿಲ್ಲ -  Vijaya Karnataka

ಗರ್ಭಿಣಿ ಮಹಿಳೆಯರಲ್ಲಿ ಶುಂಠಿಯು ವಾಕರಿಕೆ ಕಡಿಮೆ ಮಾಡಬಹುದು. ಆದರೆ. ಕೆಲವು ತಜ್ಞರ ಪ್ರಕಾರ, ಶುಂಠಿಯನ್ನು ಸೇವಿಸುವುದರಿಂದ ಗರ್ಭಪಾತದ ಅಪಾಯವನ್ನು ಹೆಚ್ಚಿಸಬಹುದು. ದಿನಕ್ಕೆ 1500 ಮಿಗ್ರಾಂಗಿಂತ ಕಡಿಮೆ ಸೇವನೆ ಮಾಡುವುದು ಅದು ಅಪಾಯಕಾರಿಯಾಗುವುದಿಲ್ಲ. ಅದಕ್ಕೂ ಹೆಚ್ಚು ಸೇವನೆ ಮಾಡುವುದು ಗರ್ಭಿಣಿಯರಿಗೆ ಅಸುರಕ್ಷಿತವಾಗಿರಬಹುದು.

​ಕಣ್ಣು ಮತ್ತು ಚರ್ಮದಲ್ಲಿ ಕಿರಿಕಿರಿ

painless lump, ಕಣ್ಣಿನ ರೆಪ್ಪೆಯಲ್ಲಾಗುವ ಕುರು ಸಮಸ್ಯೆಗೆ ಕಾರಣಗಳೇನು? - causes and  symptoms of chalazion - Vijaya Karnataka

ಶುಂಠಿಯ ಸಾಮಾನ್ಯ ಅಲರ್ಜಿಯ ಪ್ರತಿಕ್ರಿಯೆಯು ಚರ್ಮದ ದದ್ದು ,ಅಲರ್ಜಿಗಳಲ್ಲಿ ಕಣ್ಣುಗಳು ತುರಿಕೆ, ಚರ್ಮದ ಕೆಂಪು ಮತ್ತು ಚರ್ಮದ ಉರಿಯೂತಗಳನ್ನು ಉಂಟು ಮಾಡಬಹುದು.

ಹೀಗಾಗಿ ಶುಂಠಿ ಸೇವನೆಯ ಮೊದಲು ಅದರ ಅಡ್ಡಪರಿಣಾಮಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಇದರಿಂದ ದೇಹಕ್ಕೆ ಎಷ್ಟು ಅವಶ್ಯಕವೋ ಅಷ್ಟೇ ಸೇವನೆ ಮಾಡಬಹುದು.

ದಂತ ಸಮಸ್ಯೆ

gum infection treatment: ನೆನಪಿಡಿ ಒಸಡಿನ ಸಮಸ್ಯೆಯನ್ನು ಅಪ್ಪಿತಪ್ಪಿಯೂ  ನಿರ್ಲಕ್ಷಿಸಬೇಡಿ! - never neglect gum disease its effects your dental health  | Vijaya Karnataka

ಇದನ್ನು ಓರಲ್ ಅಲರ್ಜಿ ಸಿಂಡ್ರೋಮ್ ಎಂದೂ ಕರೆಯುತ್ತಾರೆ. ನೀವು ಕೆಲವು ಆಹಾರಗಳನ್ನು ಸೇವಿಸಿದಾಗ ಕೆಲವು ಅಲರ್ಜಿಗಳು ಉಂಟಾಗುತ್ತವೆ. ರೋಗಲಕ್ಷಣಗಳು ಸಾಮಾನ್ಯವಾಗಿ ಕಿವಿ, ಚರ್ಮ ಮತ್ತು ಬಾಯಿಗೆ ನಿರ್ದಿಷ್ಟವಾಗಿರುತ್ತವೆ. ಅಂತಹ ಒಂದು ಅಲರ್ಜಿಯು ನೀವು ಶುಂಠಿಯನ್ನು ಸೇವಿಸಿದಾಗ ಸಂಭವಿಸುತ್ತದೆ. ಎಲ್ಲಾ ವ್ಯಕ್ತಿಗಳಲ್ಲಿ ಅಲ್ಲ, ಆದರೂ ದೇಹದ ಉಷ್ಣತೆ ಹೆಚ್ಚಾಗಿ, ನಿಮ್ಮ ಬಾಯಿಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಆದಷ್ಟು ಶುಂಠಿ ಟೀ ಬಳಕೆ ಕಡಿಮೆಯಿರಲಿ.

​ರಕ್ತಸ್ರಾವಕ್ಕೆ ಕಾರಣವಾಗಬಹುದು

ginger side effects, ಶುಂಠಿ ಟೀ ಒಳ್ಳೆಯದು ಎಂದು ಹೆಚ್ಚು ಸೇವಿಸುವ ಮೊದಲು,  ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ - side effects of over consumption of  ginger tea - Vijaya Karnataka

ಶುಂಠಿಯು ರಕ್ತಸ್ರಾವದ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ಶುಂಠಿಯು ಅದರ ಪ್ಲೇಟ್‌ಲೆಟ್ ವಿರೋಧಿ ಗುಣಲಕ್ಷಣಗಳಿಂದಾಗಿ ರಕ್ತಸ್ರಾವವನ್ನು ಉಂಟುಮಾಡಬಹುದು. ಲವಂಗ, ಬೆಳ್ಳುಳ್ಳಿ, ಜಿನ್ಸೆಂಗ್ ಮತ್ತು ಕೆಂಪು ಕ್ಲೋವರ್ನಂತಹ ಇತರ ಗಿಡಮೂಲಿಕೆಗಳೊಂದಿಗೆ ಶುಂಠಿಯನ್ನು ಸೇವನೆ ಮಾಡಿದಾಗ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಆಹಾರದಲ್ಲಿ ಶುಂಠಿ ರುಚಿಗಷ್ಟೆ ಇರಲಿ.

Side Effects Of Over Consumption Of Ginger Tea.