ಈ ನಮ್ಮ ಬದನೆಕಾಯಿ ದೊಡ್ಡ ದೊಡ್ಡ ಕಾಯಿಲೆಗಳನ್ನೇ ಗುಣಪಡಿಸುತ್ತೆ!

06-07-22 08:05 pm       Source: Vijayakarnataka   ಡಾಕ್ಟರ್ಸ್ ನೋಟ್

ಬದನೆಕಾಯಿ ಎಂದರೆ ಮೂಗು ಮುರಿಯುವವರು ಈ ಸ್ಟೋರಿ ಓದಲೇಬೇಕು. ಸಕ್ಕರೆ ಕಾಯಿಲೆ ಇರುವವರಿಗೂ ಕೂಡ ಬದನೆಕಾಯಿ ತುಂಬಾ ಒಳ್ಳೆಯದು....

ಮನೆಯಲ್ಲಿ ನಾವು ಸಾಂಬಾರ್ ತಯಾರು ಮಾಡುವಾಗ ಅದಕ್ಕೆ ಬದನೆಕಾಯಿ ಹಾಕುತ್ತೇವೆ. ಕೆಲವೊಂದು ಪಲ್ಯಗಳು, ಬೇಯಿಸಿದ ವೆಜಿಟೇಬಲ್ ಸಲಾಡ್ ಇತ್ಯಾದಿಗಳಲ್ಲಿ ನಾವು ಬದನೆಕಾಯಿ ಬಳಸು ತ್ತೇವೆ. ಆದರೆ ಸಾಕಷ್ಟು ಜನರಿಗೆ ಬದನೆಕಾಯಿ ಅಷ್ಟಾಗಿ ಇಷ್ಟವಾಗುವುದಿಲ್ಲ.

ಹೀಗಾಗಿ ಕೆಲವು ಜನರು ಬದನೆಕಾಯಿ ತಿನ್ನಲು ಹಿಂದುಮುಂದು ನೋಡುತ್ತಾರೆ. ಆದರೆ ಬದನೆಕಾಯಿಯಲ್ಲಿ ಸಹ ಔಷಧೀಯ ಗುಣ ಲಕ್ಷಣಗಳು ಇವೆ ಎಂಬುದು ತಿಳಿದುಬಂದಿದೆ. ವಿಶೇಷವಾಗಿ ಸಕ್ಕರೆ ಕಾಯಿಲೆ ಇರುವವರು ಬದನೆಕಾಯಿ ತಿಂದರೆ ಅವರಿಗೆ ವಿಶೇಷ ಆರೋಗ್ಯದ ಲಾಭಗಳು ಸಿಗುತ್ತವೆ. ಇಲ್ಲಿ ಅವುಗಳ ಬಗ್ಗೆ ನೀವು ತಿಳಿದುಕೊಳ್ಳಬಹುದು.

ಸಕ್ಕರೆ ಕಾಯಿಲೆ ಇರುವವರಿಗೆ ಬದನೆಕಾಯಿ ತಿನ್ನುವುದರ ಲಾಭಗಳು

Diabetes Mellitus: Symptoms, Causes, Types & Treatment

ಬದನೆಕಾಯಿ ಮಧುಮೇಹ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಅದು ಹೇಗೆಂದರೆ...

ಇದರಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿವೆ

Brinjal Benefits: Eggplant is the panacea for type 2 diabetes .. If you  know the nutritional value of it ..! | Brinjal Benefits Whether to Eat  Brinjal in Type 2 Diabetes know Hidden Nutrients in it Here is The Details  | PiPa News

  • ಬದನೆಕಾಯಿಯಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಖನಿಜಾಂಶಗಳು ಹಾಗೂ ವಿಟಮಿನ್ ಅಂಶ ಗಳು ಸಿಗುವ ಜೊತೆಗೆ ಅಪಾರ ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಸಹ ಸಿಗುತ್ತವೆ.
  • ಆಂಟಿಆಕ್ಸಿಡೆಂಟ್ ಅಂಶಗಳು ನಿಮ್ಮ ದೇಹವನ್ನು ಹಾನಿಕಾರಕ ರಾಸಾಯನಿಕ ಅಂಶಗಳಿಂದ ಮತ್ತು ಫ್ರೀ ರಾಡಿಕಲ್ ಗಳಿಂದ ರಕ್ಷಣೆ ಮಾಡುತ್ತವೆ. ಅಧ್ಯಯನಗಳು ಹೇಳುವಂತೆ ಆಂಟಿಆಕ್ಸಿಡೆಂಟ್ ಅಂಶ ಗಳು ಕ್ಯಾನ್ಸರ್ ಮತ್ತು ಹೃದಯದ ಸಮಸ್ಯೆಗಳನ್ನು ಸಹ ಪರಿಹಾರ ಮಾಡುತ್ತದೆ ಎಂದು ತಿಳಿದು ಬಂದಿದೆ.

ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುತ್ತದೆ

  • ನಿಮ್ಮ ಆಹಾರ ಪದ್ಧತಿಯಲ್ಲಿ ಬದನೆಕಾಯಿ ಬಳಕೆ ಮಾಡುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣವಾಗುತ್ತದೆ. ಏಕೆಂದರೆ ಬದನೆಕಾಯಿಯಲ್ಲಿ ನಾರಿನ ಅಂಶದ ಪ್ರಮಾಣ ಹೆಚ್ಚಾಗಿದೆ. ಇದು ನೀವು ಸೇವನೆ ಮಾಡಿದ ಆಹಾರ ಪದಾರ್ಥಗಳನ್ನು ಬಹಳ ಬೇಗನೆ ಜೀರ್ಣವಾಗು ವಂತೆ ಮಾಡುತ್ತದೆ.
  • ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ ಮತ್ತು ಹಠಾತ್ತನೆ ಏರಿಕೆ ಕಾಣು ವುದಿಲ್ಲ. ಬದನೆಕಾಯಿಯಲ್ಲಿ ನೈಸರ್ಗಿಕವಾದ ಪಾಲಿಫಿನಾಲ್ ಅಂಶಗಳು ಇರುವುದರಿಂದ ಸಕ್ಕರೆ ಪ್ರಮಾಣವನ್ನು ಇವುಗಳು ಹೀರಿಕೊಳ್ಳುತ್ತವೆ ಜೊತೆಗೆ ನಿಮ್ಮ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಅಚ್ಚುಕಟ್ಟಾಗಿ ನಿಯಂತ್ರಣ ಮಾಡುತ್ತವೆ.

ಹೃದಯದ ಕಾಯಿಲೆ ಸಮಸ್ಯೆಯನ್ನು ದೂರಮಾಡುತ್ತದೆ

Infertility history linked with increased risk of heart failure – Harvard  Gazette

  • ಸಂಶೋಧನೆಗಳು ಹೇಳುವಂತೆ ತಮ್ಮ ಅಧ್ಯಯನದಲ್ಲಿ ಕೆಲವು ಜನರನ್ನು ಅದರಲ್ಲೂ ವಿಶೇಷವಾಗಿ ಹೃದಯದ ಸಮಸ್ಯೆ ಇರುವ ಜನರನ್ನು ಬಳಸಿಕೊಂಡವು. ಬದನೆಕಾಯಿ ಸೇವನೆ ಮಾಡಿದ ನಂತರದಲ್ಲಿ ಅವರ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಕಡಿಮೆಯಾದ ಬಗ್ಗೆ ಮಾಹಿತಿ ಸಿಕ್ಕಿತು.
  • ಟ್ರೈಗ್ಲಿಸರೈಡ್ ಅಂಶಗಳು ಸಹ ಅವರ ದೇಹದಲ್ಲಿ ಕಡಿಮೆಯಾದ ಬಗ್ಗೆ ಮಾಹಿತಿ ಸಿಕ್ಕಿದೆ. ಅಧ್ಯಯನಗಳು ಹೇಳುವ ಹಾಗೆ ಬದನೆಕಾಯಿ ಸೇವನೆ ಮಾಡಿದ ನಂತರದಲ್ಲಿ ಹೃದಯದ ವಿಚಾರದಲ್ಲಿ ಸಾಕಷ್ಟು ಒಳ್ಳೆಯ ಬದಲಾವಣೆ ಕಂಡುಬಂದ ಬಗ್ಗೆ ತಿಳಿಯಿತು.

ದೇಹದ ತೂಕ ನಿಯಂತ್ರಣ ಮಾಡಬಹುದು

Weight Loss: ತೂಕ ಇಳಿಸಿಕೊಳ್ಳಲು ಜಿಮ್​ನಲ್ಲಿ ಗಂಟೆಗಟ್ಟಲೆ ವರ್ಕ್​ಔಟ್ ಮಾಡೋ ಬದಲು  ಹೀಗೆ ಮಾಡಿ ನೋಡಿ | Weight Loss No need to spend hours at the gym Top 5 tips  to Weight Loss effortlessly Health Tips | TV9 Kannada

ಬದನೆಕಾಯಿ ಸೇವನೆಯಿಂದ ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ನಾರಿನಂಶ ಮತ್ತು ಕ್ಯಾಲೊರಿ ಅಂಶಗಳು ಸಿಗುತ್ತವೆ. ಇವುಗಳು ನಿಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ವೃದ್ಧಿಸಿ ಕ್ಯಾಲೋರಿ ಅಂಶಗಳನ್ನು ನಿಯಂತ್ರಣ ಮಾಡಿ ನಿಮ್ಮ ಹೊಟ್ಟೆ ಹಸಿವಿನ ಸಮಸ್ಯೆಯನ್ನು ದೂರಮಾಡುತ್ತದೆ. ನಿಮ್ಮ ದೇಹದಲ್ಲಿ ಸಾಕಷ್ಟು ಇಂತಹ ಅಂಶಗಳು ನಿಯಂತ್ರಣಕ್ಕೆ ಬರುವುದರಿಂದ ನಿಮ್ಮ ದೇಹದ ತೂಕ ಕೂಡ ನಿಯಂತ್ರಣ ಕಾಣುತ್ತದೆ.

ಕ್ಯಾನ್ಸರ್ ಸಮಸ್ಯೆಯ ವಿರುದ್ಧ ಹೋರಾಡುತ್ತದೆ

Brinjal Images – Browse 343,607 Stock Photos, Vectors, and Video | Adobe  Stock

ಬದನೆಕಾಯಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಕ್ಯಾನ್ಸರ್ ಕಾರಕ ಜೀವಕೋಶಗಳ ಅಭಿವೃದ್ಧಿ ಕುಂಠಿತವಾಗುತ್ತದೆ. ಕೆಲವು ಬಗೆಯ 
ಕ್ಯಾನ್ಸರ್ ವಿಶೇಷವಾಗಿ ಸಾಕಷ್ಟು ಮಾರಕವಾಗಿರುತ್ತದೆ. ಹೀಗಾಗಿ ಬದನೆಕಾಯಿ ಸೇವನೆ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು.

Add Brinjal In Your Diet To Control Diabetes And Get Other Health Benefits.