ಜೋಳ ತಿಂದ ತಕ್ಷಣ ನೀರು ಕುಡಿಯಬಾರದಂತೆ, ಯಾಕೆ ಗೊತ್ತಾ?

09-07-22 08:39 pm       Source: Vijayakarnataka   ಡಾಕ್ಟರ್ಸ್ ನೋಟ್

ಜೋಳ ಪಿಷ್ಟ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಹೀಗಾಗಿ ಜೋಳ ತಿಂದ ಮೇಲೆ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿ ಗ್ಯಾಸ್‌ ಉತ್ಪಾದನೆಗೆ ಕಾರಣವಾಗಬಹುದು. ಹೀಗಾಗಿ...

ಮಳೆಗಾಲದಲ್ಲಿ ಬಿಸಿ ಬಿಸಿ ತಿಂಡಿಗಳನ್ನು ತಿನ್ನಬೇಕು ಎನ್ನಿಸುವುದು ಸಹಜ. ಅದರಲ್ಲೂ ಜೋಳ ಎಲ್ಲರ ನೆಚ್ಚಿನ ಫುಡ್‌ ಆಗಿದೆ. ಜೋಳವನ್ನು ಕೆಂಡದಲ್ಲಿ ಸುಟ್ಟು ತಿನ್ನುತ್ತಿದ್ದರೆ ಬಾಯಲ್ಲಿ ನೀರೂರುವುದಂತೂ ಸುಳ್ಳಲ್ಲ. ಹೀಗಾಗಿ ಜೋಳ ಮಳೆಗಾಲದ ಬೆಸ್ಟ್‌ ಫ್ರೆಂಡ್‌ ಎಂದೇ ಹೇಳಬಹುದು.

ಮಳೆಗಾಲದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಹೀಗಾಗಿ ಪ್ರತೀ ಬಾರಿ ಆಹಾರ ಸೇವನೆ ಮಾಡುವಾಗ ಆರೋಗ್ಯಕ್ಕೆ ಧಕ್ಕೆಯಾಗದಂತೆ ಸೇವನೆ ಮಾಡಬೇಕು. ಆದಷ್ಟು ಬೀದಿ ಬದಿ ಆಹಾರಗಳಿಂದ ದೂರವಿರುವುದು ಒಳಿತು. ಜೋಳ ನಿಮ್ಮಿಷ್ಟದ ತಿಂಡಿಯಾಗಿದ್ದರೆ ಮನೆಯಲ್ಲೇ ತಯಾರಿಸಿ ತಿನ್ನಿ ಅಥವಾ ತಾಜಾ ಜೋಳವನ್ನು ಮಾತ್ರ ಖರೀದಿಸಿ ತಿನ್ನಿ. ಆದರೆ ಜೋಳ ತಿಂದ ತಕ್ಷಣ ನೀರನ್ನು ಸೇವಿಸಬಾರದು.

ಅರೇ ! ಜೋಳ ತಿಂದ ತಕ್ಷಣ ನೀರನ್ನು ಸೇವನೆ ಮಾಡಿದರೆ ಏನಾಗುತ್ತದೆ. ಜೋಳದಿಂದ ಆರೋಗ್ಯಕ್ಕೇನು ಲಾಭ ಎನ್ನುವ ಬಗ್ಗೆ ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.

​ಜೋಳ ತಿಂದ ತಕ್ಷಣ ನೀರನ್ನು ಕುಡಿಯಬಾರದು

MonsoonCravings: Corn snacks with a twist - Times of India

ನೀವು ಸಾಮಾನ್ಯವಾಗಿ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿರುತ್ತೀರಿ. ಜೋಳ ತಿಂದ ಮೇಲೆ ನೀರು ಕುಡಿಯಬೇಡಿ ಎನ್ನುವುದನ್ನು. ಆರೋಗ್ಯದ ದೃಷ್ಟಿಯಿಂದ ಅವರು ಕೊಡುವ ಈ ಸಲಹೆ ನಿಜಕ್ಕೂ ಒಳ್ಳೆಯದು.

ಏಕೆಂದರೆ ಜೋಳ ತಿಂದ ತಕ್ಷಣ ನೀರು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು. ಜೋಳ ಪಿಷ್ಟ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಹೀಗಾಗಿ ಜೋಳ ತಿಂದ ಮೇಲೆ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿ ಗ್ಯಾಸ್‌ ಉತ್ಪಾದನೆಗೆ ಕಾರಣವಾಗಬಹುದು. ಇದು ಆಸಿಡ್ ರಿಫ್ಲಕ್ಸ್, ಆಮ್ಲೀಯತೆ, ಗ್ಯಾಸ್ಟ್ರಿಕ್‌ ಮತ್ತು ತೀವ್ರ ಹೊಟ್ಟೆ ನೋವಿಗೆ ಕಾರಣವಾಗಬಹುದು.

ಜೋಳ ತಿಂದ ಮೇಲೆ ಅರ್ಧಗಂಟೆ ಬಿಟ್ಟು ನೀರು ಕುಡಿಯಿರಿ

Can You Drink Water When You Eat? - YouTube

ಕೆಲವೊಮ್ಮೆ ಜೋಳದಲ್ಲಿ ಹಾಕಿರುವ ಮಸಾಲೆಯಿಂದ ಖಾರವಾಗಬಹುದು. ಅಂತಹ ಸಂದರ್ಭದಲ್ಲಿ ಸಿಹಿ ಜೋಳವನ್ನು ತಿನ್ನಿ, ಆದಷ್ಟು ನೀರು ಕುಡಿಯುವುದನ್ನು ಅವೈಡ್‌ ಮಾಡಿ. ಜೋಳ ತಿನ್ನುವ ಅರ್ಧಗಂಟೆ ಮೊದಲು ನೀರನ್ನು ಕುಡಿಯಿರಿ ಅಥವಾ ತಿಂದ ನಂತರ ಅರ್ಧಗಂಟೆ ಅಥವಾ 45 ನಿಮಿಷ ಬಿಟ್ಟು ನೀರನ್ನು ಕುಡಿಯಿರಿ.

ತಾಜಾ ಜೋಳವನ್ನು ಮಾತ್ರ ಸೇವಿಸಿ

81,088 Sweetcorn Stock Photos, Pictures & Royalty-Free Images - iStock

ದೀರ್ಘಕಾಲದವರೆಗೆ ಅದನ್ನು ಸಂಗ್ರಹಿಸಬೇಡಿ. ಇದು ಹಾನಿಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು ಮತ್ತು ನಂತರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು.

ಏಕೆಂದರೆ ಸಿಪ್ಪೆ ಬಿಡಿಸಿದ ಜೋಳದಲ್ಲಿ ಬೇಗನೆ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಅಲ್ಲದೆ ಬೀದಿ ಬದಿಗೆ ತಿನ್ನುತ್ತೀದ್ದೀರಿ ಎಂದರೆ ಧೂಳು, ಕಸ ಅದಕ್ಕೆ ಅಂಟಿಕೊಂಡಿರಬಹುದು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಕಾಡುತ್ತದೆ.

ಜೋಳಕ್ಕೆ ಲಿಂಬು ರಸ ಸೇರಿಸಿ ತಿನ್ನಿ

Foods to Avoid After Gallbladder Removal

ಜೋಳದಲ್ಲಿನ ಪಿಷ್ಟದ ಅಂಶದಿಂದ ಜೀರ್ಣಕ್ರಿಯೆ ನಿಧಾನವಾಗಬಹುದು. ಅಲ್ಲದೆ ಹಸಿದ ಹೊಟ್ಟೆಯಲ್ಲಿ ಜೋಳವನ್ನು ಸೇವನೆ ಮಾಡುವುದು ಒಳ್ಳೆಯದಲ್ಲ.

ಆದರೆ ನೆನಪಿಡಿ, ಯಾವಾಗ ಜೋಳವನ್ನು ತಿನ್ನುವುದಾದರೂ ನಿಂಬೆ ರಸ ಮತ್ತು ಕೊಂಚ ಮೆಣಸಿನ ಪುಡಿ ಸೇರಿಸಿ ತಿನ್ನಿ. ಇದರಿಂದ ರುಚಿಯೂ ಅದ್ಭುತವಾಗಿರುತ್ತದೆ. ಜೊತೆಗೆ ಮಸಾಲೆ ಮತ್ತು ನಿಂಬೆ ರಸವು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಜೋಳ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?

Corn beneficial for health | Corn benefits : भुट्टा या स्वीट कॉर्न, जानिए  सेहत के लिए क्या है फायदेमंद.... | Patrika News

  • ಜೋಳದಲ್ಲಿ ಕಾರ್ಬೋಹೈಡ್ರೇಟ್ಸ್‌ ಜೊತೆಗೆ ಉತ್ತಮ ನಾರಿನಾಂಶ ಕೂಡ ಇದೆ. ಹೀಗಾಗಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.
  • ಜೋಳದ ಸೇವನೆಯಿಂದ ದೇಹದಲ್ಲಿ ರಕ್ತದ ಉತ್ಪಾದನೆ ಉತ್ತಮವಾಗಿ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.
  • ಜೋಳದಲ್ಲಿರುವ ವಿಟಮಿನ್‌ ಸಿ ಮತ್ತು ಕ್ಯಾರೋಟಿನಾಯ್ಡ್‌ ಅಂಶಗಳು ಮಿದುಳು ಹಾಗೂ ನರಗಳ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.
  • ನಿಮ್ಮ ದೇಹದ ತೂಕ ಇಳಿಕೆಗೆ, ದೇಹವನ್ನು ಫಿಟ್‌ ಆಗಿಡುವ ಜರ್ನಿಗೆ ಜೋಳ ಅತ್ಯುತ್ತಮ ಆಹಾರವಾಗಿದೆ.

Why You Should Avoid Drinking Water After Eating Corn.