ಈ 5 ಬಗೆಯ ಜ್ಯೂಸ್‌ಗಳಲ್ಲಿ ಒಂದನ್ನು ಕುಡಿದರೂ ಸಾಕು- ಬಿಪಿ ಕಂಟ್ರೋಲ್‌ಗೆ ಬರುತ್ತೆ!

14-07-22 08:14 pm       Source: Vijayakarnataka   ಡಾಕ್ಟರ್ಸ್ ನೋಟ್

ರಕ್ತದ ಒತ್ತಡದ ಸಮಸ್ಯೆ ಹೆಚ್ಚಾಗಬಾರದು ಎಂದರೆ, ವೈದ್ಯರು ನೀಡಿರುವ ಔಷಧಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ದಿನಕ್ಕೊಮ್ಮೆ ದಾಳಿಂಬೆ ಜ್ಯೂಸ್,...

ಮನುಷ್ಯನಿಗೆ ರಕ್ತದೊತ್ತಡದ ಸಮಸ್ಯೆ ಎನ್ನುವುದು ಸಾಮಾನ್ಯವಾದ ಆರೋಗ್ಯ ಸಮಸ್ಯೆ ಅಲ್ಲವೇ ಅಲ್ಲ! ಹೀಗಾಗಿ ಈ ಕಾಯಿಲೆಯನ್ನು ಎಂದಿಗೂ ಸಹ ನಿರ್ಲಕ್ಷ್ಯ ಮಾಡುವಂತಿಲ್ಲ. ಈ ಕಾಯಿಲೆ ಮನುಷ್ಯನಲ್ಲಿ ಕಂಡು ಬರಲು ಪ್ರಮುಖ ಕಾರಣ, ಅತಿಯಾದ ಒತ್ತಡದ ಜೀವನ ಶೈಲಿಯ ಜೊತೆಗೆ ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಕೆಟ್ಟ ಜೀವನಶೈಲಿಯಿಂದಾಗಿ ಈ ಸಮಸ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಈ ಕಾಯಿಲೆಯ ಪ್ರಮುಖ ಲಕ್ಷಣಗಳು ಏನೆಂದರೆ, ದೇಹದ ರಕ್ತದಲ್ಲಿ ಏರುಪೇರು ಉಂಟಾಗಿ, ಹೃದಯದ ಮೇಲೆ ಹೆಚ್ಚು ಬಳುವಂತೆ ಮಾಡುತ್ತದೆ.

ಇದರಿಂದಾಗಿ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಕಂಡು ಬಂದು ಕೊನೆಗೆ ಹೃದಯಘಾತ ಆಗುವ ಸಂಭವ ಕೂಡ ಹೆಚ್ಚಿರುತ್ತದೆ. ಹೀಗಾಗಿ ಈ ಕಾಯಿಲೆಯ ಬಗ್ಗೆ ಎಂದೂ ನಿರ್ಲಕ್ಷ್ಯ ತೋರದೇ ವೈದ್ಯರು ನೀಡಿರುವ ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳುವುದರ ಜೊತೆಗೆ ಕೆಲವೊಂದು ಮನೆಮದ್ದುಗಳನ್ನು ಅನುಸರಿಸುವುದರ ಮೂಲಕ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು.
ಮುಖ್ಯವಾಗಿ ಈ ಕಾಯಿಲೆ ಇರುವವರು ಉಪ್ಪು ಹಾಗೂ ಎಣ್ಣೆಯಾಂಶ ಹಾಗೂ ಕೊಬ್ಬಿನ ಅಂಶವನ್ನು ಒಳಗೊಂಡ ಆಹಾರ ಪದಾರ್ಥಗಳನ್ನು ಕಡಿಮೆ ಸೇವನೆ ಮಾಡಬೇಕು. ಜೊತೆಗೆ ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಬನ್ನಿ ಇಂದಿನ ಲೇಖನದಲ್ಲಿ ರಕ್ತದ ಒತ್ತಡದ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಈ ಕೆಳಗೆ ತಿಳಿಸಿರುವ ಕೆಲವೊಂದು ನೈಸರ್ಗಿಕ ಹಣ್ಣು ಹಾಗೂ ತರಕಾರಿಗಳ ಜ್ಯೂಸ್ ಸೇವನೆ ಮಾಡುವು ದರಿಂದ ಹೇಗೆ ನಿಯಂತ್ರಣ ಮಾಡಿಕೊಳ್ಳಬಹುದು ಎನ್ನುವುದನ್ನು ನೋಡೋಣ ಬನ್ನಿ...

ಬೀಟ್ರೂಟ್ ಜ್ಯೂಸ್

Hypertension? Here's Why Should You load Up On Beetroot Juice To Manage  Your BP

  • ಬೀಟ್ರೂಟ್ ನೋಡಲು ರಕ್ತದ ಬಣ್ಣ ಎನ್ನುವ ಕಾರಣಕ್ಕೆ ಹೆಚ್ಚಿನವರು ಮಾರ್ಕೆಟ್‌ನಲ್ಲಿ ಈ ತರಕಾರಿ ಕಡಿಮೆ ಬೆಲೆಗೆ ಸಿಕ್ಕರೂ ಕೂಡ ಬಿಟ್ಟು ಬರುತ್ತಾರೆ! ಆದರೆ ನಿಮಗೆ ಗೊತ್ತಿರಲಿ, ತನ್ನಲ್ಲಿ ನೈಸರ್ಗಿಕ ಸಿಹಿ ಅಂಶ ಹೊಂದಿರುವ ಈ ತರಕಾರಿ ರಕ್ತದ ಒತ್ತಡದಂತಹ ಸಮಸ್ಯೆಗೆ ಸುಲಭವಾದ ಪರಿಹಾರವನ್ನು ಒದಗಿಸುತ್ತದೆ.
  • ಹೀಗಾಗಿ ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರು, ಪ್ರತಿದಿನ ಒಂದು ಲೋಟ ಬೀಟ್ರೂಟ್ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು. ಆದರೆ ನೆನಪಿರಲಿ, ಈ ಜ್ಯೂಸ್ ಮಾಡುವಾಗ ತಪ್ಪಿಯೂ ಕೂಡ ಸಕ್ಕರೆಯನ್ನು ಬೆರೆಸಬೇಡಿ, ಯಾಕೆಂದರೆ ಇದರಲ್ಲಿ ಈಗಾಗಲೇ ನೈಸರ್ಗಿಕ ಸಕ್ಕರೆ ಅಂಶ ಅಂಶವನ್ನು ಒಳ ಗೊಂಡಿರುತ್ತದೆ.

ದಾಳಿಂಬೆ ಹಣ್ಣಿನ ಜ್ಯೂಸ್

4 Red Foods for Your Health | University of Utah Health

  • ಬೆಲೆಯಲ್ಲಿ ದುಬಾರಿ ಈ ಹಣ್ಣು ಎನ್ನುವ ಒಂದೇ ಕಾರಣಕ್ಕೆ, ಈ ಹಣ್ಣಿನಿಂದ ಹೆಚ್ಚಿನವರು ದೂರ ನಿಲ್ಲುತ್ತಾರೆ. ಆದರೆ ನಿಮಗೆ ಗೊತ್ತಿರಲಿ, ತನ್ನಲ್ಲಿ ಅಧಿಕ ಪ್ರಮಾಣದ ಪೌಷ್ಟಿಕ ಸತ್ವಗಳನ್ನು ಒಳ ಗೊಂಡಿರುವ ಈ ಹಣ್ಣು ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳನ್ನು ದೂರ ಮಾಡುವುದರ ಜೊತೆಗೆ, ರಕ್ತದಲ್ಲಿ ಏರುಪೇರಾಗದಂತೆ ನೋಡಿಕೊಂಡು, ರಕ್ತದೊತ್ತಡವನ್ನು ಕೂಡ ಕಂಟ್ರೋಲ್ ಮಾಡುತ್ತದೆ.
  • ಅದರಲ್ಲೂ ಈ ಹೈಪಿ ಸಮಸ್ಯೆ ಇರುವವರು ಪ್ರತಿದಿನ ಒಂದೊಂದು ಗ್ಲಾಸ್ ದಾಳಿಂಬೆ ಹಣ್ಣಿನ ಪಾನೀಯ ಕುಡಿಯುವುದರಿಂದ, ಹೈಬಿಪಿ ಸಮಸ್ಯೆಯನ್ನು ಕಂಟ್ರೋಲ್‌ನಲ್ಲಿ ಇಟ್ಟು ಕೊಳ್ಳ ಬಹುದಂತೆ!
  • ಇನ್ನು ಈ ಬಗ್ಗೆ ಆರೋಗ್ಯ ತಜ್ಞರು ಹೇಳುವಂತೆ, ಮನುಷ್ಯನಲ್ಲಿ ಇದ್ದಕ್ಕಿದ್ದಂತೆ ರಕ್ತದ ಒತ್ತಡ ಏರಿಕೆ ಯಾದ ಸಂದರ್ಭದಲ್ಲಿ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಧನಾತ್ಮಕ ಫಲಿತಾಂಶ ಸಿಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೆಲರಿ ಜ್ಯೂಸ್

  • ಸೆಲರಿಯಲ್ಲಿ ಪೌಷ್ಟಿಕಾಂಶ ಸತ್ವಗಳ ಜೊತೆಗೆ ಪೊಟ್ಯಾಶಿಯಂ ಅಂಶ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  • ಅಷ್ಟೇ ಅಲ್ಲದೆ ದೇಹದ ರಕ್ತದಲ್ಲಿ ಏರುಪೇರು ಉಂಟಾಗಲು ಕಾರಣವಾಗುವ, ಫ್ರೀ ರ್ಯಾಡಿಕಲ್‌ ಅಂಶಗಳ ವಿರುದ್ಧ ಹೋರಾಡುವ ಎಲ್ಲಾ ಗುಣಲಕ್ಷಣಗಳು ಈ ಪಾನೀಯದಲ್ಲಿ ಕಂಡು ಬರುತ್ತದೆ.

ಕ್ರ್ಯಾನ್‌ಬೆರಿ ಜ್ಯೂಸ್

ಕ್ರ್ಯಾನ್‌ಬೆರಿ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶಗಳು ಯಥೇಚ್ಛವಾಗಿ ಕಂಡು ಬರುವುದರಿಂದ, ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೀಗಾಗಿ ರಕ್ತದೊತ್ತಡದ ಸಮಸ್ಯೆ ಇರುವವರು, ವೈದ್ಯರು ನೀಡಿರುವ ಔಷಧಿಗಳ ಜೊತೆಗೆ ಪ್ರತಿದಿನ ದಿನಕ್ಕೊಂದು ಲೋಟ ಈ ಹಣ್ಣಿನ ಜ್ಯೂಸ್ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ಅನಾನಸ್ ಜ್ಯೂಸ್

Hypertension: Your favourite fruit juice can lower high blood pressure  after just one cup | Health Tips and News

  • ಹುಳಿ ಸಿಹಿ ಮಿಶ್ರಿತ ಈ ಹಣ್ಣಿನಲ್ಲಿ ಪೊಟ್ಯಾಷಿಯಂ ಅಂಶದ ಪ್ರಮಾಣ ಸಾಕಷ್ಟು ಕಂಡು ಬರುವುದ ರಿಂದ ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಈ ಹಣ್ಣಿನ ಜ್ಯೂಸ್ ಬಹಳ ಒಳ್ಳೆಯದು.
  • ಈಗಾಗಿ ಯಾರೆಲ್ಲಾ ಈಗಾಲೇ ಅಧಿಕ ರಕ್ತದೊತ್ತಡದ ಸಮಸ್ಯೆಯಲ್ಲಿ ಬಳಲುತ್ತಿದ್ದಾರೋ, ಅಂತಹ ವರು, ಪ್ರತಿದಿನ ಒಂದೊಂದು ಲೋಟ ಅನಾನಸ್ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.

 

These Vegetable And Fruits Juices Help You To Manage High Blood Pressure Naturally.