ಹೆಚ್ಚು ಉಪ್ಪು ತಿಂದ್ರೆ ಬೇಗ ಸಾಯ್ತಾರಂತೆ! ಹಾಗಾದ್ರೆ ಎಷ್ಟು ಪ್ರಮಾಣದಲ್ಲಿ ಉಪ್ಪು ಸೇವಿಸಬೇಕು?

15-07-22 07:27 pm       Source: Vijayakarnataka   ಡಾಕ್ಟರ್ಸ್ ನೋಟ್

ಅಧಿಕ ಉಪ್ಪಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಬಿಪಿ ಹೆಚ್ಚುವುದು ಮಾತ್ರವಲ್ಲ ಇನ್ನಿತರ ಕಾಯಿಲೆಗಳಿಗೂ ಆಹ್ವಾನ ನೀಡುತ್ತದೆ.

ಉಪ್ಪಿಗಿಂತ ಬೇರೆ ರುಚಿಯಿಲ್ಲ ಎನ್ನುತ್ತಾರೆ. ಆದರೆ ಉಪ್ಪಿನ ಸೇವನೆಯು ಅಧಿಕವಾದರೆ ಅಕಾಲಿಕ ಸಾವನ್ನಪ್ಪಬೇಕಾಗುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಕೆಲವರು ತಾವು ಸೇವಿಸುವ ಆಹಾರದಲ್ಲಿ ಪ್ರತಿನಿತ್ಯ ಉಪ್ಪು ಅಧಿಕ ಹಾಕುತ್ತಾರೆ. ನೀವೂ ಕೂಡಾ ಅಧಿಕ ಪ್ರಮಾಣದಲ್ಲಿ ಉಪ್ಪಿನ ಆಹಾರ ಸೇವಿಸುತ್ತಿದ್ದೀರೆಂದಾದರೆ ತಕ್ಷಣ ನಿಮ್ಮ ಅಭ್ಯಾಸವನ್ನು ಬದಲಾಯಿಸಬೇಕು.

​ಅಧಿಕ ಉಪ್ಪಿನ ಸೇವನೆಯಿಂದ ಸಾವು

How much salt is too much?

ಉಪ್ಪಿನ ಅಧಿಕ ಸೇವನೆಯು ಸಾವಿಗೆ ಕಾರಣವಾಗುತ್ತದೆ. ತಮ್ಮ ಆಹಾರದಲ್ಲಿ ಯಾವಾಗಲೂ ಅಧಿಕ ಉಪ್ಪನ್ನು ಸೇರಿಸುವ ಜನರು ಕಡಿಮೆ ಉಪ್ಪನ್ನು ಸೇವಿಸುವ ಜನರಿಗೆ ಹೋಲಿಸಿದರೆ ಅಕಾಲಿಕವಾಗಿ ಸಾಯುವ ಅಪಾಯವು ಶೇಕಡಾ 28 ರಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

​40 ರಿಂದ 69 ವರ್ಷ ವಯಸ್ಸಿನವರು

What Happens If You Eat Too Much Salt?

ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಸಾಮಾನ್ಯ ಜನಸಂಖ್ಯೆಯಲ್ಲಿ 40 ರಿಂದ 69 ವರ್ಷ ವಯಸ್ಸಿನ ಪ್ರತಿ ನೂರರಲ್ಲಿ ಮೂರು ಜನರು ಅಕಾಲಿಕವಾಗಿ ಸಾಯುತ್ತಾರೆ. ಅದರಲ್ಲಿ ಒಬ್ಬರು ಆಹಾರಕ್ಕೆ ಅಧಿಕ ಉಪ್ಪು ಸೇರಿಸುವುದರಿಂದ ಅಕಾಲಿಕವಾಗಿ ಸಾಯುತ್ತಾರೆ ಎಂದು ಕಂಡುಹಿಡಿದಿದೆ.

ಆಯಸ್ಸು ಕಡಿಮೆಯಾಗುತ್ತದೆ

6 Little-Known Dangers of Restricting Sodium Too Much

ಊಟಕ್ಕೆ ಹೆಚ್ಚುವರಿ ಉಪ್ಪನ್ನು ಸೇರಿಸುವುದರಿಂದ 50 ವರ್ಷ ವಯಸ್ಸಿನ ಪುರುಷರು ಮತ್ತು ಮಹಿಳೆಯರಿಗೆ ಕ್ರಮವಾಗಿ ಎರಡು ವರ್ಷಗಳ ಮತ್ತು 1.5 ವರ್ಷಗಳ ಜೀವಿತಾವಧಿ ಕಡಿಮೆಯಾಗುತ್ತವೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ. ಹಾಗಾಗಿ ಜನರು ತಮ್ಮ ಆಹಾರದಲ್ಲಿ ಹೆಚ್ಚು ಮಸಾಲೆ ಹಾಕುವುದನ್ನು ತಪ್ಪಿಸಲು ಶಿಫಾರಾಸ್ಸು ಮಾಡಲಾಗುವುದು.

ಸೇವಿಸಬೇಕಾದ ಉಪ್ಪಿನ ಪ್ರಮಾಣ ಎಷ್ಟು?

Adding salt to your meals is linked to earlier death, warns study - Mirror  Online

ಹೆಚ್ಚಿನ ಜನರು ದಿನಕ್ಕೆ ಸರಾಸರಿ 9 ರಿಂದ 12 ಗ್ರಾಂ ಉಪ್ಪನ್ನು ಸೇವಿಸುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇದು ಶಿಫಾರಸು ಮಾಡಲಾದ ಗರಿಷ್ಠ ಸೇವನೆಯ ಎರಡು ಪಟ್ಟು ಹೆಚ್ಚು.

ರಕ್ತದೊತ್ತಡದ ಮಟ್ಟಗಳು ಮತ್ತು ಪಾರ್ಶ್ವವಾಯು, ಪರಿಧಮನಿಯ ಹೃದಯಾಘಾತ ಸೇರಿದಂತೆ ಹೃದಯರಕ್ತನಾಳದ ಕಾಯಿಲೆಯ ಅಪಾಯಗಳನ್ನು ಕಡಿಮೆ ಮಾಡಲು ವಯಸ್ಕರು ದಿನಕ್ಕೆ 5 ಗ್ರಾಂಗಿಂತ ಕಡಿಮೆ ಉಪ್ಪನ್ನು ಸೇವಿಸಬೇಕೆಂದು WHO ಶಿಫಾರಸು ಮಾಡುತ್ತದೆ.

​ಸಾವಿನ ಸಂಖ್ಯೆ ಕಡಿಮೆ ಮಾಡಬಹುದು

ಜಾಗತಿಕ ಉಪ್ಪಿನ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಅಂದರೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಾಸು ಮಾಡಿದಂತೆ ಐದು ಗ್ರಾಂಗೆ ಇಳಿಸಿದರೆ ಪ್ರತಿ ವರ್ಷ ಸುಮಾರು 2.5 ಮಿಲಿಯನ್ ಸಾವುಗಳನ್ನು ತಡೆಯಬಹುದು ಎನ್ನುತ್ತದೆ ಸಂಶೋಧನೆ.

Eating More Salty Food Daily Can Lead To Premature Death.