ಲಾಡು ಪಾಯಸಕ್ಕೆ ಹಾಕುವ ಈ ಕಪ್ಪು ಒಣದ್ರಾಕ್ಷಿಯಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ

16-07-22 07:44 pm       Source: Vijayakarnataka   ಡಾಕ್ಟರ್ಸ್ ನೋಟ್

ಪಾಯಸ, ಬೂಂದಿ, ಲಾಡು ಇತ್ಯಾದಿ ಸಿಹಿ ಪದಾರ್ಥಗಳಿಗೆ ಒಣಗಿರುವ ದ್ರಾಕ್ಷಿ ಹಣ್ಣುಗಳನ್ನು ಬಳಕೆ ಮಾಡುತ್ತೇವೆ. ಯಾಕೆಂದರೆ ಇದರ ರುಚಿ ಇನ್ನಷ್ಟು ಹೆಚ್ಙಾಗಲಿ ಎಂದು, ಆದರೆ ನಿಮಗೆ ಗೊತ್ತಿಲಿ,...

ಹುಳಿ ಸಿಹಿ ಮಿಶ್ರಿತ ದ್ರಾಕ್ಷಿ ಹಣ್ಣುಗಳನ್ನು ತಿನ್ನುತ್ತಾ ಇದ್ದರೆ, ತಟ್ಟೆಯಲ್ಲಿದ್ದ ಎಲ್ಲಾ ಹಣ್ಣುಗಳು ಖಾಲಿ ಆಗಿದ್ದೇ ಗೊತ್ತಾಗಲ್ಲ! ಆದರೆ ಈಗಂತೂ ದ್ರಾಕ್ಷಿ ಹಣ್ಣಿನ ಸೀಸನ್ ಅಂತೂ ಮುಗಿದಿದೆ, ಇಂತಹ ಹಣ್ಣುಗಳು ಸಿಕ್ಕಿದರೂ ಕೂಡ ಬೆಲೆ ಮಾತ್ರ ದುಬಾರಿ ಆಗಿರುವುದರಿಂದ, ಇದರಿಂದ ಹೆಚ್ಚಿನವರು ದೂರ ಇರುತ್ತಾರೆ. ಅದು ಏನೇ ಇರಲಿ, ಆದರೆ ದ್ರಾಕ್ಷಿ ಹಣ್ಣುಗಳು ಹಸಿಕ್ಕಿಂತ ಒಣಗಿದ ಮೇಲೆ ತಿನ್ನಲು ಸಖತ್ ರುಚಿಯಾಗಿರುತ್ತವೆ!

ಅದರಲ್ಲೂ ಕಪ್ಪು ಒಣದ್ರಾಕ್ಷಿ ಅಂತೂ, ಒಂದೆರಡು ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಒಣಗಿದ ಕಪ್ಪು ದ್ರಾಕ್ಷಿಯಲ್ಲಿ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಸಿಗುತ್ತದೆ ಎನ್ನುವುದನ್ನು ನೋಡೋಣ..

ದೇಹದ ರಕ್ತದ ಶುದ್ಧೀಕರಣ

இரத்த ஓட்டம் சீராக இல்லை என்றால் ஏற்படும் பாதிப்புகள் | blood flow human  body

  • ರಕ್ತ ನಮ್ಮ ದೇಹಕ್ಕೆ ಜೀವದ್ರವವಾಗಿದ್ದು ಇದಕ್ಕೆ ಬೆಲೆಕಟ್ಟಲಾಗಲಿ ಅಥವಾ ಪರ್ಯಾಯ ಒದಗಿಸುವು ದಾಗಲೀ ಸಾಧ್ಯವೇ ಇಲ್ಲ. ನಮ್ಮ ದೇಹದ ಹಲವಾರು ಕೆಲಸಗಳನ್ನು ರಕ್ತ ಸತತವಾಗಿ ನಿರ್ವಹಿಸುತ್ತಲೇ ಇರುತ್ತದೆ.
  • ಮುಖ್ಯವಾಗಿ ನಾವು ಸೇವಿಸುವ ಆಹಾರದಲ್ಲಿನ ಪೌಷ್ಟಿಕ ಸತ್ವಗಳು ಹೀರಿಕೊಂಡು, ಹಾಗೂ ದೇಹದಲ್ಲಿ ಸಂಗ್ರಹಣೆಗೊಂಡಿರುವ ಕಲ್ಮಶಗಳನ್ನು ದೇಹದಿಂದ ವಿಸರ್ಜಿಸಲು ಸಹಾಯ ಮಾಡುವುದು. ಅಷ್ಟೇ ಯಾಕೆ, ಸತತವಾಗಿ ಕ್ರಿಮಿಗಳ ವಿರುದ್ಧ ಹೋರಾಡುವುದು, ರೋಗ ನಿರೋಧಕ ಶಕ್ತಿಯೊಂದಿಗೆ ಕಾರ್ಯ ನಿರ್ವಹಿಸುವ ಎಲ್ಲಾ ಕೆಲಸವನ್ನೂ ಕೂಡ ನಮ್ಮ ದೇಹದ ರಕ್ತ ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ.
  • ಒಂದು ವೇಳೆ ರಕ್ತದಲ್ಲಿ ವಿಷಕಾರಿ ತ್ಯಾಜ್ಯಗಳು ಬೆರೆತು ಹೋದರೆ ಇದು ನೇರವಾಗಿ ನಮ್ಮ ದೇಹದ ಅಂಗಾಂಗಗಳ ಮೇಲೆ ಪ್ರಭಾವ ಬೀರುವುದು ಮಾತ್ರವಲ್ಲದೆ, ಚರ್ಮದ ಆರೋಗ್ಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಕೂಡ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.
  • ಹೀಗಾಗಿ ಯಾವುದೇ ಕಾರಣಕ್ಕೂ ದೇಹದ ರಕ್ತದಲ್ಲಿ ಏರುಪೇರು ಉಂಟಾಗದಂತೆ ಹಾಗೂ ತ್ಯಾಜ್ಯಗಳು ಶೇಖರಣೆ ಆಗದಂತೆ ನೋಡಿ ಕೊಳ್ಳ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಕಪ್ಪು ಬಣ್ಣದ ಒಣ ದ್ರಾಕ್ಷಿ ಹಣ್ಣುಗಳು ತುಂಬಾನೇ ಸಹಾಯಕ್ಕೆ ಬರುತ್ತದೆ. ಇದಕ್ಕೆ ಪ್ರಮುಖ ಕಾರಣ, ಈ ಒಣ ಹಣ್ಣುಗಳಲ್ಲಿ ನೈಸರ್ಗಿಕ ನೈಸರ್ಗಿಕವಾದ ಆಂಟಿ - ಆಕ್ಸಿಡೆಂಟ್ ಅಂಶಗಳು ಯಥೇಚ್ಛವಾಗಿ ಕಂಡು ಬರುವುದರಿಂದ ದೇಹದ ರಕ್ತ ಶುದ್ಧೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕೂದಲಿನ ಸಮಸ್ಯೆಗೆ

  • ವಿಟಮಿನ್ ಸಿ ಅಂಶ ಈ ಕಪ್ಪು ಬಣ್ಣದ ಒಣ ದ್ರಾಕ್ಷಿಯಲ್ಲಿ ಹೇರಳವಾಗಿ ಕಂಡು ಬರುವುದರಿಂದ, ಕೂದಲಿನ ಎಲ್ಲಾ ಸಮಸ್ಯೆಗಳನ್ನು ಕೂಡ ನಿವಾರಣೆಯಾಗುತ್ತದೆ.
  • ಉದಾಹರಣೆಗೆ ನೋಡುವುದಾದರೆ, ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗೆ ಆಗಿದ್ದರೆ, ಅಥವಾ ಕೂದಲು ಉದುರುವ ಸಮಸ್ಯೆಗಳು ಇದ್ದರೆ, ಸೀಳು ಕೂದಲಿನ ಸಮಸ್ಯೆ ಇದ್ದವರೆಲ್ಲಾ, ಪ್ರತಿದಿನ ನಾಲ್ಕೈದು ಒಣ ದ್ರಾಕ್ಷಿ ಹಣ್ಣುಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಈ ಕೂದಲಿಗೆ ಸಂಬಂಧಪಟ್ಟ ಸಮಸ್ಯೆಗಳಿಂದ ಪಾರಾಗಬಹುದು.

ಮೂಳೆಗಳ ಆರೋಗ್ಯಕ್ಕೆ

  • ನಿಮಗೆ ಗೊತ್ತಿರಲಿ, ಈ ಪುಟ್ಟ ಕಪ್ಪು ಒಣ ದ್ರಾಕ್ಷಿತಲ್ಲಿ ಯಥೇಚ್ಛವಾಗಿ ಪೊಟ್ಯಾಶಿಯಂ ಅಂಶದ ಜೊತೆಗೆ ಕ್ಯಾಲ್ಸಿಯಂ ಅಂಶ ಕೂಡ ಹೇರಳವಾಗಿ ಸಿಗುವುದರಿಂದ, ಇದನ್ನು ಮಿತವಾಗಿ ಸೇವನೆ ಮಾಡುವುದರಿಂದ ಮೂಳೆಗಳಿಗೆ ಸಂಬಂಧ ಪಟ್ಟ ಸಮಸ್ಯೆಗಳು ದೂರವಾಗುವುದು.
  • ಇದಕ್ಕೆ ಮುಖ್ಯ ಕಾರಣ ಇದರಲ್ಲಿ ಕಂಡು ಬರುವ ಕ್ಯಾಲ್ಸಿಯಂ ಅಂಶ ಮೂಳೆಗಳಿಗೆ ಸಂಬಂಧ ಪಟ್ಟ ಯಾವುದೇ ಆರೋಗ್ಯ ಸಮಸ್ಯೆ ಕಾಡದಂತೆ ನೋಡಿಕೊಳ್ಳುತ್ತದೆ

ಹೈ ಬಿಪಿ ಸಮಸ್ಯೆ ಇದ್ದವರು

High Blood Pressure Overview: Symptoms, Dangers, and How to Lower It

  • ಅಧಿಕ ರಕ್ತದೊತ್ತಡ ಕಾಯಿಲೆ ಕೂಡ, ಒಂದು ರೀತಿಯಲ್ಲಿ ಸಕ್ಕರೆಕಾಯಿಲೆ ಇರುವ ಹಾಗೆ ಯಾಕೆಂದರೆ ಇವೆರಡೂ ಕೂಡ ಸೈಲೆಂಟ್ ಕಿಲ್ಲರ್ ಕಾಯಿಲೆಗಳು. ಯಾವ ಸಮಯದಲ್ಲೂ ಬೇಕಾದರೂ ಮನುಷ್ಯನಿಗೆ ಆಪತ್ತು ತಂದೊಡ್ಡಬಹುದು.
  • ಇನ್ನು ಈ ಅಧಿಕ ರಕ್ತದೊತ್ತಡ ಅಥವಾ ಹೈಬಿಪಿಯ ವಿಷ್ಯಕ್ಕೆ ಬರುವು ದಾದರೆ, ಸರಿಯಾದ ಆಹಾರ ಪದ್ಧತಿ ಜೊತೆಗೆ ಉಪ್ಪಿನಾಂಶ ಆಹಾರ ಪದಾರ್ಥಗಳಿಂದ ದೂರವಿದ್ದು ಹಾಗೂ ವೈದ್ಯರ ಸಲಹೆ ಗಳನ್ನು ಅನುಸರಿ ಸುವುದರೊಟ್ಟಿಗೆ, ನಿಯಮಿತವಾಗಿ ಕಪ್ಪು ಬಣ್ಣದ ಹಸಿ ಅಥವಾ ಒಣಗಿದ ದ್ರಾಕ್ಷಿ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಈ ಕಾಯಿಲೆಯನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು.
  • ಇದಕ್ಕೆ ಮುಖ್ಯ ಕಾರಣ ಏನೆಂದರೆ, ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಿರುವ ಕಾರಣ ನಮ್ಮ ದೇಹದಲ್ಲಿ ಸೋಡಿಯಂ ಪ್ರಮಾಣವನ್ನು ತಗ್ಗಿಸಿ, ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿಯಂತ್ರಣ ಮಾಡುತ್ತದೆ. ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ ಮೊಸರಿನ ಜೊತೆ, ಸ್ವಲ್ಪ ಕಪ್ಪು ದ್ರಾಕ್ಷಿಗಳನ್ನು ತಿಂದರೆ ಸಾಕಷ್ಟು ಒಳ್ಳೆಯ ಆರೋಗ್ಯ ಪ್ರಯೋಜನಗಳು ಲಭ್ಯ ಆಗುತ್ತವೆ.

ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿಯಂತ್ರಿಸಲು

  • ದೇಹದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಅಂದರೆ ಎಲ್ ಡಿ ಎಲ್ ಅಂಶ ಜಾಸ್ತಿಯಾಗಿ ಬಿಟ್ಟರೆ, ಕೊನೆಗೆ ಹೃದಯಕ್ಕೆ ಹೆಚ್ಚಿನ ಒತ್ತಡ ಉಂಟಾಗಿ, ಹೃದಯ ಸಂಬಂಧಿ ಸಮಸ್ಯೆಗಳು ಕಂಡು ಬರುತ್ತದೆ.
  • ಅಷ್ಟೇ ಅಲ್ಲದೆ ಅಧಿಕ ರಕ್ತದೊತ್ತಡದ ಸಮಸ್ಯೆ ಕೂಡ ನಿಯಂತ್ರಣಕ್ಕೆ ಸಿಗದೇ, ವ್ಯಕ್ತಿಯ ಪ್ರಾಣಕ್ಕೆ ಅಪಾಯ ಉಂಟಾಗುವ ಸಂಭವ ಹೆಚ್ಚಿರುತ್ತದೆ.
  • ಹೀಗಾಗಿ ಈ ಸಮಸ್ಯೆಯನ್ನು ನೈಸರ್ಗಿಕ ರೀತಿಯಲ್ಲಿ ನಿಯಂತ್ರಣ ಮಾಡ ಬೇಕೆಂದರೆ, ಪ್ರತಿದಿನ ನಾಲ್ಕೈದು ಕಪ್ಪು ಒಣದ್ರಾಕ್ಷಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.

Surprising Health Benefits Of Black Raisins That You Didnt Know .