ಸಕ್ಕರೆಕಾಯಿಲೆ ಇದೆ ಎಂದು ವೈದ್ಯರು ಹೇಳಿದ್ರಾ? ಹಾಗಾದ್ರೆ ಸುವರ್ಣ ಗೆಡ್ಡೆ ಸೇವಿಸಿ...

18-07-22 07:37 pm       Source: Vijayakarnataka   ಡಾಕ್ಟರ್ಸ್ ನೋಟ್

ನೋಡಲು ದಪ್ಪನಾಗಿ ಮತ್ತು ಮೈಮೇಲೆ ಮಣ್ಣು ಮೆತ್ತಿಕೊಂಡಿರುವ ಈ ಸುವರ್ಣ ಗೆಡ್ಡೆ ಮಾರ್ಕೆಟ್ ನಲ್ಲಿ ಕಡಿಮೆ ಬೆಲೆಗೆ ಸಿಕ್ಕರೂ ಕೂಡ, ಹೆಚ್ಚಿನ ವರು ಈ ತರಕಾರಿಯನ್ನು ಬಿಟ್ಟುಬರುತ್ತಾರೆ...

ಹುಷಾರು ತಪ್ಪಿದಾಗ ಅಥವಾ ಅನಾರೋಗ್ಯ ಎಂದು ವೈದ್ಯರ ಬಳಿಗೆ ಹೋದರೆ, ಅವರು ತಮ್ಮ ರೋಗಿ ಯನ್ನು ಪರೀಕ್ಷಿಸಿದ ಬಳಿಕ ಮೊದಲಿಗೆ ಹೇಳುವುದು, ಸರಿಯಾಗಿ ವಿವಿಧ ಬಗೆಯ ತರಕಾರಿಗಳ ಸಾಂಬರ್ ಸೇವಿಸಿ, ಇದರಿಂದ ಆರೋಗ್ಯವೃದ್ಧಿಯಾಗುವುದು ಮಾತ್ರವಲ್ಲದೆ, ಅನೇಕ ರೋಗ-ರುಚಿಗಳು ಕೂಡ ನಮ್ಮಿಂದ ದೂರವಿರುವುದು ಎಂದು ಸಲಹೆಗಳನ್ನು ನೀಡುತ್ತಾರೆ.

ಹೌದು ತರಕಾರಿಗಳಲ್ಲಿ ನಮ್ಮ ಆರೋಗ್ಯ ವೃದ್ಧಿಸುವ ಎಲ್ಲಾ ಬಗೆಯ ವಿಟಮಿನ್ಸ್‌ಗಳು, ಖನಿಜಾಂಶಗಳು, ನಾರಿನಾಂಶಗಳು ಆರೋಗ್ಯಕ್ಕೆ ಬೇಕಾಗುವ ಪ್ರೋಟೀನ್, ಕ್ಯಾಲ್ಸಿಯಂ ಇವೆಲ್ಲವೂ ಕೂಡ ಯಥೇಚ್ಛವಾಗಿ ಕಂಡು ಬರುವುದರಿಂದ ನಮ್ಮ ಸದೃಢ ಆರೋಗ್ಯಕ್ಕೆ ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ನೋಡುವುದಾದರೆ, ಹಸಿರೆಲೆ ತರಕಾರಿಗಳಲ್ಲಿ ಇರುವಷ್ಟೇ, ಪೌಷ್ಟಿಕ ಸತ್ವಗಳು, ಮಣ್ಣನ ಅಡಿಯಲ್ಲಿ ಬೆಳೆಯುವ ಗೆಡ್ಡೆಗಳಲ್ಲಿ ಕೂಡ ಕಂಡು ಬರುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಅದು ಸುವರ್ಣಗೆಡ್ಡೆ.

ಆದರೆ ಹೆಚ್ಚಿನವರು, ಈ ತರಕಾರಿ ಕತ್ತರಿಸುವಾಗ ಕೈ ತುರಿಕೆ ಬರುತ್ತದೆ ಎನ್ನುವ ಕಾರಣಕ್ಕೆ ಇದರಿಂದ ದೂರ ನಿಲ್ಲುತ್ತಾರೆ. ಆದರೆ ಇದರ ಪ್ರಯೋಜನಗಳು ಗೊತ್ತಾದ ಮೇಲೆ, ಬಿಟ್ಟು ಬಿಡದೆ, ಈ ತರಕಾರಿ ಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ಪಕ್ಕಾ! ಬನ್ನಿ ಹಾಗಾದ್ರೆ ಈ ಸುವರ್ಣಗೆಡ್ಡೆಯಲ್ಲಿ ಏನೆಲ್ಲಾ ಆರೋಗ್ಯಕಾರಿ ಪ್ರಯೋಜನಗಳು ಅಡಗಿವೆ, ಎನ್ನುವುದನ್ನು ನೋಡೋಣ ಬನ್ನಿ...

ಮಧುಮೇಹ ಕಂಟ್ರೋಲ್ ನಲ್ಲಿಡಲು...

How Baking Soda Affects People with Type 2 Diabetes

  • ದೇಹದ ತೂಕ ಹೆಚ್ಚಾಗಿ, ಬೊಜ್ಜಿನ ಸಮಸ್ಯೆ ಇರುವವರು, ಅಥವಾ ಈಗಾಗಲೇ ಹೃದಯದ ಸಮಸ್ಯೆ ಗಳು, ಅಥವಾ ಮಧುಮೇಹ ಕಾಯಿಲೆ ಇರುವವರು, ತಮ್ಮ ಆಹಾರ ಪದ್ಧತಿಯಲ್ಲಿ ಸುವರ್ಣ ಗೆಡ್ಡೆಯನ್ನು ಬಳಸಿ ಕೊಂಡರೆ ಬಹಳ ಒಳ್ಳೆಯದು.
  • ಇದಕ್ಕೆ ಮುಖ್ಯ ಕಾರಣ, ಈ ಮೊದಲಿಗೆ ಹೇಳಿದಂತೆ, ಈ ತರಕಾರಿಯಲ್ಲಿ ವಿಟಮಿನ್ಸ್ ಮತ್ತು ಖನಿ ಜಾಂಶಗಳು ಅಪಾರ ಪ್ರಮಾಣದಲ್ಲಿ ಯಥೇಚ್ಛವಾಗಿ ಸಿಗುವುದರ ಜೊತೆಗೆ, ಈ ಮೇಲಿನ ಕಾಯಿಲೆ ಗಳ ನಿಯಂತ್ರಣಕ್ಕೆ ಸಹಾಯವಾಗುವ ಫೈಟೋನ್ಯೂಟ್ರಿಯೆಂಟ್ಸ್ ಅಂಶಗಳು ಸಹ ಸಾಕಷ್ಟು ಪ್ರಮಾಣ ದಲ್ಲಿ ಕಂಡು ಬರುವುದರಿಂದ, ಇಂತಹ ದೀರ್ಘಲಾದ ಕಾಯಿಲೆಗಳನ್ನು ಕಂಟ್ರೋಲ್‌ ನಲ್ಲಿಡಲು ಸಹಾಯಕ್ಕೆ ಬರುತ್ತದೆ. ಇನ್ನು ಸಕ್ಕರೆಕಾಯಿಲೆ ಇರುವವರು ತಮ್ಮ ಆಹಾರಪದ್ಧತಿಯಲ್ಲಿ ಈ ತರಕಾರಿ ಯನ್ನು ಮಿತವಾಗಿ ಸೇವನೆ ಮಾಡುವುದರಿಂದ, ರಕ್ತದಲ್ಲಿ ಸಕ್ಕರೆ ಅಂಶ ಏರಿಕೆ ಆಗದಂತೆ ತಡೆಯ ಬಹುದಾಗಿದೆ.

ಹೃದಯಕ್ಕೆ ಬಹಳ ಒಳ್ಳೆಯದು

  • ನೋಡಲು ದಪ್ಪನಾಗಿ ಮತ್ತು ಮೈಮೇಲೆ ಮಣ್ಣು ಮೆತ್ತಿಕೊಂಡಿರುವ ಈ ಸುವರ್ಣ ಗೆಡ್ಡೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಹಲವು ಬಾರಿ ಸಾಬೀತಾಗಿದೆ.
  • ಅದರಲ್ಲೂ ಈಗಾಗಲೇ ಹೃದಯ ಸಮಸ್ಯೆಗೆ ಗುರಿಯಾಗಿದ್ದವರು, ಈ ತರಕಾರಿಯನ್ನು ಮಿತವಾಗಿ ತಮ್ಮ ಆಹಾರ ಪದ್ಧತಿಯಲ್ಲಿ ಬಳಸಿಕೊಳ್ಳು ವುದರಿಂದ ಹೃದಯ ಆರೋಗ್ಯದಲ್ಲಿ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳಬಹುದು. ಮುಖ್ಯವಾಗಿ ಈ ತರಕಾರಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಹಾಗೂ ಹೃದಯ ರಕ್ತ ನಾಳದ ಕಾಯಿಲೆಗಳನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ವಿಟಮಿನ್ ಎ ಅಂಶ

Elephant Foot Yam Stir Fry - Senaikizhangu Poriyal

ಕ್ಯಾರೆಟ್‌ನಲ್ಲಿ ಸಿಗುವಷ್ಟೇ ವಿಟಮಿನ್ ಎ ಅಂಶ, ಈ ತರಕಾರಿಯಲ್ಲಿ ಸಿಗುತ್ತದೆ. ಹೀಗಾಗಿ ಈ ತರಕಾರಿ ಯನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ, ಕಣ್ಣಿನ ಸಮಸ್ಯೆಗಳು ದೂರ ವಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಮೂಲಕ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ಒದಗಿಸಿಕೊಡುತ್ತದೆ.

ವಿಟಮಿನ್ ಬಿ6

Buy Elephant Foot Yam | Suran | Jimikand Online at Best Price in UK -  JustHaatIndian Grocery Store Online, Asian Supermarket, Indian Grocery in UK

  • ನಿಮಗೆ ಗೊತ್ತಿರಲಿ, ವಿಟಮಿನ್ ಬಿ6 ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ವಾರದಲ್ಲಿ, ಒಂದಡೆರಡು ಬಾರಿಯಾದರೂ ಕೂಡ ಸೇವನೆ ಮಾಡುತ್ತಲೇ ಇರಬೇಕು. ಯಾಕೆಂದರೆ ಇಂತಹ ಆಹಾರಗಳು ನಮ್ಮ ದೇಹದ ತ್ವಚೆಯನ್ನು ಆರೈಕೆ ಮಾಡುವುದು ಮಾತ್ರವಲ್ಲದೆ ದೇಹದಲ್ಲಿ ಕೆಂಪು ರಕ್ತದ ಕಣಗಳನ್ನು ಹೆಚ್ಚು ಮಾಡುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ.
  • ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ವಿಟಮಿನ್ ಬಿ6 ಸಮೃದ್ಧವಾಗಿರುವ ಸುವರ್ಣಗೆಡ್ಡೆ. ಹೌದು ಈ ತರಕಾರಿಯಲ್ಲಿ ವಿಟಮಿನ್ ಬಿ6 ಯಥೇಚ್ಛವಾಗಿ ಸಿಗುವುದರಿಂದ, ಈ ತರಕಾರಿಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಒಳ್ಳೆಯದು.

ತೂಕ ಇಳಿಸಲು

Weight Loss Tips| 3 Healthy Habits That are Essential For Permanent Weight  Loss

ಇನ್ನು ಈ ತರಕಾರಿಯಲ್ಲಿ ಫೈಬರ್ ಹಾಗೂ ನಾರಿನಾಂಶ ಕೂಡ ಹೇರಳವಾಗಿ ಕಂಡು ಬರುವುದರಿಂದ, ಇದನ್ನು ಮಿತವಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ, ದೇಹದ ತೂಕವನ್ನು ಇಳಿಸಿಕೊಳ್ಳುಲುನೆರವಾಗುತ್ತದೆ. ಅಷ್ಟೇ ಅಲ್ಲದೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಾದ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಸಮಸ್ಯೆಗಳು ಕೂಡ ದೂರವಾಗುತ್ತದೆ.

ಸುವರ್ಣಗಡ್ಡೆಯ ಸಾಂಬರ್ ಮಾಡುವ ವಿಧಾನ

Elephant Foot Yam Curry | Yam Masala Curry | kanda Gadda Pulusu | Jimikand  ki Sabji | Suran Curry - YouTube

  • ಮೊದಲಿಗೆ ಸುವರ್ಣಗಡ್ಡೆಯ ಮೇಲ್ಮೈಯಲ್ಲಿ ಮೆತ್ತಿಕೊಂಡಿರುವ ಮಣ್ಣನ್ನು ಚೆನ್ನಾಗಿ ನೀರಿನಲ್ಲಿ ತೊಳೆದುಕೊಂಡು, ಅದರ ಮೇಲಿನ ಸಿಪ್ಪೆಯನ್ನು ಚೆನ್ನಾಗಿ ಹರಿತವಾದ ಚಾಕುವಿನ ಸಹಾಯದಿಂದ ತೆಗೆಯಬೇಕು.
  • ಆಮೇಲೆ ಸುವರ್ಣ ಗೆಡ್ಡೆಯನ್ನು ನಿಮಗೆ ಬೇಕಾದ ಗಾತ್ರಕ್ಕೆ ಹೆಚ್ಚಿಕೊಂಡು, ಅದನ್ನು ಹುಣಸೆಹಣ್ಣಿನ ಹುಳಿಯೊಂದಿಗೆ, ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು, ಕುಕ್ಕರ್ ನಲ್ಲಿ ಬೇಯಿಸಿಕೊಳ್ಳ ಬೇಕು. ಆಮೇಲೆ ಮಾಮೂಲಿ ಸಂಬರ್‌ಗೆ ಬಳಸುವ ಅಡುಗೆ ಪದಾರ್ಥಗಳನ್ನು ಬಳಸಿ, ಸಂಬರ್ ರೆಡಿ ಮಾಡಿಕೊಳ್ಳಬಹುದು.

Know The Secret Health Benefits Of Elephant Foot Yam Or Suran.