ಕಿಡ್ನಿ ಸ್ಟೋನ್- ಟೈಫಾಯಿಡ್ ಜ್ವರ ಬರಬಾರದೆಂದರೆ, ದಿನಾ ತುಳಸಿ ಎಲೆಗಳನ್ನು ಜಗಿಯಿರಿ...

22-07-22 07:42 pm       Source: Vijayakarnataka   ಡಾಕ್ಟರ್ಸ್ ನೋಟ್

ಪುರಾತನ ಕಾಲದಿಂದ ಹಿಡಿದು, ಹಿಂದಿನ ಕಾಲಿದವರೆಗೂ ಕೂಡ ಅಷ್ಟೇ, ಆಯುರ್ವೇದ ಔಷಧಿಗಳಲ್ಲಿ ತುಳಸಿ ಗಿಡದ ಎಲೆಗಳನ್ನು ಹಲವಾರು ಕಾಯಿಲೆಗಳನ್ನು ಗುಣಪಡಿಸಲು ಬಳಸುತ್ತಾರೆ....

ಪುರಾತನ ಕಾಲದಿಂದಲೂ ಕೂಡ ಅಷ್ಟೇ ತುಳಸಿ ಗಿಡದ ಎಲೆಗಳನ್ನು ಔಷಧಿಯಾಗಿಯೂ ಬಳಸಿಕೊಂಡು ಬರಲಾಗುತ್ತಾ ಇದೆ. ಈ ಗಿಡದ ಎಲೆಗಳಲ್ಲಿ, ಮನುಷ್ಯನ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವ ಹಲವಾರು ರೀತಿಯ ಔಷಧೀಯ ಗುಣಗಳು ಅಡಗಿದೆ ಎಂದು ಹೇಳಲಾಗುತ್ತದೆ. ಕೆಲವೊಂದು ಅಧ್ಯಯನ ಗಳು ಕೂಡ ಇದನ್ನು ಸಾಬೀತು ಮಾಡಿವೆ.

ಮುಖ್ಯವಾಗಿ ಈ ತುಳಸಿಯ ಎಲೆಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ ಸಮೃದ್ಧವಾಗುರುವುದರಿಂದ, ಸೋಂಕಿನ ವಿರುದ್ಧ ಹೋರಾಡುವಲ್ಲಿ ನೆರವಿಗೆ ಬರುತ್ತದೆ. ಹೀಗಾಗಿ ಪ್ರತಿದಿನ ಒಂದೆರಡು ತುಳಸಿ, ಎಲೆಗಳನ್ನು ಖಾಲಿ ಹೊಟ್ಟೆಗೆ ಜಗಿದು, ಅದ ರಸವನ್ನು ನುಂಗಿದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ, ಅನೇಕ ಆರೋಗ್ಯ ಸಮಸ್ಯೆಗಳಿಂದ ಕೂಡ ದೂರವಿರಲು ನೆರವಾಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ತುಳಸಿ ಎಲೆಗಳಲ್ಲಿ ಬೇರೆ ಏನೆಲ್ಲಾ ಪ್ರಯೋಜನಗಳು ಅಡಗಿದೆ ಎನ್ನುವುದನ್ನು ನೋಡೋಣ...

ಕಿಡ್ನಿ ಕಲ್ಲುಗಳನ್ನು ಕರಗಿಸುತ್ತದೆ

  • ದಿನದ 24 ಗಂಟೆ ಕೂಡ ಕಾರ್ಯ ನಿರ್ವಹಿಸುವ ನಮ್ಮ ದೇಹದ ಕಿಡ್ನಿಗಳ ಪ್ರಮುಖ ಕಾರ್ಯಗಳು ಏನೆಂದರೆ, ದೇಹದಿಂದ ಹೊರ ಹೋಗಬೇಕಾದ ವಿಷಕಾರಿ ಅಂಶಗಳು ಸಂಸ್ಕರಣೆ ಮಾಡಿ, ಮೂತ್ರದ ಮೂಲಕ ಹೊರಗೆ ಹಾಕುವುದು. ಆದರೆ ಕೆಲವೊಮ್ಮೆ ಅನಾರೋಗ್ಯಕಾರಿ ಆಹಾರ ಪದ್ಧತಿ ಸೇವನೆಯಿಂದ ಕಿಡ್ನಿ ಕಲ್ಲು ಉಂಟಾಗಿ, ಸಮಸ್ಯೆ ಎದುರಾಗುತ್ತದೆ. ಇದರಿಂದ ದೇಹದೊಳಗಿನ ವಿಷಕಾರಿ ಅಂಶಗಳು ಶೇಖರಣೆಯಾಗಿ, ದೇಹದ ಇತರ ಅಂಗಾಗಗಳಿಗೂ ಸಮಸ್ಯೆ ಎದುರಾಗುತ್ತದೆ. ಇದರ ಜೊತೆಗೆ ಯೂರಿಕ್ ಆಮ್ಲ ಕೂಡ ಶೇಖರಣೆಯಾಗಿ, ಸಮಸ್ಯೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಯಾವತ್ತಿಗೂ ಡೇಂಜರ್!
  • ಹೀಗಾಗಿ ಕಿಡ್ನಿ ಸ್ಟೋನ್ ಸಮಸ್ಯೆಗಳು ಎದುರಾಗಬಾರದು ಎಂದರೆ, ತುಳಸಿ ಎಲೆಗಳನ್ನು ಖಾಲಿ ಹೊಟ್ಟೆಗೆ ಜಗಿಯುವ ಅಭ್ಯಾಸ ಮಾಡಿಕೊಳ್ಳಿ. ಸಾಧ್ಯವಾದರೆ, ತಾಜಾ ತುಳಿಸಿ ಎಲೆಗಳ ಟೀ ಮಾಡಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಏಕೆಂದರೆ ತುಳಸಿ ಎಲೆಗಳಲ್ಲಿ ಅಸಿಟಿಕ್ ಆಮ್ಲ ಹಾಗೂ ಉರಿಯೂತ ನಿವಾರಕ ಗುಣಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಕಿಡ್ನಿಗಳಲ್ಲಿ ಕಲ್ಲು ಉಂಟಾಗುವ ಸಾಧ್ಯತೆಯನ್ನು ತಪ್ಪಿಸುತ್ತವೆ.

ಶ್ವಾಸಕೋಶದ ಆರೋಗ್ಯ

  • ದೇಹದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ಕಣ್ಣಿಗೆ ಕಾಣದ ದೇಹದ ಪ್ರಮುಖ ಅಂಗಾಂಗಳ ಆರೋಗ್ಯಕ್ಕೂ ಕೂಡ ಅಷ್ಟೇ ಪ್ರಮುಖ್ಯತೆ ನೀಡಬೇಕು. ಇದಕ್ಕಾಗಿ ಸರಿಯಾದ ಜೀವನಶೈಲಿಯ ಜೊತೆಗೆ ಆರೋಗ್ಯಕಾರಿ ಆಹಾರಗಳ ಸೇವನೆ ಮಾಡುವ ರೂಢಿ ಮಾಡಿಕೊಳ್ಳಬೇಕು. ಮುಖ್ಯವಾಗಿ ಆಂಟಿಆಕ್ಸಿಡೆಂಟ್ ಹಾಗೂ ವಿಟಮಿನ್ ಸಿ ಅಂಶ ಹೆಚ್ಚಿರುವ ಆಹಾರಗಳಿಗೆ ಹೆಚ್ಚಿನ ಪ್ರಾಮುಖ್ಯತ ನೀಡಬೇಕು.
  • ಈ ನಿಟ್ಟಿನಲ್ಲಿ ನೋಡುವುದಾದರೆ, ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್-ಸಿ ಅಂಶ ಅಪಾರ ಪ್ರಮಾಣದಲ್ಲಿ ತುಳಸಿ ಎಲೆಗಳಲ್ಲಿ ಸಿಗುವುದರಿಂದ, ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ಶ್ವಾಸಕೋಶದ ಭಾಗದ ಸೋಂಕನ್ನು ಕೂಡ ದೂರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ತುಳಸಿ ಎಲೆಗಳನ್ನು ಜಗಿದು, ಅದರ ರಸ ಸೇವನೆ ಯಿಂದ, ಆರೋಗ್ಯ ವೃದ್ಧಿಯಾ ಗವುದು ಮಾತ್ರವಲ್ಲದೆ, ಶ್ವಾಸಕೋಶ ಕೂಡ ಆರೋಗ್ಯವಾಗಿ ಇರುತ್ತದೆ.

ಟೈಫಾಯಿಡ್ ಜ್ವರ

New traditional herbal cough syrup uses thyme extract to deliver |  SHEmazing!

  • ಟೈಫಾಯಿಡ್ ಜ್ವರದ ವಿಷಯಕ್ಕೆ ಬಂದರೆ, ಈ ಜ್ವರ ಒಮ್ಮೆ ಕಾಣಿಸಿಕೊಂಡರೆ, ಸರಿಸುಮಾರು ಒಂದು ವಾರದವರೆಗೂ ಕೂಡ, ಮನುಷ್ಯನ್ನನ್ನು ಕಾಡುತ್ತಲೇ ಇರುತ್ತದೆ. ರಾತ್ರಿ ಆಗುತ್ತಿದ್ದಂತೆ ವಿಪರೀತ ಚಳಿ ಜ್ವರ ಕಾಣಿಸಿಕೊಳ್ಳುವುದರ ಜೊತೆಗೆ, ವಿಪರೀತ ಸುಸ್ತು, ಆಯಾಸವನ್ನು ಉಂಟು ಮಾಡುತ್ತದೆ.
  • ಈ ಜ್ವರ ಬಂದ ಬಳಿಕ ವೈದ್ಯರ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳುವುದರ ಜೊತೆಗೆ, ತುಳಸಿ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಅಥವಾ ಬಿಸಿ ತುಳಸಿ ಎಲೆಗಳ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.
  • ಇದರ ಎಲೆಗಳಲ್ಲಿ ಆಂಟಿ - ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ನಮ್ಮ ದೇಹದಿಂದ ಟೈಫಾಯ್ಡ್ ಜ್ವರವನ್ನು ಉಂಟು ಮಾಡುವ ಸೆಲಾಮೊನೆಲ್ಲ ಟೈಫಿ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುತ್ತದೆ. ಇದರಿಂದ ಜ್ವರ ಬಹಳ ಬೇಗನೆ ಕಡಿಮೆಯಾಗಿ ನಾವು ಸಹಜ ಸ್ಥಿತಿಗೆ ಮರಳುತ್ತೇವೆ.

ಹಲ್ಲುಗಳ ಹಾಗೂ ವಸಡುಗಳ ಆರೋಗ್ಯಕ್ಕೆ

  • ಸರಿಯಾಗಿ ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ, ಬಾಯಿಯಿಂದ ಅತಿಯಾದ ದುರ್ವಾಸನೆ ಕಂಡು ಬರಲು ಶುರುವಾಗುತ್ತದೆ. ಇದಕ್ಕೆಲ್ಲಾ ಕಾರಣ ಏನಾದರೂ ತಿಂದ ಬಳಿಕ ಅಥವಾ ಊಟದ ಬಳಿಕ ಸರಿಯಾಗಿ ಬಾಯಿಯೊಳಗೆ ಸ್ವಚ್ಛತೆ ಮಾಡದೇ ಇರುವುದರಿಂದ ವಸಡುಗಳು ಹಾಗೂ ಹಲ್ಲುಗಳಲ್ಲಿ ಬ್ಯಾಕ್ಟೀರಿಯಾಗಳ ಸಂತತಿ ಹೆಚ್ಚಾಗಿ ಈ ಬಾಯಿಯ ದುರ್ವಾಸನೆ ಸಮಸ್ಯೆಗೆ ಕಾರಣವಾಗಿ ಬಿಡುತ್ತದೆ.
  • ಈ ಸಮಸ್ಯೆಗೆ ತುಳಸಿ ಎಲೆಗಳಲ್ಲಿ ಪರಿಹಾರವಿದೆ. ಇದಕ್ಕಾಗಿ ಒಂದು ಲೋಟ ನೀರಿಗೆ, ಒಂದೆರಡು ಚಮಚದಷ್ಟು ತುಳಸಿ ಎಲೆಗಳ ರಸವನ್ನು ಮಿಕ್ಸ್ ಮಾಡಿ, ಬಾಯಿ ಮುಕ್ಕಳಿಸುವುದರಿಂದ ಈ ಸಮಸ್ಯೆ ದೂರವಾಗುತ್ತದೆ.

Chew Two Or Three Besil Leaves On Empty Stomach And See The Health Benefits.