ನೋಡಲು ಏನೂ ಸತ್ವವಿಲ್ಲದ ಹಾಗೆ ಕಂಡರೂ, ಸಕತ್ ಪವರ್‌ಫುಲ್ ಈ ಒಣಶುಂಠಿ!

25-07-22 09:00 pm       Source: Vijayakarnataka   ಡಾಕ್ಟರ್ಸ್ ನೋಟ್

ದೇಹದ ಆರೋಗ್ಯದ ವಿಷ್ಯಕ್ಕೆ ಬಂದಾಗ, ಶುಂಠಿಯಲ್ಲಿರುವ ಆರೋಗ್ಯದ ಲಾಭಗಳನ್ನು ಮರೆಯುವ ಹಾಗಿಲ್ಲ! ಅದು ಹಸಿಯಾಗಿದ್ದರೂ ಅಷ್ಟೇ, ಒಣಗಿದ್ದರೂ ಅಷ್ಟೇ,...

ಮಳೆಗಾಲ ಬಂತೆಂದರೆ ಸಾಕು, ಪಕ್ಕನೆ ನೆನಪಿಗೆ ಬರುವುದು ಶುಂಠಿ! ಈ ಸಮಯದಲ್ಲಿ ಕಾಡುವ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಯನ್ನು ಬಹಬೇಗನೇ ಕಡಿಮೆ ಮಾಡುವ ಎಲ್ಲಾ ಗುಣಲಕ್ಷಣಗಳು ಕೂಡ ಈ ಶುಂಠಿಯಲ್ಲಿ ಕಂಡು ಬರುತ್ತದೆ. ಅಷ್ಟೇ ಅಲ್ಲದೆ, ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಿ, ಕೆಟ್ಟುಹೋದ ಹೊಟ್ಟೆಯನ್ನು ಸರಿಪಡಿಸಿ ವಾಕರಿಕೆ ವಾಂತಿ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆ ಗಳನ್ನೆಲ್ಲಾ ಸರಿಪಡಿಸಿ, ಆರೋಗ್ಯಕ್ಕೆ ಸದಾ ನೆರವಿಗೆ ಬರುತ್ತದೆ.

ಆದರೆ ಒಣಶುಂಠಿಯ ವಿಷ್ಯಕ್ಕೆ ಬಂದಾಗ, ಇದರಲ್ಲಿ ಯಾವುದೇ ಸಾರವಿಲ್ಲ ಹಾಗೂ ಹಸಿ ಶುಂಠಿಯಲ್ಲಿ ಕಂಡು ಬರುವಷ್ಟು ಪ್ರಯೋಜನಗಳು ಇದರಲ್ಲಿ ಸಿಗುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಂದು ಬಿಡುತ್ತೇವೆ. ಆದರೆ ನಿಮಗೆ ಗೊತ್ತಿರಲಿ, ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಹಸಿ ಶುಂಠಿ ಹೇಗೆ ಪರಿಹಾರ ಒದಗಿಸುತ್ತದೆಯೋ, ಅದಕ್ಕಿಂತ ದುಪ್ಪಟ್ಟು ಪ್ರಯೋಜನಗಳನ್ನು ಒಣಶುಂಠಿಯಲ್ಲೂ ಕೂಡ, ನಾವು ನಿರೀಕ್ಷೆ ಮಾಡಿಕೊಳ್ಳಬಹುದು. ಬನ್ನಿ ಇಂದಿನ ಲೇಖನದಲ್ಲಿ ಈ ಒಣಶುಂಠಿಯಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳು ಯಾವುದು ಎನ್ನುವುದನ್ನು ನೋಡೋಣ ಬನ್ನಿ...

ಹೊಟ್ಟೆಕೆಟ್ಟು ಹೋದ ಸಂದರ್ಭದಲ್ಲಿ....

Stomach Pain Treatment | Chat with a Doctor Online | Tata Health

  • ಕೆಲವೊಮ್ಮೆ ಅನಾರೋಗ್ಯಕಾರಿ ಆಹಾರಗಳ ಸೇವನೆಯಿಂದ ಅಥವಾ ಎಣ್ಣೆ ಪದಾರ್ಥಗಳು ಹೆಚ್ಚಿ ರುವ ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡುವುದರಿಂದ, ಇಲ್ಲಾಂದ್ರೆ ಮಸಾಲೆ ಪದಾರ್ಥಗಳು ಹೆಚ್ಚಾಗಿರುವ ಆಹಾರಗಳ, ಸೇವನೆಯಿಂದಾಗಿ ಹೊಟ್ಟೆ ಕೆಟ್ಟು ಹೋದಂತಹ ಅನುಭವ ಉಂಟಾಗಿಬಿಡುತ್ತದೆ.
  • ಇದಕ್ಕೆ ಮುಖ್ಯ ಕಾರಣ, ನಾವು ಸೇವನೆ ಮಾಡಿರುವ ಆಹಾರಗಳು ಸರಿಯಾಗಿ ಜೀರ್ಣವಾಗದೆ, ಅಜೀರ್ಣ ಸಮಸ್ಯೆ ಉಂಟಾಗಿ ಕೊನೆಗೆ 
    ವಾಕರಿಕೆ ವಾಂತಿಯಿಂದ ಪ್ರಾರಂಭವಾಗಿ ನಂತರ ಭೇದಿ ಸಮಸ್ಯೆವರೆಗೆ ಕಾಡಲು ಶುರುವಾಗುತ್ತದೆ.

ಹೀಗೆ ಮಾಡಿ
ಒಂದು ವೇಳೆ ಸಡನ್ ಆಗಿ, ಇಂತಹ ಸಮಸ್ಯೆ ಎದುರಾದರೆ, ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಟೀ ಚಮಚ ಆಗುವಷ್ಟು ಒಣ ಶುಂಠಿ ಪುಡಿಯನ್ನು ಮಿಕ್ಸ್ ಮಾಡಿ, ದಿನದಲ್ಲಿ ಎರಡು ಮೂರು ಬಾರಿ ಕುಡಿಯುತ್ತಾ ಬಂದರೆ, ಈ ಸಮಸ್ಯೆಗೆ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳಬಹುದು.

ನೆಗಡಿ ಕೆಮ್ಮು ಶೀತ ಸಮಸ್ಯೆಗಳು ಎದುರಾದರೆ...

Common Cold Symptoms, Causes, Treatment, and Prevention │ Vicks

ಸಾಮಾನ್ಯವಾಗಿ ಮಳೆಗಾಲದ ಸಂದರ್ಭದಲ್ಲಿ ವಾತಾವರಣದಲ್ಲಿ ಪದೇ ಪದೇ ಏರುಪೇರು ಉಂಟಾದಾಗ, ಹುಷರು ತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ಮುಖ್ಯವಾಗಿ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಗಡಿ ಕೆಮ್ಮು ಶೀತ ಕೊನೆಗೆ ಜ್ವರ ಕೂಡ ಕಂಡುಬರುವ ಎಲ್ಲಾ ಲಕ್ಷಣಗಳು ಕೂಡ ಅಧಿಕ ಇರುತ್ತದೆ. ಒಂದು ವೇಳೆ ನಿಮಗೂ ಕೂಡ ಇಂತಹ ಸಮಸ್ಯೆ ಎದುರಾಗಿದ್ದರೆ, ಇಲ್ಲದೆ ನೋಡಿ, ಸಿಂಪಲ್ ಮನೆಮದ್ದು

ಹೀಗೆ ಮಾಡಿ..
ಒಂದು ಚಮಚ ಜೇನುತುಪ್ಪ, ಇಷ್ಟೇ ಪ್ರಮಾಣದಲ್ಲಿ ಹಸುವಿನ ತುಪ್ಪ ಹಾಗೂ ಒಣ ಶುಂಠಿ ಪುಡಿ ಎಲ್ಲ ವನ್ನೂ ಮಿಶ್ರಣ ಮಾಡಿ, ದಿನದಲ್ಲಿ ಒಮ್ಮೆಯಾದರೂ ಸೇವನೆ ಮಾಡುತ್ತಾ ಬಂದರೆ, ಪರಿಹಾರವನ್ನು ಕಂಡು ಕೊಳ್ಳಬಹುದು. ಮುಖ್ಯವಾಗಿ ಎದೆಯ ಭಾಗದಲ್ಲಿ ಕಂಡು ಬರುವ ಕಫವನ್ನು ಕರಗಿಸಿ, ಕೆಮ್ಮು ಶೀತ ವನ್ನು ದೂರ ಮಾಡುತ್ತದೆ.

ಅಜೀರ್ಣ ಹಾಗೂ ಮಲಬದ್ಧತೆ

kotaliya Sonth - Zingiber Officinale - Dry Ginger Seed (350g) Price in  India - Buy kotaliya Sonth - Zingiber Officinale - Dry Ginger Seed (350g)  online at Flipkart.com

  • ಮನುಷ್ಯನಿಗೆ ಮೂರು ಹೊತ್ತಿನ ಆಹಾರ ಸೇವನೆ ಪ್ರಕ್ರಿಯೆ, ಹೇಗೆ ಕ್ರಮಬದ್ಧವಾಗಿ ನಡೆಯುತ್ತ ದೆಯೋ, ಅಂತೆಯೇ ಆತ ಸೇವನೆ ಮಾಡಿದ ಆಹಾರ, ದೇಹದಲ್ಲಿ ಸರಿಯಾಗಿ ಜೀರ್ಣವಾಗುವ ಪ್ರಕ್ರಿಯೆ ಕೂಡ ನಡೆಯಬೇಕು. ಜೊತೆಗೆ ಮಲದ ರೂಪದಲ್ಲಿ ದೇಹದಿಂದ ಹೊರ ಹೋಗುವ ಪ್ರಕ್ರಿಯೆಯೂ ಕೂಡ ಸುಲಭ ವಾಗಿ ನಡೆಯಬೇಕು. ಒಂದು ವೇಳೆ, ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಏರುಪೇರಾದರೆ ಅಜೀರ್ಣತೆ ಹಾಗೂ ಮಲಬದ್ಧತೆ ಎರಡೂ ಕೂಡ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.
  • ಕೆಲವೊಮ್ಮೆ ಅನಾರೋಗ್ಯಕಾರಿ ಆಹಾರ ಸೇವನೆಯಿಂದಾಗಿ, ಸರಿಯಾಗಿ ಜೀರ್ಣ ಪ್ರಕ್ರಿಯೆ ನಡೆಯದೆ, ಅಜೀರ್ಣತೆ ಹಾಗೂ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಒಂದು ವೇಳೆ ನಿಮಗೂ ಈ ಸಮಸ್ಯೆ ಎದುರಾ ಗಿದ್ದರೆ, ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ ನೋಡಿ...

ಹೀಗೆ ಮಾಡಿ
ಒಂದು ಚಮಚ ಒಣ ಶುಂಠಿ ಪುಡಿ, ಚಿಟಿಕೆಯಷ್ಟು ಹಿಂಗು ಹಾಗೂ ಸ್ವಲ್ಪ ಕಲ್ಲು ಉಪ್ಪು ಬೆರೆಸಿಕೊಂಡು ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು -ಮೂರು ದಿನಗಳವರೆಗೆ ಕುಡಿಯುತ್ತಾ ಬಂದರೆ, ಈ ಸಮಸ್ಯೆ ದೂರವಾಗುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬಂದರೆ

How to Get Rid of Gas Pain Fast - ಹೊರಗಡೆ ಊಟ-ತಿಂಡಿ ಮಾಡಿದರಿಂದ ಗ್ಯಾಸ್ಟ್ರಿಕ್  ಆಗಿದೆಯಾ? ಇಲ್ಲಿದೆ ಪರಿಹಾರಗಳು

  • ಸಾಮಾನ್ಯವಾಗಿ ಆಲೂಗಡ್ಡೆ, ಕಡ್ಲೆಕಾಳು ಅಥವಾ ಕಾಬೂಲ್ ಕಡ್ಲೆ ತೊಗರಿಬೇಳೆ ಸಾರು,ಮೊದಲಾದ ವುಗಳ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ, ಕೆಲವೊಮ್ಮೆ ಗ್ಯಾಸ್ಟ್ರಿಕ್ ಸಮಸ್ಯೆ ಎದುರಾ ಗುತ್ತದೆ.
  • ಒಂದು ವೇಳೆ, ಈ ಸಮಸ್ಯೆ ಉಂಟಾದರೆ, ಒಂದು ಚಮಚ ಓಂಕಾಳುಗಳನ್ನು ಮತ್ತು ಸಣ್ಣ ತುಂಡು ಒಣ ಶುಂಠಿಯನ್ನು ಒಟ್ಟಿಗೆ ಬೆರೆಸಿ ಚೆನ್ನಾಗಿ ಪುಡಿಮಾಡಿಕೊಳ್ಳಿ. ಆಮೇಲೆ ಇದಕ್ಕೆ ಒಂದು ಚಮಚ ಆಗುವಷ್ಟು ನಿಂಬೆ ರಸ ಹಾಗು ಬ್ಲ್ಯಾಕ್ ಸಾಲ್ಟ್ ಹಾಕಿ ಮಿಶ್ರಣ ಮಾಡಿಕೊಂಡು ದಿನಕ್ಕೆ ಒಂದುಬಾರಿ ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ, ಈ ಸಮಸ್ಯೆಯಿಂದ ಪರಿಹಾರ ಕಾಣಬಹುದಾಗಿದೆ.

Know The Super Health Benefits Of Dry Ginger During Monsoon Season.