ಪ್ರೋಟೀನ್ ಅಂಶ ಹೆಚ್ಚಿರುವ, ಇಂತಹ ಆಹಾರಗಳನ್ನು ಸೇವಿಸಲೇಬೇಕು!

12-05-23 09:12 pm       Source: Vijayakarnataka   ಡಾಕ್ಟರ್ಸ್ ನೋಟ್

ಪ್ರೋಟೀನ್ ಅಂಶ ಹೆಚ್ಚಿರುವ ಆಹಾರ-ಪದಾರ್ಥಗಳನ್ನು ನಮ್ಮ ದೈನಂದಿನ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ, ದೇಹದ ಮಾಂಸಖಂಡಗಳ ಬೆಳವಣಿಗೆ, ಮೂಳೆಗಳ ಸದೃಢತೆ, ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ, ಇನ್ನಿತರ ಹಲವಾರು ಆರೋಗ್ಯ ಪ್ರಯೋಜನಗಳು ಸಿಗುತ್ತದೆ.

ಮಧುಮೇಹ ಕಾಯಿಲೆ ಇದ್ದವರಿಗೆ, ಪ್ರೋಟೀನ್ ಅಂಶ ಹೆಚ್ಚಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು, ಪ್ರಮುಖವಾಗಿ ಬೆಳಗಿನ ಉಪಹಾರಕ್ಕೆ ಪ್ರೋಟೀನ್ ಪ್ರಮಾಣ ಅಧಿಕ ಪ್ರಮಾಣದಲ್ಲಿ ಸಿಗುವ ಉಪಹಾರವನ್ನು ಸೇವನೆ ಮಾಡಿದರೆ, ಶುಗರ್ ಲೆವೆಲ್ ಕಂಟ್ರೋಲ್‌‌ಗೆ ಬರುತ್ತದೆ ಎಂದು ವೈದ್ಯರು ತಮ್ಮ ರೋಗಿಗಳಿಗೆ ಸಲಹೆ ನೀಡುತ್ತಾರೆ.

ಆದರೆ ಪ್ರೋಟೀನ್ ಅಂಶ ಇರುವ, ಆಹಾರ ಪದಾರ್ಥಗಳ ಪ್ರಯೋಜನಗಳು ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ,ಬದಲಿಗೆ ದೇಹದ ಮಾಂಸಖಂಡಗಳ ಬೆಳವಣಿಗೆಯಲ್ಲಿ, ಮೂಳೆಗಳ ಸದೃಢತೆ ಯಲ್ಲಿ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ, ಮೆಟಬಾಲಿಸಂ ಪ್ರಕ್ರಿಯೆ ಅಚ್ಚು ಕಟ್ಟಾಗಿ ಕಾರ್ಯನಿರ್ವಹಿಸುವಲ್ಲಿ ಪ್ರೋಟೀನ್ ಅಂಶದ ಪಾತ್ರ ಮಹತ್ವದ್ದು!

ಹೀಗಾಗಿ ನಮ್ಮ ಪ್ರತಿನಿತ್ಯ ಸೇವಿಸುವ ಆಹಾರ ಪದ್ಧತಿಯಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿ ಸಿಗುವ ಹಣ್ಣು-ತರಕಾರಿಗಳು, ಬೇಳೆಕಾಳುಗಳು, ಡ್ರೈಫ್ರೂಟ್ಸ್‌ ಗಳು, ಹಾಲಿನ ಉಪ ಉತ್ಪನ್ನವಾದ ಮೊಸರು, ಕಾಟನ್ ಚೀಸ್, ಪನ್ನೀರು ಹಾಗೂ ನಾನ್‌ವೆಜ್ ಇಷ್ಟ ಪಡುವವರು, ಮಿತವಾಗಿ ಚಿಕನ್, ಮೊಟ್ಟೆ, ಇತ್ಯಾದಿಗಳನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬರುವುದರಿಂದ, ಆರೋಗ್ಯ ವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ!

ಬೇಯಿಸಿದ ಮೊಟ್ಟೆ

Classic Hard-boiled Eggs - YMCA of Central Florida

  • ಪ್ರೋಟೀನ್‌ ವಿಚಾರದಲ್ಲಿ ಹೇಳುವುದಾದರೆ, ಮೊಟ್ಟೆ ಹಾಗೂ ಚಿಕನ್ ಇವೆರಡೂ ಕೂಡ ಮೊದಲ ಸ್ಥಾನದಲ್ಲಿ ಬಂದು ನಿಲ್ಲುತ್ತದೆ. ಅದರಲ್ಲೂ ಮೊಟ್ಟೆಯಲ್ಲಿ ಅಂತೂ ಯಥೇಚ್ಛವಾಗಿ ಪ್ರೋಟೀನ್ ಅಂಶಗಳು ಕಂಡು ಬರುತ್ತದೆ.
  • ಅಧ್ಯಾಯನದ ವರದಿಯ ಪ್ರಕಾರ, ಒಂದು ಮೊಟ್ಟೆ ಯಲ್ಲಿ, ಏನಿಲ್ಲಾ ಅಂದರೂ ಕೂಡ 6 ಗ್ರಾಂ ನಷ್ಟು ಪ್ರೋಟೀನ್ ಅಂಶ ಕಂಡು ಬರುತ್ತದೆಯಂತೆ. ಜೊತೆಗೆ ಮನುಷ್ಯನ ದೇಹಕ್ಕೆ ಅಗತ್ಯವಾಗಿ ಬೇಕಾದ ಅಮೈನೋ ಆಮ್ಲಗಳು ಕೂಡ ಕಂಡು ಬರುವುದರಿಂದ, ಇವು ದೇಹದ ಒಳಗೆ ಸೇರಿದ ಪ್ರೋಟೀನ್ ಅಂಶಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ.
  • ಹೀಗಾಗಿ ಪ್ರೋಟೀನ್ ಅಂಶ ಹೆಚ್ಚಾಗಿರುವ ಮೊಟ್ಟೆ ಯನ್ನು ಪ್ರತಿದಿನ ಬೇಯಿಸಿ ಸೇವನೆ ಮಾಡುವುದರಿಂದ ದೇಹದಲ್ಲಿ ಮೂಳೆಗಳು ಬಲಗೊಳ್ಳುವುದು, ಮಾಂಸ ಖಂಡಗಳು ಚೆನ್ನಾಗಿ ರೂಪುಗೊಂಡು, ದೇಹದಲ್ಲಿನ ಬೊಜ್ಜಿನ ಸಮಸ್ಯೆ ನಿಯಂತ್ರಣಕ್ಕೆ ಬರುವುದು.

ಒಂದು ಕಪ್ ಮೊಸರು ಸೇವನೆ ಮಾಡಿ

6 reasons why you may have been eating curd the wrong way | HealthShots

  • ಹಾಲಿನ ಉಪ ಉತ್ಪನ್ನವಾದ ಮೊಸರಿನಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಕಂಡು ಬರುವ ಕಾರಣ ಆರೋಗ್ಯಕ್ಕೆ ಇದರಿಂದ ಸಾಕಷ್ಟು ಲಾಭಗಳಿವೆ.
  • ಪ್ರಮುಖವಾಗಿ ಇದರಲ್ಲಿ ಕ್ಯಾಲ್ಸಿಯಂ, ವಿವಿಧ ಬಗೆಯ ವಿಟ ಮಿನ್ಸ್‌ ಗಳು ಹಾಗು ಪ್ರೋಟೀನ್ ಅಂಶಗಳು ಅಧಿಕ ಪ್ರಮಾಣ ದಲ್ಲಿ ಸಿಗುವುದರಿಂದ ಇದೊಂದು ಆರೋಗ್ಯ ಕರವಾದ ಆಹಾರ ಪದಾರ್ಥ ಎಂದು ಹೇಳಬಹುದು.
  • ಹೀಗಾಗಿ ಊಟದ ಬಳಿಕ ಒಂದು ಕಪ್ ಮೊಸರು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಬಹಳ ಒಳ್ಳೆಯದು.​

ಕೆಂಪು ಬಣ್ಣದ ಬೇಳೆ ಕಾಳುಗಳು

ಕೆಂಪು ಬಣ್ಣದ ಬೇಳೆ ಕಾಳುಗಳು

  • ಸಾಮಾನ್ಯವಾಗಿ ಸಾಂಬರ್ ಮಾಡುವಾಗ ವಿವಿಧ ಬಗೆಯ ಬೇಳೆ ಕಾಳುಗಳನ್ನು ಉಪಯೋಗಿಸುತ್ತೇವೆ. ಆದರೆ ಇವು ಗಳಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ!
  • ಕೇವಲ ಸಾಂಬರಿನ ರುಚಿ, ಹೆಚ್ಚಿಸುವುದಕ್ಕಾಗಿ, ಬಳಸು ತ್ತೇವೆ ಅಷ್ಟೇ. ಆದರೆ ನಿಮಗೆ ಗೊತ್ತಿರಲಿ, ಕೆಲವೊಂದು ಬಗೆಯ ಬೇಳೆ ಕಾಳುಗಳಲ್ಲಿ ವಿವಿಧ ಬಗೆಯ ವಿಟಮಿನ್ಸ್‌ ಗಳು, ನಾರಿನಾಂಶಗಳು, ಖನಿಜಾಂಶಗಳು ಹಾಗೂ ಪ್ರೋಟೀನ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ಕೆಂಪು ಬಣ್ಣದ ಬೇಳೆ ಕಾಳುಗಳು.
  • ಹೌದು ಆರೋಗ್ಯಕ್ಕೆ ಮಾರಕವಾಗಿರುವ ಗ್ಲುಟೆನ್ ಅಂಶ ಮುಕ್ತ ವಾಗಿರುವ ಈ ಕಾಳುಗಳಲ್ಲಿ ಪ್ರೋಟೀನ್ ಅಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ.
  • ಹಾಗಾಗಿ ಇದೊಂದು ಆರೋಗ್ಯಕ್ಕೆ ಪೌಷ್ಟಿಕಾಂಶ ಭರಿತ ನೈಸರ್ಗಿಕ ಆಹಾರ ಪದಾರ್ಥ ಎಂದರೆ ತಪ್ಪಾಗಲಾರದು.​

ಚಿಕನ್ ಸೇವನೆ

Chicken Online - Order Fresh Chicken Online At Best Price - Licious

  • ತನ್ನಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳನ್ನು ಒಳಗೊಂಡಿ ರುವ ಚಿಕನ್‌ನಲ್ಲಿ ಪ್ರೋಟೀನ್ ಅಂಶಗಳಿಗೆ ಏನೂ ಕೊರತೆ ಇಲ್ಲ.
  • ಆರೋಗ್ಯ ತಜ್ಞರು ಹೇಳುವ ಪ್ರಕಾರ ಕೇವಲ 100 ಗ್ರಾಂ ಚಿಕನ್ ತನ್ನಲ್ಲಿ, ಮನುಷ್ಯನ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ, ಒಳ್ಳೆಯ ಕೊಬ್ಬಿನಾಂಶ ಹಾಗೂ ಆರೋಗ್ಯಕ್ಕೆ ಪ್ರಮುಖವಾಗಿ ಬೇಕಾಗಿರುವ ಪ್ರೋಟೀನ್ ಅಂಶಗಳು ಕಂಡು ಬರುತ್ತದೆಯಂತೆ.
  • ಹೀಗಾಗಿ ನಾನ್‌ವೆಜ್ ಸೇವನೆ ಮಾಡುವವರು, ಮಿತವಾಗಿ ಚಿಕನ್ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

 

according to a health experts, these are the high-protein rich foods you must include in your diet.