ದೇಹದ ಪ್ರಮುಖ ಅಂಗವಾದ ಲಿವರ್‌ನ್ನು ಕ್ಲೀನ್‌ ಮಾಡುತ್ತಂತೆ ಈ ಸೂಪರ್ ಆಹಾರಗಳು!

15-05-23 08:01 pm       Source: Vijayakarnataka   ಡಾಕ್ಟರ್ಸ್ ನೋಟ್

ನಿಮ್ಮ ಲಿವರ್ ಆರೋಗ್ಯವನ್ನು ಮೊದಲಿನಂತೆ ಅಚ್ಚುಕಟ್ಟಾಗಿ ಕಾಪಾಡಿಕೊಳ್ಳಲು ಈ ಕೆಳಗಿನ ಆಹಾರಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡು ಪರಿಹಾರ ಕಂಡುಕೊಳ್ಳಿ.

ನಮ್ಮ ದೇಹದಲ್ಲಿ ಅತ್ಯಂತ ದೊಡ್ಡದಾದ ಅಂಗ ಯಾವುದು ಎಂದರೆ ಅದು ಲಿವರ್ ಎಂದು ಎಲ್ಲರಿಗೂ ಗೊತ್ತು. ಕತ್ತರಿಸಿ ಹಾಕಿದರೂ ಬೆಳವಣಿಗೆ ಹೊಂದಬಲ್ಲ ಏಕೈಕ ಅಂಗ ಇದಾಗಿದೆ. ಇದು ನಮ್ಮ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯಿಂದ ಹಿಡಿದು ಬೇರೆ ವಿವಿಧ ಬಗೆಯ ಕಾರ್ಯ ಚಟುವ ಟಿಕೆಗಳನ್ನು ಪೂರೈಸುತ್ತದೆ.

ಇಂತಹ ಲಿವರ್ ಆರೋಗ್ಯವನ್ನು ಉತ್ತಮವಾಗಿ ಕಾಪಾಡಬೇಕು ಎಂದರೆ ಅದಕ್ಕೆ ಹೊಂದಿಕೆ ಆಗಬಲ್ಲ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮವಾಗಿದೆ. ಡಾಕ್ಟರ್ ಹೇಳುವ ಪ್ರಕಾರ ನಿಮ್ಮ ಲಿವರ್ ಅನ್ನು ನೈಸರ್ಗಿಕವಾಗಿ ಕ್ಲೀನ್ ಮಾಡುವ ಆಹಾರಗಳ ಪಟ್ಟಿ ಇಲ್ಲಿದೆ. ಇವುಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಿ...

ಬೆರ್ರಿ ಹಣ್ಣುಗಳು

Why Plant Blackberries Away From Raspberries - 4 Growing Tips Revealed

ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿರುವ ಬೆರ್ರಿ ಹಣ್ಣುಗಳು ನಿಮ್ಮ ಲಿವರ್ ಭಾಗದ ಸ್ವಚ್ಛತೆ ಮಾಡುವುದು ಮಾತ್ರವಲ್ಲದೆ ಲಿವರ್ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುತ್ತವೆ. ಮುಖ್ಯವಾಗಿ ಲಿವರ್ ಭಾಗದಲ್ಲಿ ಕಂಡುಬರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕುತ್ತವೆ.

ಸಿಟ್ರಸ್ ಹಣ್ಣುಗಳು

Why you must eat an orange every day | Be Beautiful India

ವಿಟಮಿನ್ ಸಿ ಹೆಚ್ಚಾಗಿರುವ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿರುವ ನೆಲ್ಲಿಕಾಯಿ, ಕಿತ್ತಳೆ ಹಣ್ಣು, ನಿಂಬೆಹಣ್ಣು, ಮೂಸಂಬಿ ಹಣ್ಣು ಇತ್ಯಾದಿಗಳು ಲಿವರ್ ಆರೋ ಗ್ಯವನ್ನು ಕಾಪಾಡುತ್ತವೆ. ಇವುಗಳನ್ನು ಹಾಗೆ ಕೂಡ ತಿನ್ನ ಬಹುದು ಅಥವಾ ಜ್ಯೂಸ್ ಮಾಡಿ ಕುಡಿಯುವುದರಿಂದ ಲಿವರ್ ಸ್ವಚ್ಛವಾಗುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ

How garlic and onions promote cardiovascular health | DrFuhrman.com

  • ಸಲ್ಫರ್ ಅಂಶ ಹೆಚ್ಚಾಗಿರುವ ಈರುಳ್ಳಿ ಅಥವಾ ಬೆಳ್ಳುಳ್ಳಿ ಸೇವನೆಯಿಂದ ನಿಮ್ಮ ಲಿವರ್ ಆರೋಗ್ಯ ಉತ್ತಮ ಗೊಳ್ಳುತ್ತದೆ.
  • ಅಷ್ಟೇ ಅಲ್ಲದೆ ಲಿವರ್ ಕಾರ್ಯ ಚಟುವಟಿಕೆ ಕೂಡ ಮೊದಲಿ ಗಿಂತ ಚೆನ್ನಾಗಿ ನಡೆಯುತ್ತದೆ. ಲಿವರ್ ಭಾಗವ ನ್ನು ಸಂಪೂರ್ಣ ವಾಗಿ ಸ್ವಚ್ಛ ಮಾಡುವ ಗುಣ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಕಂಡು ಬರುತ್ತದೆ.

ಗಿಡಮೂಲಿ​ಕೆಗಳು

ಗಿಡಮೂಲಿ​ಕೆಗಳು

  • ಆಂಟಿ ಇನ್ಫಾಮೇಟರಿ ಮತ್ತು ಆಂಟಿಆಕ್ಸಿ ಡೆಂಟ್ ಗುಣ ಲಕ್ಷಣಗಳನ್ನು ಒಳಗೊಂಡಿರುವ ಸಾಕಷ್ಟು ಗಿಡಮೂಲಿಕೆಗಳು ಸಹ ಲಿವರ್ ಮೇಲೆ ಸಕಾರಾತ್ಮಕ ಪ್ರಭಾವ ಬೀರು ತ್ತವೆ.
  • ಇದರಿಂದ ಲಿವರ್ ಸ್ವಚ್ಛವಾಗುತ್ತದೆ ಮತ್ತು ಮೊದಲಿಗಿಂತ ಚೆನ್ನಾಗಿ ಕೆಲಸ ಮಾಡಲು ಪ್ರಾರಂಭ ಮಾಡುತ್ತದೆ. ಇದಕ್ಕೆ ಸಂಬಂಧಪಟ್ಟ ಗಿಡಮೂಲಿಕೆಗಳು ಎಂದರೆ ಅರಿಶಿನ, dandelion root ಮತ್ತು milk thistle.

ಟೊಮೆಟೊ ಹಣ್ಣುಗಳು

Tomato - Liana's Kitchen

ಟೊಮೊಟೊ ಹಣ್ಣುಗಳಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಹೆಚ್ಚಾಗಿದೆ. ಇವುಗಳಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಇರುವ ಕಾರಣ ದೇಹಕ್ಕೆ ಪೊಟ್ಯಾಶಿಯಂ ಪ್ರಮಾಣವನ್ನು ಒದಗಿಸಿ ಲಿವರ್ ಭಾಗದ ಆರೋಗ್ಯವನ್ನು ಕಾಪಾಡುತ್ತದೆ.

ಚಿಕನ್ ಮತ್ತು ಕೋಳಿ ಮೊಟ್ಟೆ

Classic Hard-boiled Eggs - YMCA of Central Florida

ಕೋಳಿ ಮೊಟ್ಟೆಯ ಹಳದಿ ಭಾಗ, ಚಿಕನ್ ಕೊಲಿನ್ ಅಂಶಗಳನ್ನು ಒಳಗೊಂಡಿದ್ದು, ಲಿವರ್ ಭಾಗಕ್ಕೆ ಸಲೀನಿಯಮ್ ಪ್ರಮಾಣ ವನ್ನು ಕೊಡುತ್ತದೆ. ಲಿವರ್ ಆರೋಗ್ಯವನ್ನು ಉತ್ತಮ ಪಡಿಸುವಲ್ಲಿ ಇದರ ಪಾತ್ರ ತುಂಬಾ ದೊಡ್ಡದು.

ಚಿಕನ್ ಲಿವರ್

ಚಿಕನ್ ಲಿವರ್

  • ಮಾಂಸಾಹಾರಿಗಳಿಗೆ, ಕೇವಲ ಚಿಕನ್ ಮಾಂಸವನ್ನು ಸೇವಿಸುವ ಬದಲಿಗೆ ಅವುಗಳ ಲಿವರ್ ಭಾಗವನ್ನು ಕೂಡ ಮಿತವಾಗಿ ಸೇವಿ ಸುವುದರಿಂದ ದೇಹಕ್ಕೆ ಹೆಚ್ಚಿನ ಪ್ರಮಾ ಣದಲ್ಲಿ ಪೌಷ್ಟಿಕಾಂಶ ಗಳು ಸಿಗುತ್ತವೆ.
  • ಇವುಗಳಲ್ಲಿ ಅಗಾಧವಾದ ವಿಟಮಿನ್ ಅಂಶಗಳು ಖನಿ ಜಾಂಶಗಳು ಹಾಗೂ ಆಂಟಿಆಕ್ಸಿಡೆಂಟ್ ಅಂಶಗಳು ಅಡಗಿದ್ದು ನಿಮ್ಮ ದೇಹದ ಲಿವರ್ ಭಾಗವನ್ನು ಸ್ವಚ್ಛ ಗೊಳಿಸುತ್ತವೆ ಮತ್ತು ಉತ್ತಮ ಕಾರ್ಯ ಚಟುವಟಿಕೆ ಮಾಡುವಂತೆ ಅನುಕೂಲ ಮಾಡಿಕೊಡುತ್ತವೆ.

these super foods are meant to clean your liver in no time.