ರಕ್ತದಲ್ಲಿನ ಪ್ಲೇಟ್ಲೆಟ್ ಕೌಂಟ್ ಹೆಚ್ಚಿಸುವ ಪವರ್ ಇರುವ ಆಹಾರಗಳಿವು!

16-05-23 08:07 pm       Source: Vijayakarnataka   ಡಾಕ್ಟರ್ಸ್ ನೋಟ್

ರಕ್ತದಲ್ಲಿ ಪ್ಲೇಟ್ಲೆಟ್ ಸಂಖ್ಯೆ ಕಡಿಮೆಯಾದರೆ, ರೋಗನಿರೋಧಕ ಶಕ್ತಿಗಳು ಕಡಿಮೆ ಆಗಿ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಒಂದು ವೇಳೆ ಡೆಂಗ್ಯೂ ಜ್ವರ ಕಾಣಿಸಿಕೊಂಡರೆ ಬೇಗನೆ ವಾಸಿಯಾಗುವುದಿಲ್ಲ.

ಮಲೇರಿಯಾದಂತೆ ಸೊಳ್ಳೆಗಳಿಂದ ಹರಡುವ ಇನ್ನೊಂದು ಕಾಯಿಲೆ ಎಂದರೆ ಅದು ಡೆಂಗ್ಯೂ ಜ್ವರ! ಒಂದು ವೇಳೆ ಈ ಜ್ವರದ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಅಥವಾ ಸಮಯಕ್ಕೆ ಸರಿಯಾದ ರೀತಿಯಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡದೇ ಇದ್ದರೆ, ಮುಂದಿನ ದಿನಗಳಲ್ಲಿ ಇದರಿಂದಾಗಿ ಪ್ರಾಣಕ್ಕೆ ಅಪಾಯ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ಡೆಂಗ್ಯೂ ಜ್ವರದ ಬಗ್ಗೆ ನಿರ್ಲಕ್ಷ್ಯ ಮಾಡಿ, ಸಾವಿರಾರು ಮಂದಿ ಪ್ರಾಣ ಕಳೆದುಕೊಂಡವರ ಸಂಖ್ಯೆ ದೊಡ್ಡದಿದೆ.

ಇನ್ನು ಈ ಡೆಂಗ್ಯೂ ಜ್ವರದ ಸೂಕ್ಷ್ಮ ಲಕ್ಷಣಗಳ ಬಗ್ಗೆ ನೋಡುವುದಾದರೆ, ತೀವ್ರವಾಗಿ ಜ್ವರ ಕಂಡು ಬರುವುದು, ವಾಂತಿ ಆಗುವುದು, ಹೊಟ್ಟೆ ನೋವು, ಮೈ ಕೈ ನೋವು, ಕೀಲು ನೋವು ಹಾಗೂ ರಕ್ತದ ಪೆಟ್ಲೇಟ್‌ಗಳಲ್ಲಿ ಗಣನೀಯ ಕುಸಿತ ಉಂಟಾಗಿ, ಮನುಷ್ಯನ ದೇಹದ ರೋಗ-ನಿರೋಧಕ ಶಕ್ತಿ ನಿಧಾನಕ್ಕೆ ಕಡಿಮೆ ಆಗುತ್ತಾ ಬರುತ್ತದೆ! ಹೀಗಾಗಿ ಡೆಂಗ್ಯೂ ಜ್ವರದಂತಹ ಮಾರಕ ರೋಗದಿಂದ ದೂರವಿರಬೇಕೆಂದ್ರೆ ನಮ್ಮ ದೇಹದ ರೋಗ-ನಿರೋಧಕ ಶಕ್ತಿಯ ಸ್ವರೂಪವಾಗಿರುವ ಬಿಳಿ ರಕ್ತ ಕಣಗಳ ಸಮಸ್ಯೆ ಹಾಗೂ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚು ಮಾಡುವಂತಹ ಆಹಾರ ಪದಾರ್ಥಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದೇವೆ ಮುಂದೆ ಓದಿ...

ಮೊಟ್ಟೆ

Classic Hard-boiled Eggs - YMCA of Central Florida

  • ಪ್ರತಿದಿನ ಒಂದೊಂದು, ಬೇಯಿಸಿ ಮೊಟ್ಟೆಯನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳುವುದರಿಂದ, ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯರೇ ಸಲಹೆ ನೀಡುತ್ತಾರೆ.
  • ಪ್ರಮುಖವಾಗಿ ಇದರಲ್ಲಿ ಪ್ರೋಟೀನ್ ಅಂಶ ಯಥೇಚ್ಛ ವಾಗಿ ಕಂಡು ಬರುವುದರಿಂದ, ಮನುಷ್ಯನ ಆರೋಗ್ಯ ವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  • ಅದರಲ್ಲೂ ಮೊಟ್ಟೆಯ ಬಿಳಿ ಭಾಗದಲ್ಲಿ ಕಂಡು ಬರುವ ಆಲ್ಬಮಿನ್ ಎನ್ನುವ ಪ್ರೋಟಿನ್ ಅಂಶ ರಕ್ತದಲ್ಲಿನ ಪ್ಲಾಸ್ಮಾ ಅಂಶವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇದರಿಂದಾಗಿ ನಮ್ಮ ದೇಹದ ರಕ್ತದಲ್ಲಿ ನಿಧಾನಕ್ಕೆ ಪೆಟ್ಲೇಟ್‌ಗಳ ಸಂಖ್ಯೆಯೂ ಕೂಡ ಹೆಚ್ಚಾಗುತ್ತಾ ಹೋಗುತ್ತದೆ.​

ಹಾಲು ಹಾಗೂ ಹಾಲಿನ ಉಪಉತ್ಪನ್ನಗಳು

Know how to make skimmed milk for your weight loss journey | HealthShots

  • ದಿನಕ್ಕೊಂದು ಲೋಟ ಹಾಲು ಕುಡಿಯುವುದು ಅಥವಾ ಹಾಲಿನ ಉಪ ಉತ್ಪನ್ನವಾದ ಮೊಸರು, ಮಜ್ಜಿಗೆ ಸೇವನೆ ಮಾಡುವುದರಿಂದ, ದೇಹಕ್ಕೆ ಬೇಕಾಗುವಂತಹ ಪೌಷ್ಟಿಕ ಸತ್ವಗಳು ಸಕ್ಕಂತೆ ಆಗುತ್ತದೆ.
  • ಇವೆಲ್ಲವೂ ಕೂಡ ಆರೋಗ್ಯದ ಬೆಳವಣಿಗೆಯಲ್ಲಿ ಹಾಗೂ ಅನೇಕ ರೀತಿ ರೋಗ ರುಚಿನಗಳಿಂದ ನಮ್ಮನ್ನು ದೂರ ವಿರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  • ಇದೇ ಕಾರಣಕ್ಕೆ ವೈದ್ಯರು ಕೂಡ, ಆಹಾರಕ್ರಮದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸೇರಿಸಿ ಕೊಳ್ಳಲು ಸಲಹೆ ನೀಡುತ್ತಾರೆ.
  • ಇದರಿಂದ ದೇಹದಲ್ಲಿ ಕ್ಯಾಲ್ಸಿಯಂ ಅಂಶದ ಪ್ರಮಾಣ ಹೆಚ್ಚಾಗುವುದರ ಜೊತೆಗೆ ರಕ್ತದ ಕಣಗಳಲ್ಲಿ ಪ್ಲೇಟ್ಲೆಟ್ಸ್ ಗಳ ಸಂಖ್ಯೆಯೂ ಕೂಡ ಹೆಚ್ಚಾಗುತ್ತದೆ.

ಪಪ್ಪಾಯ ಎಲೆಗಳ ಕಷಾಯ

Unripe green papaya | Foundation G+E

  • ನಮಗೆಲ್ಲಾ ಗೊತ್ತೇ ಇರುವ ಹಾಗೆ ಡೆಂಗ್ಯೂ ಜ್ವರ ಕಾಣಿಸಿ ಕೊಂಡ ಬಳಿಕ, ಮನುಷ್ಯ ರಕ್ತದಲ್ಲಿ ಪ್ಲೇಟ್ಲೆಟ್‌ಗಳ ಸಂಖ್ಯೆ ದಿನಾ ಹೋದ ಹಾಗೆ ಕಡಿಮೆಯಾತ್ತಾ ಬರುತ್ತದೆ, ಜೊತೆಗೆ ದೇಹದ ರೋಗ ನಿರೋಧಕ ಶಕ್ತಿಯೂ ಕೂಡ ಕ್ಷೀಣಿಸು ತ್ತವೆ!
  • ಇಂತಹ ಸಮಯದಲ್ಲಿ ರೋಗಿಗಳಿಗೆ ಪ್ಲೇಟ್ಲೆಟ್ ಸಂಖ್ಯೆ ಯನ್ನು ಹೆಚ್ಚು ಮಾಡುವಂತಹ ಆಹಾರ-ಪದಾರ್ಥಗಳು ಹಾಗೂ ಪಾನೀಯಗಳನ್ನು ನೀಡಬೇಕಾಗುತ್ತದೆ. ಇದ ಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ಪರಂಗಿ ಅಥವಾ ಪಪ್ಪಾಯ ಎಲೆಗಳ ಕಷಾಯ.
  • ಹೌದು ದೇಹದ ಪ್ಲೇಟ್ಲೆಟ್ ಸಂಖ್ಯೆಯನ್ನು,ತ್ವರಿತವಾಗಿ ಹೆಚ್ಚು ಮಾಡುವ ಗುಣ ಕಂಡುಬರುತ್ತದೆ. ಇದಕ್ಕಾಗಿ ಪರಂಗಿ ಎಲೆಗಳನ್ನು ಚೆನ್ನಾಗಿ ತೊಳೆದು, ಸುಮಾರು ಹದಿ ನೈದು ನಿಮಿಷಗಳವರೆಗೆ ಚೆನ್ನಾಗಿ ನೀರಿನಲ್ಲಿ ಕುದಿಸಿ, ಆ ಬಳಿಕ ಸೋಸಿಕೊಂಡು, ಉಗುರು ಬೆಚ್ಚಗೆ ಇರುವಾಗಲೇ ಈ ಕಷಾಯವನ್ನು ದಿನಕ್ಕೆರಡು ಬಾರಿಯಂತೆ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ಕಿವಿ ಹಣ್ಣು

Benefits Of Kiwi Fruit: From A Powerhouse Of Antioxidants To Inducing Sleep  - NDTV Food

  • ಹುಳಿ ಮಿಶ್ರಿತ ಸಿಹಿ ರುಚಿಯನ್ನು ಹೊಂದಿರುವ ಈ ವಿದೇಶಿ ಮೂಲ ಕಿವಿ ಹಣ್ಣು, ಬೆಲೆಯಲ್ಲಿ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು. ಮುಖ್ಯವಾಗಿ ಈ ಹಣ್ಣಿನಲ್ಲಿ ಆಗಾಧ ಪ್ರಮಾ ಣದ ವಿಟಮಿನ್ ಸಿ ಅಂಶ ಕಂಡು ಬರುವುದರಿಂದ, ದೇಹದ ರೋಗ ನಿರೋಧಕ ಶಕ್ತಿ ಕಡಿಮೆ ಆಗದಂತೆ ನೋಡಿಕೊಳ್ಳುತ್ತದೆ.
  • ಇವೆಲ್ಲದರ ಜೊತೆಗೆ ಈ ಹಣ್ಣಿನಲ್ಲಿ ವಿಟಮಿನ್ ಬಿ, ವಿಟ ಮಿನ್‌ ಕೆ, ಫೋಲೇಟ್, ಖನಿಜಾಂಶಗಳು, ಪೊಟ್ಯಾಶಿಯಂ ಪ್ರಮಾಣ ಯಥೇಚ್ಛವಾಗಿ ಕಂಡು ಬರುತ್ತದೆ. ಹೀಗಾಗಿ ಇಂತಹ ಹಣ್ಣನ್ನು, ಮಿತವಾಗಿ ಸೇವನೆ ಮಾಡುವುದ ರಿಂದ, ರಕ್ತದಲ್ಲಿ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತದೆ.​

ವಿಟಮಿನ್ ಸಿ ಅಂಶ ಹೆಚ್ಚಿರುವ ಆಹಾರಗಳು

17 Different Orange Fruits You'll Love - Insanely Good

ಸಿಟ್ರಸ್ ಹಣ್ಣುಗಳಾದ ಕಿತ್ತಳೆ ಹಣ್ಣು, ಮೂಸಂಬಿ, ನಿಂಬೆ ಹಣ್ಣು, ತರಕಾರಿಗಳಾದ ಬ್ರೊಕೋಲಿ, ಕೆಂಪು ಬಣ್ಣದ ದಪ್ಪಮೆಣಸಿನ ಕಾಯಿ, ಹೂಕೋಸು, ಬ್ರೊಕೋಲಿ, ಟೊಮೆಟೊ ಹಣ್ಣು ನಮ್ಮ ಆರೋಗ್ಯಕ್ಕೆ ಬೇಕಾಗುವ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ವನ್ನು ಒದಗಿಸುವುದರ ಜೊತೆಗೆ ದೇಹದ ರೋಗ ನಿರೋಧಕ ಶಕ್ತಿ ಯನ್ನು ಹೆಚ್ಚು ಮಾಡಿ, ಪ್ಲೇಟ್ಲೆಟ್ ಗಳ ಸಂಖ್ಯೆಗಳನ್ನು ಕೂಡ ಹೆಚ್ಚು ಮಾಡುತ್ತವೆ.

ವಿಟಮಿನ್ ಎ ಅಂಶ ಇರುವ ಆಹಾರಗಳು

Carrot – KDD & Co

  • ರಕ್ತದಲ್ಲಿ ಪ್ಲೇಟ್ಲೆಟ್ ಸಂಖ್ಯೆಗಳನ್ನು ಆರೋಗ್ಯಕರವಾಗಿ ಹೆಚ್ಚು ಮಾಡುವಲ್ಲಿ ವಿಟಮಿನ್ ಎ ಅಂಶ ಹೆಚ್ಚಿರುವ ಆಹಾರ ಪದಾರ್ಥ ಗಳು ಪ್ರಮುಖ ಪಾತ್ರ ವಹಿಸುತ್ತದೆ.
  • ಉದಾಹರಣೆಗೆ ಹೇಳುವುದಾದರೆ, ವಿಟಮಿನ್ ಎ ಅಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುವ ಆಹಾರಗಳಾದ ಕ್ಯಾರೆಟ್, ಕುಂಬಳಕಾಯಿ ಹಾಗೂ ಇದರ ಬೀಜಗಳು, ಸಿಹಿಗೆಣಸು ಇತ್ಯಾದಿ.

national dengue day 2023 these natural foods will increase platelet count in your blood.