ಮಧುಮೇಹ ಕಂಟ್ರೋಲ್ ಮಾಡುವ ಸೂಪರ್ ಟೆಕ್ನಿಕ್ಸ್

12-06-23 07:25 pm       Source: Vijayakarnataka   ಡಾಕ್ಟರ್ಸ್ ನೋಟ್

ಸಕ್ಕರೆ ತಿಂದ ತಕ್ಷಣ ಸಕ್ಕರೆ ಕಾಯಿಲೆ ಬರುವುದಿಲ್ಲ, ಕಂಟ್ರೋಲ್ ಮಾಡುವ ಟೆಕ್ನಿಕ್ ಬೇರೆಯೇ ಇದೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಬೇಕೇ ಬೇಕು.

ಬಿಪಿಯಷ್ಟೇ ವೇಗವಾಗಿ ಜನರಲ್ಲಿ ವ್ಯಾಪಿಸುತ್ತಿರುವ ಕಾಯಿಲೆ ಎಂದರೆ ಅದು ಸಕ್ಕರೆ ಕಾಯಿಲೆ. ಸಕ್ಕರೆ ಕಾಯಿಲೆ ಹೊಂದಿದ ಜನರ ದೇಹದಲ್ಲಿ ಹಾಗೂ ಜೀವನ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತದೆ. ಮೊದಲಿನಂತೆ ಇರಲು ಆಗುವುದಿಲ್ಲ, ಮೊದಲಿನಂತೆ ತಿನ್ನಲು ಆಗುವುದಿಲ್ಲ. ಬೇರೆ ಬೇರೆ ಆಹಾರಗಳನ್ನು ಇಷ್ಟಪಟ್ಟರು ಸಹ ಅವುಗಳಿಂದ ದೂರ ಉಳಿಯಬೇಕು.

ಏಕೆಂದರೆ ರಕ್ತದಲ್ಲಿ ಬ್ಲಡ್ ಶುಗರ್ ಲೆವೆಲ್ ಏರಿಕೆಯಾಗುತ್ತದೆ ಎನ್ನುವ ಭಯ. ಆದರೆ ಎಲ್ಲಾ ಸಮಸ್ಯೆಗೂ ಒಂದು ಪರಿಹಾರವಿದೆ ಎನ್ನುವಂತೆ ಸಕ್ಕರೆ ಕಾಯಿಲೆಗೂ ಕೂಡ ಪರಿಹಾರ ಇದೆ. ಅದು ನೀವು ಹೇಗೆ ಅದನ್ನು ಕಂಟ್ರೋಲ್ ಮಾಡುತ್ತೀರಿ ಎನ್ನುವುದರ ಮೇಲೆ ನಿಂತಿದೆ. ಈ ಲೇಖನದಲ್ಲಿ ಶುಗರ್ ಕಂಟ್ರೋಲ್ ಮಾಡುವ ಕೆಲವೊಂದು ಆಹಾರ ಪದ್ಧತಿಯ ಟೆಕ್ನಿಕ್ ಗಳನ್ನು ತಿಳಿಸಿಕೊಡಲಾಗಿದೆ.

ಸಕ್ಕರೆ ಕಾಯಿಲೆ ಕಾಣಿಸಿಕೊಂಡ ಮೇಲೆ....

5 Ways Your Life Changes After a Diabetes Diagnosis: Wasatch Peak Family  Practice: Family Practice

  • ಸಕ್ಕರೆ ಕಾಯಿಲೆ ಒಂದು ರೀತಿಯ ಬಿಡದ ನಂಟಿನಂತೆ ಅಂಟಿಕೊಳ್ಳುತ್ತದೆ. ಇದರಿಂದ ದಿನ ನಿತ್ಯದ ಕಾರ್ಯ ಚಟುವಟಿಕೆಗಳನ್ನು ಸಹಜವಾಗಿ ಮಾಡಲು ಸಾಧ್ಯವಿ ರುವುದಿಲ್ಲ.
  • ಏಕೆಂದರೆ ಸಕ್ಕರೆ ಕಾಯಿಲೆ ತನ್ನದೇ ಆದ ಆಯಾಮದಲ್ಲಿ ಮನುಷ್ಯನಿಗೆ ತೊಂದರೆ ಕೊಡುತ್ತದೆ. ವಿಪರೀತ ಹೊಟ್ಟೆ ಹಸಿವು, ಹೆಚ್ಚಿನ ನೀರಿನ ದಾಹ, ಆಗಾಗ ಮೂತ್ರ ವಿಸರ್ಜನೆ ಮಾಡು ವುದು ಹೀಗೆ ಒಂದಲ್ಲ ಎರಡಲ್ಲ. ಜನರ ಮುಂದೆ ಕಿರಿಕಿರಿ ಮತ್ತು ನೆಮ್ಮದಿ ಕೂಡ ಹಾಳು. ಸಕ್ಕರೆ ಕಾಯಿಲೆ ಕಂಟ್ರೋಲ್ ತಪ್ಪಿದಾಗ ಈ ರೀತಿ ಆಗುತ್ತದೆ.​

ಸಕ್ಕರೆ ಕಾಯಿಲೆ ಕಂಟ್ರೋಲ್ ತಪ್ಪಿದಾಗ ಈ ರೀತಿ ಆಗುತ್ತದೆ.

ಸಕ್ಕರೆ ಕಾಯಿಲೆ ಕಂಟ್ರೋಲ್ ತಪ್ಪಿದಾಗ ಈ ರೀತಿ ಆಗುತ್ತದೆ.

  • ವಿಪರೀತ ಬಾಯಾರಿಕೆ
  • ಇದ್ದಕ್ಕಿದ್ದಂತೆ ತೂಕ ಕಮ್ಮಿಯಾಗುವುದು
  • ಆಗಾಗ ಮಾತ್ರ ವಿಸರ್ಜನೆ ಮಾಡುವುದು
  • ಯಾವಾಗಲೂ ಸುಸ್ತು ಮತ್ತು ಆಯಾಸ
  • ದೃಷ್ಟಿ ಮಂದವಾಗುವುದು
  • ಇಷ್ಟೆಲ್ಲಾ ಆದರೆ ನಿಮಗೆ ಖಂಡಿತ ನಿಮ್ಮ ಜೀವನ ಹಾಳಾಗಿದೆ ಎಂಬ ಭಾವನೆ ಬರುತ್ತದೆ.
  • ಸಕ್ಕರೆ ಕಾಯಿಲೆ ಒಮ್ಮೆ ಬಂದರೆ ಅದರಿಂದ ಮುಕ್ತಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಕೆಲವೊಂದು ಜೀವನ ಶೈಲಿಯ ಬದಲಾವಣೆಗಳಿಂದ ಅದನ್ನು ನಿರ್ವಹಣೆ ಮಾಡಬಹುದು.
  • ಸಾಕಷ್ಟು ರೋಗ ಲಕ್ಷಣಗಳು ರಾತ್ರಿಯ ಸಮಯದಲ್ಲಿ ಕಾಣಿಸುತ್ತವೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ನಿದ್ರೆ ಮಾಡಲು ಕೂಡ ಬಿಡುವುದಿಲ್ಲ.
  • ಆದರೆ ರಾತ್ರಿಯ ಸಮಯದಲ್ಲಿ ಹೀಗಾದಾಗ ಏನು ಮಾಡ ಬೇಕು ಎಂಬುದನ್ನು ಮತ್ತು ಹೇಗೆ ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡಿಕೊಳ್ಳಬೇಕು ಎಂಬುದನ್ನು ಇಲ್ಲಿ ಆಹಾರ ತಜ್ಞರಾದ ಲವ್ನೀತ್ ಬತ್ರ ತಿಳಿಸಿ ಕೊಟ್ಟಿದ್ದಾರೆ.

ಸಕ್ಕರೆ ಕಾಯಿಲೆ ಇರುವವರಿಗೆ ಮಲಗುವ ಮುಂಚಿನ ಈ ಟಿಪ್ಸ್ ಸಹಕಾರಿ

Managing Diabetes - Diabetes Management

ಒಂದು ವೇಳೆ ನಿಮ್ಮ ಬ್ಲಡ್ ಶುಗರ್ ಲೆವೆಲ್ ಹೆಚ್ಚಾದರೆ ಮತ್ತು ದಿನೇ ದಿನೇ ರೋಗಲಕ್ಷಣಗಳು ಹೆಚ್ಚಾಗಿ ಕಾಣಿಸುತ್ತಿದ್ದರೆ ಮಲಗುವ ಮುಂಚೆ ಈ ಟೆಕ್ನಿಕ್ ಗಳನ್ನು ಒಮ್ಮೆ ಟ್ರೈ ಮಾಡಿ. ಇದರಿಂದ ಆರೋಗ್ಯಕರವಾದ ಮತ್ತು ನೆಮ್ಮದಿಯ ನಿದ್ರೆ ನಿಮ್ಮದಾಗುತ್ತದೆ.

ಚಾಮೊಮೈಲ್ ಚಹಾ ಕುಡಿಯಿರಿ

ಚಾಮೊಮೈಲ್ ಚಹಾ ಕುಡಿಯಿರಿ

ಒಂದು ಕಪ್ ತಾಜಾ ಚಾಮೊಮೈಲ್ ಚಹಾ ನಿಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ಯಾವ ರೀತಿ ಕಂಟ್ರೋಲ್ ಮಾಡುತ್ತೆ ಗೊತ್ತಾ?

ಇದರಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫ್ಲಮೇಟರಿ ಗುಣಲಕ್ಷಣಗಳು ಇರುವುದರಿಂದ ತಕ್ಷಣವೇ ನಿಮ್ಮ ಬ್ಲಡ್ ಶುಗರ್ ಲೆವೆಲ್ ಪ್ರಮಾಣವನ್ನು ಇಳಿಸುತ್ತದೆ. ನೀವು ಆನಂತರ ಆರಾಮವಾಗಿ ಮಲಗಿ ನಿದ್ರಿಸಬಹುದು.

ನೆನೆಸಿದ ಬಾದಾಮಿ

Benefits of Almonds| Why You Should Have Soaked And Peeled Almonds on Empty  Stomach| Expert Explains

  • ಒಂದು ವೇಳೆ ನಿಮಗೆ ಪ್ರತಿದಿನ ಬ್ಲಡ್ ಶುಗರ್ ಲೆವೆಲ್ ಏರಿಕೆಯಾಗಿ ಸರಿಯಾಗಿ ನಿದ್ರೆ ಮಾಡಲು ಆಗುತ್ತಿಲ್ಲ ಎಂದರೆ ಮಲಗುವ ಮುಂಚೆ ಏಳು ನೆನೆಸಿದ ಬಾದಾಮಿಗಳನ್ನು ಸೇವಿಸಿ.
  • ಇವುಗಳಲ್ಲಿ ಮೆಗ್ನೀಷಿಯಂ ಮತ್ತು ಟ್ರಿಪ್ಟೊಫ್ಯಾನ್ ಇರುವುದ ರಿಂದ ನಿಮ್ಮ ನಿದ್ರೆಯ ಗುಣಮಟ್ಟ ಹೆಚ್ಚಾ ಗುತ್ತದೆ ಮತ್ತು ರಾತ್ರಿಯ ಸಮಯದಲ್ಲಿ ಹಸಿವು ಉಂಟಾಗುವುದು ಕಡಿಮೆ ಯಾಗುತ್ತದೆ.​

ನೆನೆಸಿದ ಮೆಂತೆಕಾಳುಗಳು

Health Benefits Of Fenugreek Seeds Water

  • ನೆನೆಸಿದ ಮೆಂತೆ ಕಾಳುಗಳು ಕೂಡ ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ.
  • ಏಕೆಂದರೆ ಇದು ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಪ್ರಮಾಣ ವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಪ್ರತಿದಿನ ನೆನೆಸಿದ ಮೆಂತ್ಯ ಕಾಳುಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ.​

ವಜ್ರಾಸನದಲ್ಲಿ 15 ನಿಮಿಷ ಕುಳಿತುಕೊಳ್ಳಿ

-15-

ನಿಮ್ಮ ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ಒಂದು ಯೋಗಾಸನ ಎಂದರೆ ಅದು ವಜ್ರಾಸನ. ರಾತ್ರಿಯ ಸಮಯದಲ್ಲಿ ಮಲಗುವ ಮುಂಚೆ 15 ನಿಮಿಷಗಳ ಕಾಲ ಈ ಆಸನದಲ್ಲಿ ಕುಳಿತುಕೊಳ್ಳಿ. ಇದು ನಿಮ್ಮ ರಕ್ತದ ಒತ್ತಡವನ್ನು ಕಂಟ್ರೋಲ್ ಮಾಡುತ್ತದೆ ಮತ್ತು ಶುಗರ್ ಪ್ರಮಾಣವನ್ನು ಸಹ ಕಂಟ್ರೋಲ್ ಮಾಡುತ್ತದೆ.

these super techniques will help you to control your diabetes.