ಇನ್ನು ಮುಂದೆ ಚಹಾ-ಕಾಫಿ ಕುಡಿಯುವ ಅಭ್ಯಾಸ ಬಿಟ್ಟು, ಇಂತಹ ಪಾನೀಯ ಕುಡಿಯಿರಿ!

13-06-23 07:25 pm       Source: Vijayakarnataka   ಡಾಕ್ಟರ್ಸ್ ನೋಟ್

ಬೆಳಗ್ಗೆ ಎದ್ದ ತಕ್ಷಣ ಬರೀ ಕಾಫಿ ಟೀ ಕುಡಿಯುವ ಅಭ್ಯಾಸ ಇದ್ದವರಿಗೆ ಇಲ್ಲೊಂದು ಕಿವಿ ಮಾತು. ಈಗಲೇ ಪರ್ಯಾಯ ಪಾನೀಯಗಳನ್ನು ಕುಡಿಯು ವುದು ಉತ್ತಮ.

ನಾವು ನಮ್ಮ ಆರೋಗ್ಯ ಚೆನ್ನಾಗಿರಲಿ ಎಂದು ಏನೆಲ್ಲಾ ಕಸರತ್ತು ಮಾಡುತ್ತೇವೆ. ಆದರೂ ಕೂಡ ಎಲ್ಲೋ ಒಂದು ಕಡೆ ನಮ್ಮದೇ ಆದ ಒಂದು ಸಣ್ಣ ತಪ್ಪಿನಿಂದ ನಾವು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಗುತ್ತದೆ. ಇದಕ್ಕೆ ಉದಾಹರಣೆ ಎಂದರೆ ನಾವು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕಾಫಿ ಟೀ ಕುಡಿಯುವುದು.

ಕೆಲವೊಂದು ಪ್ರಯೋಜನಗಳನ್ನು ಆಧರಿಸಿ ನಾವು ಕಾಫಿ ಟೀ ಕುಡಿಯುತ್ತೇವೆ. ಆದರೆ ಇದರಿಂದ ದುಷ್ಪರಿಣಾಮಗಳು ಸಹ ಇವೆ ಎಂಬುದನ್ನು ಮರೆತು ಬಿಡುತ್ತೇವೆ. ಈ ಲೇಖನದಲ್ಲಿ ಇದಕ್ಕೆ ಪರ್ಯಾಯವಾಗಿ ಕುಡಿಯಬಹುದಾದ ಆರೋಗ್ಯಕರ ಪಾನೀಯಗಳ ಬಗ್ಗೆ ವಿವರಿಸಲಾಗಿದೆ. ಹಾಗಾಗಿ ಇನ್ನು ಮುಂದಾದರೂ ಇಂತಹ ಆರೋಗ್ಯಕರ ಪಾನಿಯುಗಳನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಲೆಮನ್ ವಾಟರ್!

Upset stomach? Try out this zesty lemon tea recipe | Manorama English

  • ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿ ರುವುದು ನಿಮಗೆಲ್ಲ ಗೊತ್ತೇ ಇದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅನುಕೂಲ ಮಾಡಿಕೊಡುವ ನಿಂಬೆಹಣ್ಣು ನಿಮ್ಮ ದೇಹದ ವಿಷಕಾರಿ ಅಂಶಗಳನ್ನು ಸಹ ದೂರವಾಗಿಸುತ್ತದೆ.
  • ಹಾಗಾಗಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಲೆಮನ್ ವಾಟರ್ ಅಥವಾ ನಿಂಬೆ ರಸ ಹಿಂಡಿದ ಪಾನೀಯ, ನಿಮಗೆ ಹೇಳಿ ಮಾಡಿಸಿದ ಆರೋಗ್ಯಕರ ಪಾನೀಯವಾಗಿದೆ.
  • ಇದಕ್ಕಾಗಿ ನೀವು ಒಂದು ಕಪ್ ನೀರನ್ನು ಕುದಿಯಲು ಇಟ್ಟು ಅದಕ್ಕೆ ಎರಡು ನಿಂಬೆಹಣ್ಣಿನ ಹೋಳುಗಳನ್ನು ಹಿಂಡಿ ಅದು ಆರಿದ ಮೇಲೆ ಒಂದೆರಡು ಟೇಬಲ್ ಚಮಚ ಜೇನುತುಪ್ಪವನ್ನು ನೀರಿನಲ್ಲಿ ಹಾಕಿ ಕಲಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.​​

ನೀರಿನಲ್ಲಿ ಆಪಲ್ ಸೈಡರ್ ವಿನೆಗರ್

Mulled Apple Juice Recipe by Archana's Kitchen

  • ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವಲ್ಲಿ ಕೆಲಸ ಮಾಡುವ ಆಪಲ್ ಸೈಡರ್ ವಿನೆಗರ್ ದೇಹದ ತೂಕವನ್ನು ಸಹ ನಿಯಂತ್ರಣ ಮಾಡುತ್ತದೆ ಮತ್ತು ಆರೋಗ್ಯ ಹಾಳು ಮಾಡುವ ರೋಗಾಣುಗಳನ್ನು ಸಹ ಹೋಗಲಾಡಿಸುತ್ತದೆ.
  • ಬೆಳಗಿನ ಖಾಲಿ ಹೊಟ್ಟೆಯಲ್ಲಿ ಇದನ್ನು ನೀವು ಸೇವಿಸಬಹುದು. ಒಂದು ಟೇಬಲ್ ಚಮಚ ಆಪಲ್ ಸೈಡರ್ ವಿನೆಗರ್ ಮತ್ತು ಎರಡು ಟೀ ಚಮಚ ನಿಂಬೆ ಹಣ್ಣಿನ ರಸ, ಜೊತೆಗೆ ಅರ್ಧ ಟೀ ಚಮಚ ದಾಲ್ಚಿನ್ನಿ ಪುಡಿ, ಒಂದು ಚಿಟಿಕೆ ಮೆಣಸಿನ ಪುಡಿ ಮತ್ತು ಜೇನು ತುಪ್ಪವನ್ನು ಒಂದು ಕಪ್ ನೀರಿನಲ್ಲಿ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ.​

ಗ್ರೀನ್ ಟೀ

Can you drink green tea after meals? - Times of India

  • ಗ್ರೀನ್ ಟೀ ಕೂಡ ಬೆಳ್ಳಂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯ ಬಹುದಾದ ಒಂದು ಆರೋಗ್ಯಕರವಾದ ಪಾನೀಯ. ಇದು ಮೆಟಬಾಲಿಸಂ ಹೆಚ್ಚಿಸುವ ಜೊತೆಗೆ ದೇಹದ ಕೊಬ್ಬಿನ ಅಂಶವನ್ನು ಕರಗಿಸುತ್ತದೆ.
  • ಗ್ರೀನ್ ಟೀ ತನ್ನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದ್ದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ.
  • ನೀರನ್ನು ಕುದಿಯಲು ಒಲೆ ಮೇಲೆ ಇಟ್ಟು ಅದಕ್ಕೆ ಒಂದು ವರೆ ಟೀ ಚಮಚ ಗ್ರೀನ್ ಟೀ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೆಲವು ನಿಮಿಷಗಳು ಹಾಗೆ ಬಿಟ್ಟು ಬಣ್ಣ ಬದಲಾದ ಮೇಲೆ ಸ್ಟವ್ ಆರಿಸಿ ಅದಕ್ಕೆ ನಿಂಬೆಹಣ್ಣು ಅಥವಾ ಜೇನುತುಪ್ಪ ಸೇರಿಸಿ ಕುಡಿಯಿರಿ.​

ಎಳನೀರು

7 benefits of tender coconut | Mumbai Live

  • ನಮ್ಮ ಆರೋಗ್ಯಕ್ಕೆ ಉತ್ತಮ ಪ್ರಭಾವವನ್ನು ಕೊಡು ವಂತಹ ಎಳನೀರು ಖಾಲಿ ಹೊಟ್ಟೆಯಲ್ಲಿ ನಮ್ಮ ದೇಹ ಸೇರಿದರೆ ನಮ್ಮ ದೇಹದ ಎಲ್ಲಾ ಅಂಗಾಂಗಗಳಿಗೂ ಒಳ್ಳೆಯದು.
  • ಪೌಷ್ಟಿಕ ಸತ್ವಗಳು ಹೆಚ್ಚಾಗಿರುವ ಎಳನೀರಿನಲ್ಲಿ ನಮಗೆ ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣ ದಲ್ಲಿ ಸಿಗಲಿದ್ದು ಉತ್ತಮ ಆಂಟಿ ಆಕ್ಸಿಡೆಂಟ್ ಲಕ್ಷಣಗಳು ಸಹ ಇದರಲ್ಲಿ ಇವೆ.
  • ಹಾಗಾಗಿ ನಮ್ಮ ದೇಹದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವಲ್ಲಿ ಎಳನೀರು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.
  • ಸಾಧ್ಯವಾದಷ್ಟು ಬೆಳಗಿನ ಸಮಯದ ಖಾಲಿ ಹೊಟ್ಟೆ ಯಲ್ಲಿ ಕಾಲು ಅಥವಾ ಅರ್ಧ ಲೀಟರ್ ತಾಜಾ ಎಳನೀರು ಸೇವಿಸಿ ಇದರ ಸಂಪೂರ್ಣ ಪ್ರಯೋಜನಗಳನ್ನು ನಿಮ್ಮ ದಾಗಿಸಿಕೊಳ್ಳಬಹುದು.

ಅಲೋವೆರಾ ಮತ್ತು ನೆಲ್ಲಿಕಾಯಿ ಜ್ಯೂಸ್

ಅಲೋವೆರಾ ಮತ್ತು ನೆಲ್ಲಿಕಾಯಿ ಜ್ಯೂಸ್

  • ಕೇವಲ ತಲೆ ಕೂದಲು ಮತ್ತು ಚರ್ಮಕ್ಕೆ ಮಾತ್ರವಲ್ಲ ನಮ್ಮ ದೇಹದ ಮೆಟಬಾಲಿಸಂ ಪ್ರಕ್ರಿಯೆಗೂ ಕೂಡ ಅನುಕೂಲ ಮಾಡಿಕೊಡುವ ಅಲೋವೆರಾ ಮತ್ತು ನೆಲ್ಲಿಕಾಯಿ ನಮ್ಮ ಇಡೀ ದೇಹವನ್ನು ಸ್ವಚ್ಛಗೊಳಿಸುತ್ತದೆ.
  • ಇದು ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳನ್ನು ಹೋಗಲಾಡಿ ಸುವಲ್ಲಿ ಕೆಲಸ ಮಾಡುತ್ತದೆ ಮತ್ತು ನಮ್ಮ ದೇಹದ ಕೊಬ್ಬಿನ ಅಂಶವನ್ನು ಸುಲಭವಾಗಿ ಕರಗಿ ಸುತ್ತದೆ.
  • ನೀವು ಇದಕ್ಕಾಗಿ ನಾಲ್ಕರಿಂದ ಐದು ಟೀ ಚಮಚ ಅಲೋವೆರಾ ಮತ್ತು ನೆಲ್ಲಿಕಾಯಿ ಜ್ಯೂಸ್ ತೆಗೆದು ಕೊಂಡು ಒಂದು ಲೋಟ ನೀರಿನಲ್ಲಿ ಹಾಕಿ ಕುಡಿಯ ಬಹುದು. ಬೇಕೆಂದರೆ ರೆಡಿಮೇಡ್ ಜ್ಯೂಸ್ ಸಹ ಸಿಗುತ್ತದೆ.​

ಶುಂಠಿ ಚಹಾ

12,500+ Ginger Juice Stock Photos, Pictures & Royalty-Free Images - iStock  | Ginger juice top view, Carrot ginger juice, Carrot apple ginger juice

  • ಶುಂಠಿ ತನ್ನಲ್ಲಿ ಆಂಟಿ ಇನ್ಫಾಮೇಟರಿ ಗುಣಲಕ್ಷಣ ಗಳನ್ನು ಹೆಚ್ಚಾಗಿ ಒಳಗೊಂಡಿದೆ. ಹಾಗಾಗಿ ಮೂಳೆಗಳ ಹಾಗೂ ಕೀಲುಗಳ ನೋವನ್ನು ಸರಿಪಡಿಸುವಲ್ಲಿ ಇದು ಉತ್ತಮವಾಗಿ ಕೆಲಸ ಮಾಡುತ್ತದೆ.
  • ಕೆಟ್ಟುಹೋದ ಹೊಟ್ಟೆಯನ್ನು ಸರಿಪಡಿಸುವ ಜೊತೆಗೆ ಬೆಳಗಿನ ಸಮಯದಲ್ಲಿ ಎದುರಾಗುವ ವಾಕರಿಕೆ, ವಾಂತಿ ಆರೋಗ್ಯದ ಅಸ್ವಸ್ಥತೆ ಇತ್ಯಾದಿ ಸಮಸ್ಯೆಗಳನ್ನು ಸಹ ಇದು ಸರಿಪಡಿಸುತ್ತದೆ.
  • ಎರಡು ಟೇಬಲ್ ಚಮಚ ತುರಿದ ತಾಜಾ ಶುಂಠಿಯನ್ನು ಎರಡು ಕಪ್ ಕುದಿಯುವ ನೀರಿನಲ್ಲಿ ಹಾಕಿ ಇದನ್ನು ಚೆನ್ನಾಗಿ 10 ನಿಮಿಷಗಳ ಕಾಲ ಕುದಿಸಿ. ಇದು ತಣ್ಣಗಾದ ಮೇಲೆ ಇದಕ್ಕೆ ನಿಂಬೆಹಣ್ಣಿನ ರಸ ಅಥವಾ ಜೇನುತುಪ್ಪ ವನ್ನು ಸಹ ರುಚಿಗಾಗಿ ಸೇರಿಸಬಹುದು.​

ಉಗುರು ಬೆಚ್ಚಗಿನ ನೀರಿನಲ್ಲಿ ಅರಿಶಿನ ಮತ್ತು ಕಾಳುಮೆಣಸು!

ಉಗುರು ಬೆಚ್ಚಗಿನ ನೀರಿನಲ್ಲಿ ಅರಿಶಿನ ಮತ್ತು ಕಾಳುಮೆಣಸು!

  • ನೀವು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದರೆ ಅದಕ್ಕೆ ಸ್ವಲ್ಪ ಅರಿಶಿನ ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕುಡಿಯಿರಿ.
  • ಏಕೆಂದರೆ ಇದು ನಿಮ್ಮ ದೇಹದ ಜೀರ್ಣಶಕ್ತಿಯನ್ನು ವೃದ್ಧಿಸುವ ಜೊತೆಗೆ ಉರಿಯುತವನ್ನು ಸಹ ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗಿಸುವ ಪಾನೀಯ ಇದಾಗಿದ್ದು ನಿಮ್ಮ ದೇಹಕ್ಕೆ ಒಳ್ಳೆಯ ಪ್ರಯೋಜನಗಳನ್ನು ಸಹ ತಂದುಕೊಡುತ್ತದೆ.
  • ಹಾಗಾಗಿ 1/2 ಲೀಟರ್ ನೀರಿಗೆ ಸ್ವಲ್ಪ ನಿಂಬೆಹಣ್ಣು, ಅರಿಶಿನ ಮತ್ತು ಮೆಣಸಿನ ಪುಡಿಯನ್ನು ಸೇರಿಸಿ ತಿರುಗಿಸಿ ಸೇವಿಸಿ.

have these healthy drinks as a first drink of the day for your better health.