ಸಕ್ಕರೆ ತಿನ್ನೋದನ್ನು ನಿಲ್ಲಿಸಿ ಬಿಡಿ! ದುಡ್ಡು ಉಳಿಯುತ್ತೆ-ಆರೋಗ್ಯ ಕೂಡ ಚೆನ್ನಾಗಿರುತ್ತೆ!

14-06-23 07:09 pm       Source: Vijayakarnataka   ಡಾಕ್ಟರ್ಸ್ ನೋಟ್

ಇಂದಿನ ದಿನಗಳಲ್ಲಿ ಹೆಚ್ಚಿನವರಿಗೆ ಸಕ್ಕರೆ ಅಂಶ ಹೆಚ್ಚಿರುವ ತಿನಿಸುಗಳನ್ನು ಇಲ್ಲಾಂದ್ರೆ ಸಕ್ಕರೆ ಬೆರೆಸಿ ಮಾಡಿದ ಪಾನೀಯಗಳನ್ನು ಅತಿಯಾಗಿ ಸೇವಿಸುವ ಅಭ್ಯಾಸ.

ದಿನನಿತ್ಯ ಕುಡಿಯುವ ಟೀ-ಕಾಫಿಯಲ್ಲಿ ಅಥವಾ ಹಣ್ಣುಗಳ ಜ್ಯೂಸ್‌ನಲ್ಲಿ ಸಕ್ಕರೆ ಕಡಿಮೆ ಮಾಡಿ ಸೇವಿಸಿ, ಇಲ್ಲಾಂದ್ರೆ ಸಕ್ಕರೆಯನ್ನು ಬೆರೆಸದೆ ಕುಡಿ ಯುವ ಅಭ್ಯಾಸ ಮಾಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಯಾಕೆಂದ್ರೆ ಬಿಳಿ ಹರಳಿನಂತಿರುವ ಸಕ್ಕರೆ, ಮನುಷ್ಯನ ರಕ್ತದ ಕಣಗಳಲ್ಲಿ ಸೇರುತ್ತಾ ಹೋದಂತೆ, ದೀರ್ಘಕಾಲದ ಕಾಯಿಲೆಗಳನ್ನು ತಂದೊಡ್ಡುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಬಗ್ಗೆ ಸ್ವತಃ ಆರೋಗ್ಯ ತಜ್ಞರು ಹೇಳುವ ಪ್ರಕಾರ ಬೆಳಗ್ಗಿನಿಂದ ರಾತ್ರಿಯವರೆಗೂ ನಾವು ಸೇವಿಸುವ ಎಲ್ಲಾ ಆಹಾರ ಪದಾರ್ಥಗಳು ಹಾಗೂ ಪಾನೀ ಯಗಳ ಮೂಲಕ ಪಡೆಯುವ ಸಕ್ಕರೆಯ ಪ್ರಮಾಣ, ಇಪ್ಪತ್ತೈದು ಗ್ರಾಂಕ್ಕಿಂತ ಹೆಚ್ಚು ದಾಟಬಾರದು ಎಂದು ಸಲಹೆ ನೀಡುತ್ತಾರೆ. ಹೀಗಾಗಿ ಬಿಳಿ ಸಕ್ಕರೆಯ ವಿಷ್ಯದಲ್ಲಿ ಆದಷ್ಟು ಎಚ್ಚರಿಕೆ ವಹಿಸಬೇಕು. ಬನ್ನಿ ಇಂದಿನ ಈ ಲೇಖನದಲ್ಲಿ ಬಿಳಿ ಹರಳಿನಂತೆ ಕಾಣುವ, ಈ ಸಕ್ಕರೆ ಆರೋಗ್ಯಕ್ಕೆ ಎಷ್ಟು ಡೇಂಜರ್ ಎಂಬುದರ ಬಗ್ಗೆ ಮಾಹಿತಿ ನೀಡಿದ್ದೇವೆ ಮುಂದೆ ಓದಿ...

ಸಕ್ಕರೆಯಲ್ಲಿ ಕಾರ್ಬೋ‌ಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ!

What Happens To Your Body When You Stop Eating Sugar? | Changing Habits

  • ಬಾಯಿ ಸಿಹಿ ಹೆಚ್ಚಿಸುವ ಸಕ್ಕರೆಯಲ್ಲಿ ಕಾರ್ಬೋ ಹೈಡ್ರೇಟ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಇವು ದೇಹಕ್ಕೆ ತಕ್ಷಣ ಶಕ್ತಿ ಹಾಗೂ ಚೈತನ್ಯ ವನ್ನು ಒದಗಿಸುತ್ತದೆ. ಇದೇ ಕಾರಣಕ್ಕೆ ಮಧುಮೇಹಿಗಳು, ಸಕ್ಕರೆಯಿಂದ ದೂರ ಉಳಿಯಬೇಕು ಎಂದು ಹೇಳು ವುದು.
  • ಇದರ ಜೊತೆಗೆ ಇದರಲ್ಲಿ ಕ್ಯಾಲೋರಿ ಅಂಶಗಳು ಕೂಡ ಹೇರಳ ವಾಗಿ ಕಂಡು ಬರುತ್ತದೆ. ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ ಒಂದು ಗ್ರಾಂ ಸಕ್ಕರೆ ಶೇಕಡಾ ನಾಲ್ಕರಷ್ಟು ಕ್ಯಾಲೋರಿ ಗಳು ಸಿಗುತ್ತದೆಯಂತೆ! ​

ಕಾಯಿಲೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ

Types of Diabetes: Causes, Identification, and More

  • ಸಕ್ಕರೆ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳು ಹಾಗೂ ಪಾನೀಯಗಳ ಸೇವನೆಯಲ್ಲಿ ನಿಯಂತ್ರಣ ಮಾಡದೇ ಹೋದರೆ, ಮುಂದಿನ ದಿನಗಳಲ್ಲಿ ದೇಹದ ತೂಕ ಹೆಚ್ಚಾಗಿ ಬೊಜ್ಜಿನ ಸಮಸ್ಯೆ ಕಂಡು ಬರಬಹುದು!
  • ಅಷ್ಟೇ ಅಲ್ಲದೆ ದೀರ್ಘಕಾಲದ ಕಾಯಿಲೆಗಳಾದ ಮಧು ಮೇಹ ಮತ್ತು ಹೃದಯದ ಕಾಯಿಲೆ ಕೂಡ ಬಹಳ ಬೇಗನೇ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಎಚ್ಚರಿಸುತ್ತಾರೆ.​

ಇಮ್ಯೂನಿಟಿ ಕಡಿಮೆ ಆಗುತ್ತದೆ

When is a cough more than just a cough?

  • ಮೊದಲೇ ಹೇಳಿದ ಹಾಗೆ ನೋಡಲು ಬಿಳಿ ಹರಳಿನಂತೆ ಕಾಣುವ ಈ ಸಕ್ಕರೆ ಹಾಗೂ ಬಾಯಿ ರುಚಿ ಹೆಚ್ಚಿಸುವ ಸಕ್ಕರೆಯಾಂಶ ಒಳಗೊಂಡಿರುವ ಆಹಾರಗಳು ಹಾಗೂ ಪಾನೀಯಗಳನ್ನು ಮಿತಿಮೀರಿ ಸೇವನೆ ಮಾಡುವುದ ರಿಂದ, ಇಲ್ಲಾಂದ್ರೆ ಕೃತಕ ಸಿಹಿ ಸಕ್ಕರೆ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ,
  • ಉದಾಹರಣೆಗೆ ಬೇಕರಿ ಸ್ವೀಟ್ಸ್, ತಂಪು ಪಾನೀಯಗಳು, ಜೊತೆಗೆ ರೀಫೈನ್ಡ್ ಮಾಡಿರುವ ಕಾರ್ಬೋಹೈಡ್ರೇಟ್ ಅಂಶಗಳು ಹೆಚ್ಚಿರುವ ಆಹಾರ-ಪದಾರ್ಥಗಳ ಸೇವನೆ ಮಾಡುವುದರಿಂದ ದಿನಾ ಹೋದ ಹಾಗೆ, ದೇಹದ ಇಮ್ಯೂನಿಟಿ ಅಂದರೆ, ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಾ ಹೋಗುತ್ತದೆ.

ಬೊಜ್ಜು ದೇಹ ಇರುವವರು

Weight Loss Tips| 3 Healthy Habits That are Essential For Permanent Weight  Loss

ದೇಹದ ತೂಕ ಹೆಚ್ಚಾಗಿ ಬೊಜ್ಜಿನ ಸಮಸ್ಯೆ ಇರುವವರು, ಸಕ್ಕರೆಯಾಂಶ ಹೆಚ್ಚಿರುವ ಆಹಾರಗಳು ಹಾಗೂ ಪಾನೀಯ ಗಳಿಂದ ದೂರವಿರಬೇಕು. ಇಲ್ಲಾಂದ್ರೆ ದೇಹದ ತೂಕ ಹೆಚ್ಚಾಗಿ, ಬೊಜ್ಜಿನ ಸಮಸ್ಯೆ ಕೂಡ ಜಾಸ್ತಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಪುರುಷರಿಗೆ ಬಂಜೆತನ ಸಮಸ್ಯೆ ಕಂಡು ಬರಬಹುದು!

ಪುರುಷರಿಗೆ ಬಂಜೆತನ ಸಮಸ್ಯೆ ಕಂಡು ಬರಬಹುದು!

ಪುರುಷರು ಯಥೇಚ್ಛವಾಗಿ ಸಕ್ಕರೆಯಾಂಶ ಹೆಚ್ಚಿರುವ ಆಹಾರ ಗಳು ಹಾಗೂ ಪಾನೀಯಗಳನ್ನು ಸೇವನೆ ಮಾಡುವುದರಿಂದ ಅಥವಾ ಕೃತಕ ಸಕ್ಕರೆಯಾಂಶ ಇರುವ ಪಾನೀಯವನ್ನು ಕುಡಿ ಯುವ ಅಭ್ಯಾಸ ಮಾಡಿಕೊಳ್ಳುವುದರಿಂದ, ಅವರಲ್ಲಿ ದಿನ ಹೋದ ಹಾಗೆ ವೀರ್ಯಾಣುವಿನ ಗುಣಮಟ್ಟ ಕಡಿಮೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸಂಶೋಧಕರು, ತಮ್ಮ ವರದಿ ಯಲ್ಲಿ ತಿಳಿಸಿದ್ದಾರೆ.

ಕೊನೆಯ ಮಾತು

How Sugar Can Help With Weight Loss - Woman's World

  • ಸಕ್ಕರೆ ಅಂಶ ಹೆಚ್ಚಾಗಿರುವ ಆಹಾರಗಳು ಹಾಗೂ ಪಾನೀ ಯಗಳು (ಪ್ರಮುಖವಾಗಿ ಟೀ-ಕಾಫಿಯನ್ನು)
  • ತಪ್ಪಿಯೂ ಕೂಡ ಹೆಚ್ಚಾಗಿ ಸೇವಿಸಲೂ ಹೋಗಬೇಡಿ!
  • ಆದಷ್ಟು ಸಕ್ಕರೆಬೆರೆಸದ ಹಣ್ಣಿನ ಜ್ಯೂಸ್ ಕುಡಿಯಿರಿ ಇಲ್ಲಾಂದ್ರೆ ವಿಟಮಿನ್ಸ್ ಅಂಶ ಹೆಚ್ಚಿರುವ ಹಣ್ಣು ಗಳು ಹಾಗೂ ಹಸಿರೆಲೆ ತರಕಾರಿಗಳನ್ನು ಸೇವಿಸಿ, ಆರೋಗ್ಯ ವೃದ್ಧಿಸಿಕೊಳ್ಳಿ.
  • ಸಕ್ಕರೆ ಅಂಶ ಹೊಂದಿರುವ ಆಹಾರ ಅಥವಾ ಕೃತಕ ಸಕ್ಕರೆ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳ ಮೇಲೆ ಅವಲಂಬಿತರಾಗಬೇಡಿ.
  • ಇದರ ಬದಲಿಗೆ ಸಮತೋಲಿತ ಆಹಾರ ಪದ್ಧತಿಯನ್ನು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿ ಕೊಳ್ಳಿ.
  • ಬೇಕರಿಯಲ್ಲಿ ಸಿಗುವ ಸಿಹಿ ತಿಂಡಿಗಳು, ಸಿಹಿ ಪದಾರ್ಥ ಗಳು ಹಾಗೂ ತಂಪು ಪಾನೀಯಗಳನ್ನು ಹೆಚ್ಚು ಸೇವನೆ ಮಾಡಲು ಹೋಗಬೇಡಿ.
  • ಯಾಕೆಂದ್ರೆ ಇವುಗಳಲ್ಲಿ ಬಳಸುವ ಕೃತಕ ಸಕ್ಕರೆ ಅಂಶ ವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿರುವುದ ರಿಂದ ಮಾಡಿರುವ, ಆರೋಗ್ಯದ ಮೇಲೆ ಅಡ್ಡ ಪರಿಣಾ ಮಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.
  • ಸಕ್ಕರೆ ಬದಲಿಗೆ ಬೆಲ್ಲ, ಜೇನುತುಪ್ಪ ಬಳಸಿಕೊಂಡರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಆರೋ ಗ್ಯಕಾರಿ ಕೂಡ. ಹೀಗಾಗಿ ದಿನನಿತ್ಯದ ಟೀ-ಕಾಫಿಗೆ ಸಾವ ಯವ ಬೆಲ್ಲವನ್ನು ಬಳಸಿ.

things that happen to your body when you eat sugar.