ಬ್ರೇಕಿಂಗ್ ನ್ಯೂಸ್
15-06-23 07:12 pm Source: Vijayakarnataka ಡಾಕ್ಟರ್ಸ್ ನೋಟ್
ವಿಟಮಿನ್ ಡಿ ನಮ್ಮ ದೇಹಕ್ಕೆ ಅಗತ್ಯವಾಗಿರುವ ಪ್ರಮುಖ ಪೋಷಕಾಂಶವಾಗಿದೆ. ಇದು ನಮ್ಮ ಮೆದುಳಿನಿಂದ ಪ್ರತಿರಕ್ಷಣಾ ವ್ಯವಸ್ಥೆಗೆ ಅವಶ್ಯಕವಾಗಿದೆ. ಅದರ ಕೊರತೆಯಿಂದಾಗಿ, ದೇಹದ ಕಾರ್ಯಚಟುವಟಿಕೆಯು ಹದಗೆಡುತ್ತದೆ. ಸೂರ್ಯನ ಬೆಳಕನ್ನು ವಿಟಮಿನ್ ಡಿ ಯ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ವೈದ್ಯರು ಬೆಳಗಿನ ಸೂರ್ಯನ ಬಿಸಿಲಿಗೆ ಮೈ ಒಡ್ಡುವಂತೆ ಹೇಳುತ್ತಾರೆ.
ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ರೋಗಗಳು?
ಮೂಳೆ, ಉಗುರುಗಳು, ಹಲ್ಲುಗಳಿಗೆ ವಿಟಮಿನ್ ಡಿ ಬಹಳ ಮುಖ್ಯ. ಇದರ ಕೊರತೆಯಿಂದಾಗಿ ಮೂಳೆ ನೋವು, ಕೀಲು ನೋವು, ಸ್ನಾಯು ನೋವು, ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುವುದು, ಆಸ್ಟಿಯೊಪೊರೋಸಿಸ್, ಕ್ಯಾಲ್ಸಿಯಂ ಕೊರತೆ, ಖಿನ್ನತೆಯ ಲಕ್ಷಣಗಳು ಇತ್ಯಾದಿ ತೊಂದರೆಗಳು ಉಂಟಾಗುತ್ತದೆ. ಅದಕ್ಕಾಗಿಯೇ ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು.
ಕೆಲವರಿಗೆ ಸೂರ್ಯನ ಬಿಸಲು ಸಾಕಷ್ಟು ಸಿಗುವುದಿಲ್ಲ
ಸೂರ್ಯನ ಬಿಸಿಲು ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದೆ. ಆದರೆ ಕೆಲವು ಸ್ಥಳಗಳಲ್ಲಿ ಸೂರ್ಯನ ಬೆಳಕು ಸರಿಯಾಗಿ ಬೀಳುವುದಿಲ್ಲ ಹಾಗಾಗಿ ಅವರ ಚರ್ಮಕ್ಕೆ ಬೇಕಾಗುವಷ್ಟು ಸೂರ್ಯನ ಬಿಸಿಲು ಸಿಗೋದಿಲ್ಲ.
ಹಾಗೆಯೇ ಕೆಲವೊಮ್ಮೆ ಸೂಕ್ಷ್ಮ ಚರ್ಮ ಹೊಂದಿರುವ ಜನರು ಸೂರ್ಯನಿಂದ ದೂರವಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ಜನರು ವಿಟಮಿನ್ ಡಿ ತೆಗೆದುಕೊಳ್ಳಲು ಏಕೈಕ ಮಾರ್ಗವೆಂದರೆ ಹಣ್ಣುಗಳು, ತರಕಾರಿಗಳು, ಜ್ಯೂಸ್, ಪೂರಕಗಳನ್ನು ತಿನ್ನುವುದು.
ಅಣಬೆಗಳು
ಸಸ್ಯಾಹಾರಿಗಳಲ್ಲಿ ವಿಟಮಿನ್ ಡಿ ಕೊರತೆಯನ್ನು ಅಣಬೆಗಳಿಂದ ನಿವಾರಿಸಬಹುದು. ಒಂದು ಅಧ್ಯಯನದ ಪ್ರಕಾರ ಮಶ್ರೂಮ್‌ಗಳು, ಮನುಷ್ಯರಂತೆ, ಸೂರ್ಯನ ಬೆಳಕಿನಿಂದ ವಿಟಮಿನ್ D ಅನ್ನು ತಯಾರಿಸುತ್ತವೆ. ಅದನ್ನು ತಿನ್ನುವ ಮೂಲಕ ಪ್ರಯೋಜನವನ್ನು ಪಡೆಯಬಹುದು.
ಹಾಲು, ಚೀಸ್, ಮೊಸರು
ಹಾಲಿನ ಉತ್ಪನ್ನಗಳಾದ ಹಾಲು ಮತ್ತು ಚೀಸ್, ಮೊಸರು, ಪನೀರ್ ಇತ್ಯಾದಿಗಳಲ್ಲಿ ಕ್ಯಾಲ್ಸಿಯಂ ಇರುತ್ತದೆ. ಇದರೊಂದಿಗೆ ನೀವು ಸಾಕಷ್ಟು ವಿಟಮಿನ್ ಡಿ ಪಡೆಯುತ್ತೀರಿ. ಈ ಎರಡೂ ಪೋಷಕಾಂಶಗಳನ್ನು ಮೂಳೆಗಳು, ಹಲ್ಲುಗಳು ಮತ್ತು ಉಗುರುಗಳನ್ನು ಬಲಪಡಿಸಲು ಬಳಸಲಾಗುತ್ತದೆ. ಪನೀರ್‌ನ ಪದಾರ್ಥವನ್ನು ಆಗಾಗ ಸೇವಿಸುವುದು ಉತ್ತಮವಾಗಿದೆ.
ಮೊಟ್ಟೆ
ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಮೊಟ್ಟೆಯು ವಿಟಮಿನ್ ಡಿ ಅನ್ನು ನೀಡುತ್ತದೆ. ಇದರ ಹಳದಿ ಭಾಗವು ಕೊಬ್ಬಿನಾಮ್ಲಗಳು, ಕೊಬ್ಬು ಮತ್ತು ವಿಟಮಿನ್ ಡಿ ಅನ್ನು ಹೊಂದಿರುತ್ತದೆ. ಇದನ್ನು ತಿನ್ನುವ ಮೂಲಕ ನೀವು ವಿಟಮಿನ್ ಡಿ ಕೊರತೆಯನ್ನು ಪೂರೈಸಬಹುದು.
ವಿಟಮಿನ್ ಡಿ ಭರಿತ ಹಣ್ಣುಗಳು
ಕೆಲವು ಆಹಾರಗಳಲ್ಲಿ ವಿಟಮಿನ್ ಡಿ ಅನ್ನು ಪ್ರತ್ಯೇಕವಾಗಿ ಸೇರಿಸಲಾಗುತ್ತದೆ. ನೀವು ಕಿತ್ತಳೆ ರಸ, ಧಾನ್ಯಗಳು, ಓಟ್ಸ್, ಹಾಲು ಇತ್ಯಾದಿಗಳನ್ನು ಮಾರುಕಟ್ಟೆಯಿಂದ ಖರೀದಿಸಬಹುದು, ಅದರಲ್ಲಿ ಕೃತಕ ವಿಟಮಿನ್ ಡಿ ಸೇರಿಸಲಾಗಿರುತ್ತದೆ.
here is the way you can get vitamin d other than sunshine.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm